• Home
  • »
  • News
  • »
  • national-international
  • »
  • Pre School: ಪ್ರಿ-ಸ್ಕೂಲ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ, ಸಂತಸ ವ್ಯಕ್ತಪಡಿಸಿದ ಪೋಷಕರು

Pre School: ಪ್ರಿ-ಸ್ಕೂಲ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ, ಸಂತಸ ವ್ಯಕ್ತಪಡಿಸಿದ ಪೋಷಕರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Pre School Mandatory: ಶಾಲಾ ಪೂರ್ವ ಕಲಿಕೆಯನ್ನು ಕಡ್ಡಾಯಗೊಳಿಸುವುದರಿಂದ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬೆಳೆಯುತ್ತಾರೆ ಮತ್ತು ಶಾಲೆಗಳಲ್ಲಿ ಹೆಚ್ಚಿನ ತರಗತಿಗಳಿಗೆ ಹೋಗುವಾಗ ಅವರ ಪಠ್ಯಪುಸ್ತಕಗಳಿಂದ ಭೀತರಾಗುವುದಿಲ್ಲ

  • Share this:

ಔಪಚಾರಿಕ ಶಿಕ್ಷಣ (Education) ಪದ್ಧತಿಯಲ್ಲಿ ಪೂರ್ವ-ಪ್ರಾಥಮಿಕ (Pre -School) ಶಿಕ್ಷಣವನ್ನು ಸೇರಿಸುವ ಕೇಂದ್ರದ ಯೋಜನೆಗೆ ಬೆಂಗಳೂರಿನ ಶಿಕ್ಷಕರು (Bengaluru Teachers) ಹಾಗೂ ಮಕ್ಕಳ ಪೋಷಕರು (Parents) ಒಪ್ಪಿಗೆ ನೀಡಿದ್ದು, ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ನಿಯಮವು ಮಕ್ಕಳಿಗೆ (Children) ಆಟದ ಜೊತೆಗೆ ಪಾಠವನ್ನು ಕಲಿಸುವ ವ್ಯವಸ್ಥೆಗೆ ನಾಂದಿಯಾಗಲಿದ್ದು ಕಲಿಕಾ ಪದ್ಧತಿಯಲ್ಲಿ ಸಮಾನತೆಯನ್ನು ಸಾಧಿಸಲು ನೆರವಾಗಲಿದೆ ಎಂಬ ಆಶಯವನ್ನು ಪ್ರಕಟಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ಪದ್ಧತಿ 2020, 5+3+3+4 ಪಠ್ಯಕ್ರಮ ರಚನೆಯನ್ನು ಮಂಡಿಸಿದ್ದು ಇದು 3 ರಿಂದ 8 ರ ಹರೆಯದ ಮಕ್ಕಳಿಗೆ ಮಕ್ಕಳ ಆರೈಕೆ ಹಾಗೂ ಶಿಕ್ಷಣ ಎರಡನ್ನೂ ಸಂಯೋಜಿಸುತ್ತದೆ. ಶಿಕ್ಷಣ ತಜ್ಞರು ಹೇಳುವಂತೆ ಆರಂಭಿಕ ಬಾಲ್ಯವು ಜೀವನದುದ್ದಕ್ಕೂ ಉತ್ತಮ ಮೌಲ್ಯವನ್ನು ಕಲಿಸುತ್ತದೆ ಹಾಗೂ ಅಭಿವೃದ್ಧಿಗೂ ಸಹಾಯಕ ಎನ್ನಲಾಗಿದೆ.


5+3+3+4 ಶಿಕ್ಷಣ ಪದ್ಧತಿ ಎಂದರೇನು?


5+3+3+4 ಎಂಬುದು ಐದು ವರ್ಷಗಳ ಅಡಿಪಾಯದ ಹಂತವನ್ನು ಪ್ರತಿನಿಧಿಸಿದರೆ, 3 ವರ್ಷವನ್ನು ಪೂರ್ವ ಸಿದ್ಧತಾ ಹಂತ ಪ್ರತಿಪಾದಿಸಿದೆ ಹಾಗೆಯೇ 3 ವರ್ಷಗಳನ್ನು ಮಧ್ಯಮ ಹಂತ, 4 ವರ್ಷಗಳನ್ನು ದ್ವಿತೀಯ ಹಂತದಲ್ಲಿ ಮಕ್ಕಳು ಶಿಕ್ಷಣ ಪಡೆಯುವ ಉದ್ದೇಶವನ್ನು ಪ್ರತಿನಿಧಿಸಿದೆ.


ಇಲ್ಲಿ ಎರಡು ವಿಭಾಗಗಳ ಶಿಕ್ಷಣ ಪದ್ಧತಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ತಿಳಿಸಿದ್ದು 3 ವರ್ಷಗಳ ಅಂಗನವಾಡಿ/ಪ್ರಿ-ಸ್ಕೂಲ್ ಜೊತೆಗೆ 2 ವರ್ಷಗಳನ್ನು ಪ್ರಾಥಮಿಕ ಶಾಲೆಯ 1-2 ತರಗತಿಗಳಲ್ಲಿ ಮಕ್ಕಳು ಶಿಕ್ಷಣ ಪಡೆಯುವುದನ್ನು ಉದ್ದೇಶಿಸಿದೆ.


ಕೌಶಲ್ಯ ಅಭಿವೃದ್ಧಿ


ಕೆನಡಿಯನ್ ಅಂತರಾಷ್ಟ್ರೀಯ ಶಾಲೆಯ ಮುಖ್ಯಸ್ಥರಾದ ಡಾ. ಟೆಡ್ ಮೋಕ್ರಿಶ್ ಹೇಳುವಂತೆ ಪೂರ್ವ-ಪ್ರಾಥಮಿಕ ವರ್ಷಗಳಲ್ಲಿ ಕಲಿಕೆಯು ಆಟದೊಂದಿಗೆ ಆಧಾರಿತವಾಗಿರುತ್ತದೆ. ಮಕ್ಕಳ ಸಂಪೂರ್ಣ ಅಭಿವೃದ್ಧಿಯ ಮೇಲೆ ಕಲಿಕೆಯು ಗಮನ ಹರಿಸುತ್ತದೆ ಅಂದರೆ ಕೌಶಲ್ಯಗಳು, ಸಾಮಾಜಿಕ ಹಾಗೂ ಭಾವನಾತ್ಮಕ ಅಭಿವೃದ್ಧಿ, ಏಕಾಗ್ರತೆ, ಸಂವಹನ ಹಾಗೂ ಸಮಸ್ಯೆಯನ್ನು ಬಿಡಿಸುವ ಬುದ್ಧಿವಂತಿಕೆ ಇವೆಲ್ಲವನ್ನೂ ಆದಷ್ಟು ಸರಳವಾದ ಹಾಗೂ ಆಟಗಳನ್ನು ಯೋಜಿಸುವ ಮೂಲಕ ತಿಳಿಸಿಕೊಡಲಾಗುತ್ತದೆ ಎಂಬುದು ಮೋಕ್ರಿಶ್ ಹೇಳಿಕೆಯಾಗಿದೆ.


ಪೋಷಕರಿಗೂ ನೆಮ್ಮದಿ


ಇಂತಹ ಶಿಕ್ಷಣ ಪದ್ಧತಿಯಿಂದ ಪೋಷಕರು ಕೂಡ ಸಂತೋಷಭರತರಾಗಿದ್ದಾರೆ ಎಂಬುದು ಮೋಕ್ರಿಶ್ ಹೇಳಿಕೆಯಾಗಿದೆ. ಮಗುವಿಗೆ ಶಿಕ್ಷಣ ಒದಗಿಸುವಾಗ ಆಟದೊಂದಿಗೆ ಕಲಿಸುವುದರಿಂದ ಅವರಿಗೆ ಪಾಠಗಳು ಹೊರೆಯಾಗುವುದಿಲ್ಲ ಎಂಬುದು ಮೋಕ್ರಿಶ್ ಅವರ ಮಾತಾಗಿದೆ.


ಸರಕಾರ ಕೂಡ ಇಂತಹ ಶಿಕ್ಷಣ ಪದ್ಧತಿಗೆ ಕೈ ಜೋಡಿಸುತ್ತಿರುವ ಭರವಸೆಯನ್ನು ನಾವು ಹೊಂದಿರುವುದರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ದೈನಂದಿನ ತರಗತಿಗಳಂತೆಯೇ ನಡೆಸಲು ಸಾಧ್ಯವಾಗುತ್ತಿದೆ ಎಂಬುದು ಅವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ಹೋಮಿಯೋಪತಿ ವೈದ್ಯರಿಗೆ 4.5 ಕೋಟಿ ರೂಪಾಯಿ ವಂಚನೆ!


ನರ್ಸರಿ ಮಕ್ಕಳಿಗೆ ಶಿಕ್ಷಣ ಎಂಬುದು ಹೊರೆಯಾಗಬಾರದು ಹೆಚ್ಚಾಗಿ ಅವರ ಕಲಿಕೆಯಲ್ಲಿ ಆಟಗಳೇ ತುಂಬಿರಬೇಕು ಎಂಬುದು ಕರ್ನಾಟಕ ಪ್ರಿ-ಸ್ಕೂಲ್ ಕೌನ್ಸಿಲ್ ಕಾರ್ಯದರ್ಶಿ ಪೃಥ್ವಿಯವರ ಹೇಳಿಕೆಯಾಗಿದೆ. ಈ ಕಲಿಕಾ ಪದ್ಧತಿಯನ್ನು ಹೊಸ ವಿಧಾನದಲ್ಲಿ ಪ್ರಸ್ತುತಪಡಿಸಲಾಗುತ್ತಿದ್ದು ನರ್ಸರಿ ಮಕ್ಕಳನ್ನು ಹೊಸ ರೀತಿಯ ವಿಷಯಕ್ಕೆ ಒಳಪಡಿಸಲಾಗುತ್ತಿದೆ.


ಅಂತೆಯೇ ಸರಕಾರ ಕೂಡ ಮಕ್ಕಳಿಗೆ ಕಲಿಕೆಯನ್ನು ಸರಳಗೊಳಿಸುವ ಹಲವಾರು ಯೋಜನೆಗಳೊಂದಿಗೆ ಶಾಲೆಗಳೊಂದಿಗೆ ಕೈಜೋಡಿಸಬೇಕು ಎಂಬುದು ಪೃಥ್ವಿ ಆಶಯವಾಗಿದೆ.


ಈ ಶಿಕ್ಷಣ ಪದ್ಧತಿ ಮೊದಲೇ ಜಾರಿಗೆ ಬರಬೇಕಿತ್ತು


ಪೃಥ್ವಿ ಹೇಳುವಂತೆ ಈ ಶಿಕ್ಷಣ ಪದ್ಧತಿಯ ಬಗ್ಗೆ ಆಲೋಚನೆಗಳು ಇದು ಹೊಸದೇನಲ್ಲ. ಈ ಹಿಂದೆ ಮೂವರು ಶಿಕ್ಷಣ ಸಚಿವರುಗಳನ್ನು ತಾವು ಖುದ್ದು ಭೇಟಿಯಾಗಿ ಇಂತಹ ಶಿಕ್ಷಣ ವ್ಯವಸ್ಥೆಯ ಬಗ್ಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.


ಮಕ್ಕಳ ಶಾಲಾ ಕಲಿಕೆಯ ಪೂರ್ವ ಹಂತದಲ್ಲಿ ಅವರಿಗೆ ನೀಡುವ ಶಿಕ್ಷಣವು ಅವರ ಭವಿಷ್ಯದ ಭದ್ರಬುನಾದಿಗೆ ಸಹಕಾರಿಯಾಗಿದೆ ಎಂಬುದು ಪೃಥ್ವಿ ಅವರ ಮಾತಾಗಿದೆ. ಶಾಲಾ ಪೂರ್ವ ಕಲಿಕೆಯನ್ನು ಕಡ್ಡಾಯಗೊಳಿಸುವುದರಿಂದ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬೆಳೆಯುತ್ತಾರೆ ಮತ್ತು ಶಾಲೆಗಳಲ್ಲಿ ಹೆಚ್ಚಿನ ತರಗತಿಗಳಿಗೆ ಹೋಗುವಾಗ ಅವರ ಪಠ್ಯಪುಸ್ತಕಗಳಿಂದ ಭೀತರಾಗುವುದಿಲ್ಲ ಎಂಬುದು ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ಅಲೋಶಿಯಸ್ ಅವರ ಮಾತಾಗಿದೆ.


ಇದನ್ನೂ ಓದಿ: ಪುಲಿಟ್ಜರ್ ಪ್ರಶಸ್ತಿ ಸ್ವೀಕರಿಸಲು ಯುಎಸ್‌ಗೆ ಪ್ರಯಾಣಿಸದಂತೆ ಫೋಟೊ ಜರ್ನಲಿಸ್ಟ್‌ಗೆ ತಡೆ


ಈ ನಿಟ್ಟಿನಲ್ಲಿ ಶಾಲೆಗಳಲ್ಲಿರುವ ಶಿಕ್ಷಕರಿಗೂ ತರಬೇತಿ ಹಾಗೂ ಮಾರ್ಗದರ್ಶ ನೀಡುವುದು ಅಗತ್ಯವಾದುದು ಎಂಬುದು ಅಲೋಶಿಯಸ್ ಅವರ ಅಭಿಪ್ರಾಯವಾಗಿದೆ.

Published by:Sandhya M
First published: