ಬಿಎಸ್​ಎನ್​ಎಲ್​ ಜೊತೆ ಕೈ ಜೋಡಿಸಿದ ಬಾಬಾ ರಾಮ್​ದೇವ್​; ಸ್ವದೇಶಿ ಸಿಮ್​ ಕಾರ್ಡ್​ ಬಿಡುಗಡೆ

news18
Updated:May 29, 2018, 11:24 AM IST
ಬಿಎಸ್​ಎನ್​ಎಲ್​ ಜೊತೆ ಕೈ ಜೋಡಿಸಿದ ಬಾಬಾ ರಾಮ್​ದೇವ್​; ಸ್ವದೇಶಿ ಸಿಮ್​ ಕಾರ್ಡ್​ ಬಿಡುಗಡೆ
news18
Updated: May 29, 2018, 11:24 AM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಮೇ 29): ಸ್ವದೇಶಿ ಮಂತ್ರ ಜಪಿಸಿ ಪತಂಜಲಿ ಬ್ರಾಂಡ್​ ಮೂಲಕ ಗ್ರಾಹಕ ಉತ್ಪನ್ನಗಳ ಬಹುದೊಡ್ಡ ಮಾರುಕಟ್ಟೆ ನಿರ್ಮಿಸಿಕೊಂಡ ಯೋಗ ಗುರು ಬಾಬಾ ರಾಮ್​ದೇವ್​ ಈಗ ಟೆಲಿಕಾಂ ಕ್ಷೇತ್ರಕ್ಕೂ ಕೈ ಹಾಕಿದ್ದಾರೆ.

ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​ ಸ್ಂಸ್ಥೆಯೊಂದಿಗೆ ಕೈ ಜೋಡಿಸಿರುವ ಬಾಬಾ ರಾಮ್​ದೇವ್​ ಈಗ ಸ್ವದೇಶಿ ಸಮೃದ್ಧಿ ಸಿಮ್​ ಬಿಡುಗಡೆ ಮಾಡಿದ್ದಾರೆ.  ಈ ಸಿಮ್​ ಕಾರ್ಡ್​ಗೆ​ 144ರೂ ರಿಚಾರ್ಚ್​ ಮಾಡಿಸಿದಲ್ಲಿ 2 ಜಿಬಿ ಡಾಟಾ,  ದೇಶದ್ಯಾಂತ ಅನ್​ಲಿಮಿಡೆಟ್​ ಕರೆ ಹಾಗೂ 100 ಎಸ್​ಎಂಎಸ್, ​ ಸೌಲಭ್ಯವನ್ನು ಹೊಂದಿದೆ. ವಿಶೇಷ ಸೂಚನೆಯಂದರೆ ಈ ಸಿಮ್​ ಕಾರ್ಡ್​ ಸಾರ್ವಜನಿಕರಿಗೆ ಸದ್ಯಕ್ಕೆ ಲಭ್ಯವಿಲ್ಲ. ಪತಂಜಲಿ ಉದ್ಯೋಗಸ್ಥರರು, ಬಿಎಸ್​ಎನ್​ಎಲ್​ ಉದ್ಯೋಗಸ್ಥಿರಿಗೆ ಮಾತ್ರ ಲಭ್ಯವಾಗಲಿದೆ ಎಂದು ಎಎನ್​ಐ ವರದಿ ಮಾಡಿದೆ.

ಇಷ್ಟೇ ಅಲ್ಲದೇ ಈ ಕಾರ್ಡ್​ ಜೀವವಿಮೆ ಪಾಲಿಸಿಯನ್ನು ಒಳಗೊಂಡಿದೆ. 2.5 , 5 ಲಕ್ಷ ವರೆಗೆ ಜೀವ ವಿಮೆ ಸೌಲಭ್ಯವನ್ನು ಪಡೆಯಬಹುದಾಗಿದೆ.
ಈಗಾಗಲೇ ಸ್ವದೇಶಿ ಸರಕು ಉತ್ಪನನ್ನದ ಮೇಲೆ ಗರಿಷ್ಟ ಲಾಭಾ ಪಡೆಯುತ್ತಿರುವ ರಾಮ್​ದೇವ್​53.7 ರಷ್ಟು ಲಾಭಾ ಹೊಂದಿದ್ದು, 2017ರಲ್ಲಿ ಅದರ ವಾರ್ಷಿಕ ಲಾಭಾ 1,193ಕೋಟಿಯಾಗಿದೆ.

 
First published:May 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...