• Home
  • »
  • News
  • »
  • national-international
  • »
  • Pankaja Munde: ಮೋದಿಯೂ ನನ್ನನ್ನು ಮುಗಿಸಲು ಆಗದು! ಬಿಜೆಪಿ ನಾಯಕಿಯ ಸವಾಲು

Pankaja Munde: ಮೋದಿಯೂ ನನ್ನನ್ನು ಮುಗಿಸಲು ಆಗದು! ಬಿಜೆಪಿ ನಾಯಕಿಯ ಸವಾಲು

ಪಂಕಜಾ ಮುಂಡೆ, ಪ್ರಧಾನಿ ನರೇಂದ್ರ ಮೋದಿ

ಪಂಕಜಾ ಮುಂಡೆ, ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ನನ್ನಂತಹ ವಂಶಪಾರಂಪರಿಕ ರಾಜಕಾರಣಿಗಳನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ ಎಂದು ಬಿಜೆಪಿ ನಾಯಕಿ ಪಂಕಜಾ ಮುಂಡೆ ಖಾರದ ಮಾತನಾಡಿದ್ದಾರೆ.

  • Share this:

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ನನ್ನ ರಾಜಕೀಯ ಭವಿಷ್ಯವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ (Pankaja Munde) ಮಂಗಳವಾರ ಹೇಳಿದ್ದಾರೆ. ಜನರ ಮನಸ್ಸು ಮತ್ತು ಹೃದಯದಲ್ಲಿ ನಾನು ಆಡಳಿತ ನಡೆಸಬೇಕೆಂದು ಬಯಸಿದರೆ ಸ್ವತಃ ಮೋದಿ ಅವರೇ (PM Narendra Modi) ಬಂದರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೇ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಾಜವಂಶದ ರಾಜಕೀಯವು ಚಾಲ್ತಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಗಾದರೂ ಮಾಡಿ ರಾಜವಂಶದ ಆಳ್ವಿಕೆಯನ್ನು ಕೊನೆಗೊಳಿಸಲು ಬಯಸುತ್ತಾರೆ. ನಾನು ವಂಶಪಾರಂಪರಿಕ ರಾಜಕೀಯ ಕುಟುಂಬದಿಂದ ಬಂದವನು.  ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರು ನನ್ನಂತಹ ವಂಶಪಾರಂಪರಿಕ ರಾಜಕಾರಣಿಗಳನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ ಎಂದು ಬಿಜೆಪಿ ನಾಯಕಿ ಪಂಕಜಾ ಮುಂಡೆ ಖಾರದ ಮಾತನಾಡಿದ್ದಾರೆ.


ಆದರೆ ನಾನು ನಿಮ್ಮ ಮನಸ್ಸು ಮತ್ತು ಹೃದಯದಲ್ಲಿ ವಾಸಿಸುತ್ತಿದ್ದರೆ, ಯಾರೂ ನನ್ನನ್ನು ಮುಗಿಸಲು ಸಾಧ್ಯವಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ನನ್ನ ರಾಜಕೀಯ ಜೀವನವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜಾ ಮುಂಡೆ ಮಂಗಳವಾರ ಖಡಕ್ ಆಗಿ ಹೇಳಿದ್ದಾರೆ.


ಈ ಹೇಳಿಕೆ ಕುರಿತು ಬಿಜೆಪಿ ನಾಯಕರು ಹೇಳೋದೇನು?
ಇದರ ನಡುವೆಯೇ  ತಮ್ಮ ಗುರುತನ್ನು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿಯ ಹಿರಿಯ ನಾಯಕರೊಬ್ಬರು ಇಲ್ಲಿ, ನಾವು ಅವರ ಹೇಳಿಕೆಗಳ ಸಂದರ್ಭವನ್ನು ಗಮನಿಸಬೇಕು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ರಾಷ್ಟ್ರೀಯ ಬಿಜೆಪಿ ನಾಯಕಿಯೊಬ್ಬರು ಭಾಷಣದಲ್ಲಿ ಪ್ರಧಾನಿ ಮೋದಿಯನ್ನು ಉಲ್ಲೇಖಿಸುವುದನ್ನು ತಪ್ಪಿಸಬಹುದಿತ್ತು ಎಂದು ಸಹ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನೂ ಓದಿ: Breaking News: ಬಲವಂತದ ಗರ್ಭಧಾರಣೆ ಅತ್ಯಾಚಾರ ಎಂದ ಸುಪ್ರೀಂಕೋರ್ಟ್


ಎಲ್ಲ ಕಠಿಣ ಸವಾಲುಗಳನ್ನು ಗೆದ್ದ ಪ್ರಧಾನಿ ನರೇಂದ್ರ ಮೋದಿ
ಇದೇ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಗ್ಗೆ  ಧನಾತ್ಮಕವಾಗಿಯೂ ಬಿಜೆಪಿ ನಾಯಕಿ ಪಂಕಜಾ ಮುಂಡೆ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ  ಚಿಕ್ಕ ವಯಸ್ಸಿನಲ್ಲಿ ಎದುರಿಸಿದ್ದ ಎಲ್ಲ ಕಠಿಣ ಸವಾಲುಗಳನ್ನು ಗೆದ್ದಿದ್ದಾರೆ.  ಶಾಲೆಯ ಸಮವಸ್ತ್ರ ಖರೀದಿ ಮಾಡಲೂ ಸಹ ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕವರಿದ್ದಾಗ ಹಣ ಇರಲಿಲ್ಲ. ಆದರೂ ಈಗ ಈ ಹಂತಕ್ಕೆ ಏರಿದ್ದಾರೆ ಎಂದು  ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ನಾಯಕಿ ಪಂಕಜಾ ಮುಂಡೆ ಶ್ಲಾಘಿಸಿದ್ದಾರೆ.


ನಾನು ಭಾರತೀಯಳು, ನಾನೇಕೆ ಪಾಕ್​ಗೆ ಹೋಗಲಿ?: IAS ಅಧಿಕಾರಿಯ ಸೊಕ್ಕಿಗೆ ಬಾಲಕಿಯ ದಿಟ್ಟ ಉತ್ತರ!
ಬಿಹಾರ ಸರ್ಕಾರ (Bihar Govt) ನಡೆಸುತ್ತಿರುವ ಕಾರ್ಯಕ್ರಮವಾದ ಸ್ಕೂಲ್​ಗಿರಿಯಲ್ಲಿ ಹಿರಿಯ ಐಎಎಸ್ ನೀಡಿದ ವಿಚಿತ್ರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಐಎಎಸ್ ಅಧಿಕಾರಿಗೆ (IAS Officer), ಸರ್ಕಾರ ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್ (Sanitary Pad) ನೀಡಬಹುದೇ? ಎಂದೇ ಪ್ರಶ್ನಿಸಿದ್ದಾಳೆ. ಈ ಬಗ್ಗೆ ಸಿಟ್ಟಾದ ಐಎಎಸ್ ಅಧಿಕಾರಿ, ಜನರ ಬೇಡಿಕೆಗೆ ಕೊನೆ ಇಲ್ಲದಂತಾಗಿದೆ. ಜನರು ಯಾವಾಗಲೂ ಒಂದಿಲ್ಲೊಂದು ಕೇಳುತ್ತಾರೆ. ನಾಳೆ ಅವರು ಕಾಂಡೋಮ್ (Condom) ಕೇಳಲು ಪ್ರಾರಂಭಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Passport: ಆರು ವರ್ಷ ಪಾಸ್‌ಪೋರ್ಟ್‌ಗಾಗಿ ಹೋರಾಟ, ಕೊನೆಗೂ ಗೆದ್ದ ಅನಾಥ ಬಾಲಕ!


ವಿದ್ಯಾರ್ಥಿನಿ ವಿರುದ್ಧ ಅಧಿಕಾರಿ ಗರಂ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ, UNICEF, ಸೇವ್ ದಿ ಚಿಲ್ಡ್ರನ್ ಮತ್ತು ಪ್ಲಾನ್ ಇಂಟರ್ನ್ಯಾಷನಲ್ ಆಯೋಜಿಸಿದ್ದ 'ಸಶಕ್ತ್ ಬೇಟಿ, ಸಮೃದ್ಧ್ ಬಿಹಾರ್: ಟುವಾರ್ಡ್ಸ್​ ಎನ್ಹಾನ್ಸಿಂಗ್ ದ ಗರ್ಲ್ ಚೈಲ್ಡ್​' (ಸಬಲ ಹೆಣ್ಮಗು, ಸಮೃದ್ಧ ಬಿಹಾರ: ಹೆಣ್ಣುಮಗುವಿನ ಮೌಲ್ಯ ಹೆಚ್ಚಿಸುವ ಕಡೆಗೆ) ಕಾರ್ಯಕ್ರಮದಲ್ಲಿ ಬಾಲಕಿಯೊಬ್ಬಳು ಬಿಹಾರ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಅವರ ಬಳಿ ಸರ್ಕಾರ ₹ 20-30ಕ್ಕೆ ಸ್ಯಾನಿಟರಿ ಪ್ಯಾಡ್ ನೀಡಬಹುದೇ? ಎಂದು ಮುಗ್ಧವಾಗಿ ಪ್ರಶ್ನಿಸಿದ್ದಾಳೆ. ಆದರೆ ಈ ಪ್ರಶ್ನೆಯಿಂದ ಕೋಪಗೊಂಡ ಐಎಎಸ್​ ಅಧಿಕಾರಿ ಕೌರ್ ನಾಳೆ ಸರ್ಕಾರ ಜೀನ್ಸ್ ನೀಡಬೇಕು ಎನ್ನುತ್ತೀರಿ. ಬಳಿಕ ಸುಂದರವಾದ ಬೂಟುಗಳನ್ನು ಏಕೆ ಕೊಡಬಾರದು? ಎಂದು ಪ್ರಶ್ನಿಸಲಾರಂಭಿಸುತ್ತೀರಿ ಎಂದಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: