‘ಪರೀಕ್ಷಾ ಪೇ ಚರ್ಚಾ’: ಸ್ಮಾರ್ಟ್​​ಫೋನ್​​ನಿಂದ ದೂರವಿರಿ ಎಂದು ವಿದ್ಯಾರ್ಥಿಗಳಿಗೆ ಮೋದಿ ಸಲಹೆ

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ವಿವಿಧ ಶಾಲೆಗಳಿಂದ ಆಯ್ದ ಸುಮಾರು 2 ಸಾವಿರದಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಕರ್ನಾಟಕದಿಂದ ವಿವಿಧ ಜಿಲ್ಲೆಗಳಿಂದ ಆಯ್ದ 42 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

news18
Updated:January 20, 2020, 12:34 PM IST
‘ಪರೀಕ್ಷಾ ಪೇ ಚರ್ಚಾ’: ಸ್ಮಾರ್ಟ್​​ಫೋನ್​​ನಿಂದ ದೂರವಿರಿ ಎಂದು ವಿದ್ಯಾರ್ಥಿಗಳಿಗೆ ಮೋದಿ ಸಲಹೆ
ಪ್ರಧಾನಿ ಮೋದಿ
  • News18
  • Last Updated: January 20, 2020, 12:34 PM IST
  • Share this:
ನವದೆಹಲಿ(ಜ. 20): ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಯಕ್ತಿಕವಾಗಿ ಬಹಳ ಪ್ರಿಯವೆನಿಸಿರುವ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ ಮೂರನೇ ಅವತರಣಿಕೆ ಇಂದು ನಡೆಯುತ್ತಿದೆ. ರಾಜಧಾನಿಯ ತಾಲಕಟೋರ ಸ್ಟೇಡಿಯಂನಲ್ಲಿ ಇಂದು  ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ಪ್ರಾರಂಭವಾಗಿದೆ. ಪರೀಕ್ಷಾ ಒತ್ತಡಗಳನ್ನು ನಿಭಾಯಿಸುವ ಬಗ್ಗೆ ಪ್ರಧಾನಿ ತಮ್ಮ ಅನುಭವಯುಕ್ತ ಸಲಹೆಗಳನ್ನು ನೀಡುತ್ತಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ವಿವಿಧ ಶಾಲೆಗಳಿಂದ ಆಯ್ದ ಸುಮಾರು 2 ಸಾವಿರದಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ಧಾರೆ. ಕರ್ನಾಟಕದಿಂದ ವಿವಿಧ ಜಿಲ್ಲೆಗಳಿಂದ ಆಯ್ದ 42 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದೂರದರ್ಶನ ವಾಹಿನಿಯಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವಾಗುತ್ತಿದೆ. ಅನೇಕ ಕಡೆ ಶಾಲೆಗಳಲ್ಲಿ ಈ ಕಾರ್ಯಕ್ರಮದ ನೇರ ವೀಕ್ಷಣೆಯ ವ್ಯವಸ್ಥೆಯನ್ನೂ ಕಲ್ಪಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಪ್ರಧಾನಿ ಮೋದಿಯೊಂದಿಗೆ ಪರೀಕ್ಷಾ ಪೇ ಚರ್ಚಾ; ಕರ್ನಾಟಕದಿಂದ 42 ವಿದ್ಯಾರ್ಥಿಗಳು ಆಯ್ಕೆ

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಡಿಸೆಂಬರ್ ತಿಂಗಳಲ್ಲಿ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಂದ ವಿವಿಧ ವಿಚಾರಗಳ ಬಗ್ಗೆ ಪ್ರಬಂಧ ಮಂಡನೆಯ ಸ್ಪರ್ಧೆ ಅಯೋಜಿಸಿತ್ತು. MyGov.in ವೆಬ್​ಸೈಟ್​ನಲ್ಲಿ ಇದಕ್ಕೆ ದೇಶಾದ್ಯಂತ 3 ಲಕ್ಷ ವಿದ್ಯಾರ್ಥಿಗಳು ನೊಂದಾಯಿಸಿಕೊಂಡರು. ಅವರಲ್ಲಿ 2.6 ಲಕ್ಷ ಮಕ್ಕಳು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಹಿಂದಿನ ವರ್ಷದಲ್ಲಿ ಪಾಲ್ಗೊಂಡಿದ್ದವರಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಈ ವರ್ಷ ಮಕ್ಕಳಿಂದ ಸ್ಪಂದನೆ ಸಿಕ್ಕಿತೆನ್ನಲಾಗಿದೆ.

ಹಾಗೆಯೇ, ಪರೀಕ್ಷೆಗೆ ಸಂಬಂಧಿಸಿದ ಥೀಮ್​ಗಳನ್ನಾಧರಿಸಿ ಪೇಂಟಿಂಗ್ ಮತ್ತು ಪೋಸ್ಟರ್​ಗಳಿಗೂ ಆಹ್ವಾನ ನೀಡಲಾಗಿತ್ತು. ಒಟ್ಟು 750 ಕೃತಿಗಳು ಬಂದವು. ಇವುಗಳ ಪೈಕಿ ಅತ್ಯುತ್ತಮವೆನಿಸಿರುವ 50 ಅನ್ನು ಆರಿಸಲಾಗಿದ್ದು ಇಂದು ತಾಲಕಟೋರಾ ಸ್ಟೇಡಿಯಂನಲ್ಲಿ ಪ್ರದರ್ಶನಗೊಳ್ಳಲಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಶಾಲಾ ಮಕ್ಕಳ ಒತ್ತಡ ಕಡಿಮೆ ಮಾಡುವ ಸಲುವಾಗಿ “ಎಕ್ಸಾಂ ವಾರಿಯರ್ಸ್” ಪುಸ್ತಕ ರಚಿಸಿ ಬಿಡುಗಡೆ ಮಾಡಿದ್ದಾರೆ. ಇದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸಾಕಷ್ಟು ಉಪಯುಕ್ತವೆನಿಸಿದೆ ಎಂಬ ಮಾತಿದೆ. ಇದೇ ಸ್ಫೂರ್ತಿಯಲ್ಲಿ 2018ರಲ್ಲಿ ಮೋದಿ ಅವರು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ಶುರು ಮಾಡಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಇದು ಜನಪ್ರಿಯವಾಗುತ್ತಾ ಹೋಗಿದೆ. ಈ ಬಾರಿ ಸಾಕಷ್ಟು ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: January 20, 2020, 7:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading