ಪರೀಕ್ಷಾ ಪೆ ಚರ್ಚಾ: ಪ್ರಧಾನಿ ಮೋದಿ ಅವರೊಂದಿಗಿನ ಸಂವಾದಕ್ಕೆ ವಿದ್ಯಾರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗಿತ್ತು?

Pariksha Pe Charcha 2020: ಇನ್ನು ಸಿಬಿಎಸ್‌ಇ ಮತ್ತು ಕೇಂದ್ರೀಯ ವಿದ್ಯಾಲಯ ಶಾಲೆಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಂಬಂಧಿತ ವಿಷಯಗಳ ಬಗ್ಗೆ ಚಿತ್ರಕಲೆ ಮತ್ತು ಪೋಸ್ಟರ್ ತಯಾರಿಸುವ ಸ್ಪರ್ಧೆಯೂ ನಡೆಸಲಾಗಿತ್ತು. ಆಯ್ದ ವರ್ಣಚಿತ್ರಗಳನ್ನು ಪರೀಕ್ಷಾ ಪೆ ಚರ್ಚಾ 2020 ಕಾರ್ಯಕ್ರಮದ ಪ್ರದರ್ಶಿಸಲಾಗುತ್ತದೆ.

zahir | news18-kannada
Updated:January 17, 2020, 6:09 PM IST
ಪರೀಕ್ಷಾ ಪೆ ಚರ್ಚಾ: ಪ್ರಧಾನಿ ಮೋದಿ ಅವರೊಂದಿಗಿನ ಸಂವಾದಕ್ಕೆ ವಿದ್ಯಾರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗಿತ್ತು?
Prime Minister Modi
  • Share this:
ಪರೀಕ್ಷಾ ಒತ್ತಡವನ್ನು ನಿವಾರಿಸಲು ಪ್ರಧಾನಿ ನರೇಂದ್ರ ಮೋದಿಯವರು ಶಾಲಾ ಮಕ್ಕಳಿಗಾಗಿ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದ್ದಾರೆ.  ನವದೆಹಲಿಯ ಟಾಕಟೋರಾ ಕ್ರೀಡಾಂಗಣದಲ್ಲಿ ಜನವರಿ 20ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು/ ಶಿಕ್ಷಕರು ಹಾಜರಾಗಲಿದ್ದಾರೆ.

ಈ ಮೂಲಕ ಮೂರನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ. ಕಳೆದ ತಿಂಗಳು, ಪಿಎಂ ಮೋದಿ ಅವರು ಪರೀಕ್ಷೆಗಳಿಗೆ ತಯಾರಿ ವೇಳೆ ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆಗೊಳಿಸುವಂತಹ ಮಾರ್ಗಗಳ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಶಾಲಾ ಶಿಕ್ಷಕರುಗಳಿಗೆ ಸೂಚಿಸಿದ್ದರು.

ಕೆಲ ತಿಂಗಳ ಹಿಂದೆಯಷ್ಟೇ ಪ್ರಧಾನಿ ತಮ್ಮ ಟ್ವಿಟರ್​ ಖಾತೆಯಲ್ಲಿ "ಪರೀಕ್ಷೆಗಳು ಸಮೀಪಿಸುತ್ತಿವೆ ಹಾಗೆಯೇ ಪರಿಕ್ಷಾ ಪೆ ಚರ್ಚಾ ಕೂಡ. ಒತ್ತಡ ರಹಿತ ಪರೀಕ್ಷೆಗಳನ್ನು ಎದುರಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಅನನ್ಯ ಸ್ಪರ್ಧೆ ಇಲ್ಲಿದೆ. ವಿಜೇತರು ಮುಂದಿನ ವರ್ಷದ ಪರೀಕ್ಷಾ ಪೆ ಚರ್ಚಾಗೆ (ಪಿಪಿಸಿ) 2020 ಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದರು.

ಅದರಂತೆ ಪ್ರಧಾನಿ ಅವರ ಈ ಸಂವಾದಾತ್ಮಕ ಕಾರ್ಯಕ್ರಮಕ್ಕೆ ವಿವಿಧ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ಮೈಗೊವ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಿರು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು.

ಈ ಸಂವಾದಕ್ಕೆ ಆಯ್ಕೆಯಾಗಲು 2019 ರ ಡಿಸೆಂಬರ್ 2 ರಿಂದ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅಲ್ಲದೆ ಅದರೊಂದಿಗೆ ಐದು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಬಗ್ಗೆ ಗರಿಷ್ಠ 1,500 ಅಕ್ಷರಗಳೊಳಗೆ ಪ್ರಬಂಧ ಬರೆಯಲು ಸೂಚಿಸಲಾಗಿತ್ತು. ಆ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂವಾದಕ್ಕಾಗಿ ಆಯ್ಕೆ ಮಾಡಲಾಗಿದೆ.

ಆಯ್ಕೆಗೆ ನೀಡಲಾದ ಐದು ವಿಷಯಗಳಾವುವು:

1. ಕೃತಜ್ಞ ಸ್ಮರಣೆ : ನಿಮ್ಮ ಶೈಕ್ಷಣಿಕ ಜೀವನದಲ್ಲಿ ಪ್ರಮುಖ ಪಾತ್ರವಹಿಸಿರುವವರ ಬಗ್ಗೆ ಬರೆಯಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು. ಅಲ್ಲದೆ ಆ ವ್ಯಕ್ತಿಗೆ ನಿಮಗೆ ಏಕೆ ಗ್ರೇಟ್ ಎಂದೆನಿಸುತ್ತಾರೆ ಎಂದು ವಿವರಿಸಲು ತಿಳಿಸಲಾಗಿತ್ತು.2.  ಭವಿಷ್ಯವು ನಿಮ್ಮ ಆಕಾಂಕ್ಷೆಯನ್ನು ಅವಲಂಬಿಸಿರುತ್ತದೆ: ವಿದ್ಯಾರ್ಥಿಗಳ ಮುಂದಿನ ಗುರಿ ಮತ್ತು ವೃತ್ತಿಯ ಮೇಲಿನ ಹಂಬಲದ ಕುರಿತು ಒಂದು ಪ್ರಬಂಧ ಬರೆಯಲು ತಿಳಿಸಲಾಗಿತ್ತು.

3. ಪರೀಕ್ಷಾ ಕ್ರಮಗಳ ಪರೀಶೀಲನೆ: ಚಾಲ್ತಿಯಲ್ಲಿರುವ ಪರೀಕ್ಷಾ ವ್ಯವಸ್ಥೆಗಳು ಮತ್ತು ಅದನ್ನು ಹೇಗೆ ಉತ್ತಮಗೊಳಿಸಬೇಕು ಎಂಬುದರ ಕುರಿತು ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ತಿಳಿಸುವಂತೆ ಸೂಚಿಸಲಾಗಿತ್ತು.

4. ನಮ್ಮ ಕರ್ತವ್ಯಗಳು, ನಿಮ್ಮ ನಿಲುವು: ನಾಗರೀಕರ ಕರ್ತವ್ಯಗಳ ಕುರಿತು ಪ್ರಬಂಧ ಮತ್ತು ಪ್ರತಿಯೊಬ್ಬರನ್ನು ಸಮಾಜದ ಕರ್ತವ್ಯನಿರತ ಪ್ರಜೆಗಳನ್ನಾಗಿ ಮಾಡಲು ಹೇಗೆ ಪ್ರೇರೇಪಿಸಬಹುದು ಎಂಬುದರ ಬಗ್ಗೆ ವಿವರಿಸಲು ತಿಳಿಸಲಾಗಿತ್ತು.

5.  ಸಮತೋಲನ: ವಿದ್ಯಾರ್ಥಿಗಳ ಪಠ್ಯಕ್ರಮದ ಹೊರತಾಗಿ ಸಮತೋಲಿತ ಚಟುವಟಿಕೆಗಳ ಬಗ್ಗೆ ಬರೆಯುವಂತೆ ತಿಳಿಸಲಾಗಿತ್ತು.

ಇನ್ನು ಸಿಬಿಎಸ್‌ಇ ಮತ್ತು ಕೇಂದ್ರೀಯ ವಿದ್ಯಾಲಯ ಶಾಲೆಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಂಬಂಧಿತ ವಿಷಯಗಳ ಬಗ್ಗೆ ಚಿತ್ರಕಲೆ ಮತ್ತು ಪೋಸ್ಟರ್ ತಯಾರಿಸುವ ಸ್ಪರ್ಧೆಯೂ ನಡೆಸಲಾಗಿತ್ತು. ಆಯ್ದ ವರ್ಣಚಿತ್ರಗಳನ್ನು ಪರೀಕ್ಷಾ ಪೆ ಚರ್ಚಾ 2020 ಕಾರ್ಯಕ್ರಮದ ಪ್ರದರ್ಶಿಸಲಾಗುತ್ತದೆ.

ಇನ್ನು ಈ ಸಂವಾದಲ್ಲಿ ಭಾಗವಹಿಸಲು 3 ಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮನ್ನು ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 2.6 ಲಕ್ಷ ವಿದ್ಯಾರ್ಥಿಗಳು ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ದೇಶದ ಸುಮಾರು 2,000 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಜನವರಿ 20 ರಂದು ಪ್ರಧಾನಿ ಮೋದಿ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.
First published:January 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ