ನವದೆಹಲಿ: ರೈಲಿನಲ್ಲಿ (Train) ಪ್ರಯಾಣಿಸುವಾಗ ನಾನಾ ಬಗೆಬಗೆಯ ತಿಂಡಿಗಳು ಸಿಗುತ್ತದೆ. ಜನ ಕೂಡ ವಿಧವಿಧವಾದ ತಿಂಡಿಗಳನ್ನು ನೋಡಿ ಬಾಯಿ ರುಚಿಗೆಂದು ಏನಾದರೂ ತೆಗೆದುಕೊಂಡು ತಿನ್ನುತ್ತಾರೆ. ಕೆಲವರಂತೂ ತಾವು ರೈಲನ್ನು ಹತ್ತಿದಾಗಲಿಂದ ತಮ್ಮ ಊರು ಸಿಗುವವರೆಗೂ ನೋಡಿದನ್ನೆಲ್ಲಾ ತೆಗೆದುಕೊಂಡು ತಿನ್ನುತ್ತಾ ಟೈಂ ಪಾಸ್ ಮಾಡುತ್ತಾರೆ. ಆದರೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರೇ (Passangers) ಇನ್ಮುಂದೆ ರೈಲಿನಲ್ಲಿ ಸಿಗುವ ಪದಾರ್ಥಗಳನ್ನು ತಿನ್ನುವ ಮುನ್ನ ನೂರು ಯೋಚಿಸಿ. ಯಾಕಂದ್ರೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪುಟ್ಟ ಬಾಲಕಿಗೆ (Gilr) ತಾನು ಸೇವಿಸುತ್ತಿದ್ದ ಆಮ್ಲೆಟ್ನಲ್ಲಿ (Omelette) ಜಿರಳೆ (Cockroach) ಸಿಕ್ಕಿದೆ.
ಟ್ವೀಟ್ನಲ್ಲಿ ಆಕ್ರೋಶ ಹೊರಹಾಕಿದ ಪ್ರಯಾಣಿಕ
ಹೌದು, ದೆಹಲಿ-ಮುಂಬೈ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ನೀಡಿದ್ದ ಆಹಾರದಲ್ಲಿ ಜಿರಳೆ ಪತ್ತೆಯಾಗಿದೆ. ಇದರಿಂದಾಗಿ ಕೋಪಗೊಂಡ ಪ್ರಯಾಣಿಕರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ರೈಲ್ವೆ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.
16dec2022,We travel from Delhi by (22222). In morning, we ordered extra omlate for baby. See attach photo of what we found! a cockroach? My daughter 2.5 years old if something happened so who will take the responsibilities @PMOIndia @PiyushGoyal @PiyushGoyalOffc @RailMinIndia pic.twitter.com/X6Ac6gNAEi
— Yogesh More - designer (@the_yogeshmore) December 17, 2022
ಈ ಪೋಸ್ಟ್ ಅನ್ನು ರೈಲ್ವೆ ಸಚಿವಾಲಯ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಮತ್ತು ಇತರ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ. ಕಳೆದ ವಾರ ಈ ಘಟನೆ ನಡೆದಿದ್ದು, ರೈಲಿನ ಪ್ಯಾಂಟ್ರಿಯಿಂದ ಆಮ್ಲೆಟ್ ಅನ್ನು ಆರ್ಡರ್ ಮಾಡಿದ್ದೇವ ಎಂದು ತಿಳಿಸಿದ್ದಾರೆ.
ನನ್ನ ಮಗಳಿಗೆ ಏನಾದ್ರೂ ಆಗಿದ್ರೆ ಯಾರು ಜವಾಬ್ದಾರಿ?
2022ರ ಡಿಸೆಂಬರ್ 16ರಂದು ನಾವು ದೆಹಲಿಯಿಂದ ಮುಂಬೈಗೆ ರೈಲು ಸಂಖ್ಯೆ 22222ರಲ್ಲಿ ಪ್ರಯಾಣಿಸುತ್ತಿದ್ದೇವು. ಈ ವೇಳೆ ಮಗುವಿಗೆ ಬೆಳಗ್ಗೆ ಆಮ್ಲೆಟ್ ಅನ್ನು ಆರ್ಡರ್ ಮಾಡಿದ್ದೇವು. ನಂತರ ಆಮ್ಲೆಟ್ ತಿನ್ನುತ್ತಿದ್ದ ನನ್ನ ಮಗಳಿಗೆ ಜಿರಳೆ ಸಿಕ್ಕಿದೆ. ? ನನ್ನ ಮಗಳಿಗೆ 2.5 ವರ್ಷ. ಆಕೆಗೆ ಏನಾದರೂ ಸಂಭವಿಸಿದ್ದರೆ ಏನು ಮಾಡಬೇಕಾಯಿತು. ಇದಕ್ಕೆ ಯಾರು ಜವಾಬ್ದಾರಿ? ಎಂದು ಯೋಗೇಶ್ ಎಂಬವರು ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಘಟನೆಗೆ ರೈಲ್ವೆ ಪ್ರತಿಕ್ರಿಯೆ
ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಸೇವೆಯು ಅನನುಕೂಲತೆಗಾಗಿ ಕ್ಷಮಿಸಿ. ಈ ಘಟನೆಯನ್ನು ತಕ್ಷಣ ಗಮನಿಸಿದ್ದೇವೆ. ಈ ಘಟನೆಗೆ ಕಾರಣರಾದವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಹಾಗೆಯೇ ಕ್ಯಾಟರಿಂಗ್ ವಿಭಾಗಕ್ಕೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಸರ್, ದಯವಿಟ್ಟು ನಿಮ್ಮ PNR ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗೆ ನೇರವಾಗಿ ಸಂದೇಶ ಕಳುಹಿಸಿ ಎಂದು ತಿಳಿಸಿದೆ.
ಯೋಗೇಶ್ ಬೆನ್ನೆಲ್ಲೇ ಮತ್ತೋರ್ವ ಪ್ರಯಾಣಿಕ ಟ್ವೀಟ್
ಯೋಗೇಶ್ ಟ್ವೀಟ್ ಗಮನಿಸಿರುವ ಮತ್ತೊಬ್ಬ ಪ್ರಯಾಣಿಕ ಆ ಟ್ವೀಟ್ ಎಂಬೆಡ್ ಮಾಡಿದ್ದು, ತಾನೂ ಅದೇ ರೈಲಿನಲ್ಲಿ ಪ್ರಯಾಣಿಸಿದ್ದಾಗಿ ಹೇಳಿಕೊಂಡಿದ್ದಾರೆ.
ತಾನು ಕೂಡ ಬೆಳಗ್ಗೆ ಅದೇ ರೈಲಿನಲ್ಲಿದ್ದೆ, ತಿಂಡಿಗೆ ಆಮ್ಲೆಟ್ ತಿಂದ ಬಗ್ಗೆ ನನಗೆ ಪಶ್ಚಾತಾಪವಾಗುತ್ತಿದೆ, ಇನ್ನುಮುಂದೆ ರೈಲಿನಲ್ಲಿ ಆಹಾರ ತೆಗೆದುಕೊಳ್ಳುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಏಪ್ರಿಲ್ ಮತ್ತು ಅಕ್ಟೋಬರ್ನಲ್ಲಿ ರೈಲು ಆಹಾರ ಕುರಿತಂತೆ 5,000ಕ್ಕೂ ಹೆಚ್ಚು ದೂರು
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಈ ವರ್ಷ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ರೈಲಿನಲ್ಲಿ ಸಿಗುವ ಆಹಾರ ಕುರಿತಂತೆ ಸುಮಾರು 5,000ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಗೆ ತಿಳಿಸಿದರು.
ಇದನ್ನೂ ಓದಿ: ಊಟದ ಮೆನು ಬದಲಿಸಿದ IRCTC: ಯಾವ ರೈಲಿನಲ್ಲಿ ಏನು ಸಿಗುತ್ತೆ? ಇಲ್ಲಿದೆ ಮಾಹಿತಿ
"ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಒದಗಿಸಲು ಭಾರತೀಯ ರೈಲ್ವೆಯ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ