• Home
  • »
  • News
  • »
  • national-international
  • »
  • Rinkoo Singh Rahee: ಸಾವಿನಂಚಿನಲ್ಲಿದ್ದ ರಿಂಕೂ ಸಿಂಗ್ UPSC ಪಾಸಾದ ಅದ್ಭುತ ಕಥೆ!

Rinkoo Singh Rahee: ಸಾವಿನಂಚಿನಲ್ಲಿದ್ದ ರಿಂಕೂ ಸಿಂಗ್ UPSC ಪಾಸಾದ ಅದ್ಭುತ ಕಥೆ!

ರಿಂಕು ಸಿಂಗ್

ರಿಂಕು ಸಿಂಗ್

ನಮ್ಮಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡಿದರೂ ಸರಿಯಾಗಿ ತಮ್ಮ ತರಗತಿಗಳ ಪರೀಕ್ಷೆಗಳನ್ನೇ ಉತ್ತೀರ್ಣರಾಗುವುದಕ್ಕೆ ಹೆಣಗಾಡುವವರಿದ್ದಾರೆ. ಅಂತಹದರಲ್ಲಿ ಇಲ್ಲೊಬ್ಬ ಅಧಿಕಾರಿ ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆಳೆದು, ನಂತರ ಮಾಫಿಯಾ ಅವರಿಂದ ಏಳು ಬಾರಿ ಗುಂಡು ತಿಂದು ಈಗ ನಾಗರಿಕ ಸೇವೆ ಅಥವಾ ಯುಪಿಎಸ್‌ಸಿ 2021 (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಮುಂದೆ ಓದಿ ...
  • Share this:

ನಮ್ಮಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡಿದರೂ ಸರಿಯಾಗಿ ತಮ್ಮ ತರಗತಿಗಳ ಪರೀಕ್ಷೆಗಳನ್ನೇ (Exams) ಉತ್ತೀರ್ಣರಾಗುವುದಕ್ಕೆ ಹೆಣಗಾಡುವವರಿದ್ದಾರೆ. ಅಂತಹದರಲ್ಲಿ ಇಲ್ಲೊಬ್ಬ ಅಧಿಕಾರಿ (Officer) ಭ್ರಷ್ಟಾಚಾರ ಪ್ರಕರಣವನ್ನು (case of corruption) ಬಯಲಿಗೆಳೆದು, ನಂತರ ಮಾಫಿಯಾ (Mafia) ಅವರಿಂದ ಏಳು ಬಾರಿ ಗುಂಡು ತಿಂದು ಈಗ ನಾಗರಿಕ ಸೇವೆ (Civil service) ಅಥವಾ ಯುಪಿಎಸ್‌ಸಿ 2021 (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹೌದು.. ಈ ಅಧಿಕಾರಿ ಬೇರೆ ಯಾರೂ ಅಲ್ಲ, ರಿಂಕೂ ಸಿಂಗ್ ರಹೀ (Rinkoo Singh Rahee) ಅಂತ ನೀವು ಈ ಹೆಸರು ಸುದ್ದಿ ಮಾಧ್ಯಮದಲ್ಲಿ ಕೇಳಿರುತ್ತೀರಿ. ಇವರು ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 683ನೇ ರ್ಯಾಂಕ್ ಪಡೆದಿದ್ದಾರೆ. ಇದು ಅವರ ಕೊನೆಯ ಬಾರಿಯ ಪ್ರಯತ್ನವಾಗಿತ್ತು ಎಂದು ಹೇಳಲಾಗುತ್ತಿದೆ.


ವಿದ್ಯಾರ್ಥಿವೇತನ ಹಗರಣವನ್ನು ಬಹಿರಂಗಪಡಿಸಿದ ಪಿಸಿಎಸ್ ಅಧಿಕಾರಿ
ಉತ್ತರ ಪ್ರದೇಶದ ಹಾಪುರದ ಪ್ರಾಂತೀಯ ನಾಗರಿಕ ಸೇವಾ ಅಧಿಕಾರಿ ರಿಂಕೂ ಸಿಂಗ್ ರಹೀ ಅವರು 2008ರಲ್ಲಿ ಮುಜಫ್ಫರ್ ನಗರದಲ್ಲಿ ಕೆಲಸ ಮಾಡುವಾಗ 83 ಕೋಟಿ ರೂಪಾಯಿಗಳ ವಿದ್ಯಾರ್ಥಿವೇತನ ಹಗರಣವನ್ನು ಬಹಿರಂಗಪಡಿಸಿದರು. ಎಂಟು ಜನರ ವಿರುದ್ಧ ಆರೋಪ ಹೊರಿಸಲಾಯಿತು ಮತ್ತು ನಾಲ್ವರಿಗೆ 10 ವರ್ಷಗಳ ಜೈಲು ಶಿಕ್ಷೆ ಸಹ ವಿಧಿಸಲಾಯಿತು.


ಏಳು ಬಾರಿ ಗುಂಡು ಹಾರಿಸಿದ ಕಿಡಿಗೇಡಿಗಳು
ಸ್ವಲ್ಪ ಸಮಯದ ನಂತರ, ಅದರಲ್ಲಿ ಭಾಗಿಯಾಗಿದ್ದ ಮಾಫಿಯಾ ಅವರು ಈ ಅಧಿಕಾರಿಯ ಮೇಲೆ ಒಂದಲ್ಲ, ಎರಡಲ್ಲ ಸುಮಾರು ಏಳು ಬಾರಿ ಗುಂಡು ಹಾರಿಸಿದರು ಮತ್ತು ಇವರನ್ನು ಸಾವಿನ ಅಂಚಿಗೆ ತಳ್ಳಿದರು. ಆದರೆ ಇವರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಮೂರು ಗುಂಡುಗಳನ್ನು ಅವರ ಮುಖಕ್ಕೆ ಹೊಡೆದು ಅವರನ್ನು ಸಂಪೂರ್ಣವಾಗಿ ವಿರೂಪಗೊಳಿಸಿದರು, ಒಂದು ಕಣ್ಣನ್ನು ಸಹ ಇವರು ಕಳೆದುಕೊಂಡರು ಮತ್ತು ಒಂದು ಕಿವಿ ಮೇಲೆ ಹೊಡೆಯುವ ಮೂಲಕ ಶ್ರವಣ ಶಕ್ತಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು.


ಇದನ್ನೂ ಓದಿ: Modi Gift: ಮೋದಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಮಹಿಳೆ! ಪ್ರಧಾನಿ ಭಾವುಕ


ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರು ನಿರ್ಧರಿಸಿದ ಸಮಯವಾದ್ದರಿಂದ ಈ ದಾಳಿ ಅವರ ಜೀವನದಲ್ಲಿ ಒಂದು ಮುಖ್ಯವಾದ ತಿರುವು ಎಂದು ಸಾಬೀತಾಯಿತು. ಆದಾಗ್ಯೂ, ಇವರ ಈ ಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ.


ದಾಳಿಯ ನಂತರ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ, ಭ್ರಷ್ಟಾಚಾರದ ವಿರುದ್ಧ ಹೆಚ್ಚು ಪ್ರತಿಭಟಿಸಿದ್ದಕ್ಕಾಗಿ ಮನೋವೈದ್ಯಕೀಯ ವಾರ್ಡ್ ಗೆ ಸಹ ಕಳುಹಿಸಲಾಯಿತು. ಅವರ ವೈದ್ಯಕೀಯ ರಜೆ ಕೂಡ ಮಂಜೂರಾಗಿಲ್ಲ. ಆದಾಗ್ಯೂ, ನಾಗರಿಕ ಸೇವಾ ಅಧಿಕಾರಿಯಾಗಬೇಕೆಂಬ ತನ್ನ ಕನಸನ್ನು ನನಸು ಮಾಡಲು ಈ ಧೈರ್ಯಶಾಲಿ ಅಧಿಕಾರಿಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ ಎಂದು ಹೇಳಬಹುದು.


ನಾಗರಿಕ ಸೇವೆಗಳ ಯುಪಿಎಸ್‌ಸಿ 2021 ಪರೀಕ್ಷೆಯಲ್ಲಿ ಉತ್ತೀರ್ಣ
"ನನಗೆ ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಸ್ವಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ನಡುವೆ ಎಂದಾದರೂ ಘರ್ಷಣೆ ನಡೆದರೆ, ನಾನು ಸಾರ್ವಜನಿಕ ಹಿತಾಸಕ್ತಿಯನ್ನು ಆಯ್ಕೆ ಮಾಡುತ್ತೇನೆ" ಎಂದು ರಿಂಕೂ ಅವರು ಹೇಳಿದರು. ಅವರು ನಾಗರಿಕ ಸೇವೆಗಳ ಯುಪಿಎಸ್‌ಸಿ 2021 ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಅವರಿಗೆ ತುಂಬಾನೇ ಖುಷಿ ಕೊಟ್ಟಿದೆ, ಏಕೆಂದರೆ ಇವರಿಗೆ ಈ ಪರೀಕ್ಷೆಯನ್ನು ಬರೆಯಲು ಇದು ಕೊನೆಯ ಅವಕಾಶವಾಗಿತ್ತು. ರಹೀ ಅವರಿಗೆ ಎಂಟು ವರ್ಷದ ಒಬ್ಬ ಮಗನಿದ್ದಾನೆ.


ಕುತೂಹಲಕಾರಿ ಸಂಗತಿಯೆಂದರೆ, ಸರ್ಕಾರಿ ಸ್ವಾಮ್ಯದ ಐಎಎಸ್ ಕೋಚಿಂಗ್ ಸೆಂಟರ್ ನ ನಿರ್ದೇಶಕರಾಗಿ, ಅವರು ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಹಲವಾರು ವರ್ಷಗಳಿಂದ ಪಾಠವನ್ನು ಹೇಳಿಕೊಡುತ್ತಾ ಬಂದಿದ್ದಾರೆ. "ನನ್ನ ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಳ್ಳಲು ನನಗೆ ಹೇಳುತ್ತಲೇ ಇದ್ದರು. ಅವರ ಪ್ರಚೋದನೆಯಿಂದಾಗಿಯೇ ನಾನು ಇಂದು ಈ ಸಾಧನೆ ಮಾಡಿದ್ದೇನೆ" ಎಂದು ರಿಂಕೂ ರಹೀ ಸುದ್ದಿಗಾರರಿಗೆ ತಿಳಿಸಿದರು.


ಇದನ್ನೂ ಓದಿ: Sidhu Moose Wala: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಸಾವಿನ ನೋವಿನಲ್ಲಿ ಸಾಕು ಸಾಯಿಗಳು, ಕರುಳು ಹಿಂಡುವ ವಿಡಿಯೋ


ತನ್ನ ಅಧ್ಯಯನಕ್ಕಾಗಿ ಸಮಯವನ್ನು ತೆಗೆದುಕೊಳ್ಳುವುದು ತನಗೆ ತುಂಬಾನೇ ಕಷ್ಟವಾಯಿತು ಎಂದು ಅವರು ಹೇಳಿದರು, ಆದರೆ ಅವರು ತಮ್ಮ ದೃಢನಿಶ್ಚಯವನ್ನು ಎಂದಿಗೂ ಸಡಿಲಗೊಳಿಸಲು ಅವಕಾಶ ನೀಡಲಿಲ್ಲ ಎಂದು ಹೇಳಬಹುದು. ಭವಿಷ್ಯದಲ್ಲಿ ಈ ರೀತಿಯ ಗುಂಡಿನ ದಾಳಿಗಳ ಸಂದರ್ಭದಲ್ಲಿ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ತನಗೆ ಈಗ ತಿಳಿದಿದೆ ಎಂದು ಸಹ ಅವರು ಧೈರ್ಯದಿಂದ ಹೇಳುತ್ತಾರೆ.

Published by:Ashwini Prabhu
First published: