ಆಧಾರ್​ಗೆ ಪಾನ್​​​ ಲಿಂಕ್​ ಮಾಡಿಲ್ವಾ? ಹಾಗಿದ್ದರೆ 10 ಸಾವಿರ ದಂಡ ಕಟ್ಟಲು ತಯಾರಾಗಿರಿ

PAN card: ಆದರೀಗ ಕೇಂದ್ರ ನೇರ ತೆರಿಗೆ ಮಂಡಳಿ ಹೊಸ ಸೂಚನೆಯನ್ನು ಹೊರಡಿಸಿದ್ದು, ಮಾರ್ಚ್ 31 ರ ಗಡುವಿನೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ತಿಳಿಸಿದೆ. ಇಲ್ಲದೆ ಹೋದಲ್ಲಿ ಆದಾಯ ತೆರಿಗೆ ಇಲಾಖೆಯು ನಿಷ್ಕ್ರಿಯ ಶಾಶ್ವತ ಖಾತೆ ಸಂಖ್ಯೆಯನ್ನು ಬಳಸಿದ್ದಕ್ಕಾಗಿ ಪ್ಯಾನ್​ ಕಾರ್ಡ್​ ಬಳಕೆದಾರನ ಮೇಲೆ 10 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದೆ.

ಆಧಾರ್-ಪ್ಯಾನ್

ಆಧಾರ್-ಪ್ಯಾನ್

 • Share this:
  ಆಧಾರ್​ ಕಾರ್ಡ್​ಗೆ ಪಾನ್​ ಕಾರ್ಡ್​​ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಇಲ್ಲದಿದ್ದರೆ ಆ ಪಾನ್​ ಕಾರ್ಡ್​ ಅಮಾನ್ಯವಾಗಲಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139AA ಅಡಿಯಲ್ಲಿ ಆಧಾರ್​ನೊಂದಿಗೆ ಜೋಡಣೆಯಾಗದ ಪಾನ್​ ಸಂಖ್ಯೆಯನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ 2018 ರಿಂದ ಹೇಳುತ್ತಾ ಬಂದಿದೆ.

  ಅದರಂತೆ ಆಧಾರ್​ ಮತ್ತು ಪಾನ್​ ಕಾರ್ಡ್​ ಲಿಂಕ್​ ಮಾಡದೇ ಇರುವ ಗ್ರಾಹಕರಿಗೆ ಸಮಯಾವಕಾಶವನ್ನು ನೀಡಿತ್ತು. ಮಾರ್ಚ್​ 31 ರ ಒಳಗೆ ಲಿಂಕ್​ ಮಾಡಿಕೊಳ್ಳುವಂತೆ  ಸೂಚಿಸಿತ್ತು. ಪಾನ್​ ಕಾರ್ಡ್​ ಆಧಾರ್​ನೊಂದಿಗೆ ಲಿಂಕ್​ ಆಗದಿದ್ದರೆ, ಆನ್​ಲೈನ್​ನಲ್ಲಿ ITR ಫೈಲ್​ ಸಲ್ಲಿಸಲಾಗುವುದಿಲ್ಲ.ಇದರಿಂದ ತೆರಿಗೆ ಮರುಪಾವತಿ ಸಮಸ್ಯೆ ಉಂಟಾಗಲಿದೆ. ಹಾಗೆಯೇ ಪಾನ್​ ಕಾರ್ಡ್​ ಇನ್​ವಾಲಿಡ್​ ಆಗಲಿದೆ ಎಂದು ತಜ್ಞರು ಹೇಳಿದ್ದರು.

  ಆದರೀಗ ಕೇಂದ್ರ ನೇರ ತೆರಿಗೆ ಮಂಡಳಿ ಹೊಸ ಸೂಚನೆಯನ್ನು ಹೊರಡಿಸಿದ್ದು, ಮಾರ್ಚ್ 31 ರ ಗಡುವಿನೊಳಗೆ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ತಿಳಿಸಿದೆ. ಇಲ್ಲದೆ ಹೋದಲ್ಲಿ ಆದಾಯ ತೆರಿಗೆ ಇಲಾಖೆಯು ನಿಷ್ಕ್ರಿಯ ಶಾಶ್ವತ ಖಾತೆ ಸಂಖ್ಯೆಯನ್ನು ಬಳಸಿದ್ದಕ್ಕಾಗಿ ಪಾನ್​ ಕಾರ್ಡ್​ ಬಳಕೆದಾರನ ಮೇಲೆ 10 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದೆ. ಈ ಹಿಂದೆ ಲಿಂಕ್ ಮಾಡದ ಎಲ್ಲಾ ಪಾನ್ ಕಾರ್ಡ್‌ಗಳನ್ನು ನಿಷ್ಕ್ರಿಯ ಎಂದು ಘೋಷಿಸುವುದಾಗಿ ಆದಾಯ ತೆರಿಗೆ ಇಲಾಖೆ ಘೋಷಿಸಿದೆ.

  ಆಧಾರ್​ ಪಾನ್​ ಲಿಂಕ್​ ಮಾಡದ ಗ್ರಾಹಕರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್​ 272ಬಿ ಪ್ರಕಾರ 10 ಸಾವಿರ ರೂಪಾಯಿ ದಂಡವನ್ನು ಕಟ್ಟಬೇಕಾಗಬಹುದು ಎಂದು ಬ್ಯಾಂಕ್​ ಬಜಾರ್​ ಸಿಇಓ ಆದಿಲ್​ ಶೆಟ್ಟಿ ಹೇಳಿದ್ದಾರೆ.

  ಈ ಹಿಂದೆ ಜೂನ್​ 30, 2019ರ ಒಳಗೆ ಒಳಗಾಗಿ ಆಧಾರ್​ ಫ್ಯಾನ್​ ಕಾಡ್​ ಲಿಂಕ್​ ಕಡ್ಡಾಯವಾಗಿ ಮಾಡಬೇಕು ಎಂದು ಸೂಚನೆ ಹೊರಡಿಸಿತ್ತು. ನಂತರ ಡಿ,31, 2019ರ ವರೆಗೆ ಸಮಯವಕಾಶ ನೀಡಿತ್ತು. ಈ ವೇಳೆಗೆ ಸಾಕಷ್ಟು ಜನರು ಆಧಾರ್ ಕಾರ್ಡ್​​ನೊಂದಿಗೆ ಫ್ಯಾನ್​ಕಾರ್ಡ್ ಅನ್ನು ಜೋಡನೆ ಮಾಡಿದ್ದರು.  First published: