• Home
  • »
  • News
  • »
  • national-international
  • »
  • Gujarat Elections: ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರಿದ್ದೇಕೆ ಪಾಟೀದಾರ್‌ ನಾಯಕ: ರಹಸ್ಯ ಬಯಲು ಮಾಡಿದ ಹಾರ್ದಿಕ್ ಪಟೇಲ್

Gujarat Elections: ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರಿದ್ದೇಕೆ ಪಾಟೀದಾರ್‌ ನಾಯಕ: ರಹಸ್ಯ ಬಯಲು ಮಾಡಿದ ಹಾರ್ದಿಕ್ ಪಟೇಲ್

 ಹಾರ್ದಿಕ್ ಪಟೇಲ್

ಹಾರ್ದಿಕ್ ಪಟೇಲ್

ನ್ಯೂಸ್ 18 ಇಂಡಿಯಾದ ಗುಜರಾತ್ ಚುನಾವಣಾ ಸಂಬಂಧ ನಡೆಸಿದ ಮೊದಲ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹಾರ್ದಿಕ್ ಪಟೇಲ್ ಮತ್ತು ಕಾಂಗ್ರೆಸ್‌ನ ರೋಹನ್ ಗುಪ್ತಾ ನಡುವೆ ಚರ್ಚೆ ನಡೆದಿದೆ. ಗುಜರಾತ್ ಅಧಿವೇಶನದಲ್ಲಿ ತಮ್ಮ ಹಳೆಯ ಪಕ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇಕೆ ಎಂಬ ಪ್ರಶ್ನೆಗೆ, ''ಹಿಂದಿನ ವಿಚಾರವೇ ಬೇರೆ, ಆಗ ಸಹಜವಾಗಿಯೇ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಪಟೇಲ್ ತಿಳಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Gujarat, India
  • Share this:

ಅಹಮದಾಬಾದ್(ನ.14): ಗುಜರಾತ್ ವಿಧಾನಸಭಾ ಚುನಾವಣೆಗೆ (Gujarat Assembly Elections) ದಿನಾಂಕ ನಿಗದಿಯಾಗಿದೆ. ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಗುಜರಾತ್​ನಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಹೀಗಿರುವಾಗ ನ್ಯೂಸ್​ 18 ಚುನಾವಣೆ ನಿಟ್ಟಿನಲ್ಲಿ ಮೊದಲ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ಬಿಜೆಪಿ ಮುಖಂಡ ಹಾರ್ದಿಕ್ ಪಟೇಲ್ (Hardik Patel) ಮತ್ತು ಕಾಂಗ್ರೆಸ್‌ನ ರೋಹನ್ ಗುಪ್ತಾ ನಡುವೆ ಚರ್ಚೆ ನಡೆದಿದೆ. ಈ ವೇಳೆ ತಮ್ಮ ಹಳೆಯ ಪಕ್ಷವಾದ ಕಾಂಗ್ರೆಸ್‌ನ (Congress) ಸೆರಗು ಬಿಟ್ಟು ಬಿಜೆಪಿ ಸೇರಿದ್ದೇಕೆ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್ ಪಟೇಲ್, 'ಹಿಂದಿನ ವಿಷಯವೇ ಬೇರೆ, ಆಗ ಸಹಜವಾಗಿಯೇ ರಾಜಕೀಯ ನಿರ್ಧಾರ ಕೈಗೊಳ್ಳಬೇಕಿತ್ತು. ಹಲವು ಬಾರಿ ಸನಾತನ ಸಂಸ್ಕೃತಿಯ ವಿರುದ್ಧ ಧ್ವನಿ ಎತ್ತಿದ್ದೆ. ಅಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ, ಅದಕ್ಕಾಗಿಯೇ ಇಂದು ಬಿಜೆಪಿಯಲ್ಲಿದ್ದೇನೆ, ಕಾಂಗ್ರೆಸ್ ಶಾಸಕರನ್ನು ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು.


ಅಲ್ಲದೇ ಹಲವರು ಪಕ್ಷ ತೊರೆದಿದ್ದಾರೆ. ಈ ಕುರುತಾಗಿ ಉದಾಹರಣೆ ನೀಡಿ, ಗುಲಾಂ ನಬಿ ಆಜಾದ್ ಅವರು 50 ವರ್ಷಗಳಲ್ಲಿ ವಿಷಯ ಅರ್ಥಮಾಡಿಕೊಂಡರು, ಆದರೆ ನನಗೆ ಆ ವಿಚಾರದಲ್ಲಿ ಲಾಭವಾಯ್ತು, ನಾನು ಕೇವಲ ಎರಡು ವರ್ಷಗಳಲ್ಲಿ ಅದನ್ನು ಅರ್ಥಮಾಡಿಕೊಂಡಿದ್ದೇನೆ ಎಂದಿದ್ದಾರೆ.


ಬಿಜೆಪಿಯಲ್ಲೂ ವಿರೋಧಿ ಅಲೆ


ನಾವು ಗುಜರಾತ್ ಜನರಿಗಾಗಿ ಹೋರಾಡುತ್ತಿದ್ದೇವೆ ಎಂದು ರೋಹನ್ ಗುಪ್ತಾ ಹೇಳಿದ್ದಾರೆ. ಸಮಸ್ಯೆಗಳು ಮೊದಲಿನಂತೆಯೇ ಇವೆ. ಹಣದುಬ್ಬರ, ನಿರುದ್ಯೋಗ. 27 ವರ್ಷಗಳಲ್ಲಿ ಬಿಜೆಪಿ ವೈಮಾನಿಕ ವಾತಾವರಣವನ್ನು ಸೃಷ್ಟಿಸಿತ್ತು, ಆದರೆ ನೆಲಮಟ್ಟದ ಪರಿಸ್ಥಿತಿ ಬಿಜೆಪಿಗೆ ಅಪಾಯಕಾರಿಯಾಗಿದೆ. ಜನರು ಕಾಂಗ್ರೆಸ್ ತೊರೆಯುತ್ತಿರುವ ಕುರಿತು ಮಾತನಾಡಿದ ಅವರು, ಹಲವರು ಕಾಂಗ್ರೆಸ್ ತೊರೆದಿದ್ದರೆ, ಹಲವರು ಕಾಂಗ್ರೆಸ್ ಜೊತೆಗಿದ್ದಾರೆ. ಚುನಾವಣೆ ವೇಳೆ ಹಲವು ಸಮಸ್ಯೆಗಳು ಬರುತ್ತವೆ, ಮೀಸಲಾತಿ ಒಂದೇ ಸಮಸ್ಯೆಯಲ್ಲ. ಬಿಜೆಪಿಯಲ್ಲೂ ವಿರೋಧಿ ಧ್ವನಿ ಇದೆ. ಗೃಹ ಸಚಿವ ಅಮಿತ್ ಶಾ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. 4 ವರ್ಷಗಳ ಹಿಂದೆ ಡಬಲ್ ಇಂಜಿನ್ ಸರ್ಕಾರದ ಎಂಜಿನ್ ಕೂಡ ಬದಲಾಗಿದೆ. ಎಂಜಿನ್ 27 ವರ್ಷ ಹಳೆಯದಾಗಿದೆ. ಇದರ ಸರಾಸರಿ ಕಡಿಮೆಯಾಗಿದೆ, ಈ ಬಾರಿ ಅದನ್ನು ಬದಲಾಗುತ್ತದೆ ಎಂದಿದ್ದಾರೆ.


ಇದನ್ನೂ ಓದಿ: Hardik Patel: 'ಬರೀ ಮೋದಿಯನ್ನೇ ಬಯ್ತಾರೆ', ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹಾರ್ದಿಕ್ ಪಟೇಲ್


2017ರಲ್ಲೂ ಹಲವು ಸಮಸ್ಯೆಗಳಿದ್ದವು


ಈ ಕುರಿತು ಹಾರ್ದಿಕ್ ಅವರು, ಇಂದು ಕಾಂಗ್ರೆಸ್ ಮಾತನಾಡುತ್ತಿರುವ ಸಮಸ್ಯೆಗಳಿಗಿಂತ 2017 ರಲ್ಲಿ ಹೆಚ್ಚಿನ ಸಮಸ್ಯೆಗಳಿದ್ದವು ಎಂದು ಹೇಳಿದರು. ಬಿಜೆಪಿ ಸಮಸ್ಯೆಗಳನ್ನು ಬಗೆಹರಿಸಿದೆ. ಗುಜರಾತಿನಲ್ಲಿ ಜನರು ಬಿಜೆಪಿ ಸರ್ಕಾರ ರಚಿಸಿದ್ದಾರೆ. ಕಾಂಗ್ರೆಸ್ ಸಮಸ್ಯೆಯ ಹೆಸರಿನಲ್ಲಿ ಜನರನ್ನು ಪ್ರಚೋದಿಸುತ್ತದೆ. ಗುಜರಾತಿನಲ್ಲಿ ಆಂದೋಲನ ನಡೆದಾಗಲೆಲ್ಲಾ ಬಿಜೆಪಿ ಆ ವಿಚಾರದಲ್ಲಿ ಕೆಲಸ ಮಾಡಲು ಪ್ರಯತ್ನಿಸಿದೆ. ಜನರಿಗೆ ವಿಶ್ವಾಸದ ಸರ್ಕಾರ ಬೇಕು. ಹತ್ತು ಲಕ್ಷ ಜನರ ರ್ಯಾಲಿಯನ್ನು ಹಲವು ಬಾರಿ ನೋಡಿದರು, ಆಗಲೂ ಜನರು ಪ್ರತಿಪಕ್ಷಗಳ ಸಮಸ್ಯೆಗಳು ಸರಿ, ಆದರೆ ಬಿಜೆಪಿಯದ್ದೇ ಸರ್ಕಾರ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರೇ ಹಲವು ಬಾರಿ ಗುಜರಾತ್‌ಗೆ ಬಂದು ಜನರೊಂದಿಗೆ ಮಾತನಾಡುತ್ತಾರೆ ಮತ್ತು ತಮ್ಮ ಜವಾಬ್ದಾರಿಯನ್ನು ಪೂರೈಸುತ್ತಾರೆ ಎಂದು ಹಾರ್ದಿಕ್ ಹೇಳಿದರು.

Published by:Precilla Olivia Dias
First published: