ಮುಂಬೈ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ಕಣ್ಣಿನ ಬಳಿ ಕಚ್ಚಿದ ಇಲಿ; ತನಿಖೆಗೆ ಆದೇಶ

ಮಹಾನಗರಿ ಮುಂಬೈನಲ್ಲಿ ಬೃಹನ್ಮುಂಬೈ ಕಾರ್ಪೊರೇಷನ್​ ನಡೆಸುವ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾದ ರೋಗಿಯ ಕಣ್ಣಿನ ಬಳಿ ಇಲಿಯೊಂದು ಕಚ್ಚಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಗಾಯಾಳು ಯೆಲ್ಲಪ್ಪ.

ಗಾಯಾಳು ಯೆಲ್ಲಪ್ಪ.

 • Share this:
  ಮುಂಬೈ; ಮಹಾನಗರಿ ಮುಂಬೈನಲ್ಲಿ ಬೃಹನ್ಮುಂಬೈ ಕಾರ್ಪೊರೇಷನ್​ ನಡೆಸುವ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾದ ರೋಗಿಯ ಕಣ್ಣಿನ ಬಳಿ ಇಲಿಯೊಂದು ಕಚ್ಚಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಮುಂಬೈ ಉಪನಗರ ಘಾಟ್‌ಕೋಪರ್‌ನ ಬಿಎಂಸಿ ನಡೆಸುತ್ತಿರುವ ರಾಜವಾಡಿ ಆಸ್ಪತ್ರೆಯ ಅಧಿಕಾರಿಗಳು ಘಟನೆಯನ್ನು ದೃಢಪಡಿಸಿದ್ದಾರೆ. ಗಾಯಾಳುವನ್ನು ಶ್ರೀನಿವಾಸ್ ಯೆಲ್ಲಪ್ಪ (24) ಎಂದು ಗುರುತಿಸಲಾಗಿದ್ದು, ಈತ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಈ ವೇಳೆ ಇಲಿ ಕಚ್ಚಿದೆ ಎಂದು ಅವರ ಸಂಬಂಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅದೃಷ್ಟವಶಾತ್ ಅವರ ಕಣ್ಣಿಗೆ ಯಾವುದೇ ಹಾನಿ ಆಗಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ.

  ಘಟನೆಯ ಬಗ್ಗೆ ರಾಜವಾಡಿ ಆಸ್ಪತ್ರೆಯ ಡೀನ್ ಡಾ. ವಿದ್ಯಾ ಠಾಕೂರ್ ಮಾತನಾಡಿ, "ಇಂತಹ ಘಟನೆ ಸಂಭವಿಸಬಾರದು. ರೋಗಿಯ ಗಾಯಗಳು ಮೇಲ್ನೋಟಕ್ಕೆ ಅಪಾಯವಿರುವಂತೆ ಕಾಣುತ್ತಿಲ್ಲ. ಆದರೂ, ಇಂತಹ ಘಟನೆಗಳನ್ನು ತಪ್ಪಿಸಬಹುದಿತ್ತು. ಕಣ್ಣಿಗೆ ಯಾವುದೇ ಅಪಾಯ ಇಲ್ಲ. ಗಾಯಾಳುವಿಗೆ ನಾನು ಉತ್ತಮ ಚಿಕಿತ್ಸೆ ನೀಡುತ್ತೇವೆ" ಎಂದು ತಿಳಿಸಿದ್ದಾರೆ.

  “ವಾರ್ಡ್ (ಘಟನೆ ನಡೆದ ಸ್ಥಳ) ನೆಲ ಮಹಡಿಯಲ್ಲಿದೆ. ಎಷ್ಟೇ ಹೇಳಿದ್ದರೂ ಕೆಲವರು ಆಸ್ಪತ್ರೆಯ ಆವರಣದಲ್ಲಿ ಕಸವನ್ನು ಎಸೆಯುತ್ತಾರೆ. ಅದು ಅಲ್ಲಿರುವ ಇಲಿಗಳನ್ನು ಆಕರ್ಷಿಸುತ್ತದೆ. ಇದೇ ಕಾರಣಕ್ಕೆ ಈ ಭಾಗದಲ್ಲಿ ಇಲಿಗಳ ಕಾಟ ಅಧಿಕವಾಗಿದೆ. ಇಂತಹ ಘಟನೆಗಳನ್ನು ತಪ್ಪಿಸಲು ಆಸ್ಪತ್ರೆಯ ಆಡಳಿತವು ಹೆಚ್ಚಿನ ಕಾಳಜಿ ವಹಿಸಲಿದೆ" ಎಂದು ಆಸ್ಪತ್ರೆಯ ಡೀನ್ ಡಾ. ವಿದ್ಯಾ ಠಾಕೂರ್ ತಿಳಿಸಿದ್ದಾರೆ.

  ಇದನ್ನೂ ಓದಿ: Corona Vaccine| ಕೊರೋನಾ ಲಸಿಕೆಯಿಂದ ಸ್ತ್ರೀ-ಪುರುಷರಲ್ಲಿ ಬಂಜೆತನ ಉಂಟಾಗುವುದಿಲ್ಲ; ಆರೋಗ್ಯ ಸಚಿವಾಲಯ ಸ್ಪಷ್ಟನೆ!

  ಗಾಯಾಳು ಯಲ್ಲಪ್ಪ ಸಹೋದರಿ ಈ ಬಗ್ಗೆ ಮಾತನಾಡಿ, "ನಾನು ಇಂದು ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದಾಗ ನನ್ನ ಸಹೋದರನ ಎಡಗಣ್ಣಿಗೆ ಗಾಯವಾಗಿದೆ ಎಂಬುದನ್ನು ನಾನು ಗಮನಿಸಿದ್ದೇನೆ. ಗಾಯದ ಬಗ್ಗೆ ನಾನು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ನಂತರ ನನ್ನ ಸಹೋದರನನ್ನು ಮತ್ತೊಂದು ಹಾಸಿಗೆಗೆ ಸ್ಥಳಾಂತರಿಸಲಾಯಿತು ಮತ್ತು ಅವರ ಗಾಯಕ್ಕೆ ಚಿಕಿತ್ಸೆ ನೀಡಲಾಯಿತು" ಎಂದು ತಿಳಿಸಿದ್ದಾರೆ.

  "ಅವರು ಈಗಾಗಲೇ ಗಂಭೀರ ಸ್ಥಿತಿಯಲ್ಲಿದ್ದಾರೆ. ಅವನಿಗೆ ಏನಾದರೂ ಸಂಭವಿಸಿದಲ್ಲಿ ಯಾರು ಜವಾಬ್ದಾರರು" ಎಂದು ಆಕೆ ಕಿಡಿಕಾರಿದ್ದಾರೆ.

  ಇದನ್ನೂ ಓದಿ: DK Shivakumar: ಜೈಲಿನಲ್ಲಿದ್ದಾಗ ಸಹಾಯ ಮಾಡಿದ್ದ ಕೈದಿಗಳಿಗೆ ಹೊಸ ಬದುಕು ಕಟ್ಟಿಕೊಟ್ಟ ಡಿಕೆ ಶಿವಕುಮಾರ್!

  "ತೀವ್ರ ನಿಗಾ ಘಟಕವು ಅನುಕೂಲಕ್ಕಾಗಿ ನೆಲಮಹಡಿಯಲ್ಲಿರಬೇಕು. ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ, ರೋಗಿಯನ್ನು ಇಲಿ ಕಚ್ಚಿದ ಘಟನೆ ಗಂಭೀರ ವಿಷಯವಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: