ಇಸ್ಲಮಾಬಾದ್ (ಸೆಪ್ಟೆಂಬರ್ 01); ಕಳೆದ 20 ವರ್ಷಗಳಿಂದ ಅಧಿಕಾರದಿಂದ ವಂಚಿರತಾಗಿದ್ದ ತಾಲಿಬಾನಿಗಳು (Taliban) ಕೊನೆಗೂ ಇಂದು ಅಫ್ಘಾನಿಸ್ತಾನದಲ್ಲಿ (Afghanistan) ಪ್ರಜಾಪ್ರಭುತ್ವವನ್ನು (Democracy) ಕೊನೆಗೊಳಿಸಿ ಮತ್ತೆ ಅಧಿಕಾರವನ್ನು ಹಿಡಿದಿದ್ದಾರೆ. ಆದರೆ, ಕಳೆದ 20 ವರ್ಷಗಳಿಂದ ತಾಲಿಬಾನ್ ಉಗ್ರರನ್ನು ಪೋಷಿಸಿದ್ದು ಯಾರು? ಎಂಬ ಪ್ರಶ್ನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಾಗ್ಗೆ ಏಳುತ್ತಿದ್ದರೂ ಸಹ ಪಾಕಿಸ್ತಾನ (Pakistan) ಈ ಬಗ್ಗೆ ಮೌನ ವಹಿಸಿತ್ತು. ಆದರೆ, ಇಂದು ಪಾಕಿಸ್ತಾನದ ಸಚಿವನೊಬ್ಬ ಕಳೆದ 20 ವರ್ಷಗಳಿಂದ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದಲ್ಲಿ ನೆಲೆಕೊಟ್ಟು ಅವರನ್ನು ಪೋಷಿಸಿದ್ದು ಮತ್ತು ಅವರಿಗೆ ಶಿಕ್ಷಣ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದು ಪಾಕಿಸ್ತಾನ ಸರ್ಕಾರವೇ ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಕೋಲಾಹಲವನ್ನೇ ಸೃಷ್ಟಿಸಿದೆ.
ಟಿವಿ ಸಂದರ್ಶನದಲ್ಲಿ ಹೇಳಿಕೆ ನೀಡಿರುವ ಪಾಕಿಸ್ತಾನದ ಸಚಿವ ಶೇಕ್ ರಶೀದ್, "ನಾವು ತಾಲಿಬಾನ್ ನಾಯಕರ ಪಾಲಕರು. ನಾವು ಅವರನ್ನು ದೀರ್ಘಕಾಲ ನೋಡಿಕೊಂಡಿದ್ದೇವೆ. ಅವರು ಪಾಕಿಸ್ತಾನದಲ್ಲಿ ಆಶ್ರಯ, ಶಿಕ್ಷಣ ಮತ್ತು ಮನೆ ಪಡೆದರು. ನಾವು ಅವರಿಗಾಗಿ ಎಲ್ಲವನ್ನೂ ಮಾಡಿದ್ದೇವೆ "ಎಂದು ಹೇಳುವ ಮೂಲಕ ಸಂಚಲವನ್ನು ಸೃಷ್ಟಿಸಿದ್ದಾರೆ.
ಈ ಹಿಂದೆ, ಸಿಎನ್ಎನ್-ನ್ಯೂಸ್ 18 ತಾಲಿಬಾನ್ ಮತ್ತು ಪಾಕಿಸ್ತಾನ ಸರ್ಕಾರದ ನಡುವಿನ ಚರ್ಚೆಗಳಲ್ಲಿ ಪಾಕಿಸ್ತಾನದ ಐಎಸ್ಐ ಭಾರೀ ಭಾಗಿಯಾಗಿರುವುದನ್ನು ದೃ ಢಪಡಿಸಿತ್ತು. ಸಿಎನ್ಎನ್ ನ್ಯೂಸ್18 ನಿಂದ ಹೊರತಂದಿದ್ದ ವಿಶೇಷ ಫೋಟೋಗಳು ಐಎಸ್‌ಐ ಮುಖ್ಯಸ್ಥ ಹಮೀದ್ ಫೈಜ್ ಕಂದಹಾರ್‌ನಲ್ಲಿ ಉನ್ನತ ತಾಲಿಬಾನ್ ನಾಯಕರನ್ನು ಭೇಟಿಯಾಗುವುದನ್ನು ತೋರಿಸಿತ್ತು. ಅಲ್ಲದೆ, ಈ ಹಿಂದೆ ಪಾಕಿಸ್ತಾನವು ಕಾಬೂಲ್‌ನಲ್ಲಿ ಹೊಸ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿ ಮಾಡಿತ್ತು.
ಹಮೀದ್ ಫೈಜ್, ತಾಲಿಬಾನ್ ನಾಯಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಮತ್ತು ಇತರ ನಾಯಕರೊಂದಿಗೆ, ಶನಿವಾರದಂದು ಕಾಬೂಲ್‌ಗೆ ಬರದಾರ್ ನಿರ್ಗಮಿಸುವ ಮುನ್ನ ಕಂದಹಾರ್‌ನಲ್ಲಿ ನಮಾಜ್ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಅದಕ್ಕೂ ಮುನ್ನ, ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು ಅಫ್ಘಾನಿಸ್ತಾನದಲ್ಲಿ "ಧನಾತ್ಮಕ ಪಾತ್ರವನ್ನು ವಹಿಸಲು ನಿರ್ಧರಿಸಿದ್ದಾರೆ" ಎಂದು ಹೇಳಿದ್ದರು.
ಏಕೆಂದರೆ ಅವರು ತಾಲಿಬಾನ್ ದಂಗೆಕೋರರು ಮತ್ತು ಯುದ್ಧ-ಧ್ವಂಸಗೊಂಡ ದೇಶದ ಮಾಜಿ ಆಡಳಿತಗಾರರಿಗೆ ಪರಸ್ಪರ ಸಮಾಲೋಚನೆಯ ನಂತರ ಎಲ್ಲವನ್ನೂ ಒಳಗೊಂಡ ರಾಜಕೀಯ ಸರ್ಕಾರವನ್ನು ರಚಿಸುವಂತೆ ಮನವಿ ಮಾಡಿದರು. ಅಫ್ಘಾನಿಸ್ತಾನದಲ್ಲಿರುವ ನಮ್ಮ ರಾಯಭಾರಿ ಬೇರೆ ಬೇರೆ ಅಫ್ಘಾನ್ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅದಲ್ಲದೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಒಮ್ಮೆ ತಾಲಿಬಾನ್ ಅನ್ನು "ಸಾಮಾನ್ಯ ನಾಗರಿಕರು" ಎಂದು ಕರೆದಿದದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಪಾಕಿಸ್ತಾನದ ಸಚಿವ ಶೇಕ್ ರಶೀದ್ ತಾಲಿಬಾನಿಗಳ ಆಶ್ರಯದಾತರು ತಾವೇ ಎಂದು ಬಹಿರಂಗವಾಗಿ ಹೇಳಿಕೊಂಡಿರುವುದು ಪಾಕಿಸ್ತಾನದ ಮತ್ತೊಂದು ಮುಖವನ್ನು ನಿಜದ ಸ್ವಭಾವವನ್ನು ಅನಾವರಣ ಮಾಡಿದೆ ಎಂದು ಹಲವರು ಆರೋಪಿಸಿದ್ದಾರೆ.
ಯುಎಸ್ ಬೆಂಬಲಿತ ಅಫ್ಘಾನ್ ಸರ್ಕಾರ ಪತನಗೊಂಡು ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ ನಂತರ ಆಗಸ್ಟ್ 15 ರಂದು ತಾಲಿಬಾನ್ ದಂಗೆಕೋರರು ಕಾಬೂಲ್ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡರು. ಇದೀಗ ಅಫ್ಘನ್ ಸಂಪೂರ್ಣವಾಗಿ ತಾಲಿಬಾನಿಗಳ ಆಡಳಿತದಲ್ಲಿದ್ದು, ಜನ ಆತಂಕದಲ್ಲಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ