Compensation: ಕಳ್ಳತನ ಆರೋಪದಿಂದ ನೊಂದ ಬಾಲಕಿಗೆ ಪರಿಹಾರ ನೀಡುವಂತೆ ಆದೇಶಿಸಿದ ಕೇರಳ ಹೈಕೋರ್ಟ್

ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಾನು ನೀಡಿರುವ ಪರಿಹಾರ ಮೊತ್ತದ ಪ್ರಮಾಣವು ಸಾಕಾಗುವಷ್ಟಿದ್ದು, ಆದರೂ ದಾವೆದಾರ ಹೆಚ್ಚಿನ ಪ್ರಮಾಣದ ಪರಿಹಾರ ಬಯಸಿದ್ದಲ್ಲಿ ಆ ಬಗ್ಗೆ ಅವರಿಗೆ ಸಿವಿಲ್ ಕೋಡ್ ಅಡಿಯಲ್ಲಿ ಹೆಚ್ಚಿನ ಪರಿಹಾರ ಬಯಸುವ ಅಧಿಕಾರವಿದೆ ಎಂದು ತಿಳಿಸಿದೆ.

ಬಾಲಕಿ ಮೇಲೆ ಆರೋಪಿಸಿದ ಪೊಲೀಸ್‌ ಅಧಿಕಾರಿ

ಬಾಲಕಿ ಮೇಲೆ ಆರೋಪಿಸಿದ ಪೊಲೀಸ್‌ ಅಧಿಕಾರಿ

  • Share this:
ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು (woman police officer) ಬಾಲಕಿ ಹಾಗೂ ಅವಳ ತಂದೆಯ (Girl and Father) ಮೇಲೆ ಕಳ್ಳತನದ ಆರೋಪ ಹೊರಿಸಿದ್ದರ ಪರಿಣಾಮವಾಗಿ ಆ ಬಾಲಕಿ ಪಟ್ಟ ಮಾನಸಿಕ ವ್ಯಥೆಯನ್ನು ಪರಿಗಣಿಸಿ ಕೇರಳದ ಹೈ ಕೋರ್ಟ್ ( Kerala High Court) ಆಡಳಿತದಲ್ಲಿರುವ ಸರ್ಕಾರಕ್ಕೆ (Government) ಆ ಮಾನಸಿಕ ನೋವಿಗೆ (Mental anguish) ಪ್ರತಿಯಾಗಿ ಆ ಬಾಲಕಿಗೆ 1.5 ಲಕ್ಷ ರೂಪಾಯಿಯನ್ನು ಪರಿಹಾರ ಧನವಾಗಿ(Compensation) ನೀಡಲು ಆದೇಶಿಸಿರುವ ಘಟನೆ ಬುಧವಾರದಂದು ವರದಿಯಾಗಿದೆ.

ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ
ಇಷ್ಟೇ ಅಲ್ಲದೆ, ನ್ಯಾಯಾಲಯವು ಸರ್ಕಾರಕ್ಕೆ ಈ ಬಾಲಕಿಯು ತನ್ನ ದಾವೆಗಾಗಿ ವ್ಯಯಿಸಿದ ಹಣಕ್ಕೆ ಪ್ರತಿಯಾಗಿ 25,000 ರೂಪಾಯಿಗಳನ್ನೂ ನೀಡುವಂತೆ ನಿರ್ದೇಶನ ನೀಡಿದೆ. ಈ ಕುರಿತು ತೀರ್ಪು ಪ್ರಕಟಿಸಿರುವ ನ್ಯಾಯಮೂರ್ತಿ ದೇವನ್ ರಾಮಚಂದ್ರನ್, ಈ ಪ್ರಕರಣದಲ್ಲಿ ತಪ್ಪಿತಸ್ಥ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ಶಿಸ್ತುಕ್ರಮಗಳನ್ನು ಜರುಗಿಸಲು ಸೂಚಿಸಿ ಆದೇಶ ನೀಡಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಗಂಡ ಆಕೆಯ ಕೈಕತ್ತರಿಸಿದ, ರಷ್ಯಾ ಇದಕ್ಕೆ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯ: ಏನಿದು ಪ್ರಕರಣ?

ಮುಂದುವರೆಯುತ್ತ ನ್ಯಾಯಾಲಯವು, ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಶಿಸ್ತು ಕ್ರಮಗಳನ್ನು ಜರುಗಿಸಿ ಅದು ಕೊನೆಗೊಳ್ಳುವವರೆಗೂ ಆಕೆಯನ್ನು ಸೇವೆಯಿಂದ ದೂರವಿರಿಸಬೇಕು ಹಾಗೂ ಆಕೆಗೆ ವೈಯಕ್ತಿಕವಾಗಿ ಹೇಗೆ ನಡೆದುಕೊಳ್ಳಬೇಕೆಂಬುದರ ಬಗ್ಗೆ ತರಬೇತಿ ನೀಡಬೇಕೆಂದು ಸೂಚಿಸಿದೆ ಎಂದು ಹೇಳಲಾಗಿದೆ.

ಬಾಲಕಿಯು ನ್ಯಾಯಾಲಯದಲ್ಲಿ ದಾವೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯು ನ್ಯಾಯಾಲಯದಲ್ಲಿ ದಾವೆ ಹೂಡಿ ತನ್ನ ಮೂಲಭೂತ ಹಕ್ಕನ್ನು ಕಸಿಯಲಾಗಿದ್ದು ಅದಕ್ಕಾಗಿ ಸರ್ಕಾರವು ತನಗೆ ನ್ಯಾಯ ಒದಗಿಸಬೇಕಾಗಿ ಕೇಳಿಕೊಂಡಿದ್ದಳು. ಇದೀಗ ಈ ಪ್ರಕರಣ ಇತ್ಯರ್ಥಗೊಳಿಸಿರುವ ನ್ಯಾಯಾಲಯವು ಬಾಲಕಿಗೆ ಆದ ಮಾನಸಿಕ ಆಘಾತ ಪರಿಗಣಿಸಿ ಆಕೆಗೆ ಪರಿಹಾರ ಧನ ನೀಡಬೇಕೆಂದು ಸರ್ಕಾರಕ್ಕೆ ಆದೇಶ ನೀಡಿದೆ. ಈ ಮೊದಲು ಬಾಲಕಿಯು 50 ಲಕ್ಷ ರೂಪಾಯಿಯನ್ನು ಪರಿಹಾರ ಧನವಾಗಿ ನೀಡಬೇಕೆಂದು ದಾವೆ ಹೂಡಿದ್ದಳು.

ಹೆಚ್ಚಿನ ಪ್ರಕರಣಗಳನ್ನು ಸಹ ದಾಖಲಿಸಬಹುದು
ಆದರೆ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಾನು ನೀಡಿರುವ ಪರಿಹಾರ ಮೊತ್ತದ ಪ್ರಮಾಣವು ಸಾಕಾಗುವಷ್ಟಿದ್ದು, ಆದರೂ ದಾವೆದಾರ ಹೆಚ್ಚಿನ ಪ್ರಮಾಣದ ಪರಿಹಾರ ಬಯಸಿದ್ದಲ್ಲಿ ಆ ಬಗ್ಗೆ ಅವರಿಗೆ ಸಿವಿಲ್ ಕೋಡ್ ಅಡಿಯಲ್ಲಿ ಹೆಚ್ಚಿನ ಪರಿಹಾರ ಬಯಸುವ ಅಧಿಕಾರವಿದೆ ಎಂದು ತಿಳಿಸಿದೆ. ಬೇಕಾಗಿದ್ದಲ್ಲಿ 8 ವರ್ಷದ ಬಾಲಕಿ ಹಾಗೂ ಅವಳ ತಂದೆ ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ವಿರುದ್ಧ ಹೆಚ್ಚಿನ ಪ್ರಕರಣಗಳನ್ನು ಸಹ ದಾಖಲಿಸಬಹುದಾಗಿದೆ ಎಂದು ಕೋರ್ಟ್ ತಿಳಿಸಿದೆ.

ಇದನ್ನೂ ಓದಿ: ಫ್ರಿಡ್ಜ್‌ನಲ್ಲಿ ಕೊಳೆತ ಆಹಾರ: ಪರಿಹಾರ ಧನ ನೀಡುವಂತೆ MESCOMಗೆ ಆದೇಶ

ಫೋನ್ ಕದ್ದಿರುವ ಆರೋಪ
ಆಗಸ್ಟ್ 27ರಂದು ಜಯಚಂದ್ರನ್ ತನ್ನ 8 ವರ್ಷದ ಮಗಳೊಂದಿಗೆ ವಿಕ್ರಮ್ ಸಾರಾಭಾಯ್ ಸ್ಪೇಸ್ ಕೇಂದ್ರಕ್ಕೆ ಹೋಗುತ್ತಿದ್ದ ಬೃಹತ್ತಾದ ಕಾರ್ಗೋ ನೋಡಲೆಂದು ಮೂನುಮುಕ್ಕುಗೆ ಬಂದಿದ್ದರು. ಆ ಸ್ಥಳದಲ್ಲಿ ಸಾಕಷ್ಟು ಜನದಟ್ಟಣೆಯಿತ್ತು. ಹಾಗಾಗಿ ಟ್ರಾಫಿಕ್ ಸಂಚಾರ ಸುಗಮವಾಗುವಂತೆ ರಜತಾ ಎಂಬ ಪೊಲೀಸ್ ಅಧಿಕಾರಿಯನ್ನು ಅಲ್ಲಿ ನೇಮಿಸಿದ್ದರು. ಈ ಸಂದರ್ಭದಲ್ಲಿ ಆ ಅಧಿಕಾರಿಯು ತಮ್ಮ ವಾಹನದಲ್ಲಿದ್ದ ಮೋಬೈಲ್ ಫೋನ್ ಕಳೆದುಕೊಂಡಿದ್ದರು ಹಾಗೂ ಅಲ್ಲಿದ್ದ ಈ ಬಾಲಕಿ ಹಾಗೂ ಆಕೆಯ ತಂದೆಯ ಮೇಲೆ ಫೋನ್ ಕದ್ದಿರುವ ಆರೋಪ ಹೊರಿಸಿ ಅವರಿಗೆ ತೊಂದರೆ ನೀಡಿದ್ದರು. ಇದನ್ನು ವಿಡಿಯೋದಲ್ಲಿ ಚಿತ್ರೀಕರಿಸಲಾಗಿತ್ತು ಹಾಗೂ ನಂತರ ಆ ವಿಡಿಯೋ ವೈರಲ್ ಆಗಿತ್ತು. ಈ ಕುರಿತಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
Published by:vanithasanjevani vanithasanjevani
First published: