Pariksha Pe Charcha: ಏಪ್ರಿಲ್ 1ಕ್ಕೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ, ಮಕ್ಕಳೊಂದಿಗೆ ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏಪ್ರಿಲ್ 1 ರಂದು ಪರೀಕ್ಷಾ ಪೇ ಚರ್ಚಾ (Pariksha Pe Charcha) 2022ರ ಭಾಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏಪ್ರಿಲ್ 1 ರಂದು ಪರೀಕ್ಷಾ ಪೇ ಚರ್ಚಾ (Pariksha Pe Charcha) 2022ರ ಭಾಗವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಇದೀಗ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಪರೀಕ್ಷಾ ಪೇ ಚರ್ಚಾ 5ನೇ ಆವೃತ್ತಿಯಲ್ಲಿ ನವದೆಹಲಿಯ ಟಾಲ್ಕಟೋರಾ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ಪಡೆಯುತ್ತಾರೆ. ಇನ್ನು, ಮೋದಿ ಪ್ರತಿವರ್ಷ ಬೋರ್ಡ್ ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆsಉವ ಕಾರ್ಯಕ್ರಮ ಇದಾಗಿದೆ. ಸಂವಾದದಲ್ಲಿ ಮೈಸೂರು (Mysore) ವಿದ್ಯಾರ್ಥಿನಿ (Student) ಭಾಗಿಯಾಗಿ ಮೋದಿ ಜೊತೆ ಮಾತಾಡಲಿದ್ದಾರೆ.

15.7 ಲಕ್ಷ ನೋಂದಣಿ:

ಇದರಲ್ಲಿನ ಸೃಜನಾತ್ಮಕ ಬರವಣಿಗೆ ಸ್ಪರ್ಧೆಗೆ ಸುಮಾರು 15.7 ಲಕ್ಷ ಭಾಗವಹಿಸುವವರು ನೋಂದಾಯಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವು ಕಳೆದ 4 ವರ್ಷಗಳಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿಕ್ಷಣ ಸಚಿವಾಲಯವು ಯಶಸ್ವಿಯಾಗಿ ಆಯೋಜಿಸಕೊಂಡು ಬರುತ್ತಲಿದೆ. ಇನ್ನು, PPC 2022 ಕ್ಕೆ 12.12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 2.71 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಈ ವರ್ಷದ PPC ಗಾಗಿ ನೋಂದಾಯಿಸಿಕೊಂಡಿದ್ದಾರೆ.

ಮಹತ್ವದ ವಿಷಯಗಳ ಬಗ್ಗೆ ಪ್ರಧಾನಿ ಮಾತನಾಡುವ ಸಾಧ್ಯತೆ:

ಕಳೆದ ವರ್ಷ ರದ್ಧುಗೊಂಡ ಹಿನ್ನಲೆ, ಈ ವರ್ಷ ಮತ್ತೆ ಭೌತಿಕ ಕ್ರಮದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸೇರಿದಂತೆ ಹಲವಾರು ಬೋರ್ಡ್‌ಗಳು ಏಪ್ರಿಲ್ 26 ರಿಂದ ಟರ್ಮ್ 2 ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತವೆ. ಇನ್ನು, ಬದಲಾದ ಪರೀಕ್ಷಾ ಮಾದರಿಗಳು, ಆನ್​ಲೈನ್ ತರಗತಿಗಳು, ಬೋರ್ಡ್ ಪರೀಕ್ಷೆಯ ಅಂಕಗಳು ಸೇರಿದಂತೆ ಈ ವರ್ಷದ ಬ್ಯಾಚ್​ಗೆ ಒಳಪಡಬೇಕಾದ ಬದಲಾವಣೆಗಳ ಸರಣಿಗೆ ಸಂಬಂಧಿಸಿದ ಪ್ರಮುಖ ಕೆಲ ಅಂಶಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: 5ನೇ BIMSTEC Summitನಲ್ಲಿ ಮೋದಿ ಭಾಗಿ, ಏನಿದರ ಮುಖ್ಯ ಅಜೆಂಡಾ?

ನೀವು ಮಾಡದ ತಪ್ಪಿನ ಪರಿಣಾಮ ಎದುರಿಸಬೇಕಾಗುತ್ತದೆ:

ಕಳೆದ ವರ್ಷ ಕೊರೋನಾ ಕಾರಣದಿಂದ ವರ್ಷಗಳ ಕಾಲ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಈ ಕುರಿತು ಮಾತಾಣಡಿದ್ದ ಪ್ರಧಾನಿ ಮೋದಿ, ‘ಕೊರೋನಾ ಕುರಿತು ನನ್ನ ದೃಷ್ಟಿಕೋನವೆಂದರೆ, ಕೆಲವೊಮ್ಮೆ ನೀವು ಮಾಡದ ತಪ್ಪಿಗೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಇದು ಜೀವನಕ್ಕೆ ಒಂದು ಪಾಠವಾಗಿದೆ. ಕೆಲವೊಮ್ಮೆ ನಮಗೆ ಊಹಿಸಲಾಗದ ಸವಾಲುಗಳು ಎದುರಾಗುತ್ತದೆ. ಹೀಗಿರುವಾಗ ಅದನ್ನು ನಾವು ಎದುರಿಸಿ ನಿಲ್ಲಬೇಕು. ಜೊತೆಗೆ ದೇಶದ ವಿದ್ಯಾರ್ಥಿಗಳು ಮತ್ತು ಯುವಕರು ಎದುರಿಸುತ್ತಿರುವ ನಷ್ಟವು ದೇಶದ ನಷ್ಟವಾಗಿದೆ‘ ಎಂದು ಕೊರೋನಾದ ಪರಿಣಾಮದ ಕುರಿತು ಮಾತನಾಡುವ ಹೇಳಿದ್ದರು.

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಹೀಗೆ ವೀಕ್ಷಿಸಿ:

ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸದವರೂ ಈ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಬಹುದು. ದೂರದರ್ಶನ ಸೇರಿದಂತೆ ಸುಮಾರು 32 ಚಾನಲ್​ಗಳು ಮತ್ತು ಇತರ ವಿವಿಧ ವೇದಿಕೆಗಳು ಇದನ್ನು ನೇರ ಪ್ರಸಾರ ಮಾಡುತ್ತವೆ. ಅಲ್ಲದೇ ಪ್ರಧಾನಿ ಮೋದಿ ಸಾಮಜಿಕ ಮಾಧ್ಯಮದವರು ಮತ್ತು ಶಿಕ್ಷಣ ಸಚಿವರು, ಶಿಕ್ಷಣ ಸಚಿವಾಲಯದ ಸಾಮಜಿಕ ಮಾಧ್ಯಮದ ಹ್ಯಾಂಡಲ್​ಗಳು ಸಾಮಾಜಿಕ ಜಾಲತಾಣದಲ್ಲಿ ಲೈವ ನೀಡುತ್ತಾರೆ. ಜೊತೆಗೆ ಯೂಟ್ಯೂಬ್​ ಮೂಲಕ ಲಭ್ಯವಿದ್ದು, News18.com ಇದನ್ನು ಲೈವ್ ಕವರೇಜ್ ನೀಡುತ್ತದೆ.

ಇದನ್ನೂ ಓದಿ: Pariksha Pe Charcha ಕಾರ್ಯಕ್ರಮಕ್ಕೆ ಮೈಸೂರು ವಿದ್ಯಾರ್ಥಿ ಆಯ್ಕೆ; ಏ.1 ರಂದು ಮಕ್ಕಳೊಂದಿಗೆ ಮೋದಿ ಸಂವಾದ

ವಿಜೇತರಿಗೆ ಮೋದಿ ಹಸ್ತಾಕ್ಷರ ಲಭ್ಯ:

ಇನ್ನು ಇದರಲ್ಲಿ ವಿಜೇತರಾದವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರಮಾಣಪತ್ರಗಳು, ಪಿಪಿಸಿ ಕಿಟ್​ಗಳು ಮತ್ತು ಪ್ರಧಾನಿ ಮೋದಿ ಅವರ ಹಸ್ತಾಕ್ಷರವುಳ್ಳ ಡಿಜಿಟಲ್ ಸ್ಮರಣಿಕೆಗಳನ್ನು ನೀಡಲಾಗುತ್ತದೆ. ಬಲ್ಲಮೂಲಗಳ ಮಾಹಿತಿ ಪ್ರಕಾರ ಎಲ್ಲಾ ಅರ್ಜಿದಾರರಲ್ಲಿ 1500 ವಿದ್ಯಾರ್ಥಿಗಳು, 250 ಶಿಕ್ಷಕರು ಮತ್ತು 250 ಪೋಷಕರು ವಿಜೇತರಾಗಿರುವುದಾಗಿ ತಿಳಿದುಬಂದಿದೆ.
Published by:shrikrishna bhat
First published: