• Home
  • »
  • News
  • »
  • national-international
  • »
  • Pawan Kalyan: ಜಗನ್ ಸರ್ಕಾರದ ವಿರುದ್ಧ ಪವನ್ ಕಲ್ಯಾಣ್ ಕಿಡಿ, ವೇದಿಕೆಯಲ್ಲೇ ಚಪ್ಪಲಿ ತೋರಿಸಿ ವಾರ್ನಿಂಗ್!

Pawan Kalyan: ಜಗನ್ ಸರ್ಕಾರದ ವಿರುದ್ಧ ಪವನ್ ಕಲ್ಯಾಣ್ ಕಿಡಿ, ವೇದಿಕೆಯಲ್ಲೇ ಚಪ್ಪಲಿ ತೋರಿಸಿ ವಾರ್ನಿಂಗ್!

ಪವನ್ ಕಲ್ಯಾಣ್ ಸಂಗ್ರಹ ಚಿತ್ರ

ಪವನ್ ಕಲ್ಯಾಣ್ ಸಂಗ್ರಹ ಚಿತ್ರ

ಆಂಧ್ರ ಪ್ರದೇಶದಲ್ಲಿ ರಾಜಕೀಯ ವಾರ್ ಜೋರಾಗಿದೆ. ಅದರಲ್ಲೂ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಡುವಿನ ಪೊಲಿಟಿಕಲ್ ವಾರ್ ಮತ್ತೊಂದು ಹಂತಕ್ಕೆ ತಲುಪುತ್ತಿದೆ. ಇಂದು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಪಿಸಿ ಪಕ್ಷದ ನಾಯಕರ ವಿರುದ್ಧ ಪವನ್ ಕಲ್ಯಾಣ್ ಗುಡುಗಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Visakhapatnam, India
  • Share this:

ವಿಶಾಖಪಟ್ಟಣಂ, ಆಂಧ್ರಪ್ರದೇಶ: ಟಾಲಿವುಡ್‌ ಪವರ್ ಸ್ಟಾರ್ (Tollywood Power Star) ಪವನ್ ಕಲ್ಯಾಣ್ (Pawan Kalyan) ರೆಬೆಲ್ ಆಗಿದ್ದಾರೆ. ಸಿನಿಮಾದಲ್ಲಿ ಆಲ್ಲ, ಬದಲಾಗಿ ರಿಯಲ್ ಲೈಫ್‌ನಲ್ಲಿ (Real Life). ಜನಸೇನಾ ಪಕ್ಷದ (Janasena Party) ಮೂಲಕ ರಾಜಕೀಯಕ್ಕೂ ಪ್ರವೇಶ (Political Entry) ಮಾಡಿರುವ ಪವನ್ ಕಲ್ಯಾಣ್, ಆಂಧ್ರ ಪ್ರದೇಶ ಸಿಎಂ (Andhra Pradesh CM) ಜಗನ್ ಮೋಹನ್ ರೆಡ್ಡಿ (Jagan Mohan Reddy) ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷದ (YSRPC Party) ವಿರುದ್ಧ ಗುಡುಗಿದ್ದಾರೆ. ವಿಶಾಖಪಟ್ಟಣಂನಲ್ಲಿ (Visakhapatnam) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪವನ್ ಕಲ್ಯಾಣ್, ವೇದಿಕೆ ಮೇಲೆ ಕೈಯಲ್ಲಿ ಚಪ್ಪಲಿ (Chappali) ಹಿಡಿದು, ವೈಎಸ್ಆರ್‌ಪಿಸಿ ನಾಯಕರ ವಿರುದ್ಧ ಗುಡುಗಿದ್ದಾರೆ.


ಜಗನ್ ಪಕ್ಷದ ವಿರುದ್ಧ ಪವನ್ ಕಲ್ಯಾಣ್ ಗರಂ


ಆಂಧ್ರ ಪ್ರದೇಶದಲ್ಲಿ ರಾಜಕೀಯ ವಾರ್ ಜೋರಾಗಿದೆ. ಅದರಲ್ಲೂ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಡುವಿನ ಪೊಲಿಟಿಕಲ್ ವಾರ್ ಮತ್ತೊಂದು ಹಂತಕ್ಕೆ ತಲುಪುತ್ತಿದೆ. ಇಂದು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಪಿಸಿ ಪಕ್ಷದ ನಾಯಕರ ವಿರುದ್ಧ ಪವನ್ ಕಲ್ಯಾಣ್ ಗುಡುಗಿದ್ದಾರೆ.
ಜನಸೇನಾ, ವೈಸಿಪಿಆರ್‌ ಕಾರ್ಯಕರ್ತರ ಘರ್ಷಣೆ


ವಿಶಾಖಪಟ್ಟಣದಲ್ಲಿ ಆಂಧ್ರ ಪ್ರದೇಶದ ಆಡಳಿತರೂಢ ವೈಸಿಪಿ ಪಾರ್ಟಿಯಿಂದ ವಿಶಾಖ ಘರ್ಜನಾ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದೇ ದಿನ ಪವನ್ ಕಲ್ಯಾಣ್ ಕೂಡ ವೈಜಾಗ್‌ಗೆ ಆಗಮಿಸಿದ್ದು, ಸಾಕಷ್ಟು ಹೈಡ್ರಾಮ ನಡೆದಿತ್ತು. ವೈಜಾಕ್ ವಿಮಾನ ನಿಲ್ದಾಣದಿಂದ ಪವನ್ ಕಲ್ಯಾಣ್ ಬರುತ್ತಿದ್ದಂತೆ ರಸ್ತೆ ತುಂಬೆಲ್ಲಾ ಜನಸೇನ ಪಕ್ಷದ ಕಾರ್ಯಕರ್ತರು ತುಂಬಿ ಕೊಂಡಿದ್ದರು. ಈ ವೇಳೆ ವೈಸಿಪಿಆರ್‌ ಪಕ್ಷದ ಕಾರ್ಯಕರ್ತರು, ಜನಸೇನಾ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿತ್ತು.


ಇದನ್ನೂ ಓದಿ: Divya Sridhar: ಮಂಗಳಮುಖಿಯನ್ನೂ ಮದ್ವೆಯಾಗಿ, ಮೋಸ ಮಾಡಿದ್ದ ಅರ್ನವ್! ದಿವ್ಯಾ ಶ್ರೀಧರ್ ಬಾಳಲ್ಲೂ ಈತ ಖಳನಾಯಕನೇ!


ವೇದಿಕೆಯಲ್ಲೇ ಚಪ್ಪಲಿ ತೋರಿಸಿದ ಪವನ್ ಕಲ್ಯಾಣ್


ಪವನ್ ಕಲ್ಯಾಣ್ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಬಂದಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪವನ್ ಕಲ್ಯಾಣ್ ಅವರನ್ನ ರಸ್ತೆಯ ಮಧ್ಯೆದಲ್ಲಿಯೇ ತಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದರು. ಇದು ಆಂಧ್ರ ದಲ್ಲಿ ಸಾಕಷ್ಟು ಸಂಚಲನಕ್ಕೆ ನಾಂದಿಯಾಡಿತ್ತು. ಬಳಿಕ ವೇದಿಕೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಚಪ್ಪಲಿ ತೋರಿಸಿ ಎಚ್ಚರಿಸಿದ್ದಾರೆ. ವೈಸಿಪಿ ನಾಯಕರುಗಳ ಮನೆಗೆ ನುಗ್ಗಿ ಕೊರಳುಪಟ್ಟಿ ಹಿಡಿದು ಹೊಡೆಯುತ್ತೇನೆ ನನ್ ಮಕ್ಳಾ ಅಂತ ಪವನ್ ಕಲ್ಯಾಣ್ ಆವಾಜ್ ಹಾಕಿದ್ದಾರೆ.


 ವೈಸಿಪಿಆರ್‌ ವಿರುದ್ಧ ಪವನ್ ಗುಡುಗು


ಇನ್ನು ಮಂಗಳಗಿರಿಯ ತಮ್ಮ ಪಾರ್ಟಿ ಆಫೀಸ್‌ನಲ್ಲಿ ಮಾತನಾಡಿದ ಅವರು, ಪವನ್ ಕಲ್ಯಾಣ್ ಮೂರು ಮದುವೆಗಳನ್ನ ಮಾಡಿಕೊಂಡಿದ್ದಾನೆ ಅಂತಾ ವೈಸಿಪಿಆರ್‌ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆದರೆ ನಾನು ಒಬ್ಬರಿಗೆ ವಿಚ್ಛೇದನೆ ನೀಡಿ ಮತ್ತೊಬ್ಬರನ್ನ ಮದುವೆ ಮಾಡಿಕೊಂಡಿದ್ದೇನೆ. ನಿಮ್ಮಂತೆ ಒಬ್ಬರನ್ನ ಮದುವೆಯಾಗಿ ಮೂವತ್ತು ಜನರನ್ನು ಇಟ್ಟುಕೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.


ಇದನ್ನೂ ಓದಿ: Akhilesh and Shivpal: ಒಂದಾಗ್ತಾರಾ ಅಖಿಲೇಶ್, ಶಿವಪಾಲ್‌ ಯಾದವ್? ಭಿನ್ನಾಭಿಪ್ರಾಯ ಮುಂದುವರೆದರೆ ಬಿಜೆಪಿಗೆ ಲಾಭ


ಸಚಿವೆ ರೋಜಾ ಕಾರಿನ ಮೇಲೆ ಕಾರ್ಯಕರ್ತರ ದಾಳಿ


ಇನ್ನು ಕಳೆದ ಶನಿವಾರ ಚಿತ್ರನಟಿ, ಆಂಧ್ರ ಪ್ರದೇಶದ ಹಾಲಿ ಸಚಿವೆ ರೋಜಾ ಅವರ ಕಾರಿನ ಮೇಲೆ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಕಾರ್ಯಕರ್ತರು ಅಟ್ಯಾಕ್ ಮಾಡಿದ್ದರು ಎನ್ನಲಾಗಿದೆ. ಶನಿವಾರ ವಿಶಾಖಪಟ್ಟಣಂ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿತ್ತು.

Published by:Annappa Achari
First published: