ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಟ್ (PPBL) ದೇಶದ ತನ್ನ ಮೊದಲ ಫಾಸ್ಟ್ಟ್ಯಾಗ್ ಆಧಾರಿತ ಮೆಟ್ರೋ ಪಾರ್ಕಿಂಗ್ ಸೌಲಭ್ಯವನ್ನು ದೆಹಲಿ ಮೆಟ್ರೋ ರೈಲು ಕಾರ್ಪೋರೇಶನ್ (DMRC) ಪಾಲುದಾರಿಕೆಯಲ್ಲಿ ಸಕ್ರಿಯಗೊಳಿಸಿದೆ ಎಂದು ಘೋಷಿಸಿದೆ. ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಸೌಲಭ್ಯ ಸ್ವಾಧೀನ ಪಡಿಸಿಕೊಳ್ಳಲಿರುವ ಬ್ಯಾಂಕ್ನಂತೆ, ಮಾನ್ಯವಾದ ಫಾಸ್ಟ್ಟ್ಯಾಗ್ ಸ್ಟಿಕ್ಕರ್ ಹೊಂದಿರುವ ಕಾರುಗಳಿಗೆ ಫಾಸ್ಟ್ಟ್ಯಾಗ್ ಆಧಾರಿತ ಸೌಲಭ್ಯಗಳನ್ನು PPBL ಪ್ರಕ್ರಿಯೆಗೊಳಿಸಿದೆ. ಹೆಚ್ಚುವರಿಯಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯುಪಿಐ (UPI) ಆಧಾರಿತ ಪಾವತಿ ಪರಿಹಾರವನ್ನು ಪಾರ್ಕಿಂಗ್ ಸೈಟ್ ಪ್ರವೇಶಿಸುವ ದ್ವಿಚಕ್ರ ವಾಹನಗಳಿಗಾಗಿ ಸಕ್ರಿಯಗೊಳಿಸಿದೆ. ಇದರಿಂದ ಸ್ಥಳದಲ್ಲಿ ಸಂಪೂರ್ಣ ಪಾರ್ಕಿಂಗ್ ಪಾವತಿಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ.
PPBL ಚಾಲಿತ ಫಾಸ್ಟ್ಟ್ಯಾಗ್ ವ್ಯವಸ್ಥೆಯ ಅಳವಡಿಕೆಯೊಂದಿಗೆ ಕಾರು ಮಾಲೀಕರು ಇನ್ನು ಮುಂದೆ ನಗದು ಹಣವನ್ನು ನೀಡಬೇಕಾಗಿಲ್ಲ. ಪಾರ್ಕಿಂಗ್ ಶುಲ್ಕವನ್ನು ವ್ಯಾಲೆಟ್ ಅಥವಾ ಸಂಬಂಧಿತ ವಾಹನಗಳ ಫಾಸ್ಟ್ಟ್ಯಾಗ್ನೊಂದಿಗೆ ಸಂಪರ್ಕ ಹೊಂದಿರುವ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇನ್ನು ದ್ವಿಚಕ್ರ ವಾಹನ ಸವಾರರು ಕೂಡ ಸರಳ UPI ಪಾವತಿಯ ಮೂಲಕ ಮೆಟ್ರೋ ನಿಲ್ದಾಣದಲ್ಲಿ ತಮ್ಮ ಪಾರ್ಕಿಂಗ್ ಶುಲ್ಕವನ್ನು ಡಿಜಿಟಲ್ ಆಗಿ ಪಾವತಿಸಬಹುದಾಗಿದೆ. ಪ್ರಸ್ತುತ ಈ ಸೌಲಭ್ಯವನ್ನು ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 6ರಲ್ಲಿ ಲಭ್ಯವಿದೆ ಹಾಗೂ ಇದು ಪಾರ್ಕಿಂಗ್ ಸ್ಥಳವನ್ನು 174 ದ್ವಿಚಕ್ರ ವಾಹನಗಳಿಗೆ ಹಾಗೂ 55 ನಾಲ್ಕು ಚಕ್ರದ ವಾಹನಗಳಿಗೆ ಕಲ್ಪಿಸಲಾಗಿದೆ.
DMRC, MD ಮಂಗು ಸಿಂಗ್ ಈ ಕುರಿತು ಮಾತನಾಡಿದ್ದು DMRC’ ಯ ಡಿಜಿಟಲೀಕರಣದ ಮತ್ತೊಂದು ಹೆಜ್ಜೆ ಎಂದೆನಿಸಿದ್ದು ಸಂಪರ್ಕರಹಿತ ವಹಿವಾಟು ವಿಧಾನಗಳು ವಿಶೇಷವಾಗಿ ನಮ್ಮ ಗ್ರಾಹಕರಿಗೆ ದೊರೆಯುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
PPBL ದೇಶಾದ್ಯಂತ ಪಾರ್ಕಿಂಗ್ ವ್ಯವಸ್ಥೆ ಡಿಜಿಟಲೀಕರಣಗೊಳಿಸುವ ಇರಾದೆ ಹೊಂದಿದ್ದು ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣ ಬ್ಯಾಂಕ್ನ ಡಿಜಿಟಲ್ ಪಾವತಿ ಪರಿಹಾರ ಚಾಲಿತ ಮೊದಲ ಮೆಟ್ರೋ ನಿಲ್ದಾಣವಾಗಿದೆ.
ಸಂಘಟಿತ ಮತ್ತು ಅಸಂಘಟಿತ ತಾಣಗಳಲ್ಲಿ ಫಾಸ್ಟ್ಟ್ಯಾಗ್ ಆಧಾರಿತ ಪಾರ್ಕಿಂಗ್ ಸೌಲಭ್ಯಗಳನ್ನು ಆರಂಭಿಸಲು ಬ್ಯಾಂಕ್ ಹಲವಾರು ರಾಜ್ಯಗಳ ವಿವಿಧ ಮುನ್ಸಿಪಲ್ ಕಾರ್ಪೊರೇಶನ್ಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ ಶಾಪಿಂಗ್ ಮಾಲ್ಗಳು, ಆಸ್ಪತ್ರೆಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪಾರ್ಕಿಂಗ್ ಪ್ರದೇಶಗಳಿಗೆ ಡಿಜಿಟಲ್ ಪಾವತಿ ಪರಿಹಾರಗಳನ್ನು ಜಾರಿಗೊಳಿಸಲು ಬ್ಯಾಂಕ್ ವಿವಿಧ ಸ್ಟೇಕ್ಹೋಲ್ಡರ್ಗಳೊಂದಿಗೆ ಚರ್ಚೆ ನಡೆಸುತ್ತಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಎಮ್ಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸತೀಶ್ ಗುಪ್ತಾ ಯೋಜನೆಯ ಹಿಂದಿರುವ ಉದ್ದೇಶವನ್ನು ವಿವರಿಸಿದ್ದು ದೇಶದಲ್ಲಿ ಫಾಸ್ಟ್ಟ್ಯಾಗ್ ನೆಟ್ವರ್ಕ್ನ ವಿಸ್ತರಣೆ ಹಾಗೂ ದೇಶದ ಜನರಿಗೆ ತೊಂದರೆ ಇಲ್ಲದೆ ಪ್ರಯಾಣ ಸಕ್ರಿಯಗೊಳಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ತಿಳಿಸಿದ್ದಾರೆ.
ಈ ದಿಸೆಯಲ್ಲಿ ಡಿಜಿಟಲ್ ಪೇಮೆಂಟ್ ಪರಿಹಾರಗಳನ್ನು ದೆಹಲಿ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಸೌಲಭ್ಯದಲ್ಲಿ ಸಕ್ರಿಯಗೊಳಿಸಲು ದೆಹಲಿ ಮೆಟ್ರೋ ರೈಲು ಕಾರ್ಪೋ ರೇಶನ್ನೊಂದಿಗೆ ಪಾಲುದಾರಿಕೆ ನಡೆಸಲು ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Virat Kohli| ವಿರಾಟ್ ಕೊಹ್ಲಿಯೇ ನಿವೃತ್ತಿ ಘೋಷಿಸುವವರೆಗೆ ಅವರನ್ನೇ ನಾಯಕತ್ವದಲ್ಲಿ ಮುಂದುವರೆಸಬೇಕು; ರಿತೀಂದರ್ ಸೋಧಿ
ಅದೇ ರೀತಿ ಫಾಸ್ಟ್ಟ್ಯಾಗ್ ವ್ಯವಸ್ಥೆಯೊಂದಿಗೆ ಸುರಕ್ಷಿತ ಮತ್ತು ಸಂಪರ್ಕರಹಿತ ಪಾವತಿ ಪರಿಹಾರದ ಅಳವಡಿಕೆಯನ್ನು ದೇಶಾದ್ಯಂತ ನಡೆಸಲು ನಾವು ಮುಂದಾಗಿದ್ದು ಇದಕ್ಕಾಗಿ ಸಂಬಂಧಿತ ಸಂಸ್ಥೆಯೊಂದಿಗೆ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ