HOME » NEWS » National-international » PARENTS SELL INFANT BOY FOR PURCHASING SECOND HAND CAR SESR

ಸೆಕೆಂಡ್​ ಹ್ಯಾಂಡ್​ ಕಾರಿನ ಆಸೆಗೆ ತಿಂಗಳ ಗಂಡು ಮಗುವನ್ನೇ ಮಾರಾಟ ಮಾಡಿದ ದಂಪತಿ

ಸೆಕೆಂಡ್​ ಹ್ಯಾಂಡ್ ಕಾರುಕೊಳ್ಳಲು ಹಣ ಇಲ್ಲದ ಕಾರಣ ಮಗುವನ್ನು ಮಾರಾಟ ಮಾಡಿದ್ದಾರಂತೆ ಈ ದಂಪತಿ

news18-kannada
Updated:May 14, 2021, 6:59 PM IST
ಸೆಕೆಂಡ್​ ಹ್ಯಾಂಡ್​ ಕಾರಿನ ಆಸೆಗೆ ತಿಂಗಳ ಗಂಡು ಮಗುವನ್ನೇ ಮಾರಾಟ ಮಾಡಿದ ದಂಪತಿ
ಸಾಂದರ್ಭಿಕ ಚಿತ್ರ
  • Share this:
ಬದುಕಿನಲ್ಲಿ ಆಸೆ ಸಹಜ. ಅಂತಹ ಕ್ಷುಲಕ ಆಸೆ ಈಡೇರಿಕೆಗಾಗಿ ದಂಪತಿಗಳಿಬ್ಬರು ತಮ್ಮ ಕರಳ ಬಳ್ಳಿಯನ್ನೇ ಹಣಕ್ಕಾಗಿ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಹಣಕ್ಕಾಗಿ ಮಗುವನ್ನೇ ಮಾರಾಟ ಮಾಡುವಂತಹ ಅಂತಹ ಮಹಾದಾಸೆ ಏನು ಅಂತಿರಾ! ಅದು ಒಂದು ಸೆಕೆಂಡ್​ ಹ್ಯಾಂಡ್​ ಕಾರಿಗಾಗಿ. ಹೌದು ಒಂದು ಸೆಕೆಂಡ್​ ಹ್ಯಾಂಡ್​ ಕಾರು ಕೊಳ್ಳಬೇಕು ಎಂಬುದು ಈ ದಂಪತಿಗಳ ಮಹಾದಾಸೆಯಾಗಿತ್ತಂತೆ. ಇದಕ್ಕಾಗಿ ಹಣ ಹೊಂಚಲು ಮುಂದಾಗಿದ್ದ ದಂಪತಿಗೆ ಎಲ್ಲೂ ಹಣ ಸಿಕ್ಕಿಲ್ಲ. ಕಡೆಗೆ ಏನು ಮಾಡುವುದು ಎಂದು ತಿಳಿಯದೇ ಇದ್ದಾಗ ಕಣ್ಣಿಗೆ ಬಿದ್ದಿದ್ದು, ತಿಂಗಳ ಹಾಲುಗಲ್ಲದ ಮುದ್ದಾದ ಗಂಡು ಮಗು.

ಕಾರಿನ ಆಸೆ ಮುಂದೆ ಮಗುವಿನ ಮಮಕಾರ ಮರೆಯಾದ ಈ ದಂಪತಿಗಳು ಮಗುವಿನ ಮಾರಾಟ ಮಾಡುವ ವ್ಯಕ್ತಿಗೆ ಹುಡುಕಾಟ ನಡೆಸಿದ್ದರು. ಗುರ್ಸಹೈಗಂಜ್​ನ ಮೂಲಕ ಬ್ಯುಸಿನೆಸ್​ಮ್ಯಾನ್​ ಪತ್ತೆ ಮಾಡಿದ ಈ ದಂಪತಿ ಕಡೆಗೆ ತಮ್ಮ ಮಗುವನ್ನು ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.

ಘಟನೆ ನಡೆದು ಮೂರು ತಿಂಗಳ ಬಳಿಕ ಮನೆಗೆ ಬಂದ ತಾತ ಮೊಮ್ಮಗು ಕಾಣಿಸದಾದಾಗ ಮಗಳಿಗೆ  ಪ್ರಶ್ನಿಸಿದ್ದಾರೆ. ಈ ವೇಳೆ ಮಗಳು ಹಾರಿಕೆ ಉತ್ತರ ನೀಡಿದ್ದಾಳೆ. ಇದರಿಂದ ಅನುಮಾನಗೊಂಡ ಮಗುವಿನ ತಾತಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೋಷಕರನ್ನಿ ತನಿಖೆಗೆ ಒಳಪಡಿಸಿದಾಗ ಈ ವಿಷಯ ಬಹಿರಂಗವಾಗಿದೆ.

ಇದನ್ನು ಓದಿ: ಸಿಎಂ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್​ ಇನ್ನಿಲ್ಲ; ಬಿಎಸ್​ವೈ ಸಂತಾಪ

ಇನ್ನು ಸಿಕ್ಕಿಲ್ಲ  ಹಸುಗೂಸು

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಮಗುವಿನ ಅಪ್ಪ ಅಮ್ಮನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ತಾವು ಮಾರಾಟ ಮಾಡಿದ ವ್ಯಾಪಾರಿಯ ವಿವರವನ್ನು ಪಡೆದಿದ್ದಾರೆ. ಮಗುವನ್ನು ಪಡೆದ ವ್ಯಕ್ತಿ ಮಗು ಮಾರಾಟ ಜಾಲದ ಒಬ್ಬನಾಗಿದ್ದು, ಆತ ಬೇರೆ ಯಾರಿಗೋ ಮಾರಾಟ ಮಾಡಿದ್ದಾರೆ. ಸದ್ಯ ಮಗು ಇನ್ನು ಸಿಕ್ಕಿಲ್ಲ. ಆದರೆ, ಆತನ ಹುಟುಕಾಟ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಚಿಕ್ಕಬಳ್ಳಾಪುರದಲ್ಲೂ ನಡೆದಿತ್ತು ಇದೇ ರೀತಿ ಘಟನೆಇದೇ ರೀತಿಯ ಘಟನೆ ಕಳೆದ ವರ್ಷ ಚಿಕ್ಕಬಳ್ಳಾಪುರದಲ್ಲೂ ನಡೆದಿತ್ತು. ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮ್ಮ ಹಸುಗೂಸನ್ನು ಮಾರಾಟ ಮಾಡಿದ್ದರು. ಮನೆಯಲ್ಲಿದ್ದ ಎಳೆ ಹೆಣ್ಣು ಮಗು ಕಾಣದ ಬಗ್ಗೆ ಅನುಮಾನಗೊಂಡ ಪಕ್ಕದ ಮನೆಯವರು ಈ ಘಟನೆಯನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಈ ವೇಳೆ ಮೊಬೈಲ್​ ಮತ್ತು ಬೈಕ್​ ಆಸೆಗಾಗಿ ತಮ್ಮ ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದರು. ಮಂಚನಹಳ್ಳಿಯ ಮಕ್ಕಳಿಲ್ಲದ ದಂಪತಿಗಳಿಗೆ ಹಣಕ್ಕೆ ತಮ್ಮ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದಾಗಿ ಕಾರ್ಮಿಕ  ದಂಪತಿಗಳು ಪೊಲೀಸರಿಗೆ ತಿಳಿಸಿದ್ದರು.

ಮಕ್ಕಳಾಗಿಲ್ಲ ಎಂದು ಹಲವರು ಕೊರಗುತ್ತಾ ದೇವಾಸ್ಥಾನ, ಆಸ್ಪತ್ರೆ ಎಂದು ಎಡತಾಗುತ್ತಿರುತ್ತಾರೆ. ಅಂತಹದರಲ್ಲಿ ಮಕ್ಕಳಿದ್ದರೂ ವಸ್ತು, ಹಣದ ಆಸೆಗೆ ತಮ್ಮ ಕರುಳ ಬಳ್ಳಿಯನ್ನೇ ಕೆಲವರು ಮಾರಾಟ ಮಾಡುತ್ತಾ ಮಕ್ಕಳ ಬಗ್ಗೆಗ್ಗಿನ ಮಮಕಾರ ತೊರೆಯುತ್ತಾರೆ ಎಂಬುದಕ್ಕೆ ನಿರ್ದರ್ಶನ ಈ ಘಟನೆಯಾಗಿದೆ
Published by: Seema R
First published: May 14, 2021, 6:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories