Two Headed Baby: ಎರಡು ತಲೆಯ ನವಜಾತ ಶಿಶುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿ ಆದ ಹೆತ್ತವರು

ರಾಂಚಿಯ ರಾಜೇಂದ್ರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್) ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದನ್ನು ಅದರ ಹೆತ್ತವರು ಬಿಟ್ಟು, ಪರಾರಿಯಾಗಿದ್ದಾರೆ. ಆ ಶಿಶು ಎರಡು ತಲೆಗಳೊಂದಿಗೆ ಜನ್ಮ ತಾಳಿರುವುದೇ , ಅವರು ಅದನ್ನು ಬಿಟ್ಟು ಓಡಿ ಹೋಗಲು ಕಾರಣ.

ಎರಡು ತಲೆ ಶಿಶು

ಎರಡು ತಲೆ ಶಿಶು

  • Share this:
    ಹೆತ್ತವರು ನವಜಾತ ಶಿಶುವನ್ನು (New Born Baby) ತ್ಯಜಿಸುವ ಪ್ರಕರಣಗಳು ಹೊಸತಲ್ಲ. ಹಿಂದಿನಿಂದಲೂ ಇಂತಹ ಪ್ರಕರಣಗಳನ್ನು ನೋಡುತ್ತಲೇ ಅಥವಾ ಆ ಕುರಿತ ಕಥೆಗಳನ್ನು ಕೇಳುತ್ತಲೇ ಬಂದಿದ್ದೇವೆ. ತಾವೇ ಹೆತ್ತ ಮಕ್ಕಳನ್ನು ತ್ಯಜಿಸಲು ಬಯಸುವವರು ಅದಕ್ಕೆ ನೀಡುವ ಕಾರಣಗಳು ಮಾತ್ರ ಭಿನ್ನ ಭಿನ್ನ. ಅವಿವಾಹಿತರಾಗಿ ಮಗುವಿಗೆ ಜನ್ಮ ನೀಡಿ, ಸಮಾಜದ ಭಯಕ್ಕೆ ಅದನ್ನು ಬಿಟ್ಟು ಬಿಡುವ ತಾಯಂದಿರ ಕಥೆ ಒಂದೆಡೆಯಾದರೆ, ಹೆಣ್ಣು ಮಗು ಅಥವಾ ಅಂಗವೈಕಲ್ಯದ ಮಗು ಎಂದು ಅದನ್ನು ತ್ಯಜಿಸುವವರ ಕಥೆ ಇನ್ನೊಂದೆಡೆ. ಅದೇನೇ ಇದ್ದರೂ, ಇದು ಮನುಷ್ಯತ್ವ ಉಳ್ಳವರು ಮಾಡುವ ಕೃತ್ಯವಲ್ಲ. ಅಂತದ್ದೇ ಒಂದು ಪ್ರಕರಣ ಜಾರ್ಖಂಡ್‍ನ ರಾಜಧಾನಿ ರಾಂಚಿಯಲ್ಲಿ (Ranchi) ನಡೆದಿದೆ. ಅಲ್ಲಿನ ರಾಜೇಂದ್ರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (Rims) ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದನ್ನು ಅದರ ಹೆತ್ತವರು ಬಿಟ್ಟು, ಪರಾರಿಯಾಗಿದ್ದಾರೆ. ಆ ಶಿಶು ಎರಡು ತಲೆಗಳೊಂದಿಗೆ (Two headed Baby) ಜನ್ಮ ತಾಳಿರುವುದೇ , ಅವರು ಅದನ್ನು ಬಿಟ್ಟು ಓಡಿ ಹೋಗಲು ಕಾರಣ.

    ಸಿಪಿಟಲ್ ಮೆನಿಂಜೋ ಇನ್‍ಸೆಫಲೋಸಿಲ್ ಕಾಯಿಲೆಯಿಂದ ಈ ರೀತಿ ಮಗು ಜನನ

    ಮಾಹಿತಿಗಳ ಪ್ರಕಾರ, ಆ ಶಿಶು ಓಸಿಪಿಟಲ್ ಮೆನಿಂಜೋ ಇನ್‍ಸೆಫಲೋಸಿಲ್ ಕಾಯಿಲೆಯೊಂದಿಗೆ ಜನ್ಮ ತಾಳಿದೆ. ಆ ಮಗುವಿನ ತಲೆಯ ಹಿಂಭಾಗ ಚೀಲದಂತೆ ಮತ್ತು ಎರಡು ತಲೆ ಇರುವಂತೆ ಕಾಣುತ್ತದೆ. ಈ ಎರಡು ತಲೆಯ ಮಗುವಿನ ಜನನದ ಬಳಿಕ, ಅದರ ಕ್ರೂರ ಮನಸ್ಸಿನ ಹೆತ್ತವರು ಅದನ್ನು ಆಸ್ಪತ್ರೆಯಲ್ಲೇ ಬಿಟ್ಟು ಓಡಿಹೋಗಿದ್ದಾರೆ. ಅದರ ಹೆತ್ತವರು ಪರಾರಿಯಾದ ಬಳಿಕ, ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಆಸ್ಪತ್ರೆಗೆ ನೀಡಿರುವ ವಿಳಾಸ ಕೂಡ ನಕಲಿ ಎಂಬುವುದು ತಿಳಿದು ಬಂತು.

    ಇದನ್ನು ಓದಿ: ದಕ್ಷಿಣ ಆಫ್ರಿಕಾ ವೈರಸ್​ಗೆ WHO 'ಓಮಿಕ್ರಾನ್'​ ಎಂದು ಹೆಸರಿಟ್ಟಿದ್ದು ಈ ಕಾರಣಕ್ಕೆ!

    ಬಹುಶಃ, ತಮ್ಮ ಮಗು ಈ ರೀತಿ ಹುಟ್ಟುತ್ತದೆ ಎಂಬುವುದು ಅವರಿಗೆ ಮೊದಲೇ ತಿಳಿದಿತ್ತು ಅಥವಾ ಮಗುವಿಗೆ ಜನ್ಮ ಕೊಟ್ಟ ಕೂಡಲೇ ಅಲ್ಲಿಂದ ಪರಾರಿ ಆಗಬೇಕೆಂದು ಮೊದಲೇ ನಿರ್ಧರಿಸಿದಂತೆ ಕಾಣುತ್ತದೆ. ಮಗು ಜನಿಸಿದ ಕೂಡಲೇ, ಅದನ್ನು ಐಸಿಯುಗೆ ಸೇರಿಸಲಾಯಿತು ಮತ್ತು ಅದೇ ಸಮಯದಲ್ಲಿ ಮಗುವಿನ ಕುಟುಂಬದವರು ಅಲ್ಲಿಂದ ಸದ್ದಿಲ್ಲದೆ ಪರಾರಿ ಆದರು. ಹೆತ್ತವರು ಕೈಬಿಟ್ಟರೂ, ವೈದ್ಯರು ಮಗುವಿನ ಕೈ ಬಿಟ್ಟಿಲ್ಲ. ರಿಮ್ಸ್‍ನ ವೈದ್ಯರು ಇದೀಗ ಮಗುವನ್ನು ಉಳಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

    ಇದನ್ನು ಓದಿ: ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಹಣ ಇನ್ನೂ ಖಾತೆಗೆ ಬಂದಿಲ್ವಾ?; ಹಾಗಾದ್ರೆ ಈ ರೀತಿ ಮಾಡಿ

    ಮಗುವಿಗೆ ಶಸ್ತ್ರಕ್ರಿಯೆ

    ರಿಮ್ಸ್​ನ ಆಡಳಿತ ಮಂಡಳಿಯು ಮಗು ಒಂಟಿಯಾಗಿರುವ ಕುರಿತು ಸಿಡಬ್ಲ್ಯೂಸಿ ಗೆ ವರದಿ ಮಾಡಿತು. ಸಿಡಬ್ಲ್ಯೂಸಿಯಿಂದ ಮಾಹಿತಿಯನ್ನು ಪಡೆದ ಬಳಿಕ ಕರುಣಾ ಸಂಸ್ಥೆ ಆ ಗಂಡು ಮಗುವಿಗೆ ಸಹಾಯ ಮಾಡಲು ಮುಂದಿದೆ. ರಿಮ್ಸ್ ಸಂಸ್ಥೆಯ ಸಿಬ್ಬಂದಿಗಳ ಮಾಹಿತಿಯ ಪ್ರಕಾರ, ಆ ಮಗುವನ್ನು ಈಗ ಮಕ್ಕಳ ವಿಭಾಗದಿಂದ ನರಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕಳುಹಿಸಿಕೊಡಲಾಗಿದೆ. ವೈದ್ಯರು ಆ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮಗುವಿನ ಚಿಕಿತ್ಸೆ ಮುಗಿದ ಬಳಿಕ ಅದನ್ನು ಕರುಣಾ ಆಶ್ರಮಕ್ಕೆ ತೆಗೆದುಕೊಂಡು ಹೋಗಲಾಗುವುದು. ಈ ಸಂಸ್ಥೆಯನ್ನು ರಾಂಚಿಯ ಹಲವಾರು ವೈದ್ಯರು ನಡೆಸುತ್ತಿದ್ದಾರೆ.

    ಜನ್ಮದತ್ತ ಕಾಯಿಲೆ

    ಓಸಿಪಿಟಲ್ ಮೆನಿಂಜೊ ಇನ್‍ಸೆಫಲೋಸಿಲ್ ಕಾಯಿಲೆ ಒಂದು ಜನ್ಮದತ್ತ ಕಾಯಿಲೆಯಾಗಿದ್ದು, ಅದರಲ್ಲಿ ತಲೆ ಬುರುಡೆಯ ಮೂಳೆಗಳು ಹೊರಗೆ ಬಂದಿರುತ್ತವೆ ಮತ್ತು ತಲೆ ಹಿಂದೆ ಒಂದು ಚೀಲದ ರೂಪದಲ್ಲಿ ಸಂಗ್ರಹವಾಗಿರುತ್ತವೆ. ಮಗು ಜೀವನ ಪರ್ಯಂತ ಈ ಕಾಯಿಲೆಯಿಂದ ಬಳಬೇಕಾಗುತ್ತದೆ. ಇದರಿಂದ ಇನ್ನಿತರ ಕಾಯಿಲೆಗಳು ಬರುವ ಸಂಭವ ಕೂಡ ಇರುತ್ತವೆ.
    First published: