HOME » NEWS » National-international » PARENTS FIND 5000 SYNTHETIC DRUG PILLS STUFFED INSIDE TOY RHHSN

ಮಗುವಿಗಾಗಿ ಖರೀದಿಸಿದ ಗೊಂಬೆಯಲ್ಲಿ 5000 ಡ್ರಗ್ಸ್ ಮಾತ್ರೆ ಪತ್ತೆ ಹಚ್ಚಿದ ಪೋಷಕರು!

ಅಮೆರಿಕದ ‘ಆಪ್ಟಾಯ್ಡ್ ಸಾಂಕ್ರಾಮಿಕ’ಕ್ಕೆ ಆಕ್ಸಿಕಾಂಟಿನ್ ಮತ್ತು ವಿಕೋಡಿನ್ ಜೊತೆಯಲ್ಲಿ ಈ ಡ್ರಗ್ಸ್ ಪ್ರಮುಖ ಕೊಡುಗೆ ನೀಡಿದೆ. ಇದು ದೇಶದ ಅತ್ಯಂತ ಗಂಭೀರ ಆರೋಗ್ಯ ಬಿಕ್ಕಟ್ಟು ಎಂದು ಪರಿಗಣಿಸಲಾಗಿದೆ. 2016 ರಲ್ಲಿ ಓಪಿಯಾಡ್ ಮಿತಿಮೀರಿದ ಸೇವನೆಯಿಂದ ಅಮೆರಿಕದಲ್ಲಿ 40,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು.

news18-kannada
Updated:February 25, 2021, 4:02 PM IST
ಮಗುವಿಗಾಗಿ ಖರೀದಿಸಿದ ಗೊಂಬೆಯಲ್ಲಿ 5000 ಡ್ರಗ್ಸ್ ಮಾತ್ರೆ ಪತ್ತೆ ಹಚ್ಚಿದ ಪೋಷಕರು!
ಗೊಂಬೆಯಲ್ಲಿ ಸಿಕ್ಕಿದ ಡ್ರಗ್ಸ್ ಮಾತ್ರೆಗಳು.
  • Share this:
ಅಮೆರಿಕದ ಅರಿಜೋನಾದ ದಂಪತಿ ಶುಕ್ರವಾರ ತಮ್ಮ ಮಗಳಿಗೆ ಅಂಗಡಿಯೊಂದರಿಂದ ಖರೀದಿಸಿದ ಆಟಿಕೆ ಫೆಂಟನಿಲ್ ಮಾತ್ರೆಗಳಿಂದ ತುಂಬಿರುವುದನ್ನು ಕಂಡು ತೀವ್ರ ಅಚ್ಚರಿಯಾಗಿದ್ದಾರೆ. ಉತ್ತರ ಫೀನಿಕ್ಸ್ ಪೋಷಕರು ಕಳೆದ ವಾರ ಎಲ್ ಮಿರಾಜ್​ನ ಮರುಬಳಕೆ ಆಟಿಕೆ ಅಂಗಡಿಯಿಂದ ಗ್ಲೋ ವಾರ್ಮ್ ಆಟಿಕೆ ಖರೀದಿಸಿದ್ದರು ಎಂದು ಫೀನಿಕ್ಸ್ ಪೊಲೀಸರು ಹೇಳಿದ್ದಾರೆ. ಆಟಿಕೆಯನ್ನು ಈ ಹಿಂದೆ ಬೇರೆಯವರು ಬಳಸಿದ್ದ ಕಾರಣ ಅದನ್ನು ಮಗಳಿಗೆ ಕೊಡುವ ಮೊದಲು ಅದನ್ನು ತೊಳೆಯಲು ಪೋಷಕರು ನಿರ್ಧರಿಸಿದರು. ಈ ಗೊಂಬೆಯಿಂದ ಲೈಟ್ ಬರುತ್ತದೆ ಹಾಗೂ ಸಂಗೀತ ಸಹ ಬರುತ್ತದೆ. ಈ ಹಿನ್ನೆಲೆ ಅದನ್ನು ತೊಳೆಯುವ ಮೊದಲು ಎಲೆಕ್ಟ್ರಾನಿಕ್ಸ್ ಅನ್ನು ತೆರೆಯಲು ಮುಂದಾಗಿದ್ದಾರೆ.

ಈ ವೇಳೆ ಆಟಿಕೆ ಸ್ವಚ್ಛಗೊಳಿಸುವಾಗ, ಅದರ ಹಿಂಭಾಗವನ್ನು ತೆರೆದಾಗ, 5000 ಕ್ಕೂ ಹೆಚ್ಚು ಫೆಂಟನಿಲ್ ಮಾತ್ರೆಗಳನ್ನು ತುಂಬಿದ ಸ್ಯಾಂಡ್ವಿಚ್ ಬ್ಯಾಗ್ ಅನ್ನು ಕಂಡಿದ್ದಾರೆ. ಗಾಬರಿಗೊಂಡ ಪೋಷಕರು ಡ್ರಗ್ಸ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಇನ್ನು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಫೀನಿಕ್ಸ್ ಪೊಲೀಸರು ಇತರರಿಗೆ ಈ ಕುರಿತು ಎಚ್ಚರಿಸಿದ್ದಾರೆ. ಬಳಸಿದ ವಸ್ತುಗಳನ್ನು ತೆಗೆದುಕೊಳ್ಳುವ ಮುನ್ನ ಪರೀಕ್ಷೆ ಮಾಡಿ ಮತ್ತು ಪರಿಶೀಲಿಸಿ ಎಂದು ಸಲಹೆ ನೀಡಿದ್ದಾರೆ. ಈ ಗೊಂಬೆಯ ಚಿತ್ರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಅಧಿಕಾರಿಗಳು, ''ಪೋಷಕರೇ ಗ್ರೇಟ್ ಜಾಬ್! ದಯವಿಟ್ಟು ನಿಮ್ಮ ಕುಟುಂಬದ ಸುರಕ್ಷತೆಗಾಗಿ ತೆರೆದ ಮತ್ತು ಬಳಸಿದ ಎಲ್ಲಾ ವಸ್ತುಗಳನ್ನು ಪರಿಶೀಲಿಸಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ'' ಎಂದು ಟ್ವೀಟ್ ಮಾಡಿದ್ದಾರೆ.

ಈ ಘಟನೆಯು ಸ್ಥಳೀಯರಿಗೆ ಆಘಾತವನ್ನುಂಟು ಮಾಡಿದೆ ಮತ್ತು ಇತರರು ಈ ಪೋಷಕರು ಗೊಂಬೆಯನ್ನು ತಮ್ಮ ಮಗಳಿಗೆ ಹಸ್ತಾಂತರಿಸುವ ಮೊದಲು ಅದನ್ನು ಪರಿಶೀಲಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಮಗುವಿಗೆ ಯಾವುದೇ ಹಾನಿಯಾಗಿಲ್ಲವಲ್ಲ ಎಂದು ಸಾಮಾಜಿಕ ಬಳಕೆದಾರರೊಬ್ಬರು ಖುಷಿ ಪಟ್ಟಿದ್ದಾರೆ.

ಇದನ್ನು ಓದಿ: ಪಕ್ಷದಲ್ಲಿ ಚರ್ಚಿಸದೆ ಹೇಗೆ ನಿರ್ಧಾರ ತೆಗೆದುಕೊಂಡರಿ? ನೀವೊಬ್ಬರೆ ನಿರ್ಧಾರ ಮಾಡೋಕೆ ನಾವ್ಯಾಕೆ ಇರಬೇಕು?; ಡಿಕೆಶಿ ವಿರುದ್ಧ ರಮೇಶ್ ಕುಮಾರ್ ಗರಂ

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಫೆಂಟನಿಲ್ ಅನ್ನು ‘ಅಮೆರಿಕದ ಅತ್ಯಂತ ಅಪಾಯಕಾರಿ ಡ್ರಗ್ಸ್' ಎಂದು ಪರಿಗಣಿಸಲಾಗಿದೆ. ಅಡ್ವಾನ್ಸ್ಡ್ ಕ್ಯಾನ್ಸರ್ ರೋಗಿಗಳ ತೀವ್ರವಾದ ನೋವಿಗೆ ಚಿಕಿತ್ಸೆ ನೀಡಲು ವೈದ್ಯರು ಇದನ್ನು ಹೆಚ್ಚಾಗಿ ಸೂಚಿಸುತ್ತಾರೆ. ಈ ಡ್ರಗ್ ಮಾರ್ಫೈನ್​ಗಿಂತ 100 ಪಟ್ಟು ಹೆಚ್ಚು ಪ್ರಬಲವಾಗಿದೆ ಎಂದು ನಂಬಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಸಣ್ಣ ಕಾಯಿಲೆಗಳಿಗೆ ಆರಂಭದಲ್ಲಿ ಶಿಫಾರಸು ಮಾಡಿದ ನಂತರ ಸಾವಿರಾರು ಅಮೆರಿಕನ್ನರು ಮಾದಕ ವ್ಯಸನಿಗಳಾಗಿದ್ದಾರೆ.

ಅಮೆರಿಕದ ‘ಆಪ್ಟಾಯ್ಡ್ ಸಾಂಕ್ರಾಮಿಕ’ಕ್ಕೆ ಆಕ್ಸಿಕಾಂಟಿನ್ ಮತ್ತು ವಿಕೋಡಿನ್ ಜೊತೆಯಲ್ಲಿ ಈ ಡ್ರಗ್ಸ್ ಪ್ರಮುಖ ಕೊಡುಗೆ ನೀಡಿದೆ. ಇದು ದೇಶದ ಅತ್ಯಂತ ಗಂಭೀರ ಆರೋಗ್ಯ ಬಿಕ್ಕಟ್ಟು ಎಂದು ಪರಿಗಣಿಸಲಾಗಿದೆ. 2016 ರಲ್ಲಿ ಓಪಿಯಾಡ್ ಮಿತಿಮೀರಿದ ಸೇವನೆಯಿಂದ ಅಮೆರಿಕದಲ್ಲಿ 40,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು ಮತ್ತು ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಫೆಂಟನಿಲ್​ನಿಂದ ಸಂಭವಿಸಿವೆ.
Published by: HR Ramesh
First published: February 25, 2021, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories