HOME » NEWS » National-international » PATANJALI MUSTARD OIL FOUND TO BE OF SUBSTANDARD FOOD QUALITY RAJASTHAN GOVT STG LG

Patanjali Ayurved: ಪತಂಜಲಿ ಸಾಸಿವೆ ಎಣ್ಣೆ ಕಳಪೆ ಎಂದ ರಾಜಸ್ಥಾನ ಸರ್ಕಾರ...!

ಪತಂಜಲಿ ಸಾಸಿವೆ ಎಣ್ಣೆ ಪೊಟ್ಟಣಗಳು ಹಾಗೂ ಸಾಸಿವೆ ಎಣ್ಣೆ ಬಾಟಲಿಗಳು ಆಹಾರ ಗುಣಮಟ್ಟ ಪರೀಕ್ಷೆಯಲ್ಲಿ ಕಳಪೆಯಾಗಿರುವುದು ಸಾಬೀತಾಗಿದೆ.

news18-kannada
Updated:June 10, 2021, 1:11 PM IST
Patanjali Ayurved: ಪತಂಜಲಿ ಸಾಸಿವೆ ಎಣ್ಣೆ ಕಳಪೆ ಎಂದ ರಾಜಸ್ಥಾನ ಸರ್ಕಾರ...!
ಪತಂಜಲಿ ಸಾಸಿವೆ ಎಣ್ಣೆ
  • Share this:

ಬಾಬಾ ರಾಮ್ ದೇವ್ ಅವರ ಸಂಸ್ಥೆಯಾಗಿರುವ ಪತಂಜಲಿಯ(Patanjali Ayurved) ಸಾಸಿವೆ ಎಣ್ಣೆ ಗುಣಮಟ್ಟ ಕಳಪೆಯಾಗಿದೆ ಎಂದು ಆಪಾದಿಸಿರುವ ರಾಜಸ್ಥಾನ ಸರಕಾರ, ಅಲ್ವಾರ್ನಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಯೋಗಾಲಯದಲ್ಲಿ ಇದು ಸಾಬೀತಾಗಿದೆ ಎಂದು ಹೇಳಿದೆ. ಸಿಂಘಾನಿಯಾ ಎಣ್ಣೆ ಮಿಲ್​​ನಲ್ಲಿ ಉತ್ಪಾದನೆಯಾಗಿ ಪೂರೈಕೆಯಾಗುತ್ತಿದ್ದ ಪತಂಜಲಿ ಸಾಸಿವೆ ಎಣ್ಣೆಯ ಐದು ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಆದರೆ ಅವೆಲ್ಲವೂ ಪರೀಕ್ಷೆಯಲ್ಲಿ ವಿಫಲವಾಗಿವೆ. ಏಕೆಂದರೆ ಅವು ಆಪೇಕ್ಷಿತ ಗುಣಮಟ್ಟ ಇಲ್ಲವೇ ಮಾನದಂಡಗಳನ್ನು ಹೊಂದಿಲ್ಲವೆಂದು ರಾಜಸ್ಥಾನದ ರಾಜ್ಯ ಸರಕಾರವು ಪ್ರತಿಪಾದಿಸಿದೆ.


ಮಿಲ್​ ಮೇಲೆ ದಾಳಿ ನಡೆಸಿದ್ದ ಜಿಲ್ಲಾಡಳಿತ:ಮೇ 28ರಂದು ಅಲ್ವಾರ್ ಜಿಲ್ಲಾಡಳಿತವು ಅಲ್ವಾರ್ನಲ್ಲಿರುವ ಇಸ್ಮಾಯಿಲ್‌ಪುರ ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿರುವ, ಬಾಬಾ ರಾಮ್ ದೇವ್ ಅವರ ಪತಂಜಲಿ ಸಾಸಿವೆ ಎಣ್ಣೆಯನ್ನು ಉತ್ಪಾದಿಸುವ ಸಿಂಘಾನಿಯಾ ಎಣ್ಣೆ ಗಿರಣಿಗೆ ದಾಳಿ ಮಾಡಿ, ಪ್ಯಾಕಿಂಗ್ ಸಾಮಾಗ್ರಿಗಳು ಹಾಗೂ ಸಾಸಿವೆ ಎಣ್ಣೆ ತುಂಬಿಸುವ ಶೀಷೆಗಳನ್ನು ವಶಕ್ಕೆ ತೆಗೆದುಕೊಂಡಿತ್ತು.


ಇದನ್ನೂ ಓದಿ:Mumbai Rains: ಮುಂಬೈನಲ್ಲಿ ಭಾರೀ ಮಳೆ; ರಸ್ತೆ, ಮನೆಗಳು ಜಲಾವೃತ; ಇಂದು ರೆಡ್ ಅಲರ್ಟ್ ಘೋಷಣೆ

ಈ ದಾಳಿ ನಡೆಸಲು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆದೇಶ ನೀಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ದಾಳಿ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಪತಂಜಲಿ ಲೇಬಲ್ ಇದ್ದ ಪ್ಯಾಕಿಂಗ್ ಸಾಮಾಗ್ರಿಗಳು ಹಾಗೂ ಉತ್ಪನ್ನಗಳನ್ನು ವಶಕ್ಕೆ ಪಡೆದುಕೊಂಡು ಗಿರಣಿಗೆ ಬೀಗ ಜಡಿಯಲಾಗಿತ್ತು.


ಪರೀಕ್ಷೆಯಲ್ಲಿ ವಿಫಲವಾಗಿತ್ತು, ಗುಣಮಟ್ಟ ಕಳಪೆಯಾಗಿತ್ತು:


“ಮೇ 27ರಂದು ಸ್ಥಳೀಯಾಡಳಿತದ ಸಮ್ಮುಖದಲ್ಲಿ ಸಾಸಿವೆ ಎಣ್ಣೆಯಿದ್ದ ಪೊಟ್ಟಣಗಳನ್ನು ಆಹಾರ ಸುರಕ್ಷತೆಗಾಗಿ ಪರೀಕ್ಷೆಗೊಳಪಡಿಸಲಾಗಿದೆ. ಅಲ್ವಾರ್ನಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಯೋಗಾಲಯದಲ್ಲಿ ಈ ಪರೀಕ್ಷೆ ನಡೆದಿದ್ದು ಅದರ ವರದಿಯನ್ನೂ ನೀಡಲಾಗಿದೆ” ಎಂದು ರಾಜಸ್ಥಾನದ ಮುಖ್ಯ ವೈದ್ಯಾಧಿಕಾರಿ ಡಾ. ಓಂಪ್ರಕಾಶ್ ಮೀನಾ ಹೇಳಿದ್ದಾರೆ.

ಇದನ್ನೂ ಓದಿ: Rohini Sindhuri: ಮೈಸೂರಿನಿಂದ ತೆರಳುವ ಮುನ್ನ ಸಾ.ರಾ.ಮಹೇಶ್​​ಗೆ ಶಾಕ್​ ಕೊಟ್ಟ ರೋಹಿಣಿ ಸಿಂಧೂರಿ..!

“ಪತಂಜಲಿ ಸಾಸಿವೆ ಎಣ್ಣೆ ಪೊಟ್ಟಣಗಳು ಹಾಗೂ ಸಾಸಿವೆ ಎಣ್ಣೆ ಬಾಟಲಿಗಳು ಆಹಾರ ಗುಣಮಟ್ಟ ಪರೀಕ್ಷೆಯಲ್ಲಿ ಕಳಪೆಯಾಗಿರುವುದು ಸಾಬೀತಾಗಿದೆ. ಇದಲ್ಲದೆ ಶ್ರೀ ಶ್ರೀ ತತ್ವ ಬ್ರ್ಯಾಂಡ್ ನ ಸಾಸಿವೆ ಎಣ್ಣೆ ಕೂಡ ಇದೇ ರೀತಿ ಪರೀಕ್ಷೆಯಲ್ಲಿ ಇಂಥದ್ದೇ ಫಲಿತಾಂಶ ಪಡೆದು ವಿಫಲವಾಗಿದೆ. ಜತೆಗೆ ಪಾರ್ಲಿಮೆಂಟ್ ಬ್ರ್ಯಾಂಡ್ನ ಸಾಸಿವೆ ಎಣ್ಣೆ ಕಳಪೆ ಗುಣಮಟ್ಟ ಹಾಗೂ ದೋಷವಿರುವ ಆಹಾರ ಸಾಮಾಗ್ರಿಯೆಂದು ಸಾಬೀತಾಗಿದೆ” ಎಂದು ತಿಳಿಸಿದ್ದಾರೆ.


ಆಹಾರ ಗುಣಮಟ್ಟ ಮಾನದಂಡದಲ್ಲಿ ತೇರ್ಗಡೆಯಾಗದ ಈ ಉತ್ಪನ್ನಗಳ ಬಗ್ಗೆ ವಿಚಾರಣೆ ನಡೆಸಲು ಸಮಿತಿಯನ್ನು ರಚಿಸಲು ಅಲ್ವಾರ್ ಜಿಲ್ಲಾಡಳಿತ ತೀರ್ಮಾನಿಸಿದ್ದು, ತನಿಖೆಯ ಹೊಣೆಯನ್ನು ಸಿಐಡಿಗೆ ಕೊಡುವ ಸಾಧ್ಯತೆಗಳನ್ನೂ ಮೂಲಗಳು ತಿಳಿಸಿವೆ.


ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯು ಈ ಬೆಳವಣಿಗೆಗೆ ಸಂಬಂಧಿಸಿದಂತೆ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Latha CG
First published: June 10, 2021, 1:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories