Parliament Budget Session: ಜ.31ರಿಂದ ಸಂಸತ್​​ ಬಜೆಟ್ ಅಧಿವೇಶನ ಆರಂಭ

ಕೇಂದ್ರ ಬಜೆಟ್ ಅಧಿವೇಶನ ಜನವರಿ 31ಕ್ಕೆ ಆರಂಭವಾಗಲಿದ್ದು, ಏಪ್ರಿಲ್ 3ನೇ ತಾರೀಕಿಗೆ ಮುಕ್ತಾಯಗೊಳ್ಳಲಿದೆ. ಅಧಿವೇಶನದ ಮೊದಲ ಹಂತ ಜನವರಿ 31ರಿಂದ ಫೆಬ್ರವರಿ 11ರವರೆಗೆ ಮತ್ತು ಎರಡನೇ ಹಂತವು ಮಾರ್ಚ್ 2ರಿಂದ ಏಪ್ರಿಲ್ 3 ರವರೆಗೆ ನಡೆಯಲಿದೆ.

news18-kannada
Updated:January 16, 2020, 2:00 PM IST
Parliament Budget Session: ಜ.31ರಿಂದ ಸಂಸತ್​​ ಬಜೆಟ್ ಅಧಿವೇಶನ ಆರಂಭ
ಕೇಂದ್ರ ಬಜೆಟ್ ಅಧಿವೇಶನ ಜನವರಿ 31ಕ್ಕೆ ಆರಂಭವಾಗಲಿದ್ದು, ಏಪ್ರಿಲ್ 3ನೇ ತಾರೀಕಿಗೆ ಮುಕ್ತಾಯಗೊಳ್ಳಲಿದೆ. ಅಧಿವೇಶನದ ಮೊದಲ ಹಂತ ಜನವರಿ 31ರಿಂದ ಫೆಬ್ರವರಿ 11ರವರೆಗೆ ಮತ್ತು ಎರಡನೇ ಹಂತವು ಮಾರ್ಚ್ 2ರಿಂದ ಏಪ್ರಿಲ್ 3 ರವರೆಗೆ ನಡೆಯಲಿದೆ.
  • Share this:
ನವದೆಹಲಿ(ಜ.16): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಸತ್​​ ಬಜೆಟ್​​ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಕೇಂದ್ರ ಬಜೆಟ್ ಅಧಿವೇಶನ ಜನವರಿ 31ರಿಂದ ಏಪ್ರಿಲ್ 3ರವರೆಗೆ ನಡೆಯಲಿದೆ. ಸಂಸತ್​​ ಕಲಾಪಗಳಿಗೆ ಅನುಗುಣವಾಗಿ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ. ಇದು ವರ್ಷದ ಮೊದಲ ಕೇಂದ್ರ ಬಜೆಟ್ ಅಧಿವೇಶನ ವಾಗಿರಲಿದೆ.

ಕೇಂದ್ರ ಬಜೆಟ್ ಅಧಿವೇಶನ ಜನವರಿ 31ಕ್ಕೆ ಆರಂಭವಾಗಲಿದ್ದು, ಏಪ್ರಿಲ್ 3ನೇ ತಾರೀಕಿಗೆ ಮುಕ್ತಾಯಗೊಳ್ಳಲಿದೆ. ಅಧಿವೇಶನದ ಮೊದಲ ಹಂತ ಜನವರಿ 31ರಿಂದ ಫೆಬ್ರವರಿ 11ರವರೆಗೆ ಮತ್ತು ಎರಡನೇ ಹಂತವು ಮಾರ್ಚ್ 2ರಿಂದ ಏಪ್ರಿಲ್ 3 ರವರೆಗೆ ನಡೆಯಲಿದೆ.

ಇನ್ನು ಜ.31ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಭಯ ಸದನಗಳನ್ನುದ್ದೇಶಿಸಿ ಜಂಟಿ ಭಾಷಣ ಮಾಡಲಿದ್ದಾರೆ. ಹಾಗಾಗಿ ಅಂದು ಸಭೆ ಸೇರುವಂತೆ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಸೂಚಿಸಲಾಗಿದೆ. ಈ ಬಾರಿ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಹಾಗೂ ಜೆಎನ್​​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ.

ಇದನ್ನೂ ಓದಿ: ಬಿಜೆಪಿಯತ್ತ ಸಿ.ಎಂ. ಇಬ್ರಾಹಿಂ? ಕುತೂಹಲ ಕೆರಳಿಸಿದ ಹೇಳಿಕೆ
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading