VIDEO: ಪ್ಯಾರಿಸ್​ನಲ್ಲಿ ಅಗ್ನಿ ದುರಂತ; ಕುಸಿದು ಬೀಳುತ್ತಿವೆ ಐತಿಹಾಸಿಕ ಕಟ್ಟಡದ ಭಾಗಗಳು!

850 ವರ್ಷಗಳ ಹಿಂದೆ ನೊಟ್ರೆ ಡೇಮ್ ಕ್ಯಾಥೆಡ್ರಲ್ ಕಟ್ಟಡ ನಿರ್ಮಾಣಗೊಂಡಿತ್ತು. ಇದಕ್ಕೆ ಮರವನ್ನು ಹೆಚ್ಚು ಬಳಕೆ ಮಾಡಲಾಗಿತ್ತು. ಹಾಗಾಗಿ ಬೆಂಕಿ ಬಹುಬೇಗನೆ ಆವರಿಸಿಕೊಳ್ಳುತ್ತಿದೆ.

Rajesh Duggumane | news18
Updated:April 16, 2019, 3:23 PM IST
VIDEO: ಪ್ಯಾರಿಸ್​ನಲ್ಲಿ ಅಗ್ನಿ ದುರಂತ; ಕುಸಿದು ಬೀಳುತ್ತಿವೆ ಐತಿಹಾಸಿಕ ಕಟ್ಟಡದ ಭಾಗಗಳು!
ಬೆಂಕಿಗೆ ಆಹುತಿಯಾದ ಕಟ್ಟಡ
Rajesh Duggumane | news18
Updated: April 16, 2019, 3:23 PM IST
ಪ್ಯಾರಿಸ್ (ಏ.16)​: ಪ್ಯಾರಿಸ್​ನ ಐತಿಹಾಸಿಕ ಕಟ್ಟಡ ನೊಟ್ರೆ ಡೇಮ್ ಕ್ಯಾಥೆಡ್ರಲ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಕಟ್ಟಡದ ಕೆಲ ಪ್ರಮುಖ ಭಾಗಗಳು​ ಕುಸಿದು ಬಿದ್ದಿವೆ. ಬೆಂಕಿಯನ್ನು ನಿಯಂತ್ರಣ ಮಾಡುವುದು ಕಷ್ಟದ ಕೆಲಸ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.

ಈ ಕಟ್ಟಡದ ನವೀಕರಣ ಕೆಲಸಗಳು ನಡೆಯುತ್ತಿದ್ದವು. ಈ ವೇಳೆ ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಎಲ್ಲಕಡೆ ಹಬ್ಬಿದೆ. ಬೆಂಕಿ ನಂದಿಸಲು ಅಗ್ನಿಶಾಮಕದ ದಳದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಈ ವಿಚಾರ ಇಡೀ ವಿಶ್ವಕ್ಕೆ ಆಘಾತ ನೀಡಿದೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ ಪ್ರಮುಖ ಕಟ್ಟಡವನ್ನು ರಕ್ಷಿಸಲಾಗಿದೆಯಂತೆ.

850 ವರ್ಷಗಳ ಹಿಂದೆ ನೊಟ್ರೆ ಡೇಮ್ ಕ್ಯಾಥೆಡ್ರಲ್ ಕಟ್ಟಡ ನಿರ್ಮಾಣಗೊಂಡಿತ್ತು. ಇದಕ್ಕೆ ಮರವನ್ನು ಹೆಚ್ಚು ಬಳಕೆ ಮಾಡಲಾಗಿತ್ತು. ಹಾಗಾಗಿ ಬೆಂಕಿ ಬಹುಬೇಗನೆ ಆವರಿಸಿಕೊಳ್ಳುತ್ತಿದೆ.ಈ ದುರಂತಕ್ಕೆ ಇಡೀ ವಿಶ್ವವೇ ಮರುಕ ವ್ಯಕ್ತಪಡಿಸಿದೆ. ನಾವು ಈ ಕಟ್ಟಡವನ್ನು ಮತ್ತೆ ಮರು ನಿರ್ಮಾಣ ಮಾಡುತ್ತೇವೆ ಎಂದು ಫ್ರೆಂಚ್​ ಅಧ್ಯಕ್ಷ ಎಮ್ಯಾನ್ಯುವೆಲ್​ ಮ್ಯಾಕ್ರೋನ್​ ಹೇಳಿದ್ದಾರೆ.

ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾಡಿರುವ ಟ್ವೀಟ್​ಗೆ ಫ್ರಾನ್ಸ್​​ ಅಧಿಕಾರಿಗಳು ಅಸಮಾಧಾನ ಹೊರ ಹಾಕಿದ್ದಾರೆ. “ನೊಟ್ರೆ ಡೇಮ್ ಕ್ಯಾಥೆಡ್ರಲ್ ಅಗ್ನಿ ದುರಂತ ನೋಡಿ ಬೇಸರಗೊಂಡೆ. ಬೆಂಕಿ ಆರಿಸಲು ಮೇಲಿನಿಂದ ನೀರನ್ನು ಸುರಿಯಬೇಕು,”  ಎಂದು ಟ್ರಂಪ್​ ಸಲಹೆ ನೀಡಿದ್ದರು. ಈ ಬಗ್ಗೆ ಫ್ರಾನ್ಸ್​ ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ‘ಡೊನಾಲ್ಡ್​ ಟ್ರಂಪ್​ ಹೇಳಿದಂತೆ ಮಾಡಿದರೆ ಕಟ್ಟಡಕ್ಕೆ ಹೆಚ್ಚು ಹಾನಿ ಉಂಟಾಗಲಿದೆ. ಹಾಗಾಗಿ ಇದು ಸಾಧ್ಯವಿಲ್ಲ,’ ಎಂದು ಪ್ರತಿಕ್ರಿಯಿಸಿದ್ದಾರೆ.

First published:April 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...