Parliament Session: ಇಂದಿನಿಂದ ಚಳಿಗಾಲದ ಸಂಸತ್​ ಅಧಿವೇಶನ; ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧ ಎಂದ ಪ್ರಧಾನಿ

ಇಂದಿನಿಂದ ಅಧಿವೇಶನ ಆರಂಭವಾಗುವ ಹಿನ್ನಲೆ ಈ ಕುರಿತು ಟ್ವೀಟ್​ ಮಾಡಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಕ್ಷಗಳ ನಡುವೆ ಉತ್ತಮ ಸಹಕಾರವನ್ನು ನಿರೀಕ್ಷಿಸುವುದಾಗಿ ತಿಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • Share this:
  ಇಂದಿನಿಂದ ಸಂಸತ್ತಿನ ಚಳಿಗಾಲ ಅಧಿವೇಶನ (Parliament Winter Session) ಪ್ರಾರಂಭವಾಗಲಿದ್ದು, ಡಿ. 23ರವರೆಗೆ ಕೋವಿಡ್​ ನಿಯಮಾವಳಿಯಂತೆ (Covid Protocol) ಸದನ ನಡೆಯಲಿದೆ. ಈ ಅಧಿವೇಶದನಲ್ಲಿ ಕಳೆದ ವರ್ಷ ಮಂಡಿಸಿದ್ದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಮಸೂದೆಯನ್ನು ಮಂಡಿಸಲಾಗುವುದು. ಇದೇ ವೇಳೆ ಕ್ರಿಪ್ಟೋ ಕರೆನ್ಸಿ ನಿಬಂಧಕ (Cryptocurrency Regulation), ದತ್ತಾಂಶ ಸಂರಕ್ಷಣೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅವಧಿ ವಿಸ್ತರಣೆ ಸೇರಿದಂತೆ ಸುಮಾರು 26 ಮಸೂದೆ ಮಂಡಿಸಲು ಆಡಳಿತ ಪಕ್ಷ ಸಜ್ಜಾಗಿದೆ. ಕೃಷಿ ಮಸೂದೆ ಹಿಂಪಡೆಯಲಿರುವ ಕೇಂದ್ರ ಸರ್ಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಬೆಂಬಲದ ಬೇಡಿಕೆ ನೀಡಬೇಕು. ವರ್ಷವಿಡೀ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

  ಎಲ್ಲಾ ಪ್ರಶ್ನೆಗಳಿಗೂ ಉತ್ತರ
  ಸಂಸತ್ತಿನ ಅಧಿವೇಶನ ಹಿನ್ನಲೆ ಭಾನುವಾರ ಕರೆಯಲಾಗಿದ್ದ ಸರ್ವಪಕ್ಷ ಸಭೆಗೆ (All Party Meeting) ಗೈರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಅಧಿವೇಶನದಲ್ಲಿ ವಿಪಕ್ಷಣಗಳ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಅಧಿವೇಶನಕ್ಕೂ ಮುನ್ನ ಮಾತನಾಡಿದ ಅವರು, ಇದು ಸಂಸತ್ತಿನ ಮಹತ್ವದ ಅಧಿವೇಶನವಾಗಿದೆ. ದೇಶದ ನಾಗರಿಕರುಅಧಿವೇಶನ ಸಮಯ ಕಾಲಹರಣವಾಗದಂತೆ ಬಯಸುತ್ತಾರೆ. ಉಜ್ವಲ ಭವಿಷ್ಯಕ್ಕಾಗಿ ಅವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ಅಧಿವೇಶನದಲ್ಲಿ ವಿಪಕ್ಷಗಳ ಎಲ್ಲಾ ಟೀಕೆ, ಪ್ರಶ್ನೆಗಳಿಗೂ ಉತ್ತರಿಸಲಿದೆ. ಸದನದಲ್ಲಿ ಘನತೆಯನ್ನು ಕಾಪಾಡಬೇಕಿದೆ ಎಂದರು.  ನಾವು ಸಂಸತ್ತಿನಲ್ಲಿ ಶಾಂತಿಯನ್ನು ಬಯಸುತ್ತೇವೆ. ಸರ್ಕಾರದ ವಿರುದ್ಧ ಅಥವಾ ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತಿದರೂ - ಸಂಸತ್ತಿನ ಘನತೆ ಮತ್ತು ಸಭಾಧ್ಯಕ್ಷರ ಪೀಠವನ್ನು ಎತ್ತಿಹಿಡಿಯಬೇಕು. ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ರೀತಿಯ ನಡವಳಿಕೆಯನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು

  ಇದನ್ನು ಓದಿ: ರೈತರ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚಿಸುತ್ತೇನೆ, ಪ್ರತಿಭಟನೆ ಕೈಬಿಡಿ- ಕೇಂದ್ರ ಮನವಿ

  ಕೋವಿಡ್​​ ಮುನ್ನೆಚ್ಚರಿಕೆ
  ಕೋವಿಡ್​ ಆತಂಕ ಕಡಿಮೆ ಆಯಿತು ಎನ್ನುವ ಸಂದರ್ಭದಲ್ಲಿ ದೇಶದಲ್ಲಿ ಈಗ ಓಮಿಕ್ರಾನ್​ ಆತಂಕ ಮೂಡಿಸಿದೆ. ಈ ಹಿನ್ನಲೆ ಮಾತನಾಡಿದ ಪ್ರಧಾನಿಗಳು, ಇದು ಬಿಕ್ಕಟಟಿನ ಸಮಯವಾಗಿದೆ. ಪ್ರತಿಯೊಬ್ಬರ ಆರೋಗ್ಯವು ಆದ್ಯತೆಯಾಗಿರುವುದರಿಂದ ಎಲ್ಲಾ ಸಂಸದರು ಮತ್ತು ಇತರರು ಜಾಗರೂಕರಾಗಿ ಇರಬೇಕು ಎಂದು ಮುನ್ನೆಚ್ಚರಿಕೆ ನೀಡಿದರು

  ಇದನ್ನು ಓದಿ: ಮೊದಲ ಬಾರಿಗೆ ಖಾಸಗಿ ಚಾನೆಲ್​ನಲ್ಲೂ ಮೋದಿ ಮನ್ ಕಿ ಬಾತ್, ನನಗೆ ಅಧಿಕಾರದ ಆಸೆ ಇಲ್ಲ ಎಂದ ಪ್ರಧಾನಿ

  ಲಖಿಂಪುರ ಖೇರಿ ವಿಚಾರ
  ಉತ್ತರ ಪ್ರದೇಶದ ಲಖೀಂಪುರ್​ ಖೇರಿಯಲ್ಲಿ (Lakhimpur Kheri Violence) ನಡೆದ ರೈತರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್​​ ಸಿದ್ದವಾಗಿದ್ದು, ಈ ಸಂಭಂಧ ಕೇಂದ್ರ ಸಚಿವ ಅಜಯ್​ ಮಿಶ್ರಾ ರಾಜೀನಾಮೆಗೆ ಆಗ್ರಹಿಸಲಿದೆ. ಈ ಕುರಿತು ಮಾತನಾಡಿದ ಕಾಂಗ್ರೆಸ್​ ಸಂಸದ ಮಂಚಿಕಮ್​​ ಟ್ಯಾಗೂರ್​, ಲಖೀಂಪುರ್​ ಖೇರಿ ಘಟನೆ ಸಂಬಂದ ಸಚಿವ ಅಜಯ್​ ಮಿಶ್ರಾ ರಾಜೀನಾಮೆಗೆ ನಾವು ಆಗ್ರಹಿಸಲಿದ್ದೇವೆ. ಇದೇ ವೇಳೆ ಕೇಂದ್ರ ಕೋವಿಡ್​ ಮೂರನೇ ಅಲೆ ತಡೆಗೆ ಯಾವೆಲ್ಲಾ ಮುನ್ನೆಚ್ಚರಿಕಾ ಯೋಜನೆ ರೂಪಿಸಿದೆ. ಸರ್ಕಾರದ ಕಾರ್ಯಕ್ರಮಗಳೇನು ಎಂಬ ಬಗ್ಗೆ ಪ್ರಶ್ನಿಸಲಿದ್ದೇವೆ ಎಂದರು

  ಸದನಸ ಘನತೆ ಕಾಪಾಡುವಂತೆ ಸ್ಪೀಕರ್​ ಟ್ವೀಟ್​

  ಇಂದಿನಿಂದ ಅಧಿವೇಶನ ಆರಂಭವಾಗುವ ಹಿನ್ನಲೆ ಈ ಕುರಿತು ಟ್ವೀಟ್​ ಮಾಡಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಕ್ಷಗಳ ನಡುವೆ ಉತ್ತಮ ಸಹಕಾರವನ್ನು ನಿರೀಕ್ಷಿಸುವುದಾಗಿ ತಿಳಿಸಿದ್ದರು. ಸದನವು ಸುಗಮವಾಗಿ ಮತ್ತು ವ್ಯವಸ್ಥಿತವಾಗಿ ನಡೆಯುತ್ತದೆ ಮತ್ತು ಗೌರವಾನ್ವಿತ ಸದಸ್ಯರು ಕಲಾಪದಲ್ಲಿ ತಮ್ಮ ಪಾತ್ರವನ್ನು ವಹಿಸುತ್ತಾರೆ ಎಂಬ ಭರವಸೆ ಇದೆ. ಶಿಸ್ತು ಮತ್ತು ಸಭ್ಯತೆ, ನಮ್ಮ ಸಾಮೂಹಿಕ ಪ್ರಯತ್ನದಿಂದ ನಾವು ಸದನದ ಘನತೆಯನ್ನು ಹೆಚ್ಚಿಸುತ್ತೇವೆ ಎಂದಿದ್ದರು
  Published by:Seema R
  First published: