HOME » NEWS » National-international » PARTY DOORS NOT SHUT CONGRESS LEADER AFTER SACHIN PILOT DENIES JOINING BJP MAK

Rajasthan Political Crisis: ಸಚಿನ್‌ ಪೈಲಟ್‌ಗೆ ಈಗಲೂ ಕಾಂಗ್ರೆಸ್‌ ಪಕ್ಷದ ಬಾಗಿಲು ತೆಗೆದೇ ಇದೆ; ರಾಜಸ್ಥಾನ ಉಸ್ತುವಾರಿ ಅವಿನಾಶ್ ಪಾಂಡೆ ಹೇಳಿಕೆ

ಸಚಿನ್ ಪೈಲಟ್‌ಗೆ ಕಾಂಗ್ರೆಸ್ ಬಾಗಿಲು ಮುಚ್ಚಿಲ್ಲ, ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಬಹುದು ಮತ್ತು ಅವರು ತನ್ನ ತಪ್ಪನ್ನು ಅರ್ಥಮಾಡಿಕೊಳ್ಳಲಿ. ಯುವ ನಾಯಕರಾದ ಅವರು ಬಿಜೆಪಿಯ ಮೋಸಗೊಳಿಸುವ ಮಾರ್ಗಗಳಿಂದ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವಿನಾಶ್ ಪಾಂಡೆ ಟ್ವೀಟ್ ಮಾಡಿದ್ದಾರೆ.

MAshok Kumar | news18-kannada
Updated:July 15, 2020, 2:35 PM IST
Rajasthan Political Crisis: ಸಚಿನ್‌ ಪೈಲಟ್‌ಗೆ ಈಗಲೂ ಕಾಂಗ್ರೆಸ್‌ ಪಕ್ಷದ ಬಾಗಿಲು ತೆಗೆದೇ ಇದೆ; ರಾಜಸ್ಥಾನ ಉಸ್ತುವಾರಿ ಅವಿನಾಶ್ ಪಾಂಡೆ ಹೇಳಿಕೆ
ರಾಜಸ್ಥಾನ ಕಾಂಗ್ರೆಸ್‌ ಉಸ್ತುವಾರಿ ಅವಿನಾಶ್‌ ಪಾಂಡೆ.
  • Share this:
ಜೈಪುರ (ಜುಲೈ 15); ಕಳೆದ ಒಂದು ವಾರದಿಂದ ರಾಜಸ್ಥಾನ ಕಾಂಗ್ರೆಸ್‌ ಒಳ ಜಗಳ ಬೀದಿಗೆ ಬಿದ್ದಿದೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಮುನಿಸಿಕೊಂಡಿರುವ ಸಚಿನ್‌ ಪೈಲಟ್‌ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ನಿನ್ನೆ ಸಂಜೆ ಸ್ಪಷ್ಟನೆ ನೀಡಿದ್ದ ಸಚಿನ್ ಪೈಲಟ್‌, "ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ಈಗಲೂ ನಾನು ಕಾಂಗ್ರೆಸ್‌ ಕಟ್ಟಾಳು" ಎಂದು ತಿಳಿಸಿದ್ದರು. ಇದರ ಬೆನ್ನಿಗೆ ಇಂದು ಹೇಳಿಕೆ ನೀಡಿರುವ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ’ಸಚಿನ್‌ ಪೈಲಟ್‌ ಅವರಿಗೆ ಪಕ್ಷದ ಬಾಗಿಲು ಮುಚ್ಚಿಲ್ಲ’ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಿಎಂ ಅಶೋಕ್‌ ಗೆಹ್ಲೋಟ್‌ ವಿರುದ್ಧ ಮುನಿಸಿಕೊಂಡಿದ್ದ ಸಚಿನ್‌ ಪೈಲಟ್‌ ಕಳೆದ ಒಂದು ವಾರದಿಂದ ಬಹಿರಂಗವಾಗಿಯೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಬಿಜೆಪಿ ಜೊತೆಗೆ ಕೈ ಜೋಡಿಸಿ ಸರ್ಕಾರ ಉರುಳಿಸುವ ಸೂಚನೆಯನ್ನು ನೀಡಿದ್ದರು. ಈ ಸಂಬಂಧ ದೆಹಲಿಗೆ ತೆರಳಿ ಬಿಜೆಪಿ ಮುಖಂಡರ ಜೊತೆಗೆ ಮಾತುಕತೆಯನ್ನೂ ನಡೆಸಿದ್ದರು. ಆದರೆ, ಮತ್ತೊಂದೆಡೆ 102 ಶಾಸಕರ ಬಲಾಬಲ ತೋರಿಸಿದ್ದ ಸಿಎಂ ಅಶೋಕ್‌ ಗೆಹ್ಲೋಟ್‌ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವುದರ ಜೊತೆಗೆ ಸಚಿನ್ ಪೈಲಟ್‌ ಅವರನ್ನು ಡಿಸಿಎಂ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದಿಂದಲೇ ವಜಾಮಾಡಿದ್ದರು.

ನಿನ್ನೆ ರಾಜಸ್ಥಾನ ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ವಜಾ ಮಾಡಲಾಗಿದೆ ಎಂಬ ಸುದ್ದಿ ತಲುಪುತ್ತಲೇ ಈ ಕುರಿತು ಮಾತನಾಡಿದ್ದ ಸಚಿನ್ ಪೈಲಟ್, "ತಾನು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿಲ್ಲ" ಎಂದು ಘೋಷಿಸಿದ್ದರು. ಹೀಗಾಗಿ ಅವರಿಗೆ ‘ಪಕ್ಷದ ಬಾಗಿಲು ಮುಚ್ಚಿಲ್ಲ’ ಎಂದು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ತಿಳಿಸಿದ್ದಾರೆ.“ಸಚಿನ್ ಪೈಲಟ್‌ಗೆ ಕಾಂಗ್ರೆಸ್ ಬಾಗಿಲು ಮುಚ್ಚಿಲ್ಲ, ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಬಹುದು ಮತ್ತು ಅವರು ತನ್ನ ತಪ್ಪನ್ನು ಅರ್ಥಮಾಡಿಕೊಳ್ಳಲಿ. ಯುವ ನಾಯಕರಾದ ಅವರು ಬಿಜೆಪಿಯ ಮೋಸಗೊಳಿಸುವ ಮಾರ್ಗಗಳಿಂದ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ ”ಎಂದು ಅವಿನಾಶ್ ಪಾಂಡೆ ಟ್ವೀಟ್ ಮಾಡಿದ್ದಾರೆ."ಈಗಲೂ ಮಾತುಕತೆಗಳಿಗೆ ಮುಕ್ತ ಅವಕಾಶವಿದೆ. ಆದರೆ ಅದರಿಂದ ಅವರು ದೂರ ಸರಿದಿದ್ದಾರೆ ಎಂಬುದು ನನ್ನ ಅನಿಸಿಕೆ. ಇದರಿಂದ ಕಾಂಗ್ರೆಸ್‌ಗೆ ನಷ್ಟವಿಲ್ಲ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ನಾನು ಬಿಜೆಪಿ ಸೇರುವುದಿಲ್ಲ; ಕೆಲ ನಾಯಕರಿಂದ ಸುಳ್ಳು ಸುದ್ದಿ ಸೃಷ್ಟಿ: ಸಿಎಂ ವಿರುದ್ಧ ಪೈಲಟ್ ಆಕ್ರೋಶ


Youtube Videoಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗದ ಕಾರಣ ಸಚಿನ್ ಪೈಲಟ್ ಮತ್ತು ಇತರ 18 ಪಕ್ಷದ ಸದಸ್ಯರಿಗೆ ನೋಟಿಸ್ ನೀಡಲಾಗಿದೆ. ಅವರು 2 ದಿನಗಳಲ್ಲಿ ಪ್ರತಿಕ್ರಿಯಿಸದಿದ್ದರೆ, ಅವರು ಶಾಸಕಾಂಗ ಪಕ್ಷದಿಂದ ತಮ್ಮ ಸದಸ್ಯತ್ವವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ ಎಂದು ಪರಿಗಣಿಸಲಾಗುತ್ತದೆ ಎಂದು ಸಹ ಅವಿನಾಶ್ ಪಾಂಡೆ ಎಚ್ಚರಿಕೆ ನೀಡಿದ್ದಾರೆ.
Published by: MAshok Kumar
First published: July 15, 2020, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories