ನವದೆಹಲಿ (ಜೂ. 29): ಕೋವಿಡ್ ಎರಡನೇ ಅಲೆ ಸೋಂಕು ಕಡಿಮೆಯಾಗಿರುವ ಹಿನ್ನಲೆ ಮುಂಗಾರು ಅಧಿವೇಶನ ನಡೆಸಲು ಸರ್ಕಾರ ಮುಂದಾಗಿದೆ. ಈ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ಸಮಿತಿ ಶಿಫಾರಸ್ಸು ಮಾಡಿದೆ. ಇದೇ ಜುಲೈ 19ರಿಂದ ಆಗಸ್ಟ್ 13ರವರೆಗೆ 20 ದಿನಗಳ ಕಾಲ ಮುಂಗಾರು ಅಧಿವೇಶನ ನಡೆಸುವಂತೆ ಸಮಿತಿ ಸಲಹೆ ನೀಡಿದೆ. ಈ ಕುರಿತು ಸಂಸದೀಯ ವ್ಯವಹಾರ ಕ್ಯಾಬಿನೆಟ್ ಕಳೆದ ವಾರ ಈ ಕುರಿತು ಸಭೆ ನಡೆಸಿದ್ದು, ಈ ಸಂಬಂಧ ಪ್ರಧಾನಿ ಮೋದಿ ಅವರಿಂದ ಅಂತಿಮ ಅನುಮೋದನೆಗೆ ನಿರೀಕ್ಷೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿ ಮುಂಗಾರು ಅಧಿವೇಶನದಲ್ಲಿ ಕೆಲವು ಸುಗ್ರೀವಾಜ್ಞೆಗಳು ಸೇರಿದಂತೆ ಅನೇಕ ಮಸೂದೆಗಳನ್ನು ಸರ್ಕಾರ ಮಂಡಿಸುವ ಸಾಧ್ಯತೆ ಇದೆ. 20 ದಿನಗಳ ಕಾಲ ಅಧಿವೇಶನ ನಡೆಸುವ ಸಾಧ್ಯತೆ ಇದೆ. ಇನ್ನು ಮುಂಗಾರು ಅಧಿವೇಶನ ಆರಂಭಕ್ಕೆ ಪ್ರತಿಪಕ್ಷಗಳು ಕೂಡ ಕಾಯುತ್ತಿದ್ದು, ಸದನದಲ್ಲಿ ಕೋವಿಡ್ 19 ನಿರ್ವಹಣೆಯಲ್ಲಿ ಸರ್ಕಾರದ ಲೋಪದೋಷಗಳನ್ನು ಕುರಿತು ಚರ್ಚಿಸಲು ತಯಾರಿ ನಡೆಸಿದೆ. ಜೊತೆಗೆ ವಿವಾದಿತ ಕೃಷಿ ಕಾನೂನುನನ್ನು ರದ್ದುಗೊಳಿಸುವ ಕುರಿತು ಕೂಡ ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಕಳೆದ ಬಜೆಟ್ ಅಧಿವೇಶನದಲ್ಲಿದ್ದ ಪ್ರೋಟೋಕಾಲ್ಗಳನ್ನು ಈ ಬಾರಿ ಅಧಿವೇಶನದಲ್ಲಿ ಕೂಡ ಮುಂದುವರೆಸುವ ಸಾಧ್ಯತೆ ಇದೆ. ಈ ಬಾರಿ ಅಧಿವೇಶನಕ್ಕೂ ಕೂಡ ಸಾರ್ವಜನಿಕರ ಪ್ರವೇಶಕ್ಕೆ ಪ್ರವೇಶಿ ನಿರ್ಬಂಧಿಸಲಾಗಿದೆ.
ಇದನ್ನು ಓದಿ: ನಾಯಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿ ಎಳೆದೊಯ್ದ ಕ್ರೌರ್ಯ ಮೆರೆದ ಇಬ್ಬರು ಮಹಿಳೆಯರು..!
ಇನ್ನು ಅನೇಕ ಸಂಸದರು ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದು, ಸಚಿವಾಲಯದ ಸಿಬ್ಬಂದಿಗಳು ಕೂಡ ಬಹುತೇಕರು ಲಸಿಕೆ ಪಡೆದಿದ್ದಾರೆ. ಈ ಹಿನ್ನಲೆ ಸಂಸತ್ತಿನಲ್ಲಿ ಕೋವಿಡ್ ಸೋಂಕು ಹರಡುವ ಭೀತಿ ಈ ಬಾರಿ ಇಲ್ಲ. ಈ ಬಾರಿ ಸಂಸತ್ತಿಗೆ ಆಗಮಿಸುವವರಿಗೆ ಲಸಿಕೆ ಪ್ರಮಾಣ ಪತ್ರದೊಂದಿಗೆ ಹಾಜರಾಗುವ ಕುರಿತು ನಿಯಮ ರೂಪಿಸುವ ಸಾಧ್ಯತೆ ಇದೆ, ಏಕಕಾಲದಲ್ಲಿ ಮೇಲ್ಮನೆ ಮತ್ತು ಕೆಳ ಮನೆ ಎರಡು ಕಾರ್ಯ ನಿರ್ವಹಿಸುವ ಕುರಿತು ಎರಡೂ ಸದನದ ಕಾರ್ಯದರ್ಶಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದೇ ವೇಳೆ ಸದನದಲ್ಲಿ ಸಂಸದ, ಸಚಿವಾಲಯದ ಸಿಬ್ಬಂದಿಗಳು ಮತ್ತು ಅವರ ಕುಟುಂಬಗಳಿಗೆ ವ್ಯಾಕ್ಸಿನೇಷನ್ ನೀಡುವ ಕಾರ್ಯ ನಡೆಸಲಾಗುವುದು ಎನ್ನಲಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ