Pankhuri Shrivastava: 32 ವರ್ಷಕ್ಕೆ ಹಾರ್ಟ್​ ಅಟ್ಯಾಕ್​; ಭಾರತದ ಮಹಿಳಾ ಯುವ ಉದ್ಯಮಿ ಇನ್ನಿಲ್ಲ

ಪಂಖೂರಿ ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಡಿಸೆಂಬರ್​​ 2 ರಂದು ಎರಡನೇ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿದ್ದರು.

ಪಂಖೂರಿ

ಪಂಖೂರಿ

 • Share this:
  ಭಾರತದ ಉದಯೋನ್ಮಖ ಮಹಿಳಾ ಯುವ ಉದ್ಯಮಿ ಪಂಖೂರಿ ಶ್ರೀವಾಸ್ತವ (Pankhuri Shrivastava) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 32 ವರ್ಷದ ಅವರ ಸಾವಿಗೆ ಉದ್ಯಮ ಜಗತ್ತು ಸಂತಾಪ ವ್ಯಕ್ತಪಡಿಸಿದೆ. ಸಾಮಾಜಿಕ ಉದ್ಯಮ 'ಪಂಖೂರಿ' ಮತ್ತು ಮನೆ ಬಾಡಿಗೆ ಸ್ಟಾರ್ಟ್‌ಅಪ್ ಗ್ರಾಬ್‌ಹೌಸ್‌ನ (Grab house) ಸಂಸ್ಥಾಪಕಿ ಆಗಿ ಪಂಖೂರಿ ಹೆಸರು ಮಾಡಿದ್ದರು. ಅವರಿಗೆ ಇಂದು ಹಠಾತ್​ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಕಂಪನಿ ಟ್ವೀಟ್​ ಮೂಲಕ ತಿಳಿಸಿದೆ. ಡಿಸೆಂಬರ 24ರಂದು ಪಂಖೂರಿಗೆ ಹೃದಯ ಸ್ತಂಭನವಾಗಿದೆ (cardiac arrest).

  ಪಂಖೂರಿ ತಮ್ಮ ಹೆಸರಿನಲ್ಲಿಯೇ ಉದ್ಯಮವನ್ನು ಸ್ಥಾಪಿಸಿದ್ದರು. ಪಂಖುರಿ ಭಾರತದಲ್ಲಿ ಲೈವ್ ಸ್ಟ್ರೀಮಿಂಗ್, ಚಾಟ್ ಮತ್ತು ಮೈಕ್ರೋ-ಕೋರ್ಸ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಸಿಕ್ವೊಯಾ ಕ್ಯಾಪಿಟಲ್-ಬೆಂಬಲಿತ ಸಾಮಾಜಿಕ ಸಮುದಾಯ ವೇದಿಕೆಯಾಗಿದೆ.

  ಗ್ರಾಬ್‌ಹೌಸ್ ಸಂಸ್ಥಾಪಕಿ 

  ಇದಕ್ಕೆ ಮೊದಲು ಪಂಖೂರಿ ಶ್ರೀವಾಸ್ತವ ಅವರು 2012 ರಲ್ಲಿ 'ಗ್ರಾಬ್‌ಹೌಸ್' ಎಂಬ ಮನೆ-ಬಾಡಿಗೆ ಸ್ಟಾರ್ಟ್ಅಪ್ ಅನ್ನು ಸ್ಥಾಪಿಸಿದ್ದರು. ನಂತರ 2016 ರಲ್ಲಿ ಆನ್‌ಲೈನ್ ಮಾರುಕಟ್ಟೆ ಕ್ವಿಕರ್‌ಗೆ ಮಾರಾಟವಾದ ಗ್ರಾಬ್‌ಹೌಸ್ ಅನ್ನು ಸಿಕ್ವೊಯಾ ಕ್ಯಾಪಿಟಲ್, ಕಲಾರಿ ಕ್ಯಾಪಿಟಲ್ ಮತ್ತು ಇಂಡಿಯಾ ಕ್ವಾಟಿಯೆಂಟ್ ಬೆಂಬಲಿಸಿತು.

  ವಿವಿಧ ಉದ್ಯಮದ ಮೂಲಕ ಹೆಸರಾಗಿದ್ದ ಪಂಖೂರಿ

  ಪಂಖೂರಿ ಮೂಲತಃ ಝಾನ್ಸಿಯವರಾಗಿದ್ದು, ರಾಜೀವ್ ಗಾಂಧಿ ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವೀಧರರಾಗಿದ್ದರು. ನಂತರ ಟೀಚ್ ಫಾರ್ ಇಂಡಿಯಾದಲ್ಲಿ ಫೆಲೋಶಿಪ್ ಪೂರ್ಣಗೊಳಿಸಿದರು. ಅವರು 'ಪಂಖುರಿ' ಸ್ಥಾಪಿಸುವ ಮೊದಲು ಟೆಕ್ ಪ್ಲಾಟ್‌ಫಾರ್ಮ್‌ಗಳಾದ ಜೆಸ್ಟ್‌ಮನಿ ಮತ್ತು ಕ್ವಿಕರ್‌ನಲ್ಲಿ ವರ್ಷಪೂರ್ತಿ ಕೆಲಸ ಮಾಡಿದರುನಂತರ ಟೀಚ್ ಫಾರ್ ಇಂಡಿಯಾದಲ್ಲಿ ಫೆಲೋಶಿಪ್ ಪೂರ್ಣಗೊಳಿಸಿದರು. ಅವರು 'ಪಂಖುರಿ' ಸ್ಥಾಪಿಸುವ ಮೊದಲು ಟೆಕ್ ಪ್ಲಾಟ್‌ಫಾರ್ಮ್‌ಗಳಾದ ಜೆಸ್ಟ್‌ಮನಿ ಮತ್ತು ಕ್ವಿಕರ್‌ನಲ್ಲಿ ವರ್ಷಪೂರ್ತಿ ಕೆಲಸ ಮಾಡಿದರು

  ಪಂಖೂರಿ ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಡಿಸೆಂಬರ್​​ 2 ರಂದು ಎರಡನೇ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿದ್ದರು.

  ಇದನ್ನು ಓದಿ: ಹವಾಯಿಯಲ್ಲಿ ಹೆಚ್ಚುವರಿ ಭೂಮಿ ಖರೀದಿಸಿದ ಮಾರ್ಕ್ ಜುಕರ್‌ಬರ್ಗ್

  ಪಂಖೂರಿ ಸಾವಿಗೆ ದಿಗ್ಭ್ರಮೆ
  ಪಂಖೂರಿ ಹಠಾತ್ ಸಾವು ಅನೇಕರಿಗೆ ದಿಗ್ಭ್ರಮೆ ಮೂಡಿಸಿದೆ. ಈ ಸಂಬಂಧ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ ಕಲಾರಿ ಕ್ಯಾಪಿಟಲ್‌ನ ಸಂಸ್ಥಾಪಕಿ ವಾಣಿ ಕೋಲಾ, ಪಂಖೂರಿ ಇನ್ನಿಲ್ಲ ಎಂದು ತಿಳಿದಾಗ ನನಗೆ ಆಘಾತವಾಯಿತು. ಅವಳ ಆಲೋಚನೆಗಳಿಂದ ತುಂಬಿದ ಮತ್ತು ಉತ್ಸಾಹಭರಿತ ಮಹಿಳೆ ಆಕೆ ಆಗಿದ್ದಳು. ಆತ್ಮವಿಶ್ವಾಸದ ಹುಡುಗಿ ಇನ್ನಿಲ್ಲ ಎಂಬುದನ್ನು ನಂಬಲು ಆಗುತ್ತಿಲ್ಲ ಎಂದಿದ್ದಾರೆ

  ಇದೊಂದು ಆಘಾತಕಾರಿ ಸುದ್ದಿ. ಪಂಖೂರಿ ಶಕ್ತಿ ತುಂಬಿತ್ತು. ಎಷ್ಟು ಸಂಸ್ಥಾಪಕರು ತಮ್ಮ ಕಂಪನಿಗೆ ತಮ್ಮ ಹೆಸರನ್ನು ಇಡುವ ಧೈರ್ಯವನ್ನು ಹೊಂದಿದ್ದಾರೆ ಎಂದು VC ಫಂಡ್ ಇಂಡಿಯಾ ಕ್ವಾಟಿಯಂಟ್‌ನ ಸಂಸ್ಥಾಪಕ ಮತ್ತು 'ಪಂಖೂರಿ' ಹೂಡಿಕೆದಾರರಾದ ಆನಂದ್ ಲುನಿಯಾ ಅವರು ತಿಳಿಸಿದ್ದಾರೆ

  ಇದನ್ನು ಓದಿ: ವೈಕುಂಠ ಏಕಾದಶಿ ಸಂಭ್ರಮ; ತಿಮ್ಮಪ್ಪನ ದರ್ಶನಕ್ಕೆಂದು ಬಿಟ್ಟ 10,000 ಟಿಕೆಟ್ ಕೇವಲ 15 ನಿಮಿಷದಲ್ಲೇ ಸೋಲ್ಡ್‌ಜೌಟ್

  ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ

  ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಹೆಚ್ಚಿನ ಹೃದಯ ಸ್ತಂಭನ ಪ್ರಕರಣ ವರದಿಯಾಗುತ್ತಿದೆ. ಯುವಜನತೆಯಲ್ಲಿ ಯಾವ ಕಾರಣದಿಂದಾಗಿ ಈ ಹೃದಯಾಘಾತ ಹೆಚ್ಚುತ್ತಿದೆ ಎಂಬ ಕುರಿತು ವೈದ್ಯರು ಕೂಡ ಅನೇಕ ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಅನೇಕ ಸಲಹೆಗಳು ಕೂಡ ಕೇಳಿ ಬರುತ್ತಿದೆ. ಕೋವಿಡ್​ 19 ಸಮಯದಲ್ಲಿ ಬಂದ್​ ಆಗಿದ್ದ ಜಿಮ್​ಗಳು ಮತ್ತೆ ತೆರೆದಾಗ ಹೆಚ್ಚಿನ ಜನರು ವಿಶ್ರಾಂತಿಯಲ್ಲಿದ್ದ ಜನರು ತಕ್ಷಣಕ್ಕೆ ವ್ಯಾಯಾಮಗಳ ಮೊರೆ ಹೋದಾಗ ಹೆಚ್ಚಿನ ಒತ್ತಡಕ್ಕೆ ಸಿಲುಕಿ ಈ ರೀತಿಯ ಸಬ್​ ಕ್ಲಿನಿಕಲ್​ ಮಯೋ ಕಾರ್ಡಿಯೆಟಿಸ್ಟ್​ ಆಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ
  Published by:Seema R
  First published: