ಯಾರಿಗೆ ತಾನೇ ವಿಮಾನದಲ್ಲಿ (Flight) ಕೂತು ವಿದೇಶಕ್ಕೆ (Foreign Countries) ಹಾರಿ ಹೋಗಬೇಕು ಅಂತ ಅನ್ನಿಸಿರುವುದಿಲ್ಲ ಹೇಳಿ? ಬಹುತೇಕರಿಗೆ ತಾವು ಕೂಡ ಬೇರೆಯವರ ರೀತಿ ಒಮ್ಮೆಯಾದರೂ ವಿದೇಶಕ್ಕೆ ಹೋಗಿ ಬರಬೇಕು. ಅಲ್ಲಿ ಕೆಲಸ ಮಾಡಲು ಹೋಗದಿದ್ದರೂ ಸಹ ಸುಮ್ಮನೆ ಒಮ್ಮೆ ಹಾಗೆ ಸುತ್ತಾಡಿಕೊಂಡು ಬರಲು ಹೋಗಬೇಕು ಎಂದು ಅನ್ನಿಸಿರುತ್ತದೆ. ಆದರೆ ವಿದೇಶಕ್ಕೆ ಹೋಗಿ ಬರುವುದು ಎಂದರೆ ಸಾಧಾರಣವಾದ ಮಾತಲ್ಲ ಬಿಡಿ. ಏಕೆಂದರೆ ಅದಕ್ಕೆ ವೀಸಾ ಮತ್ತು ಪಾಸ್ಪೋರ್ಟ್ (Visa and Passport) ಎರಡೂ ಇರಬೇಕು.
ಆದರೆ ಈಗ ಒಂದು ಒಳ್ಳೆಯ ಸುದ್ದಿ ಇದೆ ನೋಡಿ, ಅದೇನೆಂದರೆ ಇನ್ಮುಂದೆ ನೀವು ವಿದೇಶಕ್ಕೆ ಹೋಗುವಾಗ ಪಾಸ್ಪೋರ್ಟ್ ಅನ್ನು ಕಡ್ಡಾಯವಾಗಿ ಹೊಂದಿರಬೇಕಿಲ್ಲ ಅಂತ ಹೇಳಲಾಗುತ್ತಿದೆ ನೋಡಿ.
ಹಾಗಾದರೆ ಹಾಗೆ ಹೋಗಿ ಟಿಕೆಟ್ ಬುಕ್ ಮಾಡಿಕೊಂಡು ವಿಮಾನ ಹತ್ತಿ ವಿದೇಶಕ್ಕೆ ಹೋಗಬಹುದೇ? ಎಲ್ಲಾ ದೇಶಗಳಿಗೆ ಪಾಸ್ಪೋರ್ಟ್ ಇಲ್ಲದೆ ಪ್ರಯಾಣಿಸಬಹುದೇ ಅಥವಾ ಕೆಲವೇ ಕೆಲವು ದೇಶಗಳಿಗೆ ಹೀಗೆ ಪ್ರಯಾಣಿಸಬಹುದೇ ಅಂತ ಅನೇಕರಿಗೆ ಅನೇಕ ರೀತಿಯ ಪ್ರಶ್ನೆಗಳಿರುತ್ತವೆ. ಇದಕ್ಕೆ ಉತ್ತರ ಮುಂದೆ ಇದೆ ನೋಡಿ, ಪೂರ್ತಿಯಾಗಿ ಈ ಸ್ಟೋರಿ ಓದಿ.
ಕೆಲವು ದೇಶಗಳಿಗೆ ಪ್ರಯಾಣಿಸಲು ಪಾಸ್ಪೋರ್ಟ್ ಅಗತ್ಯವಿಲ್ಲ..
ಕೆಲವು ದೇಶಗಳಿಗೆ ಪ್ರಯಾಣಿಸಲು ಪಾಸ್ಪೋರ್ಟ್ ನ ಅಗತ್ಯವಿಲ್ಲ ಅಂತೆ. ಕೇವಲ ಫೋಟೋ ಐಡಿ ಇದ್ದರೆ ಸಾಕು, ಈ ದೇಶಗಳಲ್ಲಿ ಪ್ರಯಾಣಿಸಲು ಅನುಮತಿ ಸಿಗುತ್ತದೆ. ನೀವು 15 ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ತೋರಿಸುವ ಮೂಲಕ ನೀವು ಭೂತಾನ್ ಮತ್ತು ನೇಪಾಳ ದೇಶಗಳಿಗೆ ಪ್ರವೇಶವನ್ನು ಪಡೆಯಬಹುದು..
ಪಾಸ್ಪೋರ್ಟ್ ಮತ್ತು ವೀಸಾ ಇಲ್ಲದೆ ಈ ದೇಶಗಳಿಗೆ ಹೇಗೆ ಪ್ರಯಾಣಿಸಬಹುದು ಎಂದು ನಾವು ತಿಳಿದುಕೊಳ್ಳೋಣ ಬನ್ನಿ.
ಭೂತಾನ್ ಗೆ ಭೇಟಿ ನೀಡುವುದು ಹೇಗೆ?
ಭೂತಾನ್ ಗೆ ಭೇಟಿ ನೀಡಲು ಬಯಸುವ ಭಾರತೀಯ ಪ್ರಯಾಣಿಕರು ತಮ್ಮ ಪಾಸ್ಪೋರ್ಟ್ ಅನ್ನು ಹೊಂದಿರಬೇಕು, ಇದು ಕನಿಷ್ಠ 6 ತಿಂಗಳ ಸಿಂಧುತ್ವವನ್ನು ಹೊಂದಿದೆ. ನಿಮ್ಮ ಬಳಿ ಪಾಸ್ಪೋರ್ಟ್ ಇಲ್ಲದಿದ್ದರೆ, ನಿಮ್ಮ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಸಹ ನೀವು ಇಲ್ಲಿಗೆ ಹೋಗಬಹುದು. ಮಕ್ಕಳು ಜನನ ಪ್ರಮಾಣಪತ್ರ ಅಥವಾ ಶೈಕ್ಷಣಿಕ ಶಾಲಾ ಗುರುತಿನ ಚೀಟಿಯನ್ನು ಹೊಂದಿರುವುದು ಒಳ್ಳೆಯದು.
ಭಾರತದಿಂದ ರಸ್ತೆ ಮತ್ತು ವಾಯುಮಾರ್ಗದ ಮೂಲಕ ಹೋಗಬಹುದು..
ನೇಪಾಳವನ್ನು ತಲುಪುವುದು ಹೇಗೆ ಅಂತ ನೀವು ಯೋಚನೆ ಮಾಡ್ತಾ ಇದ್ದೀರಾ? ಭಾರತದ ಎಲ್ಲಾ ಪ್ರಮುಖ ವಾಯು ಬಂದರುಗಳಿಂದ ನೇಪಾಳದ ಕಠ್ಮಂಡುವಿಗೆ ವಿಮಾನ ಸೇವೆಗಳಿವೆ.
ಇದನ್ನೂ ಓದಿ: Covid Booster Dose: ಕೊರೊನಾ ಬೂಸ್ಟರ್ ಲಸಿಕೆ ಅನಿವಾರ್ಯವೇ? ಕೇಂದ್ರ ಸಚಿವರಿಂದ ಮಹತ್ವದ ಸೂಚನೆ
ನೇಪಾಳಕ್ಕೆ ಭೇಟಿ ನೀಡಲು ಭಾರತೀಯರಿಗೆ ಪಾಸ್ಪೋರ್ಟ್ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನೇಪಾಳ ಸರ್ಕಾರ "ನಿಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸುವ ಅಂತಹ ಒಂದು ದಾಖಲೆ ಮಾತ್ರ ನಮಗೆ ಬೇಕು. ಇದಕ್ಕಾಗಿ ನೀವು ನಿಮ್ಮ ಮತದಾರರ ಗುರುತಿನ ಚೀಟಿ ಅಥವಾ ಭಾರತೀಯ ಪಾಸ್ಪೋರ್ಟ್ ಅನ್ನು ಪ್ರಸ್ತುತಪಡಿಸಬಹುದು" ಎಂದು ಹೇಳಿದೆ.
ಈ ದೇಶಗಳಿಗೆ ಪ್ರಯಾಣಿಸಲು ವೀಸಾ ಬೇಕಾಗಿಲ್ಲ
ಭೂತಾನ್ ಮತ್ತು ನೇಪಾಳವನ್ನು ಹೊರತುಪಡಿಸಿ, ಪಾಸ್ಪೋರ್ಟ್ ಅಗತ್ಯವಿರುವ ಕೆಲವು ದೇಶಗಳಿವೆ ಆದರೆ ವೀಸಾ ಅಗತ್ಯವಿಲ್ಲ. ಭಾರತೀಯ ಪಾಸ್ಪೋರ್ಟ್ ಹೊಂದಿರುವವರಾಗಿ, ನೀವು ಪೂರ್ವ ವೀಸಾ ಅನುಮೋದನೆಯಿಲ್ಲದೆ ವಿಶ್ವದಾದ್ಯಂತದ 58 ಪ್ರವಾಸಿ ತಾಣಗಳಿಗೆ ಪ್ರಯಾಣಿಸಬಹುದು.
ಮಾಲ್ಡೀವ್ಸ್, ಮಾರಿಷಿಯಸ್, ಶ್ರೀಲಂಕಾ, ಥೈಲ್ಯಾಂಡ್, ಮಕಾವ್, ಭೂತಾನ್, ಕಾಂಬೋಡಿಯಾ, ನೇಪಾಳ, ಕೀನ್ಯಾ, ಮ್ಯಾನ್ಮಾರ್, ಕತಾರ್, ಉಗಾಂಡಾ, ಇರಾನ್, ಸೀಶೆಲ್ಸ್ ಮತ್ತು ಜಿಂಬಾಬ್ವೆಗಳು ಭಾರತೀಯರು ವೀಸಾ ಇಲ್ಲದೆ ಭೇಟಿ ನೀಡಬಹುದಾದ ಸ್ಥಳಗಳ ದೊಡ್ಡ ಪಟ್ಟಿಯಲ್ಲಿ ಸೇರಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ