ಜನಸೇನೆ ಪಕ್ಷ ಸಂಘಟನೆಗೆ ಮುಂದಾದ ಪವನ್​​ ಕಲ್ಯಾಣ್​​: ಸದ್ಯದಲ್ಲೇ ರಾಜ್ಯ ಸಮಿತಿ ವಿಸರ್ಜನೆ

ಜನಸೇನಾ ಪಕ್ಷದಿಂದ ಅಧಿಕೃತವಾಗಿ ಪತ್ರಿಕೆಯೊಂದನ್ನು ಹೊರತರಬೇಕೆಂದು ಪವನ್​​ ನಿರ್ಣಯಿಸಿದರು. ಪತ್ರಿಕೆಯಲ್ಲಿ ವಿದೇಶಿ ಆರ್ಥಿಕ ನೀತಿ, ರಾಜ್ಯದ ಅಭಿವೃದ್ದಿ, ಸರ್ಕಾರದ ಲೋಪದೋಷಗಳು ಎತ್ತಿ ತೋರಿಸಲಾಗುವುದು ಎಂದು ಹೇಳಲಾಗುತ್ತಿತ್ತು.

Ganesh Nachikethu | news18
Updated:June 24, 2019, 12:10 PM IST
ಜನಸೇನೆ ಪಕ್ಷ ಸಂಘಟನೆಗೆ ಮುಂದಾದ ಪವನ್​​ ಕಲ್ಯಾಣ್​​: ಸದ್ಯದಲ್ಲೇ ರಾಜ್ಯ ಸಮಿತಿ ವಿಸರ್ಜನೆ
ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್
  • News18
  • Last Updated: June 24, 2019, 12:10 PM IST
  • Share this:
ನವದೆಹಲಿ(ಜೂನ್​​.23): ನಟ ಮತ್ತು ಜನಸೇನೆ ಮುಖ್ಯಸ್ಥ ಪವನ್​​ ಕಲ್ಯಾಣ್​, ಸದ್ಯದಲ್ಲೇ ಪ್ರಮುಖ ನಿರ್ಣಯವೊಂದನ್ನು ಪ್ರಕಟಿಸಲಿದ್ದಾರೆ. ಆಂಧ್ರಪ್ರದೇಶದಲ್ಲಿ ಪಕ್ಷ ಸಂಘಟನೆ ಬಲವರ್ಧನೆಗೆ ಮುಂದಾಗಿರುವ ಇವರು, ಈ ನಿರ್ಧಾರ ತೆಗೆದುಕೊಂಡಿದ್ಧಾರೆ. ರಾಜ್ಯಾದ್ಯಂತ ಸ್ಥಳೀಯ ಮಟ್ಟದಲ್ಲಿ ಪಕ್ಷ ಬಲಪಡಿಸುವ ಉದ್ದೇಶದೊಂದಿಗೆ ರಾಜ್ಯ ಸಮಿತಿ ವಿಸರ್ಜನೆ ಮಾಡಲಿದ್ಧಾರಂತೆ. ಬಳಿಕ ಹಿರಿಯ ನಾಯಕರ ಸಲಹೆಯಂತೆಯೇ ಎಲ್ಲಾ ಸಮುದಾಯಗಳ ಸಭೆ ಮತ್ತು ಸಮಾವೇಶಗಳ ಮೂಲಕ ಪಕ್ಷ ಸಂಘಟನೆ ಕಟ್ಟಲು ಓಡಾಟ ನಡೆಸಲಿದ್ದಾರೆ. ಸಣ್ಣಪುಟ್ಟ ಸಮುದಾಯಗಳ ಉತ್ಸಾಹಿ ಮುಂದಾಳುಗಳನ್ನು ಗುರುತಿಸಿ ಪಕ್ಷ ಸಂಘಟನೆ ಚುರುಕುಗೊಳಿಸಲಿದ್ಧಾರೆ ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ಜನಸೇನಾ ಪಕ್ಷದಿಂದ ಅಧಿಕೃತವಾಗಿ ಪತ್ರಿಕೆಯೊಂದನ್ನು ಹೊರತರಬೇಕೆಂದು ಪವನ್​​ ನಿರ್ಣಯಿಸಿದರು. ಪತ್ರಿಕೆಯಲ್ಲಿ ವಿದೇಶಿ ಆರ್ಥಿಕ ನೀತಿ, ರಾಜ್ಯದ ಅಭಿವೃದ್ದಿ, ಸರ್ಕಾರದ ಲೋಪದೋಷಗಳು ಎತ್ತಿ ತೋರಿಸಲಾಗುವುದು ಎಂದು ಹೇಳಲಾಗುತ್ತಿತ್ತು.

ಕಳೆದ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಘೋರ ಪರಾಭವ ಅನುಭವಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪವನ್ ಕಲ್ಯಾಣ್ ಎರಡರಲ್ಲೂ ಸೋಲುಂಡಿದ್ದಾರೆ.

ಗಾಜುವಾಕ ಕ್ಷೇತ್ರದಲ್ಲಿ ಪವನ್ ಸೋಲು ಸ್ವಲ್ಪ ಮುಂಚಿತವಾಗಿಯೇ ಗೊತ್ತಾಗಿತ್ತು. ಆದರೆ ಭೀಮಾವರಂನಲ್ಲಿ ಮಾತ್ರ ತನ್ನ ಪ್ರತಿಸ್ಪರ್ಧಿಯಾಗಿರುವ ವೈಎಸ್‌ಆರ್‌ಸಿಪಿ ಅಭ್ಯರ್ಥಿ ಗ್ರಂಥಿ ಶ್ರೀನು ಜತೆಗೆ ಜಿದ್ದಾಜಿದ್ದಿನ ಸ್ಪರ್ಧೆ ಎದುರಾಗಿತ್ತು. ಅಂತಿಮವಾಗಿ ವೈಎಸ್‌ಆರ್‌ಸಿಪಿ ಅಭ್ಯರ್ಥಿ ಮೇಲುಗೈ ಸಾಧಿಸಿದ್ದರು.

ಇದನ್ನೂ ಓದಿ: ರಾಜಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ವೇಳೆ ಬೃಹತ್​​ ಪೆಂಡಾಲ್​​ ಕುಸಿತ; 14 ಮಂದಿ ಸಾವು

ಈ ಬಾರಿ ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಕಣಕ್ಕೆ ಇಳಿದಿದ್ದ ಪವನ್ ಕಲ್ಯಾಣ್, ಜನಸೇನ ಪಕ್ಷದ ಸಾರಥ್ಯ ವಹಿಸಿದ್ದರು. ಆರಂಭದಲ್ಲಿ ಕಿಂಗ್ ಮೇಕರ್ ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು.

ಜನಸೇನ ಪಕ್ಷ ಅಷ್ಟೆಲ್ಲಾ ಪ್ರಭಾವ ಬೀರದಿದ್ದರೂ, ಪವನ್ ಕಲ್ಯಾಣ್ ಮಾತ್ರ ವಿಧಾನಸಭೆಗೆ ಅಡಿಯಿಡಲಿದ್ದಾರೆ ಎಂದೇ ಊಹಿಸಲಾಗಿತ್ತು. ಆದರೆ ಆಂಧ್ರ ಜನರ ತೀರ್ಪು ಎಲ್ಲಾ ಊಹಾಪೋಹಗಳನ್ನೂ ತಲೆಕೆಳಗೆ ಮಾಡಿದೆ.ಇದನ್ನೂ ಓದಿ: ಆಂಧ್ರ ಸಿಎಂ ಜಗನ್​​ ನೇತೃತ್ವದಲ್ಲಿ ಹೊಸ ಸಂಪುಟ ರಚನೆ: ಯಾವ ಸಮುದಾಯಕ್ಕೆ ಎಷ್ಟು ಸಚಿವ ಸ್ಥಾನ?

ವಿಶಾಖದಲ್ಲಿನ ಗಾಜುವಾಕ ಅಥವಾ ಭೀಮವರಂನಲ್ಲಿ ಕನಿಷ್ಠ ಒಂದು ಕಡೆಯಾದರೂ ಪವನ್ ಕಲ್ಯಾಣ್ ಗೆಲ್ಲುತ್ತಾರೆ ಎಂದೇ ಜನಸೇನ ಮೂಲಗಳು ಭಾವಿಸಿದ್ದವು. ಆದರೆ ಮತ ಎಣಿಕೆ ಕಾರ್ಯ ಆರಂಭವಾದ ಕ್ಷಣದಿಂದ ಪವನ್ ಯಾವ ಹಂತದಲ್ಲೂ ಮುನ್ನಡೆ ಸಾಧಿಸಲಿಲ್ಲ. ಮೊದಲು ಗಾಜುವಾಕದಲ್ಲಿ ಸೋತ ಪವನ್ ಕಲ್ಯಾಣ್ ಭೀಮಾವರಂನಲ್ಲಿ ಗೆಲ್ಲುತ್ತಾರೆಂದು ಅಭಿಮಾನಿಗಳು ಭಾವಿಸಿದ್ದರು. ಕೊನೆಗೆ ಅಲ್ಲೂ ಗೆಲುವು ಸಾಧಿಸಲಿಲ್ಲ.
---------------
First published: June 23, 2019, 9:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading