Price Hike: ಹೆಚ್ಚಾಗಲಿದೆ ಪಾರ್ಲೆ ಜಿ, ಕ್ರ್ಯಾಕ್ ಜಾಕ್ ಬಿಸ್ಕೆಟ್ ಬೆಲೆ: ದರ ಏರಿಕೆಗೆ ಕಂಪನಿ ನೀಡಿದ ಕಾರಣ ಏನು?

ಪ್ಯಾಕೇಜಿಂಗ್ ಮಾಡುವ ವಿಷಯದಲ್ಲೂ ಕಂಪನಿ ಕಚ್ಚಾ ವಸ್ತುವಿನ ಕೊರತೆ ಎದುರಿಸುತ್ತಿದೆ. ಇದರ ಜೊತೆಗೆ, ಇಂಧನ ಬೆಲೆಗಳು ಸುಮಾರು 25 ರಿಂದ 30 ಪ್ರತಿಶತದಷ್ಟು ಏರಿಕೆಯಾದ ಕಾರಣ ಸರಕು ಸಾಗಣೆ ವೆಚ್ಚವೂ ಏರಿಕೆಯಾಗಿದೆ. ಈ ಎಲ್ಲ ಕಾರಣಗಳಿಗಾಗಿ ಬೆಲೆ ಏರಿಕೆ ಮಾಡದೇ ವಿಧಿ ಇಲ್ಲ ಎಂದಿದೆ ಕಂಪನಿ.

ಪಾರ್ಲೆ ಜಿ

ಪಾರ್ಲೆ ಜಿ

  • Share this:

Parle G, Krackjack to be costlier: ಕೊರೋನಾ(Corona) ಕಪಿ ಮುಷ್ಠಿಯಲ್ಲಿ ಸಿಲುಕಿ ಇಡೀ ವಿಶ್ವ(World)ವೇ ನಲುಗಿಹೋಗಿದೆ. ಈಗ ಕೊರೋನಾದ ಪ್ರಮಾಣ ಕಡಿಮೆಯಾಗಿದೆ. ಆದರೆ ಕೊರೋನಾದಿಂದ ಆದ ಬದಲಾವಣೆಗಳು ಮಾತ್ರ ಜನಸಾಮನ್ಯರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲಿ ಬೆಲೆ ಏರಿಕೆ(Price Hike) ಹೊರೆಯನ್ನು ಹೊರಲಾಗದೆ ಜನರು ಒದ್ದಾಡುತ್ತಿದ್ದಾರೆ.  ಇದೀಗ ಪ್ರತಿಷ್ಠಿತ ಪಾರ್ಲೆ ಜಿ (Parle G) ಮತ್ತು ಪಾರ್ಲೆ ಕಂಪನಿಯ ಉತ್ಪನ್ನಗಳಾದ (Parle Products) ಕ್ರ್ಯಾಕ್ ಜಾಕ್ (Krackjack) ಬಿಸ್ಕೆಟ್‌ನ ಬೆಲೆಗಳು ಇನ್ನು ಮುಂದೆ ದುಬಾರಿಯಾಗಲಿವೆ. ಈ ಬಿಸ್ಕೆಟ್‌ಗಳ ಬೆಲೆಯಲ್ಲಿ ಸುಮಾರು 5-10 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕಂಪನಿ ತಿಳಿಸಿದೆ. ಪಾರ್ಲೆ ರಸ್ಕ್‌ನ ಬೆಲೆಯಲ್ಲಿ (Parle Rusk) ಕಂಪನಿಯು 300 ಗ್ರಾಂ ಪ್ಯಾಕ್‌ಗೆ ಸುಮಾರು 10 ರೂ ಮತ್ತು 400 ಗ್ರಾಂ ಪ್ಯಾಕ್‌ಗೆ ಸುಮಾರು 4 ರೂ. ಗಳಷ್ಟು ಬೆಲೆ ಹೆಚ್ಚಿಸಿದೆ.


ಈ ಬೆಲೆ ಏರಿಕೆ (Price Hike) ಇಷ್ಟಕ್ಕೇ ಸೀಮಿತವಾಗಿಲ್ಲ. ಇನ್ನಷ್ಟು ಬೆಲೆ ಏರಿಕೆಯ ದಿನಗಳು ಮುಂದಿವೆ ಎನ್ನುತ್ತದೆ ಮಾರುಕಟ್ಟೆ. ತಯಾರಿಕಾ ವೆಚ್ಚದಲ್ಲಿನ (Production Expenses)  ಏರಿಕೆಯಿಂದಾಗಿ ಬ್ರಿಟಾನಿಯಾ ಪ್ರಾಡಕ್ಟ್ಸ್ ( Britannia Products) ತನ್ನ ಉತ್ಪನ್ನಗಳ ಬೆಲೆಗಳನ್ನು 4 ಪ್ರತಿಶತದಷ್ಟು ಹೆಚ್ಚಿಸಿದ ನಂತರ, ಪ್ರತಿಸ್ಪರ್ಧಿ ಪಾರ್ಲೆ ಕೂಡ ತನ್ನ ಉತ್ಪನ್ನಗಳ ಎಲ್ಲ ವರ್ಗಗಳಲ್ಲಿ ಬೆಲೆಗಳನ್ನು ಹೆಚ್ಚಿಸಿದೆ.


ಇದನ್ನೂ ಓದಿ:  Match Box Price Hike: 14 ವರ್ಷಗಳ ಬಳಿಕ ಬೆಂಕಿ ಪೊಟ್ಟಣದ ಬೆಲೆ ಏರಿಕೆ: ಡಿಸೆಂಬರ್​ನಿಂದ ಮ್ಯಾಚ್​ಬಾಕ್ಸ್​ 2 ರೂಪಾಯಿ!

ಹೆಚ್ಚುತ್ತಿರುವ ತಯಾರಿಕಾ ವೆಚ್ಚಗಳು ಕಳೆದ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) 10 ರಿಂದ 15 ಪ್ರತಿಶತದಷ್ಟು ಬೆಲೆ ಏರಿಕೆಯ ಅನಿವಾರ್ಯ ನಿರ್ಧಾರ ತೆಗೆದುಕೊಂಡಿದೆ ಪಾರ್ಲೆ ಕಂಪನಿ. ಮುಂದಿನ 2 ತ್ರೈಮಾಸಿಕಗಳಲ್ಲಿಯೂ, ಪಾರ್ಲೆ ತನ್ನ ಉತ್ಪನ್ನಗಳ ಸರಣಿಯಲ್ಲಿ 10 ರಿಂದ 20 ಪ್ರತಿಶತದಷ್ಟು ಬೆಲೆ ಏರಿಕೆ ಮಾಡುವ ನಿರೀಕ್ಷೆಯಿದೆ. ಇದು ಬಿಸ್ಕತ್ತುಗಳು, ಮಿಠಾಯಿಗಳು, ರಸ್ಕ್‌ಗಳು ​​ಮತ್ತು ಇತರ ಆಹಾರ ಉತ್ಪನ್ನಗಳಿಗೆ ಅನ್ವಯ ಆಗುತ್ತದೆ.


10-20-30 ರೂ. ಎಮ್‌ಆರ್‌ಪಿ (MRP) ಇರುವ ಕಡಿಮೆ ದರದ ಪ್ಯಾಕ್‌ಗಳಿಗೆ, ಕಂಪನಿಯು ಎಂಆರ್‌ಪಿಯನ್ನು ಹಾಗೆಯೇ ಇರಿಸುತ್ತಿದೆ. ಆದರೆ ಇವುಗಳಲ್ಲಿನ ಬಿಸ್ಕೆಟ್ ಪ್ರಮಾಣ ಕಡಿಮೆ ಮಾಡುತ್ತಿದೆ. ಆದ್ದರಿಂದ, ಇದು ನೇರ ಮತ್ತು ಪರೋಕ್ಷ ಬೆಲೆ ಏರಿಕೆಗಳ ಸಂಯೋಜನೆಯ ತಂತ್ರ ಎಂದು ಹೇಳಲಾಗುತ್ತಿದೆ.


ಬೆಲೆ ಏರಿಕೆ ಅನಿವಾರ್ಯ ಅಂತ ಹೇಳಿದ ಪಾರ್ಲೆ ಜಿ

ಇದು ಕಂಪನಿಯು ಎದುರಿಸುತ್ತಿರುವ ಅಪಾರ ಪ್ರಮಾಣದ ತಯಾರಿಕಾ ವೆಚ್ಚ ನಿಭಾಯಿಸುವ ಒತ್ತಡದಿಂದ ಮಾಡಲೇಬೇಕಾದ ಅನಿವಾರ್ಯ ನಿರ್ಧಾರ ಎಂದು ಪಾರ್ಲೆ ಹೇಳುತ್ತದೆ. ಕಂಪನಿಯ ಪ್ರಮುಖ ಕಚ್ಚಾ ವಸ್ತುಗಳು, ಅಂದರೆ ತಾಳೆ ಎಣ್ಣೆ ಬೆಲೆಗಳು, ವರ್ಷದಿಂದ ವರ್ಷಕ್ಕೆ, ಆಧಾರದ ಮೇಲೆ ದ್ವಿಗುಣಗೊಂಡಿದೆ. ಪ್ಯಾಕೇಜಿಂಗ್ ಮತ್ತು ಲ್ಯಾಮಿನೇಟ್ ವೆಚ್ಚಗಳು ಕೂಡ 20 ರಿಂದ 35 ಪ್ರತಿಶತದಷ್ಟು ಹೆಚ್ಚಾಗಿದೆ.


ಸಾಗಾಣಿಕೆ ವೆಚ್ಚದಲ್ಲಿಯೂ ಏರಿಕೆ

ವಾಸ್ತವವಾಗಿ, ಇದು ಪ್ಯಾಕೇಜಿಂಗ್ ಮಾಡುವ ವಿಷಯದಲ್ಲೂ ಕಂಪನಿ ಕಚ್ಚಾ ವಸ್ತುವಿನ ಕೊರತೆ ಎದುರಿಸುತ್ತಿದೆ. ಇದರ ಜೊತೆಗೆ, ಇಂಧನ ಬೆಲೆಗಳು ಸುಮಾರು 25 ರಿಂದ 30 ಪ್ರತಿಶತದಷ್ಟು ಏರಿಕೆಯಾದ ಕಾರಣ ಸರಕು ಸಾಗಣೆ ವೆಚ್ಚವೂ ಏರಿಕೆಯಾಗಿದೆ. ಈ ಎಲ್ಲ ಕಾರಣಗಳಿಗಾಗಿ ಬೆಲೆ ಏರಿಕೆ ಮಾಡದೇ ವಿಧಿ ಇಲ್ಲ ಎಂದಿದೆ ಕಂಪನಿ.


ಇದನ್ನೂ ಓದಿ:  China: ಚಿಲ್ಲರೆ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಗೆ ಮುಂದಾದ ಚೀನಾ; ಈ 5 ಆವಿಷ್ಕಾರ ಶಾಪಿಂಗ್ ವಿಧಾನ ಬದಲಿಸುತ್ತಾ?

ಸಕ್ಕರೆ ಬೆಲೆ ಶೇ.20ರಷ್ಟು ಏರಿಕೆ

ಇನ್ನು, ಪಾರ್ಲೆ ಕಂಪನಿಯ ಇತರ ತಿನಿಸುಗಳ ವ್ಯಾಪಾರಕ್ಕೆ ಬಂದರೆ, ಮಾರುಟ್ಟೆಯಲ್ಲಿ ಗೋಧಿಯ ಬೆಲೆ ಸುಮಾರು 10 ರಿಂದ 15 ಪ್ರತಿಶತದಷ್ಟು ಮತ್ತು ಸಕ್ಕರೆ ಬೆಲೆ ಸುಮಾರು 20 ಪ್ರತಿಶತದಷ್ಟು ಏರಿಕೆ ಕಂಡಿದೆ. ಇದು ಕಂಪನಿಯ ಮುಖ್ಯ ತಿನಿಸುಗಳ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿದೆ.


ಬ್ರಿಟಾನಿಯಾ ಅಥವಾ ಪಾರ್ಲೆ ಮಾತ್ರವಲ್ಲ, ಎಫ್‌ಎಂಸಿಜಿ ಉದ್ಯಮದಲ್ಲಿರುವ ಎಲ್ಲ ಕಂಪನಿಗಳೂ ತಯಾರಿಕಾ ವೆಚ್ಚದಲ್ಲಿ ಆಗಿರುವ ಹೆಚ್ಚಳದ ಒತ್ತಡ ಅನುಭವಿಸುತ್ತಿದ್ದಾರೆ. ಆದ್ದರಿಂದ, ಹೆಚ್ಚಿನ ಬೆಲೆ ಏರಿಕೆಯ ನಿರ್ಧಾರ ಅನಿವಾರ್ಯ ಆಗಿದೆ.

Published by:Mahmadrafik K
First published: