Parliament Session: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ; ಮಳೆ ಹೊರಗೆ, ಗುಡುಗು-ಸಿಡಿಲು ಸದನದ ಒಳಗೆ!

ಆಗಸ್ಟ್ 12ರವರೆಗೆ ನಡೆಯುವ ಅಧಿವೇಶನದಲ್ಲಿ ಒಟ್ಟು 32 ಮಸೂದೆಗಳ (Bill) ಮಂಡನೆ ಆಗಲಿವೆ. ಆದರೆ ಸಮಯ ಬಹಳ‌ ಕಡಿಮೆ ಇರುವ ಕಾರಣಕ್ಕೆ ಜೊತೆಗೆ ಪ್ರತಿಪಕ್ಷಗಳು (Opposition Parties) ಬೇರೆ ಬೇರೆ ಪ್ರಮುಖ ವಿಷಯಗಳ ಬಗ್ಗೆ ವಿದ್ಯಮಾನಗಳ ಬಗ್ಗೆ ಚರ್ಚೆಗೆ ಅವಕಾಶ ಕೇಳುವುದು, ಅದಕ್ಕೆ ಆಡಳಿತ ಪಕ್ಷ (Ruling Party) ಅವಕಾಶ ನೀಡದೇ ಇರುವ ಸಾಧ್ಯತೆ ಹೆಚ್ಚಾಗಿದೆ.

ಇಂದಿನಿಂದ ಮುಂಗಾರು ಅಧಿವೇಶನ

ಇಂದಿನಿಂದ ಮುಂಗಾರು ಅಧಿವೇಶನ

  • Share this:
ನವದೆಹಲಿ, ಜು. 18: ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ (Parliament Monsoon Session) ಆರಂಭವಾಗಲಿದೆ. ಆಗಸ್ಟ್ 12ರವರೆಗೆ ನಡೆಯುವ ಅಧಿವೇಶನದಲ್ಲಿ ಒಟ್ಟು 32 ಮಸೂದೆಗಳ (Bill) ಮಂಡನೆ ಆಗಲಿವೆ. ಆದರೆ ಸಮಯ ಬಹಳ‌ ಕಡಿಮೆ ಇರುವ ಕಾರಣಕ್ಕೆ ಜೊತೆಗೆ ಪ್ರತಿಪಕ್ಷಗಳು (Opposition Parties) ಬೇರೆ ಬೇರೆ ಪ್ರಮುಖ ವಿಷಯಗಳ ಬಗ್ಗೆ ವಿದ್ಯಮಾನಗಳ ಬಗ್ಗೆ ಚರ್ಚೆಗೆ ಅವಕಾಶ ಕೇಳುವುದು, ಅದಕ್ಕೆ ಆಡಳಿತ ಪಕ್ಷ (Ruling Party) ಅವಕಾಶ ನೀಡದೇ ಇರುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಂಸದೀಯ ಅಧಿವೇಶನದಲ್ಲಿ ಪ್ರತಿಪಕ್ಷಗಳು ಹಾಗೂ ಆಡಳಿತ ಪಕ್ಷದ ನಡುವೆ ಘರ್ಷಣೆಯಾಗುವ, ಪ್ರತಿಭಟನೆ, ಹರತಾಳಗಳಿಗೆ ಸಾಕ್ಷಿಯಾಗುವ ಸಂಭವ ಎದ್ದು ಕಾಣುತ್ತಿದೆ.

ನಿಲುವು ಸ್ಪಷ್ಟಪಡಿಸಿರುವ ಕಾಂಗ್ರೆಸ್‌

ಸಂಸತ್ ಕಲಾಪದ ಹಿನ್ನೆಲೆಯಲ್ಲಿ ಭಾನುವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ 36 ಪಕ್ಷಗಳು ಭಾಗವಹಿಸಿದ್ದವು. ಆಗ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ತನ್ನ ನಿಲುವನ್ನು ಬಹಳ ಸ್ಪಷ್ಟವಾಗಿ ತಿಳಿಸಿದೆ. ಡಿಎಚ್‌ಎಫ್‌ಎಲ್ ಬ್ಯಾಂಕ್ ವಂಚನೆ, ಹೆಚ್ಚುತ್ತಿರುವ ನಿರುದ್ಯೋಗ, ಕುಸಿಯುತ್ತಿರುವ ರೂಪಾಯಿ ಮೌಲ್ಯ, ದೇಶಾದ್ಯಂತ ಕಂಡುಬರುತ್ತಿರುವ ದ್ವೇಷ ಭಾಷಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಅಪರಾಧಗಳು, ಕೇಂದ್ರ ಸರ್ಕಾರದಿಂದ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಕೇಂದ್ರ ತನಿಖಾ ಸಂಸ್ಥೆ (ಸಿಬಿಐ), ಸಂವಿಧಾನಿಕ ಸಂಸ್ಥೆಗಳ ದುರ್ಬಳಕೆ, ಅಲ್ಪಸಂಖ್ಯಾತರ ಮನೆಗಳ ಅಕ್ರಮ ನೆಲಸಮ ಮತ್ತು ಇನ್ನಿತರ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ: Presidential Election: ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ? ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವವರು ಯಾರು?

ಮಂಡನೆ ಆಗಲಿರುವ ಪ್ರಮುಖ ಮಸೂದೆಗಳು

  • ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ

  • ಬಹು-ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ

  • ಮಸೂದೆ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ

  • ಕಾಫಿ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ

  • ಉದ್ಯಮಗಳು, ಸೇವೆಗಳ ಕೇಂದ್ರಗಳ ಅಭಿವೃದ್ಧಿ ಮಸೂದೆ

  • ಸರಕುಗಳ ಭೌಗೋಳಿಕ ಸೂಚನೆಗಳು (ತಿದ್ದುಪಡಿ) ಮಸೂದೆ

  • ಉಗ್ರಾಣ (ಅಭಿವೃದ್ಧಿ - ನಿಯಂತ್ರಣ) (ತಿದ್ದುಪಡಿ) ಮಸೂದೆ

  • ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ (ತಿದ್ದುಪಡಿ) ಮಸೂದೆ

  • ಕಲಾಕ್ಷೇತ್ರ ಪ್ರತಿಷ್ಠಾನ (ತಿದ್ದುಪಡಿ) ಮಸೂದೆ

  • ಹಳೆಯ ಅನುದಾನ (ನಿಯಂತ್ರಣ) ಮಸೂದೆ

  • ಅರಣ್ಯ (ಸಂರಕ್ಷಣೆ) (ತಿದ್ದುಪಡಿ) ಮಸೂದೆ

  • ರಾಷ್ಟ್ರೀಯ ದಂತ ಆಯೋಗದ ಮಸೂದೆ

  • ರಾಷ್ಟ್ರೀಯ ನರ್ಸಿಂಗ್, ಮಿಡ್‌ವೈಫರಿ ಆಯೋಗದ ಮಸೂದೆ

  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ತಿದ್ದುಪಡಿ) ಮಸೂದೆ

  • ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ

  • ಗಣಿ ಮತ್ತು ಖನಿಜ (ಅಭಿವೃದ್ಧಿ - ನಿಯಂತ್ರಣ) (ತಿದ್ದುಪಡಿ) ಮಸೂದೆ

  • ಇಂಧನ ಸಂರಕ್ಷಣೆ (ತಿದ್ದುಪಡಿ) ಮಸೂದೆ

  • ಮಾನವ ಕಳ್ಳಸಾಗಣೆ (ರಕ್ಷಣೆ, ಆರೈಕೆ ಮತ್ತು ಪುನರ್ವಸತಿ) ಮಸೂದೆ

  • ಕೌಟುಂಬಿಕ ನ್ಯಾಯಾಲಯಗಳು (ತಿದ್ದುಪಡಿ) ಮಸೂದೆ ಮಂಡನೆ.


 ಇದನ್ನೂ ಓದಿ: Draupadi Murma: ದ್ರೌಪದಿ ಮುರ್ಮು ಯಾರು? ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಹಿನ್ನೆಲೆ ಇಲ್ಲಿದೆ

ಸಮಯ ಕಡಿಮೆ ಅಂತ ಖರ್ಗೆ ಕಿಡಿ

ಆಗಸ್ಟ್ 12ರಂದು ಕೊನೆಗೊಳ್ಳಲಿರುವ ಈ ಬಾರಿಯ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಸಿಗುವುದು ಕೇವಲ 14 ದಿನ. ಈ ನಡುವೆ ಕೇಂದ್ರ ಸರ್ಕಾರ 32 ಮಸೂದೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು "ಈ ಬಾರಿ ಅಧಿವೇಶನದಲ್ಲಿ ನಮಗೆ 14 ದಿನಗಳು ಮಾತ್ರ ಸಿಗಲಿವೆ. ಇಷ್ಟು ಕಡಿಮೆ ಸಮಯದಲ್ಲಿ ಉದ್ದೇಶಿತ ಮಸೂದೆಗಳು‌‌ ಹಾಗೂ ಇನ್ನಿತರ ಪ್ರಮುಖ ವಿಷಯಗಳನ್ನು ಚರ್ಚೆ ಮಾಡಲು ಹೇಗೆ ಸಾಧ್ಯ?" ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Published by:Annappa Achari
First published: