Partha Chatterjee Sacked: SSC ಹಗರಣದಲ್ಲಿ ಬಂಧಿತರಾಗಿರುವ ಪಾರ್ಥ ಚಟರ್ಜಿ ಸಚಿವ ಸ್ಥಾನದಿಂದ ವಜಾ

ಚಟರ್ಜಿ ಅವರನ್ನು ವಜಾಗೊಳಿಸಿದ ನಂತರ ಪ್ರತಿಕ್ರಿಯಿಸಿದ ಸಿಎಂ ಮಮತಾ ಬ್ಯಾನರ್ಜಿ, ನಾನು ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದ್ದೇನೆ. ನನ್ನ ಪಕ್ಷವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ಅದರ ಹಿಂದೆ ಹಲವು ಯೋಜನೆಗಳಿವೆ ಆದರೆ ನಾನು ವಿವರಗಳಿಗೆ ಹೋಗಲು ಬಯಸುವುದಿಲ್ಲ ಎಂದಿದ್ದಾರೆ.

ಪಾರ್ಥ ಚಟರ್ಜಿ

ಪಾರ್ಥ ಚಟರ್ಜಿ

  • Share this:
ಕೊಲ್ಕತ್ತಾ: ಎಸ್‌ಎಸ್‌ಸಿ ಹಗರಣದಲ್ಲಿ (SSC scam) ಬಂಧಿತರಾಗಿರುವ ಕಳಂಕಿತ ಪಾರ್ಥ ಚಟರ್ಜಿ (Partha Chatterjee) ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Chief Minister Mamata Banerjee) ಅವರು ತಮ್ಮ ಸಂಪುಟದಿಂದ ವಜಾ (Sacked) ಮಾಡಿದ್ದಾರೆ. TMC ಯ ಪ್ರಧಾನ ಕಾರ್ಯದರ್ಶಿ ಚಟರ್ಜಿ ಅವರು ರಾಜ್ಯ ಸಚಿವ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ, ಸಂಸದೀಯ ವ್ಯವಹಾರಗಳು, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಸಾರ್ವಜನಿಕ ಉದ್ಯಮಗಳು ಮತ್ತು ಕೈಗಾರಿಕಾ ಪುನರ್ನಿರ್ಮಾಣ ಖಾತೆಗಳನ್ನು ಹೊಂದಿದ್ದರು. ಸಂಪುಟದಿಂದ ಚಟರ್ಜಿ ಅವರನ್ನು ವಜಾ ಮಾಡಿದ ಬಳಿಕ ಅವರ ಖಾತೆಯನ್ನು ಸಿಎಂ ಸ್ವತಃ ನೋಡಿಕೊಳ್ಳಲಿದ್ದಾರೆ.  ಪಾರ್ಥ ಚಟರ್ಜಿ ಅವರ ಹಗರಣ ಬಯಲಾಗುತ್ತಿದ್ದಂತೆ ಪಕ್ಷಕ್ಕೆ ಧಕ್ಕೆಯಾಗಲಿದೆ ಎಂಬ ಮಾತು ಪಕ್ಷದೊಳಗೆ ಕೇಳಿ ಬಂದಿತ್ತು. ಹೀಗಾಗಿ ಡ್ಯಾಮೇಜ್​ ಕಂಟ್ರೋಲ್​ ಮಾಡಲು ದೀದಿ ವಜಾ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗ್ತಿದೆ.  

ಮಮತಾ ಬ್ಯಾನರ್ಜಿ ಮೊದಲ ರಿಯಾಕ್ಷನ್

ಚಟರ್ಜಿ ಅವರನ್ನು ವಜಾಗೊಳಿಸಿದ ನಂತರ ಪ್ರತಿಕ್ರಿಯಿಸಿದ ಸಿಎಂ ಮಮತಾ ಬ್ಯಾನರ್ಜಿ, ನಾನು ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದ್ದೇನೆ. ನನ್ನ ಪಕ್ಷವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ಅದರ ಹಿಂದೆ ಹಲವು ಯೋಜನೆಗಳಿವೆ ಆದರೆ ನಾನು ವಿವರಗಳಿಗೆ ಹೋಗಲು ಬಯಸುವುದಿಲ್ಲ ಎಂದಿದ್ದಾರೆ. ಈ ಹಿಂದೆ ಯಾರಾದರೂ ತಪ್ಪಿತಸ್ಥರು ಎಂದು ಕಂಡುಬಂದರೆ, ಅವರು ಸಚಿವರಾಗಿದ್ದರೂ ಆ ವ್ಯಕ್ತಿಯನ್ನು ಬಿಡುವುದಿಲ್ಲ ಎಂದು ಹೇಳಿದ್ದರು.

TMC ಅಧಿಕೃತ ಆದೇಶ

ಸದ್ಯಕ್ಕೆ ವಜಾಗೊಂಡ ಸಚಿವ ಪಾರ್ಥ ಚಟರ್ಜಿ ಹೊಂದಿರುವ ಕೈಗಾರಿಕೆ ಮತ್ತು ಇತರ ಖಾತೆಗಳನ್ನೂ ಮುಖ್ಯಮಂತ್ರಿ ನೋಡಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲಾ ಉದ್ಯೋಗ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಪಾರ್ಥ ಚಟರ್ಜಿ ಅವರನ್ನು ಪಶ್ಚಿಮ ಬಂಗಾಳ ಸರ್ಕಾರ ತಕ್ಷಣವೇ ಜಾರಿಗೆ ಬರುವಂತೆ ಸಚಿವಾಲಯದಿಂದ ತೆಗೆದುಹಾಕಿದೆ. ಉದ್ಯಮ ಇಲಾಖೆ, ವಾಣಿಜ್ಯ ಮತ್ತು ಉದ್ಯಮಗಳು, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಸಾರ್ವಜನಿಕ ಉದ್ದಿಮೆಗಳು ಮತ್ತು ಕೈಗಾರಿಕಾ ಪುನರ್ನಿರ್ಮಾಣ ಇಲಾಖೆ ಉಸ್ತುವಾರಿ ಸಚಿವ ಪಾರ್ಥ ಚಟರ್ಜಿ ಅವರು ಈ ಮೂಲಕ ಮೇಲಿನ ಇಲಾಖೆಯ MIC ಆಗಿ ತಮ್ಮ ಕರ್ತವ್ಯಗಳಿಂದ ತಕ್ಷಣ ಬಿಡುಗಡೆ ಹೊಂದಿದ್ದಾರೆ ಎಂದು ಅಧಿಕೃತ ಆದೇಶ ತಿಳಿಸಿದೆ.

ಇದನ್ನೂ ಓದಿ: Arpita Mukherjee: ಸಚಿವರ ಆಪ್ತೆಯ ವಾಶ್​ರೂಂನಲ್ಲಿಯೂ ಕಂತೆ ಕಂತೆ ಹಣ! 50 ಕೋಟಿಗೂ ಹೆಚ್ಚು ನಗದು! ಚಿನ್ನ ಎಷ್ಟಿತ್ತು?

ಅರ್ಪಿತಾ ಮುಖರ್ಜಿ ಚಿನ್ನ-ನಗದು ವಶ

ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರಿಗೆ ಸಂಬಂಧಿಸಿದ ಅಪಾರ್ಟ್‌ಮೆಂಟ್‌ಗಳಿಂದ ಸುಮಾರು 50 ಕೋಟಿ ರೂಪಾಯಿ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆಸ್ತಿ ಮತ್ತು ವಿದೇಶಿ ವಿನಿಮಯದ ದಾಖಲೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಅರ್ಪಿತಾ ಮುಖರ್ಜಿ ತಪ್ಪೊಪ್ಪಿಗೆ

ಅರ್ಪಿತಾ ಮುಖರ್ಜಿ ಅವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಇಟ್ಟಿದ್ದ ನಗದು ಪಾರ್ಥ ಚಟರ್ಜಿಯವರದ್ದು ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ಸಚಿವರ ಕಡೆಯವರು ತಮ್ಮ ಸ್ಥಳಗಳಲ್ಲಿ ಹಣವನ್ನು ಇಟ್ಟಿದ್ದರು. ಆ ಹಣವನ್ನು ಖರ್ಚು ಮಾಡುವ ನನಗೆ ಯಾವುದೇ ಅನುಮತಿ ಇರಲಿಲ್ಲ ಎಂದು ಅವರು ಏಜೆನ್ಸಿಗೆ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಅರ್ಪಿತಾ ಮುಖರ್ಜಿ ಅವರ ಎರಡು ಫ್ಲಾಟ್‌ಗಳಿಂದ ಒಟ್ಟು 50 ಕೋಟಿ ರೂ. ವಶಪಡಿಸಲಾಗಿದೆ. ಈ ಎಲ್ಲಾ ಹಣವು ನಗದು ರೂಪದಲ್ಲಿತ್ತು. ₹ 500 ಮತ್ತು ₹ 2,000 ನೋಟುಗಳಲ್ಲಿ ಕಟ್ಟು ಮಾಡಲಾಗಿತ್ತು. ಅರ್ಪಿತಾ ಅವರ ಬೆಲ್‌ಘಾರಿಯಾ ಫ್ಲಾಟ್‌ನಲ್ಲಿ ವಾಶ್‌ರೂಮ್‌ನಲ್ಲಿ ನಗದು ಪತ್ತೆಯಾಗಿದೆ.
Published by:Kavya V
First published: