ಪ್ರತ್ಯೇಕತಾವಾದಿಗಳು ಕರೆ ನೀಡಿರುವ ಬಂದ್ ನಡೆವೆಯೂ ಕಾಶ್ಮೀರದಲ್ಲಿ ಚುನಾವಣೆ; ಮತ ಚಲಾಯಿಸಲು ಸಾಲುಗಟ್ಟಿ ನಿಂತ ಜನ

Lok Sabha Election 2019 | 6 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಜಮ್ಮು-ಕಾಶ್ಮೀರದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜೊತೆಗೆ ಗಡಿ ಹಂಚಿಕೊಂಡಿರುವ ಬಾರಾಮುಲ್ಲಾ ಕ್ಷೇತ್ರಕ್ಕೆ ಮಾತ್ರ ಚುನಾವಣೆ ನಡೆಸಲಾಗುತ್ತಿದೆ. 

MAshok Kumar | news18
Updated:April 11, 2019, 4:23 PM IST
ಪ್ರತ್ಯೇಕತಾವಾದಿಗಳು ಕರೆ ನೀಡಿರುವ ಬಂದ್ ನಡೆವೆಯೂ ಕಾಶ್ಮೀರದಲ್ಲಿ ಚುನಾವಣೆ; ಮತ ಚಲಾಯಿಸಲು ಸಾಲುಗಟ್ಟಿ ನಿಂತ ಜನ
ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಬಂಡಿಪೋರ್ ಮತಗಟ್ಟೆಯ ಎದುರು ಮತ ಚಲಾಯಿಸಲು ಸಾಲುಗಟ್ಟಿ ನಿಂತಿರುವ ಜನ.
MAshok Kumar | news18
Updated: April 11, 2019, 4:23 PM IST
ಬಾರಾಮುಲ್ಲಾ (ಕಾಶ್ಮೀರ) : ಸಾರ್ವಜನಿಕ ಚುನಾವಣೆಯನ್ನು ವಿರೋಧಿಸಿ ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ನಿನ್ನೆಯಿಂದ ಎರಡು ದಿನಗಳ ಒಂದ್​ಗೆ ಕರೆ ನೀಡಿದ್ದಾರೆ. ಆದರೆ, ಬಂದ್ ನಡುವೆಯೂ ಬಾರಾಮುಲ್ಲಾ ಕ್ಷೇತ್ರದಲ್ಲಿ ಮತ ಚಲಾಯಿಸಲು ಜನ ಸಾಲುಗಟ್ಟಿ ನಿಂತಿದ್ದಾರೆ.

6 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಜಮ್ಮು-ಕಾಶ್ಮೀರದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜೊತೆಗೆ ಗಡಿ ಹಂಚಿಕೊಂಡಿರುವ ಬಾರಾಮುಲ್ಲಾ ಕ್ಷೇತ್ರಕ್ಕೆ ಮಾತ್ರ ಚುನಾವಣೆ ನಡೆಸಲಾಗುತ್ತಿದೆ.

ಪಾಕಿಸ್ತಾನ್ ಬೆಂಬಲಿತ ಉಗ್ರಗಾಮಿ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ಫೆಬ್ರವರಿ.14 ರಂದು ಪುಲ್ವಾಮಾದಲ್ಲಿ ಸಿಆರ್​ಪಿಎಫ್ ಯೋಧರ ವಾಹನದ ಮೇಲೆ ಆತ್ಮಹತ್ಯಾ ದಾಳಿ ನಡೆಸಿ 40ಕ್ಕೂ ಹೆಚ್ಚು ಸೈನಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ಕಣಿವೆ ರಾಜ್ಯದ ಹುರಿಯತ್ ಕಾನ್ಫೆರನ್ಸ್ ಸಂಘಟನೆಯ ಪ್ರತ್ಯೇಕತಾವಾದಿ ನಾಯಕರನ್ನು ಮನೆಗೆ ನುಗ್ಗಿ ಬಲವಂತವಾಗಿ ಬಂಧಿಸಿತ್ತು.

ಇದನ್ನೂ ಓದಿ : Lok Sabha Election 2019 | 2004ರ ಚುನಾವಣಾ ಫಲಿತಾಂಶದ ಇತಿಹಾಸ ಮರೆಯಬೇಡಿ; ಮೋದಿಗೆ ಟಾಂಗ್ ನೀಡಿದ ಸೋನಿಯಾ ಗಾಂಧಿ

ಅಲ್ಲದೆ ಪೊಲೀಸರು ಹಾಗೂ ಮಿಲಿಟರಿ ಅಧಿಕಾರಿಗಳು ಕಾಶ್ಮೀರದ ಕೇಂದ್ರೀಯ ಬಂಧೀಖಾನೆಯಲ್ಲಿರುವ ಕಾಶ್ಮೀರಿ ಖೈದಿಗಳನ್ನು ಅನವಶ್ಯಕವಾಗಿ ಹೊಡೆದು ಹಿಂಸಿಸಿದೆ ಎಂಬುದು ಕಾಶ್ಮೀರದ ಪ್ರತ್ಯೇಕತಾವಾದಿಗಳ ಆರೋಪ.

ಹೀಗಾಗಿ ಕೇಂದ್ರ ಸರ್ಕಾರದ ಈ ನಡೆಯನ್ನು ವಿರೋಧಿಸಿ ಕಣಿವೆ ರಾಜ್ಯದ ಪ್ರತ್ಯೇಕತಾವಾದಿಗಳ ಸಂಘಟನೆಗಳು ಈ ಚುನಾವಣೆಯನ್ನು ಪ್ರತಿಭಟಿಸಿದ್ದವು ಅಲ್ಲದೆ ನಿನ್ನೆಯಿಂದಲೇ ಎರಡು ದಿನಗಳ ಕಾಲ ಕಾಶ್ಮೀರದಾದ್ಯಂತ ಬಂದ್​ಗೆ ಕರೆ ನೀಡಿದ್ದವು.

ಬಂದ್​ನಿಂದಾಗಿ ಕಳೆದ ಎರಡು ದಿನಗಳಿಂದ ಕಾಶ್ಮೀರದ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಅಲ್ಲದೆ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಆಗಮಿಸಿರಲಿಲ್ಲ. ಯಾವುದೇ ವಾಹನಗಳು ರಸ್ತೆಗೆ ಇಳಿಯದೆ ಕಣಿವೆ ರಾಜ್ಯ ಬಣಗುಡುತ್ತಿತ್ತು. ಇದರಿಂದ ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಆದರೂ, ಬಾರಾಮುಲ್ಲಾ ಕ್ಷೇತ್ರದ ಜನ ಇದನ್ನು ಲೆಕ್ಕಿಸದೆ ಮತಗಟ್ಟೆಗಳ ಕಡೆಗೆ ಆಗಮಿಸಿ ಮತಚಲಾಯಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
Loading...

ಇದನ್ನೂ ಓದಿ : Lok Sabha Election 2019 | 'ಪಾಕ್ ಪ್ರಧಾನಿ ಇಮ್ರಾನ್​ ಖಾನ್ ಹೇಳಿಕೆ ನಿಜವಾಗಲು ಬಿಡಬೇಡಿ'; ಮತದಾರರಿಗೆ ಒವೈಸಿ ಮನವಿ

ಈ ಕುರಿತು ಟ್ವೀಟ್ ಮಾಡಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, "ಈ ಚುನಾವಣೆಯಲ್ಲಿ ಹೆಚ್ಚಿನ ಜನ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಬೇಕು. 5 ವರ್ಷಗಳ ಕಾಲ ನೀಡಿದ ಆಶ್ವಾಸನೆಗಳನ್ನು ಈಡೇರಿಸದ ಮತೀಯವಾದಿಗಳ ವಿರುದ್ಧ ಮತ ಚಲಾಯಿಸಬೇಕು" ಎಂದು ಟ್ವೀಟ್ ಮೂಲಕ ಕರೆ ನೀಡಿದ್ದಾರೆ.

ಗಡಿ ಭಾಗವಾಗಿರುವ ಕಾರಣ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರಗಾಮಿಗಳು ಅನಾಹುತಕಾರಿ ಘಟನೆಗಳನ್ನು ಸಂಘಟಿಸುವ ಸಾಧ್ಯತೆಯನ್ನು ಅರಿತು ಭಾರತೀಯ ಸೇನೆ ಮತಗಟ್ಟೆಗಳ ಬಳಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಅಲ್ಲದೆ ಇಡೀ ಜಿಲ್ಲೆಯಾದ್ಯಂತ ಪೊಲೀಸರು ಹಾಗೂ ಸೇನೆ ಹದ್ದಿನ ಕಣ್ಣಿಟ್ಟಿದೆ. ಪರಿಣಾಮ ಈ ಬಾರಿಯ ಚುನಾವಣೆಯಲ್ಲಿ ಕಾಶ್ಮೀರದಿಂದ ಯಾವುದೇ ಅಹಿತಕರ ಘಟನೆಗಳು ಈವರೆಗೆ ವರದಿಯಾಗಿಲ್ಲ.

ಪ್ರಸ್ತುತ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿರುವ ಕಾಶ್ಮೀರದ 6 ಜಿಲ್ಲೆಗಳಿಗೆ ಕ್ರಮವಾಗಿ ಏಪ್ರಿಲ್ 11, 18, 23, 29 ಹಾಗೂ ಮೇ 6 ರಂದ ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ ನಿರ್ಧರಿಸಿದೆ. ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಮುನ್ನ ಬಿಜೆಪಿ-ಪಿಡಿಪಿ ಪಕ್ಷಗಳ ಮೈತ್ರಿ ಆಡಳಿತ ಚಾಲ್ತಿಯಲ್ಲಿತ್ತು.
First published:April 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...