ಆಂಧ್ರ-ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ: ಪವನ್​ ಕಲ್ಯಾಣ್​ ಆಗಲಿದ್ದಾರೆ ಕಿಂಗ್​ ಮೇಕರ್​..!

ಪವರ್​​ ಸ್ಟಾರ್​​ ಪವನ್​ ಕಲ್ಯಾಣ್​ ನೇತೃತ್ವದ ಜನಸೇನ ಪಕ್ಷ ಕಮ್ಯುನಿಸ್ಟ್​ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಂಡು ಟಿಆರ್​ಎಸ್​, ತೆಲುಗು ದೇಶಂ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.

Ganesh Nachikethu
Updated:September 1, 2018, 4:30 PM IST
ಆಂಧ್ರ-ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ: ಪವನ್​ ಕಲ್ಯಾಣ್​ ಆಗಲಿದ್ದಾರೆ ಕಿಂಗ್​ ಮೇಕರ್​..!
ಪವರ್​​ ಸ್ಟಾರ್​​ ಪವನ್​ ಕಲ್ಯಾಣ್​ ನೇತೃತ್ವದ ಜನಸೇನ ಪಕ್ಷ ಕಮ್ಯುನಿಸ್ಟ್​ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಂಡು ಟಿಆರ್​ಎಸ್​, ತೆಲುಗು ದೇಶಂ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.
Ganesh Nachikethu
Updated: September 1, 2018, 4:30 PM IST
ನ್ಯೂಸ್​-18 ಕನ್ನಡ

ಹೈದರಬಾದ್(ಸೆಪ್ಟೆಂಬರ್​.01): ಆಂಧ್ರಪ್ರದೇಶ-ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಸಮೀಪಸುತ್ತಿದ್ದಂತೆಯೇ ರಾಜಕೀಯದಲ್ಲಿ ತಲ್ಲಣ ಶುರುವಾಗಿದೆ. ಪವರ್​​ ಸ್ಟಾರ್​​ ಪವನ್​ ಕಲ್ಯಾಣ್​ ನೇತೃತ್ವದ ಜನಸೇನ ಪಕ್ಷ ಕಮ್ಯುನಿಸ್ಟ್​ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಂಡು ಟಿಆರ್​ಎಸ್​, ತೆಲುಗು ದೇಶಂ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.

ಕಳೆದ 2014 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನಸೇನ ಪಕ್ಷವೂ ಟಿಡಿಪಿ-ಬಿಜೆಪಿ ಮೈತ್ರಿಯನ್ನು ಬೆಂಬಲಿಸಿತ್ತು. ಈ ಮೂಲಕ ಟಿಡಿಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪವನ್​ ಕೀಲಕ ಪಾತ್ರವಹಸಿದ್ದರು ಎನ್ನುವುದು ವಾಸ್ತವ. ಆದರೆ, ಕಾಲಕ್ರಮೇಣ ಪವನ್​​ ಬಿಜೆಪಿಯಿಂದ ದೂರವಾದ ಬಳಿಕ ಟಿಡಿಪಿಯೂ ಎನ್​ಡಿಎ ಮೈತ್ರಿ ಸಖ್ಯವನ್ನು ತೊರೆಯಿತು.

ಪ್ರಸ್ತುತ ಮುಂದಿನ ಚುನಾವಣೆಯಲ್ಲಿ ತನ್ನ ಶಕ್ತಿ ಪ್ರದರ್ಶಿಸಲು ಪವನ್​ ಕಲ್ಯಾಣ್​ ಅವರು ಪಣತೊಟ್ಟಿದ್ದಾರೆ. ಹೀಗಾಗಿ ಸಿನಿಮಾ ಕೆಲಸವನ್ನು ಪಕ್ಕಕ್ಕಿಟ್ಟು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜನಸೇನಾ ಪಕ್ಷ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಲಿದೆ ಎಂದು ಎದುರಾಳಿ ಪಕ್ಷಗಳಿಗೂ ಮುನ್ಸೂಚನೆ ಸಿಕ್ಕಿದೆ ಎಂಬುದು ಗಮನಾರ್ಹ ಸಂಗತಿ.

ಪವನ್​ ಸುತ್ತ ಎಡಪಕ್ಷಗಳ ಚಿತ್ತ: ಆಂಧ್ರಪ್ರದೇಶದಲ್ಲಿ ಜನಸೇನ, ಸಿಪಿಎಂ, ಸಿಪಿಐ ಮೈತ್ರಿಯಾಗಿ ಸ್ಪರ್ಧೆ ಮಾಡುವುದು ಬಹುತೇಖ ಖಚಿತವಾಗಿದೆ. ನಾವು ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಲಿದ್ದೇವೆ ಎಂದು ಎಡಪಕ್ಷದ ನಾಯಕರು ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ, ಬಹುತೇಖ ಖಚಿತವಾದರು ಪವನ್​ ಕಲ್ಯಾಣ್​ ಅವರ ಮುಂದಿನ ನಡೆಯಲ್ಲಿ ಸ್ವಲ್ಪ ಅಸ್ಪಷ್ಟತೆಯಿದೆ ಎನ್ನಲಾಗಿದೆ.

ತೆಲಂಗಾಣದಲ್ಲಿ ಪ್ರಸ್ತುತ ಎಡಪಕ್ಷಗಳು ಒಂದು ಸೀಟು ಗೆದ್ದಿಲ್ಲವಾದರೂ ಕಾರ್ಯಕರ್ತರ ಪಡೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ ಎನ್ನುವುದು ಸತ್ಯಾಂಶ. ಹೀಗಾಗಿಯೇ ಈ ಬಾರಿ ಅಧಿಕಾರ ಹಿಡಿಯಲು ಎಡಪಕ್ಷಗಳು ಸರ್ಕಸ್​ ನಡೆಸುತ್ತಿವೆ. ಅಲ್ಲದೇ ಈ ಪ್ರಸ್ತಾಪವನ್ನು ಪವನ್​​ ಮುಂದೆ ಇಡಲಾಗಿದೆ ಎನ್ನುವುದು ಇತ್ತೀಚಿನ ಸುದ್ದಿ.
Loading...

ಮೈತ್ರಿಕೂಟದ ಬಗ್ಗೆ ಚರ್ಚಿಸುವ ಸಲುವಾಗಿ ಸೆಪ್ಟೆಂಬರ್​ 2ನೇ ತಾರಿಖು ಪವನ್​ ಸೇರಿದಂತೆ ಎಡಪಕ್ಷಗಳ ನಾಯಕರು ಸಭೆ ನಡೆಸಲಿದ್ಧಾರೆ ಎನ್ನುತ್ತಿವೆ ಮೂಲಗಳು. ಎಡಪಕ್ಷಗಳೊಂದಿಗೆ ಹೆಜ್ಜೆ ಹಾಕಲು ಮುಂದಾಗಿರುವ ಪವನ್​ ದ್ವಂದ ನಿಲವು ತಾಳಿದರೆ, ಅದಕ್ಕೆ ಟಿಆರ್​ಎಸ್​ ಮುಖ್ಯಸ್ಥ, ತೆಲಂಗಾಣ ಸಿಎಂ ಕೆಸಿಆರ್​ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.

ಪವನ್​ ಕಲ್ಯಾಣ್​ ತೆಲಂಗಾಣ ಸಿಎಂ ಕೆಸಿಆರ್​ ಜತೆಗೆ ಒಳ್ಳೆಯ ಸಂಬಂಧ ಹೊಂದಿದ್ಧಾರೆ. ಅಲ್ಲದೇ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡು ಉಭಯ ರಾಷ್ಟ್ರಗಳಲ್ಲಿ ಜನಸೇನ ಸ್ಪರ್ಧೆ ಮಾಡುವುದು ನೂರಕ್ಕೆ ನೂರು ಸತ್ಯ ಎಂದು ಪವನ್​ ಘೋಷಿಸಿದ್ಧಾರೆ. ಹೀಗಾಗಿ, ಕೆಸಿಆರ್​ ತೆಲಂಗಾಣದಲ್ಲಿ ಜನಸೇನ ಪಕ್ಷಕ್ಕೆ ಎದುರಾಳಿ ಎನ್ನುತ್ತಿವೆ ಮೂಲಗಳು.

ಆದರೆ, ತೆಲುಗು ದೇಶಂ ಪಕ್ಷ ಮತ್ತು ಬಿಜೆಪಿಯಿಂದ ದೂರವಾದ ಪವನ್​ ಕಲ್ಯಾಣ್​ ಟಿಆರ್​ಎಸ್​ ಜತೆಗೆ ಹೋಗಲು ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಅಲ್ಲದೇ ಆಂಧ್ರಪ್ರದೇಶಕ್ಕೆ ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡಬೇಕೆಂದು ಹೋರಾಟ ನಡೆಸಿದ್ದ ಪವನ್​ ಕಲ್ಯಾಣ್​, ಎಡಪಕ್ಷಗಳೊಂದಿಗೆ ಒಡನಾಡಿದರು. ಹೀಗಾಗಿ ಎಡ ಪಕ್ಷಗಳು ಜೊತೆಗೂಡಿ ಜನಸೇನ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626