ಜ. 20ರಂದು ಪ್ರಧಾನಿ ಮೋದಿಯಿಂದ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ

ಈಗ ಪರೀಕ್ಷೆಗಳ ಸಮಯ ಸಮೀಪಿಸಿರುವುದರಿಂದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ಸಂದರ್ಭೋಚಿತವಾಗಿದೆ. ಸೋಮವಾರ ಬೆಳಗ್ಗೆ 11ಗಂಟೆಯಿಂದ ನಡೆಯಲಿರುವ ಈ ಕಾರ್ಯಕ್ರಮವನ್ನು ನ್ಯೂಸ್18 ವಾಹಿನಿಯಲ್ಲಿ ನೀವು ವೀಕ್ಷಿಸಬಹುದು. ಪ್ರಮುಖ ಅಂಶಗಳನ್ನು ನ್ಯೂಸ್18 ಸೋಷಿಯಲ್ ಮೀಡಿಯಾ ತಾಣಗಳಲ್ಲಿ ನೋಡಬಹುದು.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • News18
 • Last Updated :
 • Share this:
  ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಯಕ್ತಿಕವಾಗಿ ಖುಷಿ ತಂದಿರುವ ಕಾರ್ಯಕ್ರಮಗಳಲ್ಲಿ ಅವರ ಮೆಚ್ಚಿನ ‘ಪರೀಕ್ಷಾ ಪೇ ಚರ್ಚಾ’ ಪ್ರಮುಖವಾದುದು. ಈಗಾಗಲೇ ಎರಡು ಬಾರಿ ಈ ಕಾರ್ಯಕ್ರಮ ನಡೆದು ಯಶಸ್ಸಿಯಾಗಿದೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಪರೀಕ್ಷಾ ಸಂಕಟ ಮೋಚನ ಮಾಡುವಲ್ಲಿ ತಕ್ಕಮಟ್ಟಿಗೆ ಸಫಲವಾಗಿದೆ. ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಇರುವ ಆತಂಕ, ಭಯ ಇತ್ಯಾದಿ ಋಣಾತ್ಮಕ ಭಾವನೆಗಳನ್ನು ನೀಗಿಸಿ ಒತ್ತಡರಹಿತವಾಗಿ ಪರೀಕ್ಷಾ ಸವಾಲು ಎದುರಿಸುವ ಕೆಲ ವಿಧಾನಗಳನ್ನು ಪ್ರಧಾನಿ ಮೋದಿ ತಮ್ಮ ಅನುಭವದ ಆಧಾರದ ಮೇಲೆ ತಿಳಿಸಿಕೊಡುತ್ತಾರೆ. ಅಂತೆ, ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಮತ್ತು ಶಿಕ್ಷಕರು ಸ್ವಾಗತಿಸುತ್ತಿದ್ಧಾರೆ.

  ಜನವರಿ 20, ಸೋಮವಾರ ಬೆಳಗ್ಗೆ 11ಗಂಟೆಯಿಂದ ದೆಹಲಿಯ ತಲಕಟೋರಾ ಸ್ಟೇಡಿಯಂನಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶಾದ್ಯಂತ ವಿವಿಧ ಶಾಲೆಗಳಿಂದ ಆಯ್ದ 2,000 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವುದು ತಿಳಿದುಬಂದಿದೆ. ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಲಿದ್ಧಾರೆ.

  ಇದನ್ನೂ ಓದಿ: 2020ರಲ್ಲಿ ಇಸ್ರೊ ಶುಭಾರಂಭ: ಜಿ-ಸ್ಯಾಟ್ ಸಂಪರ್ಕ ಉಪಗ್ರಹ ಯಶಸ್ವಿ ಉಡಾವಣೆ

  ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಇರುವ ಅಸ್ಥೆ ಎಲ್ಲರಿಗೂ ಗೊತ್ತಿರುವಂಥದ್ದೇ. ಅವರೇ ಬರೆದಿರುವ “ಎಕ್ಸಾಂ ವಾರಿಯರ್ಸ್” ಪುಸ್ತಕ ವಿದ್ಯಾರ್ಥಿ ವಲಯದಲ್ಲಿ ಜನಪ್ರಿಯವೆನಿಸಿದೆ. ಪರೀಕ್ಷೆಗೆ ಹೇಗೆ ಅಣಿಗೊಳ್ಳಬೇಕು ಎಂಬುದನ್ನು ಮೋದಿ ಅವರು ಈ ಪುಸ್ತಕದಲ್ಲಿ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ.

  ಈಗ ಪರೀಕ್ಷೆಗಳ ಸಮಯ ಸಮೀಪಿಸಿರುವುದರಿಂದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ಸಂದರ್ಭೋಚಿತವಾಗಿದೆ. ಸೋಮವಾರ ಬೆಳಗ್ಗೆ 11ಗಂಟೆಯಿಂದ ನಡೆಯಲಿರುವ ಈ ಕಾರ್ಯಕ್ರಮವನ್ನು ನ್ಯೂಸ್18 ವಾಹಿನಿಯಲ್ಲಿ ನೀವು ವೀಕ್ಷಿಸಬಹುದು. ಪ್ರಮುಖ ಅಂಶಗಳನ್ನು ನ್ಯೂಸ್18 ಸೋಷಿಯಲ್ ಮೀಡಿಯಾ ತಾಣಗಳಲ್ಲಿ ನೋಡಬಹುದು.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
  First published: