ಆರೋಗ್ಯಯುತ ಮಗುವಿಗಾಗಿ ಮಂತ್ರವಾದಿ ಮಾತು ಕೇಳಿ ಬದುಕಿದ್ದ ಮಗಳ ಕೊಂದ ಪೋಷಕರು

news18
Updated:August 7, 2018, 11:17 AM IST
ಆರೋಗ್ಯಯುತ ಮಗುವಿಗಾಗಿ ಮಂತ್ರವಾದಿ ಮಾತು ಕೇಳಿ ಬದುಕಿದ್ದ ಮಗಳ ಕೊಂದ ಪೋಷಕರು
news18
Updated: August 7, 2018, 11:17 AM IST
ನ್ಯೂಸ್​ 18 ಕನ್ನಡ

ನವದೆಹಲಿ (ಆ.7): ಆರೋಗ್ಯಯುತ ಮಗುವನ್ನು ಪಡೆಯುವ ಉದ್ದೇಶದಿಂದ ದಂಪತಿಗಳು ಬದುಕಿದ್ದ ಆರು ವರ್ಷದ ಮಗುವನ್ನು ಹತ್ಯೆ ಮಾಡಿ ಮನೆಯಲ್ಲಿ ಹೂತು ಹಾಕಿರುವ ಅಮಾನವೀಯ ಘಟನೆ ನಡೆದಿದೆ.

ದೆಹಲಿಯ ಚುಧಾಪುರ್​ ಗ್ರಾಮದ ದಂಪತಿಗಳು ಈ ಕೃತ್ಯ ಎಸಗಿದ್ದಾರೆ. ತಾರಾ ಎಂಬ ಆರು ವರ್ಷದ ಬಾಲಕಿ ಅಪೌಷ್ಟಿತೆ ಹಾಗೂ ರಿಕೆಟ್ಸ್​ ಕಾಯಿಲೆಯಿಂದ ಬಳಲುತ್ತಿದ್ದಳು. ಅವಳಿಗೆ ಹಲವು ವರ್ಷಗಳಿಂದಲೂ ಚಿಕಿತ್ಸೆ ಕೊಡಿಸಿದರೂ ಆಕೆ ಗುಣಮುಖವಾಗಿರಲಿಲ್ಲ

ಇದರಿಂದಾಗಿ ಮಂತ್ರವಾದಿಯ ಬಳಿ ಸಲಹೆ ದಂಪತಿಗಳು ತೆರಳಿದ್ದರು. ಆತ ಬದುಕಿರುವ  ಮಗಳನ್ನು ಕೊಂದು ಮನೆಯಲ್ಲಿಯೇ  ಹೂತು ಹಾಕಿದರೆ, ಮುಂದೆ ಆರೋಗ್ಯಯುತ ಮಗು ಹುಟ್ಟುತ್ತದೆ ಎಂದು ಸಲಹೆ ನೀಡಿದರು.  ಮಂತ್ರವಾದಿಯ ಈ ಸಲಹೆ ಕೇಳಿ ದಂಪತಿಗಳು ತಮ್ಮ ಮಗಳನ್ನು ಉಸಿರುಗಟ್ಟಿಸಿಕೊಂದಿದ್ದಾರೆ. ಮೃತ ಬಾಲಕಿಯ ನೆರೆಯ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಜೂನ್​ 4ರಂದು ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಬಾಲಕಿ ದೇಹ ಪತ್ತೆಯಾಗಿದ್ದು ಅದನ್ನು  ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆಕೆಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ಮರಣೋತ್ತರ ವರದಿ ತಿಳಿಸಿದೆ.

ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ಬಾಲಕಿ ಅಜ್ಜಿ. ಈ ಕೃತ್ಯದಲ್ಲಿ ತಾರಾ ಅಮ್ಮ ಭಾಗಿಯಾಗಿರಲಿಲ್ಲ. ಅಜ್ಜಿಯೇ ಈ ಎಲ್ಲಾ ಕೃತ್ಯವನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...