paneer tikka: ಅಮೆರಿಕ ಚುನಾವಣೆಗೆ ಮುನ್ನ ಟ್ವೀಟರ್​ನಲ್ಲಿ ಟ್ರೆಂಡ್​ ಆದ ಪನ್ನೀರ್​ ಟಿಕ್ಕಾ; ಕಾರಣವೇನು?

ಭಾರತೀಯ ಮೂಲದ ಕಮಲ್​ ಹ್ಯಾರಿಸ್​ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಮಗೆ ಇಡ್ಲಿ ಸಾಂಬಾರ್​ ಹಾಗೂ ಪನ್ನೀರ್​ ಟಿಕ್ಕಾ ಎಂದರೆ ಇಷ್ಟ ಎಂದಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅಮೆರಿಕ ಅಧ್ಯಕ್ಷಿಯ ಚುನಾವಣೆಗೆ ಇನ್ನೊಂದು ದಿನ ಬಾಕಿ ಉಳಿದಿದೆ. ಡೋನಾಲ್ಡ್​ ಟ್ರಂಪ್, ಜೋ ಬಿಡನ್​, ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಹೆಸರುಗಳು ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ್ದಾರೆ. ಈ ನಡುವೆ ಭಾರತದ ಜನಪ್ರಿಯ ತಿನಿಸಾದ ಪನ್ನೀರ್​ ಟಿಕ್ಕಾ ಕೂಡ ಟ್ವೀಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದೆ. ಇದಕ್ಕೆ ಅನೇಕ ಭಾರತೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಪ್ರಮೀಳಾ ಜಯಪಾಲ್ ಅವರ ಟ್ವೀಟ್​. ಡೆಮಾಕ್ರಟಿಕ್​ ಉಪಾಧ್ಯಕ್ಷರ ನಾಮ ನಿರ್ದೇಶನಗೊಂಡಿರುವ ಕಮಲಾ ಹ್ಯಾರಿಸ್​ ಅವರಿಗೆ ಗೌರವಾರ್ಥವಾಗಿ ಪ್ರಮೀಳಾ ಪನ್ನೀರ್​ ಟಿಕ್ಕಾ ತಯಾರಿಸಿ ಟ್ವೀಟ್​ ಮಾಡಿದ್ದಾರೆ. ಭಾರತೀಯ ಮೂಲದ ಕಮಲಾ​ ಹ್ಯಾರಿಸ್​ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಮಗೆ ಇಡ್ಲಿ- ಸಾಂಬಾರ್​ ಹಾಗೂ ಪನ್ನೀರ್​ ಟಿಕ್ಕಾ ಎಂದರೆ ಇಷ್ಟ ಎಂದಿದ್ದರು.  ಪ್ರಮೀಳಾ ಈ ಟ್ವೀಟ್​ ಮಾಡುತ್ತಿದ್ದಂತೆ ದೇಸಿ ನೆಟಿಜನ್​ ಕೂಡ ಬಾಯಿ ರುಚಿ ಹೆಚ್ಚಿದೆ. ಇದರ ಜೊತೆಗೆ ಅವರು ಕೂಡ ಪನ್ನೀರ್​ ಟಿಕ್ಕಾ ಕುರಿತ ಅಭಿಪ್ರಾಯ ಹಾಗೂ ತಿನಿಸಿನ ಬಗ್ಗೆ ಟ್ವಿಟರ್​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

  ಚುನಾವಣೆಗೆ ಮುನ್ನದಿನ ಆರಾಮವಾದ ಆಹಾರ ತಯಾರಿಸೋಣ. ಕಮಲಾ ಹ್ಯಾರೀಸ್​ ನಾಳಿನ ಗೆಲುವಿನಾರ್ಥ ಈ ಅಡುಗೆ ಎಂದಿದ್ದಾರೆ. ಅಲ್ಲದೇ , ಹ್ಯಾರಿಸ್​ ಪರ ಹೋಗಿ ಮತ ಚಲಾಯಿಸುವುದನ್ನು ಮರೆಯದಿರೋಣ ಎಂಬ ಟ್ವೀಟ್​ಗಳು ಸಾಕಷ್ಟು ವೈರಲ್​ ಆಗಿದೆ.  Published by:Seema R
  First published: