ಪ್ಯಾರೀಸ್​​​​ ನಗರದ ಹಲವೆಡೆ ಕೇಳಿಸಿತು ಭಾರೀ ಸದ್ದು: ಜನತೆಯಲ್ಲಿ ಆತಂಕ

ಪ್ಯಾರೀಸ್​​ನ ನಗರದ ಬಹುತೇಕ ಕಡೆ ಈ ಸದ್ದು ಕೇಳಿಸಿದೆ. ಇಲ್ಲಿನ ರೊನಾಲ್ಡ್​ ಗ್ಯಾರೋಸ್​ ಎಂಬಲ್ಲಿ ಫ್ರೆಂಚ್​​ ಓಪನ್​​​ ಟೂರ್ನಮೆಂಟ್​ ಟೆನಿಸ್​​​ ನಡೆಯುತ್ತಿದ್ದಾಗ ಕೂಡ ಭಾರೀ ಸದ್ದು ಕೇಳಿಸಿದೆ. ಈ ಬಗ್ಗೆ ಆಟಗಾರರೊಬ್ಬರು ಟ್ವೀಟ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

news18-kannada
Updated:September 30, 2020, 6:03 PM IST
ಪ್ಯಾರೀಸ್​​​​ ನಗರದ ಹಲವೆಡೆ ಕೇಳಿಸಿತು ಭಾರೀ ಸದ್ದು: ಜನತೆಯಲ್ಲಿ ಆತಂಕ
ಪ್ಯಾರೀಸ್​ ನಗರ
  • Share this:
ಪ್ಯಾರೀಸ್​(ಸೆ.30): ಫ್ರಾನ್ಸ್​ ರಾಜಧಾನಿ ಪ್ಯಾರೀಸ್​​​​ ನಗರದಲ್ಲಿ ಏಕಾಏಕಿ ಭಾರೀ ಸದ್ದು ಕೇಳಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಎಲ್ಲಿಂದ ಬಂತು, ಹೇಗೆ ಬಂತು ಈ ಶಬ್ದ ಎಂದು ಪ್ಯಾರೀಸ್ ನಗರದ ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ಧಾರೆ. ಈ ಬೆನ್ನಲ್ಲೇ ಹಲವಾರು ಮಂದಿ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪೋಸ್ಟ್​ ಮಾಡಿದ್ದು, ನಮಗೂ ಸದ್ದು ಕೇಳಿಸಿದೆ ಎಂದು ಫೇಸ್​​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು ಮಿಲಿಟರಿ ಜೆಟ್​​ ಸೌಂಡ್​​ ಬಾರಿಯರ್​​ನಿಂದ ಈ ಶಬ್ದ ಕೇಳಿಸಿದೆ ಎಂದು ಹೇಳಿದ್ದಾರೆ. ಈ ಸಂಬಂಧ ಪ್ಯಾರೀಸ್​ ನಗರ ಪೊಲೀಸರು ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.



ಪ್ಯಾರೀಸ್​​ನ ನಗರದ ಬಹುತೇಕ ಕಡೆ ಈ ಸದ್ದು ಕೇಳಿಸಿದೆ. ಇಲ್ಲಿನ ರೊನಾಲ್ಡ್​ ಗ್ಯಾರೋಸ್​ ಎಂಬಲ್ಲಿ ಫ್ರೆಂಚ್​​ ಓಪನ್​​​ ಟೂರ್ನಮೆಂಟ್​ ಟೆನಿಸ್​​​ ನಡೆಯುತ್ತಿದ್ದಾಗ ಕೂಡ ಭಾರೀ ಸದ್ದು ಕೇಳಿಸಿದೆ. ಈ ಬಗ್ಗೆ ಆಟಗಾರರೊಬ್ಬರು ಟ್ವೀಟ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಬಾಬ್ರಿ ಮಸೀದಿ ಉಳಿಸಲು ಪ್ರಯತ್ನಿಸಿದ್ದ ಮಾಜಿ ಐಎಎಸ್ ಅಧಿಕಾರಿಗೆ ಕೋರ್ಟ್ ತೀರ್ಪಿನಿಂದ ಅಚ್ಚರಿ

ಭಾರಿ ಸದ್ದು ಕೇಳಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಯಾಗಿದೆ. ಪ್ಯಾರೀಸ್​ನಲ್ಲಿ ಭೂಕಂಪವಾಗಿದೆಯೇ? ನಗರದಲ್ಲಿ ಭಾರಿ ಸದ್ದು ಕೇಳಿಸಿದೆ ಎಂದು ಜಿಬಿನ್ ಎಂಬುವವರು ಟ್ವೀಟ್​ ಮಾಡಿದ್ದಾರೆ. ಎತ್ತರದಲ್ಲಿ ಈ ಶಬ್ದ ಕೇಳಿಸಿದೆ. ಜೆಟ್‌, ವಿಮಾನ ಹಾರಾಟದ ವೇಳೆ ಈ ರೀತಿಯ ಶಬ್ಧ ಉಂಟಾಗುವ ಸಾಧ್ಯತೆಗಳಿರುತ್ತದೆ ಎಂದು ಕೂಡ ಕೆಲವರು ಚರ್ಚೆ ಮಾಡಿದ್ದಾರೆ.
Published by: Ganesh Nachikethu
First published: September 30, 2020, 6:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading