Partha Chatterjee: ಬಂಧಿತ ಪಾರ್ಥ ಚಟರ್ಜಿಯಿಂದ ಸಿಎಂ ಮಮತಾ ಬ್ಯಾನರ್ಜಿಗೆ 3 ಸಲ ಫೋನ್ ಕಾಲ್!

ಕಲ್ಕತ್ತಾ ಹೈಕೋರ್ಟ್‌ನ ಆದೇಶದಂತೆ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಮಮತಾ ಬ್ಯಾನರ್ಜಿಗೆ ಮೂರು ಬಾರಿ ಕರೆ ಮಾಡಿದರೂ ಸ್ಪಂದಿಸದ ಬ್ಯಾನರ್ಜಿ.

ಪಾರ್ಥ ಚಟರ್ಜಿ

ಪಾರ್ಥ ಚಟರ್ಜಿ

  • Share this:
ಕಲ್ಕತ್ತಾ ಹೈಕೋರ್ಟ್‌ನ ಆದೇಶದಂತೆ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪಶ್ಚಿಮ ಬಂಗಾಳದ (West Bengal)  ಸಚಿವ ಪಾರ್ಥ ಚಟರ್ಜಿ (Paratha Chatterjee)  ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ಏರ್ ಆಂಬ್ಯುಲೆನ್ಸ್ ಮೂಲಕ ಏಮ್ಸ್ (AIMS) ಆಸ್ಪತ್ರೆಗೆ ಕರೆದೊಯ್ಯುವಂತೆ ಕಲ್ಕತ್ತಾ( Kolkata) ಹೈಕೋರ್ಟ್ ಭಾನುವಾರ ಜಾರಿ ನಿರ್ದೇಶನಾಲಯಕ್ಕೆ (ED) ಆದೇಶ ನೀಡಿದೆ. ಸಚಿವರನ್ನು ವರ್ಚುವಲ್ (Virtual)  ಮೂಲಕ ಕೋಲ್ಕತ್ತಾದ ವಿಶೇಷ ಇಡಿ ನ್ಯಾಯಾಲಯಕ್ಕೆ (Court) ಸೋಮವಾರ ಸಂಜೆ 4 ಗಂಟೆಗೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.

ಜುಲೈ 22ರಂದು ನಡೆದ ಇಡಿ ದಾಳಿ
ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಹಣದ ಜಾಡು ಹಿಡಿದಿರುವ ಇಡಿ ಸಿಬ್ಬಂದಿ ತನಿಖೆಯ ಭಾಗವಾಗಿ ಜುಲೈ 22 ರಂದು ರಾಜ್ಯದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಹಗರಣಕ್ಕೆ ಸಂಬಂಧಿಸಿದ ಅಪರಾಧಿಗಳನ್ನು ಬಂಧಿಸಲಾಯಿತು. ಪಾರ್ಥ ಚಟರ್ಜಿಯನ್ನು ಶನಿವಾರ ಬಂಧಿಸಲಾಗಿದೆ.

ಜುಲೈ 23ರಂದು ಅರ್ಪಿತಾ ಮುಖರ್ಜಿ ಬಂಧನ
ಇಡಿ ತನಿಖೆಯ ನಂತರ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಆವರಣದಿಂದ ಒಟ್ಟು 20 ಕೋಟಿ ರೂಪಾಯಿ ಹಣವನ್ನು ವಶಪಡಿಸಲಾಗಿದೆ. ಅಲ್ಲದೆ 20ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಅರ್ಪಿತಾ ಮುಖರ್ಜಿಯನ್ನು ಬಂಧಿಸಲಾಗಿದೆ.

ಚಟರ್ಜಿಯವರಿಗೆ ಶನಿವಾರ ಆರೋಗ್ಯದಲ್ಲಿ ಏರುಪೇರು
ಇಡಿಯಿಂದ ಶನಿವಾರ ಬಂಧಿಸಲ್ಪಟ್ಟ ಚಟರ್ಜಿ, ಅವರ ತನಿಖೆಯ ಕೆಲವೇ ಗಂಟೆಗಳ ನಂತರ ಹೃದಯ ನೋವಿನ ಬಗ್ಗೆ ದೂರು ನೀಡಿದರು ಮತ್ತು ಇಡಿ ಕಸ್ಟಡಿಗೆ "ಸರಿಯಾದ ವೈದ್ಯಕೀಯ ಸೌಲಭ್ಯಗಳು" ನೀಡಲು ಒತ್ತಾಯಿಸಿದರು ಎಂದು ಚಟರ್ಜಿ ಅವರ ವಕೀಲ ಸೋಮನಾಥ್ ಮುಖರ್ಜಿ ಕೋಲ್ಕತ್ತಾದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಆ್ಯಂಬುಲೆನ್ಸ್ ಮೂಲಕ ಚಟರ್ಜಿಯನ್ನು ಆಸ್ಪತ್ರೆಗೆ ದಾಖಲು
ಚಟರ್ಜಿಯನ್ನು ಸೋಮವಾರ (ಜುಲೈ 25) ಚಿಕಿತ್ಸೆಗಾಗಿ ಗಾಲಿ ಕುರ್ಚಿಯಲ್ಲಿ (Wheel Chair) ಕರೆದುಕೊಂಡು ನಂತರ ಆ್ಯಂಬುಲೆನ್ಸ್ ಮುಖೇನ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆ ಭುವನೇಶ್ವರಕ್ಕೆ ಕರೆದೊಯ್ಯಲಾಯಿತು.

ಸೋಮವಾರ ಸಂಜೆ 4 ಗಂಟೆಗೆ ನ್ಯಾಲಯಕ್ಕೆ ಹಾಜರು
ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಸಚಿವರನ್ನು ವರ್ಚುವಲ್ ಮೂಲಕ ಕೋಲ್ಕತ್ತಾದ ವಿಶೇಷ ಇಡಿ ನ್ಯಾಯಾಲಯಕ್ಕೆ ಸೋಮವಾರ ಸಂಜೆ 4 ಗಂಟೆಗೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ: Smriti Irani: ಮಗಳ ವಿರುದ್ಧದ ಆರೋಪಕ್ಕೆ ಕೇಂದ್ರ ಸಚಿವೆ ಗರಂ, ಕಾಂಗ್ರೆಸ್‌ಗೆ ಲೀಗಸ್ ನೋಟಿಸ್ ಕೊಟ್ಟ ಸ್ಮೃತಿ ಇರಾನಿ

ಮಮತಾ ಬ್ಯಾನರ್ಜಿಗೆ ಮೂರು ಬಾರಿ ಕರೆ ಮಾಡಿದ ಚಟರ್ಜಿ
ಚಟರ್ಜಿ ಬಂಧನದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮೂರು ಕರೆಗಳನ್ನು ಮಾಡಿದರು. ಆದರೆ ಮೂರು ಬಾರಿಯೂ ಬ್ಯಾನರ್ಜಿಯವರು ಉತ್ತರಿಸಲಿಲ್ಲ ಎಂದು ಅಧಿಕೃತ ದಾಖಲೆ ಬಹಿರಂಗಪಡಿಸುತ್ತದೆ.

ಇದನ್ನೂ ಓದಿ: President of India: 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು

ಕರೆಗೆ ಸ್ಪಂದಿಸದ ಮಮತಾ ಬ್ಯಾನರ್ಜಿ
ಚಟರ್ಜಿಯನ್ನು ಸುಮಾರು 1.55ರ ಹೊತ್ತಿಗೆ ಬಂಧಿಸಿದ್ದರು ಮತ್ತು ನಂತರ 2.33 ರ ಹೊತ್ತಿಗೆ ಮಮತಾ ಬ್ಯಾನರ್ಜಿಗೆ ಮೊದಲು ಕರೆ ಮಾಡಿದ್ದರು ಆ ಕರೆಯನ್ನು ಅವರು ಸ್ವೀಕರಿಸಲಿಲ್ಲ. ನಂತರ 3.37 ರ ಹೊತ್ತಿಗೆ ಮತ್ತು 9.35 ರ ಹೊತ್ತಿಗೆ ಮೂರನೇ ಬಾರಿ ಕರೆ ಮಾಡಿದ್ದರು. ಆದರೆ ಮೂರೂ ಕರೆಗೂ ಮಮತಾ ಬ್ಯಾನರ್ಜಿ ಸ್ಪಂದಿಸಲಿಲ್ಲ.
Published by:Nalini Suvarna
First published: