• Home
  • »
  • News
  • »
  • national-international
  • »
  • Joshimath: ಜೋಶಿಮಠ ಆಯ್ತು, ಈಗ ಅಲೀಗಢದಲ್ಲೂ ಹಲವು ಮನೆಗಳಲ್ಲಿ ಬಿರುಕು, ಆತಂಕದಲ್ಲಿ ಜನತೆ

Joshimath: ಜೋಶಿಮಠ ಆಯ್ತು, ಈಗ ಅಲೀಗಢದಲ್ಲೂ ಹಲವು ಮನೆಗಳಲ್ಲಿ ಬಿರುಕು, ಆತಂಕದಲ್ಲಿ ಜನತೆ

ಜೋಶಿಮಠ  ಬೆನ್ನಲ್ಲೇ ಅಲೀಗಡ್​ನ ಮನೆಗಳಲ್ಲಿ ಬಿರುಕು

ಜೋಶಿಮಠ ಬೆನ್ನಲ್ಲೇ ಅಲೀಗಡ್​ನ ಮನೆಗಳಲ್ಲಿ ಬಿರುಕು

ಜೋಶಿ ಮಠದ ಬೆನ್ನಲ್ಲೇ ಆಲೀಗಢದ ಕನ್ವರಿಗಂಜ್ ಪ್ರದೇಶದ ನಿವಾಸಿಗಳು ಕೂಡ ಇದೇ ರೀತಿಯ ಸಮಸ್ಯೆ ಬಗ್ಗೆ ಬಗ್ಗೆ ದೂರು ನೀಡಿದ್ದಾರೆ. " ಕಳೆದ ಕೆಲವು ದಿನಗಳಿಂದ, ನಮ್ಮ ಪ್ರದೇಶದ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಇದರಿಂದಾಗಿ ನಾವು ಭಯಭೀತರಾಗಿದ್ದೇವೆ. ಈ ಬಗ್ಗೆ ದೂರು ನೀಡಿದ್ದರೂ ನಗರಸಭೆ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆಯೇ ಹೊರೆತು ಯಾವುದೇ ಕ್ರಮಕ್ಕೆ ಮುಂದಾಗಿಲ್ಲಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Uttar Pradesh, India
  • Share this:

ಅಲೀಗಢ: ಉತ್ತರಾಖಂಡದ(Uttarakhand) ಪ್ರಸಿದ್ಧ ಪಟ್ಟಣ ಜೋಶಿಮಠದ (Joshimath) ಪ್ರದೇಶದಲ್ಲಿ ಭೂ ಕುಸಿತದ ಪ್ರಕರಣದಲ್ಲಿ ನೂರಾರು ಮನೆಗಳು, ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ( Uttar Pradesh)  ಅಲೀಗಢ ಪ್ರದೇಶದ ಕನ್ವರಿಗಂಜ್​ನ ಹತ್ತಾರು ಮನೆಗಳಲ್ಲಿ ಬಿರುಕು ಕಂಡು ಬಂದಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸರಕಾರದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ( Smart City scheme) ಪೈಪ್‌ಲೈನ್‌ ಹಾಕಲಾಗಿದ್ದು, ಈಗ ಅದು ಸೋರಿಕೆಯಾಗುತ್ತಿದ್ದು, ಬಿರುಕು ಬಿಟ್ಟಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.


ಜೋಶಿಮಠದಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಹಲವಾರು ಕುಟುಂಬಗಳು ತಮ್ಮ ಮನೆ ಮಠಗಳನ್ನು ತೊರೆದು ಹೋಗಿರುವ ಕಾರಣ ಆಲೀಗಢ ನಿವಾಸಿಗಳು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಭಾನುವಾರ, ಉತ್ತರಾಖಂಡ ಸರ್ಕಾರ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಜೋಶಿಮಠದ ಎಲ್ಲಾ ಒಂಬತ್ತು ಪುರಸಭೆಯ ವಾರ್ಡ್‌ಗಳನ್ನು " ಭೂಕುಸಿತ-ಕುಸಿತ ವಲಯ" ಎಂದು ಘೋಷಿಸಿದೆ. ಈಗಾಗಲೆ ಈ ಪ್ರದೇಶಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಲು ಕಾರ್ಯವನ್ನು ಆರಂಭಿಸಿದ್ದು, ಉತ್ತರಾಖಂಡ ಸರ್ಕಾರವು ಜನರ ಸ್ಥಳಾಂತರ ಮತ್ತು ಪುನರ್ವಸತಿ ಬಗ್ಗೆಯೂ ಕೆಲಸ ಮಾಡುತ್ತಿದೆ. ಗೌಚಾರ್ ಮತ್ತು ಪಿಪಾಲ್ಕೋಟಿಗಳಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.


Joshimath: ಕುಸಿಯುತ್ತಿರೋ ಜೋಶಿಮಠದಿಂದ 4,000 ಮಂದಿ ಶಿಫ್ಟ್, ಕಟ್ಟಡಗಳ ನೆಲಸಮ ಕಾರ್ಯ ಆರಂಭ!


ಆಲೀಗಢದಲ್ಲೂ ತಲೆದೂರಿದ ಸಮಸ್ಯೆ


ಜೋಶಿ ಮಠದ ಬೆನ್ನಲ್ಲೇ ಆಲೀಗಢದ ಕನ್ವರಿಗಂಜ್ ಪ್ರದೇಶದ ನಿವಾಸಿಗಳು ಕೂಡ ಇದೇ ರೀತಿಯ ಸಮಸ್ಯೆ ಬಗ್ಗೆ ಬಗ್ಗೆ ದೂರು ನೀಡಿದ್ದಾರೆ. " ಕಳೆದ ಕೆಲವು ದಿನಗಳಿಂದ, ನಮ್ಮ ಪ್ರದೇಶದ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಇದರಿಂದಾಗಿ ನಾವು ಭಯಭೀತರಾಗಿದ್ದೇವೆ. ಈ ಬಗ್ಗೆ ದೂರು ನೀಡಿದ್ದರೂ ನಗರಸಭೆ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆಯೇ ಹೊರೆತು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನಮಗೆ ಮನೆಗಳು ಕುಸಿದು ಬೀಳಬಹುದು ಆತಂಕ ಉಂಟಾಗಿದೆ " ಎಂದು ಸ್ಥಳೀಯ ನಿವಾಸಿ ಶಶಿ ಎಂಬುವವರು ಎಎನ್​ಐಗೆ ತಿಳಿಸಿದ್ದಾರೆ.


ಘಟನೆ ನಡೆದು 3-4 ದಿನಗಳಾಗಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರೂ ಈವರೆಗೆ ಯಾವುದೇ ಪ್ರಯೋಜನೆವಾಗಿಲ್ಲ. ನಾವೆಲ್ಲಾ ಅನಿವಾರ್ಯವಾಗಿ ಭಯದಲ್ಲೆ ಬದುಕುವಂತಾಗಿ ಎಂದು ಮತ್ತೊಬ್ಬ ಸ್ಥಳೀಯ ಅಫ್ಷಾ ಮಶ್ರೂರ್ ಎಂಬಾತ ನೋವು ತೋಡಿಕೊಂಡಿದ್ದಾರೆ.


ಅಗತ್ಯ ಕ್ರಮದ ಭರವಸೆ


ಘಟನೆ ಬಗ್ಗೆ ಸಂಬಂಧ ನಗರ ಪಾಲಿಕೆ ಹೆಚ್ಚುವರಿ ಆಯುಕ್ತ ರಾಕೇಶ್​ ಕುಮಾರ್​ರನ್ನು ಸಂಪರ್ಕಿಸಲಾಗಿದ್ದು ಅವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಸಿದ್ದು, ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. " ಕನ್ವರಿಗಂಜ್ ಪ್ರದೇಶದಲ್ಲಿ ಕೆಲವು ಮನೆಗಳಲ್ಲಿ ಬಿರುಕುಗಳು ಕಂಡುಬಂದಿವೆ ಎಂಬ ಮಾಹಿತಿಯನ್ನು ನಮಗೆ ತಿಳಿದುಬಂದಿದೆ. ಇದರ ಬಗ್ಗೆ ಸಂಪೂರ್ಣ ವಿಷಯ ನಮಗೆ ತಿಳಿದಿಲ್ಲ. ನಾವು ನಮ್ಮ ತಂಡವನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಿಸುತ್ತೇವೆ ಮತ್ತು ನಗರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳುತ್ತೇವೆ" ಎಂದು ಯಾದವ್ ಭರವಸೆ ನೀಡಿದ್ದಾರೆ.


ಅಲೀಗಢದ ಮನೆಗಳಲ್ಲಿ ಬಿರುಕು
ಅಲೀಗಢದ ಮನೆಗಳಲ್ಲಿ ಕಾಣಿಸಿಕೊಂಡ ಬಿರುಕು


ಉತ್ತರಖಂಡದ ಮತ್ತೊಂದು ಪಟ್ಟಣದಲ್ಲೂ ಬಿರುಕು


ಜೋಶಿಮಠವಲ್ಲದೆ ಉತ್ತರಾಖಂಡದ ಮತ್ತೊಂದು ಪಟ್ಟಣದ ಹಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಚಮೋಲಿ ಜಿಲ್ಲೆಯ ಜೋಶಿಮಠದಿಂದ ನೈಋತ್ಯಕ್ಕೆ 82 ಕಿಮೀ ದೂರದಲ್ಲಿರುವ ಕರ್ಣಪ್ರಯಾಗ ಎಂಬಲ್ಲಿ ಕೆಲವು ಮನೆಗಳು ದೊಡ್ಡ ಬಿರುಕುಗಳನ್ನು ಕಾಣಿಸಿಕೊಂಡಿವೆ. ಇದರಿಂದಾಗಿ ಹನ್ನೆರಡು ಕುಟುಂಬಗಳು ಮುನ್ಸಿಪಲ್ ಕೌನ್ಸಿಲ್‌ನ ಆಶ್ರಯದಲ್ಲಿ ಕೊರೆಯುವ ಚಳಿಯಲ್ಲೆ ರಾತ್ರಿಗಳನ್ನು ಕಳೆಯುವಂತಾಗಿದೆ. ಜೋಶಿಮಠದ ಸುಮಾರ 600 ಕಟ್ಟಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸುಮಾರು 4000 ಸಾವಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.


ಮುನ್ನೆಚ್ಚರಿಕೆ ವ್ಯವಸ್ಥೆ ಅಗತ್ಯವಿದೆ


ಇಂತಹ ವಿಪತ್ತಿನ ಸಂದರ್ಭದಲ್ಲಿ ಆಪತ್ತಿನಲ್ಲಿರುವ ಜನರನ್ನು ಎಚ್ಚರಿಸುವ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಘಟನೆಗಳು ತಕ್ಷಣ ಸಂಭಿವಿಸದರೆ ಸ್ಥಳೀಯ ಸಮುದಾಯಗಳನ್ನು ತ್ವರಿತವಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಯೋಜನೆಗಳು ಈ ವ್ಯವಸ್ಥೆಯಲ್ಲಿ ಸೇರಿಕೊಂಡಿರಬೇಕು. ಹಿಮನದಿಗಳು ಮತ್ತು ಸರೋವರಗಳಲ್ಲಿ ಹಲವಾರು ನಿಯತಾಂಕಗಳನ್ನು ಮೇಲ್ವಿಚಾರಣೆ ಮಾಡಲು ತಂತ್ರಜ್ಞಾನಗಳು ಲಭ್ಯವಿದೆ. ಅದರ ಆಧಾರ ಮೇಲೆ ಎಚ್ಚರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬಹುದು.


ಪ್ರಪಂಚದಾದ್ಯಂತದ ಹಲವಾರು ದೇಶಗಳು ಇವುಗಳನ್ನು ಜಾರಿಗೆ ತಂದಿವೆ. ನೇಪಾಳವು ಕನಿಷ್ಠ ಒಂದು ದಶಕದ ಹಿಂದೆ ಇವುಗಳನ್ನು ಸ್ಥಾಪಿಸಿಕೊಂಡಿದೆ. ನಾವು ಅಂತಹ ವ್ಯವಸ್ಥೆಯನ್ನು ಹೊಂದದಿರುವುದು ವಿಪರ್ಯಾಸ ಎಂದು ನವದೆಹಲಿಯ ಜಾಮಿಯಾ ಹಮ್ಮಾರ್ಡ್​ ವಿಶ್ವವಿದ್ಯಾಲಯದ ಪ್ರೊ-ಕುಲಪತಿಯಾಗಿ ಸೇವೆ ಸಲ್ಲಿಸುತ್ತಿರುವ ಗ್ಲೇಶಿಯಾಲಜಿಸ್ಟ್ ಸೈಯದ್ ಇಕ್ಬಾಲ್ ಹಸ್ನೈನ್ ತಿಳಿಸಿದ್ದಾರೆಂದು ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

Published by:Rajesha B
First published: