Parsi New Year 2021 : ಪಾರ್ಸಿ ಹೊಸ ವರ್ಷದ ಇತಿಹಾಸ ಮತ್ತು ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?

Festival: ಭಾರತದ ಪಾರ್ಸಿ ಸಮುದಾಯವು ಶಹೆನ್ಶಾಹಿ ಕ್ಯಾಲೆಂಡರ್ ಅನ್ನು ಅನುಸರಿಸುವ ಕಾರಣ , ಅಧಿಕ ವರ್ಷಗಳನ್ನು ಪರಿಗಣಿಸುವುದಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಾರ್ಸಿ ಹೊಸ ವರ್ಷವು ಪ್ರಾದೇಶಿಕ ಹಬ್ಬವಾಗಿದ್ದು, ಇದನ್ನು ಜೋರಾಸ್ಟ್ರಿಯನ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ ಫರ್ವಾರ್ಡಿನ್‌ನ ಮೊದಲ ದಿನ ಆಚರಿಸಲಾಗುತ್ತದೆ. ಇದನ್ನು ನವ್ರೋಜ್ ಎಂದೂ ಸಹ ಕರೆಯುತ್ತಾರೆ, ಇದು ಪರ್ಷಿಯನ್ ಪದಗಳಾದ ನವ್ ಮತ್ತು ರೋಜ್ ನಿಂದ ಬಂದಿದೆ, ಇದು ಹೊಸ ದಿನ ಎಂಬ ಅರ್ಥವನ್ನು ಸೂಚಿಸುತ್ತದೆ. ಇದರ ಆಚರಣೆಯನ್ನು ಪ್ರತಿ ವರ್ಷ ಮಾರ್ಚ್ 21 ರ ಸಮಯದಲ್ಲಿ ಮಾಡಲಾಗುತ್ತದೆ. ಆದರೆ, ಭಾರತದ ಪಾರ್ಸಿ ಸಮುದಾಯವು ಶಹೆನ್ಶಾಹಿ ಕ್ಯಾಲೆಂಡರ್ ಅನ್ನು ಅನುಸರಿಸುವ ಕಾರಣ , ಅಧಿಕ ವರ್ಷಗಳನ್ನು ಪರಿಗಣಿಸುವುದಿಲ್ಲ. ಭಾರತದಲ್ಲಿ ಪಾರ್ಸಿ ಹೊಸ ವರ್ಷವನ್ನು ಜುಲೈ ಅಥವಾ ಆಗಸ್ಟ್ ನಲ್ಲಿ ಆಚರಿಸಲಾಗುತ್ತದೆ. ಈ ಬಾರಿ ನವ್ರೋಜ್ ಆಗಸ್ಟ್ 16ರಂದು ಆಚರಿಸಲಾಗುತ್ತದೆ.

ಪಾರ್ಸಿ ಹೊಸ ವರ್ಷದ ಇತಿಹಾಸ ಮತ್ತು ಪ್ರಾಮುಖ್ಯತೆ

ಜೋರೊಸ್ಟ್ರಿಯನಿಸಂ ಪುಸ್ತಕವನ್ನು ಹೆಚ್ಚು ಪಾರ್ಸಿಗಳು ನಂಬುತ್ತಾರೆ, ಇದನ್ನು ಜರತುಷ್ಟ್ರ ಎನ್ನುವ ವ್ಯಕ್ತಿ ಇದನ್ನು 3,500 ವರ್ಷಗಳ ಹಿಂದೆ ರಚಿಸಿದ್ದರು. ಇದು ಕ್ರಿಸ್ತಪೂರ್ವ 650 ರಿಂದ 7 ನೇ ಶತಮಾನದಲ್ಲಿ ಇಸ್ಲಾಂನ ಉದಯದವರೆಗೂ ಪರ್ಷಿಯಾದ (ಈಗಿನ ಇರಾನ್) ಅಧಿಕೃತ ಧರ್ಮವಾಗಿತ್ತು. ಅಲ್ಲದೆ, ಇದು 1000 ವರ್ಷಗಳ ಕಾಲ ಪ್ರಾಚೀನ ಪ್ರಮುಖ ನಂಬಿಕೆಗಳಲ್ಲಿ ಒಂದಾಗಿದೆ.

ಇಸ್ಲಾಮಿಕ್ ಜನರು ಪರ್ಷಿಯಾವನ್ನು ಆಕ್ರಮಿಸಿದಾಗ, ಹಲವಾರು ಜೊರಾಸ್ಟ್ರಿಯನ್ನರು ಭಾರತ ಮತ್ತು ಪಾಕಿಸ್ತಾನದ ಕಡೆ ಆಶ್ರಯ ಅರಿಸಿ ಬಂದಿದ್ದಾರೆ. ಭಾರತದ ಗುಜರಾತ್ ಭಾಗದಲ್ಲಿ ಇವರು ಹೆಚ್ಚಾಗಿ ನೆಲೆಸಿದ್ದಾರೆ. ಪಾರ್ಸಿಗಳು ಭಾರತದಲ್ಲಿ ಸಹ ಹೆಚ್ಚಿನ ಜನಸಂಖ್ಯೆಯಲ್ಲಿದ್ದು, ವಿಶ್ವಾದ್ಯಂತ ಅಂದಾಜು 2.6 ಮಿಲಿಯನ್ ಜೊರಾಸ್ಟ್ರಿಯನ್ನರಿದ್ದಾರೆ.

ವಸಂತ ಋತುವಿನ ವಿಷುವತ್ ಸಂಕ್ರಾಂತಿಯ ದಿನದ ಆರಂಭದ ದಿನವನ್ನು ಪರ್ಷಿಯನ್ ಹೊಸ ವರ್ಷವನ್ನು ಇರಾನ್ ಮತ್ತು ಇತರ ಮಧ್ಯಪ್ರಾಚ್ಯ ದೇಶಗಳಲ್ಲಿ ಜೊರಾಸ್ಟ್ರಿಯನ್ನರು ಆಚರಿಸುತ್ತಾರೆ ಅಲ್ಲದೇ ಜೊರಾಸ್ಟ್ರಿಯನ್ನರಲ್ಲದಿದ್ದರೂ, ಈ ಪ್ರದೇಶದ ಅನೇಕ ಜನರು ಮತ್ತು ನವರೋಜ್ ಅನ್ನು ವಿಜೃಂಭಣೆಯಿಂದ ಹಬ್ಬವಾಗಿ ಆಚರಿಸುತ್ತಾರೆ.

ಇದನ್ನೂ ಓದಿ: ತಿಂಗಳಿಗೆ ₹210 ಹೂಡಿಕೆ ಮಾಡಿದ್ರೆ 5,000 ರೂ. ಮಾಸಿಕ ಪಿಂಚಣಿ ಸಿಗುತ್ತೆ

ಪಾರ್ಸಿ ಹೊಸ ವರ್ಷವನ್ನು ಹೇಗೆ ಆಚರಣೆ ಮಾಡಲಾಗುತ್ತದೆ?

ಪಾರ್ಸಿಗಳು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ ಮನೆಯನ್ನು ಈ ದಿನ ಹೂವುಗಳು ಮತ್ತು ರಂಗೋಲಿಯಿಂದ ಸುಂದರವಾಗಿ ಅಲಂಕರಿಸುತ್ತಾರೆ. ನಂತರ ಸಮುದಾಯದ ಜನರು ಬೆಳಗಿನ ಉಪಾಹಾರದ ಮುಗಿಸಿ ಅಗ್ನಿ ದೇವರ ದೇವಸ್ಥಾನಕ್ಕೆ ಸಾಂಪ್ರದಾಯಿಕ ಉಡುಪನ್ನು ಧರಿಸಿ ಪೂಜೆಗೆಂದು ಬರುತ್ತಾರೆ. ಅಲ್ಲದೆ ನೀಡಿರುವ ಎಲ್ಲ ಸುಖ ಸಮೃದ್ಧಿಗಾಗಿ ಭಗವಂತನಿಗೆ ಧನ್ಯವಾದ ಹೇಳಿ, ಪ್ರಾರ್ಥಿಸಿ ಮತ್ತು ಕ್ಷಮೆ ಪಡೆಯಲು ಜಶಾನ್ ಎಂಬ ಪ್ರಾರ್ಥನೆಯನ್ನು ದೇವಾಲಯದಲ್ಲಿ ನಡೆಸುತ್ತಾರೆ. ನೈವೇದ್ಯವಾಗಿ, ಹಾಲು, ನೀರು, ಹಣ್ಣುಗಳು, ಹೂವುಗಳು ಮತ್ತು ಶ್ರೀಗಂಧವನ್ನು ಆ ಪವಿತ್ರ ಬೆಂಕಿಯಲ್ಲಿ ಇರಿಸಲಾಗುತ್ತದೆ.

ಹೆಸರು ಬೇಳೆ, ಪುಲಾವ್, ಮೀನು, ಸಾಲಿ ಬೋಟಿ ಮತ್ತು ಸ್ವೀಟ್ ರಾವೊಗಳನ್ನು ಪಾರ್ಸಿ ಜನರ ಮನೆಗಳಲ್ಲಿ ಈ ಹಬ್ಬದ ದಿನ ಊಟಕ್ಕೆಂದು ಮಾಡಲಾಗುತ್ತದೆ. ಮನೆಗೆ ಬರುವ ಅತಿಥಿಗಳನ್ನು ವಿಶೇಷವಾಗಿ ಸ್ವಾಗತಿಸಿ, ಅವರಿಗೆ ಕುಡಿಯಲು ಫಲೂದಾವನ್ನು ನೀಡಲಾಗುತ್ತದೆ. ಜೊತೆಗೆ ಉಡುಗರೆಗಳ ವಿನಿಮಯ ಮಾಡಿಕೊಳ್ಳಲಾಗುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: