Arpita Mukherjee: ನಟಿ ಅರ್ಪಿತಾ ಮನೆಯಲ್ಲಿ ದುಬಾರಿ ಕಾರು! ಇವೆಲ್ಲವೂ ಪಾರ್ಥ ಚಟರ್ಜಿ ಕೊಟ್ಟ ಗಿಫ್ಟ್ ಅಂತೆ!

ನಟಿ ಅರ್ಪಿತಾ ಮುಖರ್ಜಿಗೆ ಮಾಜಿ ಸಚಿವ ಪಾರ್ಥ ಚಟರ್ಜಿ ದುಬಾರಿ ಬೆಲೆಯ ವಿವಿಧ ಕಂಪನಿಯ ಕಾರ್‌ಗಳನ್ನು ಗಿಫ್ಟ್ ನೀಡಿದ್ದಾರೆ ಎನ್ನುವುದು ಇಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ದಾಳಿ ವೇಳೆ ಅರ್ಪಿತಾ ಬಳಿ ದುಬಾರಿ ಬೆಲೆಯ ಮರ್ಸಿಡಿಸ್ ಮತ್ತು ಮಿನಿ ಕೂಪರ್ ಸೇರಿ ಎರಡು ಕಾರ್‌ಗಳು ಪತ್ತೆಯಾಗಿವೆ.

ಅರ್ಪಿತಾ ಮುಖರ್ಜಿಗೆ ದುಬಾರಿ ಕಾರ್ ಗಿಫ್ಟ್

ಅರ್ಪಿತಾ ಮುಖರ್ಜಿಗೆ ದುಬಾರಿ ಕಾರ್ ಗಿಫ್ಟ್

  • Share this:
ಪಶ್ಚಿಮ ಬಂಗಾಳ: ಶಿಕ್ಷಕರ ಅಕ್ರಮ ನೇಮಕಾತಿ ಹಗರಣದ (Teachers Recruitment Scam) ತನಿಖೆ (Enquiry) ಚುರುಕುಗೊಂಡಿದೆ. ಈಗಾಗಲೇ ಇಡಿ (ED) ಬಲೆಗೆ ಬಿದ್ದಿರುವ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ (Partha Chatterjee) ಹಾಗೂ ನಟಿ ಅರ್ಪಿತಾ ಮುಖರ್ಜಿ (Arpita Mukherjee) ವಿಚಾರಣೆ ಮುಂದುವರೆದಿದೆ. ಈ ವೇಳೆ ಬಗೆದಷ್ಟು ಹಗರಣದ ರಹಸ್ಯಗಳು ಹೊರ ಬರುತ್ತಲೇ ಇವೆ. ಅರ್ಪಿತಾ ಪ್ಲಾಟ್‌ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಅರ್ಪಿತಾ ಮುಖರ್ಜಿಗೆ ಪಾರ್ಥ ಚಟರ್ಜಿ ದುಬಾರಿ ಕಾರುಗಳನ್ನು ಗಿಫ್ಟ್ (Costly Car Gift) ಮಾಡಿರೋ ವಿಚಾರ ಕೂಡ ಬೆಳಕಿಗೆ ಬಂದಿದೆ. ಈಗಾಗಲೇ ಅರ್ಪಿತಾ ಮುಖರ್ಜಿಯ ಕನಿಷ್ಠ ಐದು ಬ್ಯಾಂಕ್ ಖಾತೆಗಳನ್ನು (Bank Account) ಇಡಿ ಸ್ಥಗಿತಗೊಳಿಸಲಾಗಿದ್ದು, ಆ ಖಾತೆಗಳಲ್ಲಿ ಕನಿಷ್ಠ 2 ಕೋಟಿ ರೂಪಾಯಿ ಪತ್ತೆಯಾಗಿದೆ ಅಂತ ಮೂಲಗಳು ತಿಳಿಸಿವೆ.

ಅರ್ಪಿತಾಗೆ ಪಾರ್ಥ ಚಟರ್ಜಿಯಿಂದ ದುಬಾರಿ ಕಾರ್ ಗಿಫ್ಟ್

ನಟಿ ಅರ್ಪಿತಾ ಮುಖರ್ಜಿಗೆ ಮಾಜಿ ಸಚಿವ ಪಾರ್ಥ ಚಟರ್ಜಿ ದುಬಾರಿ ಬೆಲೆಯ ವಿವಿಧ ಕಂಪನಿಯ ಕಾರ್‌ಗಳನ್ನು ಗಿಫ್ಟ್ ನೀಡಿದ್ದಾರೆ ಎನ್ನುವುದು ಇಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ದಾಳಿ ವೇಳೆ ಅರ್ಪಿತಾ ಬಳಿ ದುಬಾರಿ ಬೆಲೆಯ ಮರ್ಸಿಡಿಸ್ ಮತ್ತು ಮಿನಿ ಕೂಪರ್ ಸೇರಿ ಎರಡು ಕಾರ್‌ಗಳು ಪತ್ತೆಯಾಗಿವೆ.

ಅರ್ಪಿತಾ ಜೊತೆ ಪಾರ್ಥ ಚಟರ್ಜಿ ಜಾಲಿ ರೈಡ್

ಇನ್ನು ಈ ವಾಹನಗಳನ್ನು ಮಾಜಿ ಸಚಿವರು ಮತ್ತು ಅವರ ಸಹಾಯಕ ಮುಖರ್ಜಿ ಅವರು ಜಾಯ್‌ರೈಡ್‌ಗಳಿಗೆ ಬಳಸುತ್ತಿದ್ದರು. ಈ ಎರಡು ವಾಹನಗಳ ಒಳಗೆ ಅವರು ಪಾರ್ಟಿಗಳನ್ನು ನಡೆಸುತ್ತಿದ್ದರು ಅಂತ ಹೇಳಲಾಗುತ್ತಿದೆ. ಮೊದಲು ಅರ್ಪಿತಾ ಮುಖರ್ಜಿ ಈ ಕಾರಿನಲ್ಲಿ ಹೋಗುತ್ತಿದ್ದರು. ಬಳಿಕ ಪಾರ್ಥ ಚಟರ್ಜಿ ಅವರು ಮತ್ತೊಂದು ವಾಹನದಲ್ಲಿ ಅವಳನ್ನು ಹಿಂಬಾಲಿಸುತ್ತಿದ್ದರು. ಸ್ವಲ್ಪ ಸಮಯದ ನಂತರ ಅವರು ಜಾಯ್‌ರೈಡ್‌ಗಾಗಿ ಅವರ ವಾಹನವನ್ನು ಪ್ರವೇಶಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: SSC Scam: 50 ಕೋಟಿ ಇಟ್ಟುಕೊಂಡಿದ್ದ ಅರ್ಪಿತಾ ನಿಯತ್ತನ್ನು ಹೊಗಳಿದ IPS ಅಧಿಕಾರಿ

ಇನ್ನೂ ಎರಡು ಕಾರ್ ಬುಕ್ ಮಾಡಿರುವ ಪಾರ್ಥ ಚಟರ್ಜಿ

ಈ ಎಲ್ಲಾ ವಾಹನಗಳನ್ನು 2016 ರಿಂದ 2019 ರ ನಡುವೆ ಖರೀದಿಸಲಾಗಿದೆ. ಅರ್ಪಿತಾಗೆ ಅತ್ಯಾಧುನಿಕ ಕಾರುಗಳಲ್ಲಿ ಒಂದನ್ನು ಚಟರ್ಜಿಯವರು ಉಡುಗೊರೆಯಾಗಿ ನೀಡಿದ್ದಾರೆ. ಅವರು ಈ ಹೆಚ್ಚಿನ ಬೆಲೆಯ ವಾಹನಗಳನ್ನು ಖರೀದಿಸುವಲ್ಲಿ ಆಕೆಗೆ ಸಹಾಯ ಮಾಡಿದ್ದಾರೆ. ಇಷ್ಟೇ ಅಲ್ಲದೇ ಚಟರ್ಜಿ ಅವರು ಇನ್ನೂ ಎರಡು ವಾಹನಗಳನ್ನು ಬುಕ್ ಮಾಡಿದ್ದಾರೆ. ಇದಕ್ಕಾಗಿ ಈಗಾಗಲೇ ಮುಂಗಡ ಪಾವತಿಗಳನ್ನು ಮಾಡಲಾಗಿದೆ. ಈ ಎರಡು ವಾಹನಗಳನ್ನು ಎರಡು ಶೆಲ್ ಕಂಪನಿಗಳಿಗೆ ಬುಕ್ ಮಾಡಲಾಗಿದೆ ಮತ್ತು ಮುಂಗಡ ಪಾವತಿಗಳನ್ನು ಮಾಡಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

ಅರ್ಪಿತಾ 2ನೇ ಮನೆಯಲ್ಲಿ 30 ಕೋಟಿ ಪತ್ತೆ

ಅರ್ಪಿತಾ ಎರಡನೇ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿ 30 ಕೋಟಿ ರೂ.ಗಳಿಗೂ ಹೆಚ್ಚಿನ ಅಕ್ರಮ ಸಂಪತ್ತನ್ನು ಪತ್ತೆ ಮಾಡಿತ್ತು. ಈ ದಾಳಿಯ ಬಳಿಕ ಮುಖರ್ಜಿ ಬಳಿ ಇದ್ದ ಎರಡು ವಿಲಾಸಿ ಕಾರುಗಳು ನಾಪತ್ತೆಯಾಗಿದ್ದವು. ಆ ಎರಡು ಕಾರುಗಳ ಪೈಕಿ ಒಂದನ್ನು ಪಾರ್ಥ ಚಟರ್ಜಿ ಅವರು ಗಿಫ್ಟ್‌ ಮಾಡಿದ್ದರು.

ಇದನ್ನೂ ಓದಿ: SSC Scam: ಮಗಳ ಫ್ಲ್ಯಾಟ್​​ನಲ್ಲಿ ಸಿಕ್ತು 50 ಕೋಟಿ! ಆದರೆ ಅರ್ಪಿತಾ ಅಮ್ಮನ ಮನೆಯ ಅವಸ್ಥೆ ಒಮ್ಮೆ ನೋಡಿ!

ಸಚಿವ ಸ್ಥಾನದಿಂದ ಪಾರ್ಥ ಚಟರ್ಜಿ ವಜಾ

ಪಶ್ಚಿಮ ಬಂಗಾಳ ಕೈಗಾರಿಕಾ ಸಚಿವರಾಗಿದ್ದ ಪಾರ್ಥ ಚಟರ್ಜಿ ಅವರನ್ನು ಬಂಧನ ಬಳಿಕ ಟಿಎಂಸಿಯಿಂದ ಉಚ್ಚಾಟನೆ ಮಾಡಲಾಗಿದೆ. ಹಿಂದಿನ ಅವಧಿ ಶಿಕ್ಷಣ ಸಚಿವರಾಗಿದ್ದಾಗ ಅವರು ನಡೆಸಿದ್ದ ಹಗರಣ ಬೆಳಕಿಗೆ ಬಂದಿದ್ದು, 50 ಕೋಟಿ ರೂ. ನಗದು ಮತ್ತು 6 ಕೆ.ಜಿಗೂ ಹೆಚ್ಚಿನ ಚಿನ್ನಾಭರಣವನ್ನು ಇ.ಡಿ ಜಪ್ತಿ ಮಾಡಿದೆ. ಸದ್ಯ ಪಾರ್ಥ ಚಟರ್ಜಿ ಹಾಗೂ ಅರ್ಪಿತಾ ಮುಖರ್ಜಿ ಇಡಿ ಬಂಧನದಲ್ಲಿದ್ದಾರೆ.
Published by:Annappa Achari
First published: