HOME » NEWS » National-international » PAY ME RS 5 CRORE AND I WILL KILL PM MODI PUDUCHERRY MAN ARRESTED AFTER SHOCKING FB POST LG

ನನಗೆ 5 ಕೋಟಿ ರೂ. ಕೊಟ್ಟರೆ, ಮೋದಿಯನ್ನು ಕೊಲ್ಲುತ್ತೇನೆ ಎಂದಿದ್ದ ವ್ಯಕ್ತಿಯ ಬಂಧನ

ಕಾರ್​ ಡ್ರೈವರ್ ತಂಗಾದುರೈ ಎಂಬಾತ ಸತ್ಯ ಸತ್ಯ ಎಂಬುವರ ಫೇಸ್​ಬುಕ್​ ಖಾತೆಯಲ್ಲಿ ಯಾರಾದರೂ ನನಗೆ 5 ಕೋಟಿ ನೀಡಿದರೆ, ನಾನು ಪ್ರಧಾನಿ ಮೋದಿಯನ್ನು ಕೊಲೆ ಮಾಡುತ್ತೇನೆ ಎಂಬ ಪೋಸ್ಟ್​​ ನೋಡಿದ್ದಾರೆ ಎನ್ನಲಾಗಿದೆ. ಬಳಿಕ ತಂಗಾದುರೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾನೆ. ಅಲರ್ಟ್​ ಆದ ಪೊಲೀಸರು ಫೇಸ್​ಬುಕ್ ಖಾತೆಯನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.

news18-kannada
Updated:February 6, 2021, 1:25 PM IST
ನನಗೆ 5 ಕೋಟಿ ರೂ. ಕೊಟ್ಟರೆ, ಮೋದಿಯನ್ನು ಕೊಲ್ಲುತ್ತೇನೆ ಎಂದಿದ್ದ ವ್ಯಕ್ತಿಯ ಬಂಧನ
ಪ್ರಧಾನಿ ನರೇಂದ್ರ ಮೋದಿ.
  • Share this:
ಪುದುಚೇರಿ(ಫೆ.06): ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಆಘಾತಕಾರಿ ಪೋಸ್ಟ್​​​ನ್ನು ಫೇಸ್​​ಬುಕ್​ನಲ್ಲಿ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೋದಿಯವರನ್ನು ಕೊಲೆ ಮಾಡುವುದಾಗಿ ಫೇಸ್​ಬುಕ್​ನಲ್ಲಿ ಈತ ಪೋಸ್ಟ್ ಹಾಕಿದ್ದ ಎಂದು ತಿಳಿದು ಬಂದಿದೆ. "ಯಾರಾದರೂ ನನಗೆ 5 ಕೋಟಿ ರೂಪಾಯಿ ಕೊಟ್ಟರೆ, ನಾನು ಪ್ರಧಾನಿ ಮೋದಿಯನ್ನು ಕೊಲೆ ಮಾಡಲು ಸಿದ್ಧ" ಎಂದು ಆರೋಪಿ ಆಘಾತಕಾರಿ ಫೇಸ್​​ಬುಕ್​​​ ಪೋಸ್ಟ್ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬಂಧಿತ ಆರೋಪಿ ಸತ್ಯಾನಂದಂ (43)ಎಂದು ಗುರುತಿಸಲಾಗಿದ್ದು, ಪುದುಚೇರಿ ಮೂಲದವನು ಎಂದು ತಿಳಿದು ಬಂದಿದೆ. ಈತ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಈ ಪೋಸ್ಟ್ ಕೂಡಲೇ​ ಎಲ್ಲೆಡೆ ಭಾರೀ ವೈರಲ್ ಆಗಿತ್ತು. ಪೋಸ್ಟ್​ ವೈರಲ್ ಆಗಿದ್ದೇ ತಡ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಧಾನ ಮಂತ್ರಿಯನ್ನು ಕೊಲ್ಲುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆ ಮಾಡಿದ್ದಕ್ಕಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಯತ್ನ ಹಾಗೂ ಇತರೆ ರಾಷ್ಟ್ರ ನಾಯಕರನ್ನು ಅವಮಾನಿಸುವ ಕೆಲಸವನ್ನೂ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನೂರಾರು ಮಂದಿ ಸೇರಿ ಮನೆ ಶಿಫ್ಟ್​ ಮಾಡಿದ ವಿಡಿಯೋ ವೈರಲ್; ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ ನಾಗಾಲ್ಯಾಂಡ್ ಜನಕಾರ್​ ಡ್ರೈವರ್ ತಂಗಾದುರೈ ಎಂಬಾತ 'ಸತ್ಯ ಸತ್ಯ' ಎಂಬುವರ ಫೇಸ್​ಬುಕ್​ ಖಾತೆಯಲ್ಲಿ 'ಯಾರಾದರೂ ನನಗೆ 5 ಕೋಟಿ ನೀಡಿದರೆ, ನಾನು ಪ್ರಧಾನಿ ಮೋದಿಯನ್ನು ಕೊಲೆ ಮಾಡುತ್ತೇನೆ' ಎಂಬ ಪೋಸ್ಟ್​​ ನೋಡಿದ್ದಾರೆ ಎನ್ನಲಾಗಿದೆ. ಬಳಿಕ ತಂಗಾದುರೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾನೆ. ಅಲರ್ಟ್​ ಆದ ಪೊಲೀಸರು ಫೇಸ್​ಬುಕ್ ಖಾತೆಯನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಸತ್ಯಾನಂದಂ ಆರ್ಯಕುಪ್ಪಂ ಗ್ರಾಮದ ನಿವಾಸಿಯಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ ಬಳಿಕ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 505(1) ಮತ್ತು 505(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Published by: Latha CG
First published: February 6, 2021, 1:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories