• Home
  • »
  • News
  • »
  • national-international
  • »
  • Pakistan: ಪಾಕಿಸ್ತಾನಕ್ಕೂ ಎದುರಾಗಿದ್ಯಂತೆ ಮಹಾ ಸಂಕಷ್ಟ! 'ಮಾಡಿದ್ದುಣ್ಣೋ ಮಾರಾಯಾ' ಅನ್ನೋದು ಇದಕ್ಕೆ ಅನಿಸುತ್ತೆ!

Pakistan: ಪಾಕಿಸ್ತಾನಕ್ಕೂ ಎದುರಾಗಿದ್ಯಂತೆ ಮಹಾ ಸಂಕಷ್ಟ! 'ಮಾಡಿದ್ದುಣ್ಣೋ ಮಾರಾಯಾ' ಅನ್ನೋದು ಇದಕ್ಕೆ ಅನಿಸುತ್ತೆ!

ಪಾಕಿಸ್ತಾನಕ್ಕೆ ಇಂಧನ ಪೂರೈಕೆ ನಿಲ್ಲಿಸಿದ ಯುರೋಪ್

ಪಾಕಿಸ್ತಾನಕ್ಕೆ ಇಂಧನ ಪೂರೈಕೆ ನಿಲ್ಲಿಸಿದ ಯುರೋಪ್

ನಮ್ಮ ಶತ್ರು ಎಂದೆ ಪರಿಗಣಿಸಲಾಗುವ ನಮ್ಮ ನೆರೆಯ ದೇಶವಾದ ಪಾಕಿಸ್ತಾನ ಹಿಂದಿನಿಂದಲೂ ಭಾರತಕ್ಕೆ ಕೆಡುಕನ್ನೇ ಬಯಸುತ್ತ ಬಂದಿದೆ ಎಂದರೆ ತಪ್ಪಾಗಲಾರದು. ಆದರೆ, ಈಗ ಆ ದೇಶ ತಾನು ಯಾವುದರಿಂದ ಸುರಕ್ಷಿತವಾಗಿರಬೇಕೆಂದು ಅಂದುಕೊಂಡು ದಶಕದ ಹಿಂದೆ ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಿತ್ತೋ ಈಗ ಅದರಿಂದಾಗಿಯೇ ಕಷ್ಟ ಪಡುವಂತಾಗಿದೆ.

ಮುಂದೆ ಓದಿ ...
  • Share this:

ನಾವು ಮಾಡುವ ಪ್ರತಿ ಕ್ರಿಯೆಗಳು ತಮ್ಮದೆ ಆದ ಪ್ರತಿಫಲಗಳನ್ನು ಹೊಂದಿರುತ್ತದೆ ಎನ್ನಲಾಗುತ್ತದೆ. ಅದರಂತೆ ಯಾರೇ ಆಗಲಿ ಒಳಿತು ಮಾಡುವ ಬದಲು ಸದಾ ಕೆಟ್ಟದ್ದನ್ನೆ ಮಾಡುತ್ತಿದ್ದರೆ ಅವರಿಗೂ ಕೆಟ್ಟದ್ದೆ ಆಗುತ್ತದೆ ಎಂಬ ನಂಬಿಕೆ ನಮ್ಮ ಭಾರತೀಯರಲ್ಲಿದೆ. ಇದೀಗ ನಮ್ಮ ಶತ್ರು (Enemy) ಎಂದೆ ಪರಿಗಣಿಸಲಾಗುವ ನಮ್ಮ ನೆರೆಯ ದೇಶವಾದ ಪಾಕಿಸ್ತಾನ (Pakistan) ಹಿಂದಿನಿಂದಲೂ ಭಾರತಕ್ಕೆ (Inida) ಕೆಡುಕನ್ನೇ ಬಯಸುತ್ತ ಬಂದಿದೆ ಎಂದರೆ ತಪ್ಪಾಗಲಾರದು. ಆದರೆ, ಈಗ ಆ ದೇಶ ತಾನು ಯಾವುದರಿಂದ ಸುರಕ್ಷಿತವಾಗಿರಬೇಕೆಂದು ಅಂದುಕೊಂಡು ದಶಕದ ಹಿಂದೆ ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಿತ್ತೋ ಈಗ ಅದರಿಂದಾಗಿಯೇ ಕಷ್ಟ ಪಡುವಂತಾಗಿದೆ.


ರಷ್ಯಾದಿಂದ ಅನಿಲ ಇಂಧನ ಶಕ್ತಿಯನ್ನು ಖರೀದಿಸುವುದನ್ನು ನಿಲ್ಲಿಸಿದ ಐರೋಪ್ಯ ದೇಶಗಳು
ಅಸಲಿಗೆ, ಒಂದೆಡೆ, ರಷ್ಯಾ ಉಕ್ರೇನ್ ಮೇಲೆ ಸೈನಿಕ ಕಾರ್ಯಾಚರಣೆ ನಡೆಸಿದ್ದನ್ನು ವಿರೋಧಿಸಿ ಮಾಸ್ಕೋಗೆ ಪಾಠ ಕಲಿಸಬೇಕೆಂಬ ದೃಷ್ಟಿಯಿಂದ ಐರೋಪ್ಯ ಒಕ್ಕೂಟದ ದೇಶಗಳು ರಷ್ಯಾದಿಂದ ಅನಿಲ ಇಂಧನ ಶಕ್ತಿಯನ್ನು ಖರೀದಿಸುವುದನ್ನು ನಿಲ್ಲಿಸಿದವು. ಪರಿಣಾಮ, ಯುರೋಪ್ ದೇಶಗಳಲ್ಲಿ ನಿತ್ಯ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಲು ಪ್ರಾರಂಭಿಸಿದವು. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ತಮಗೆ ಬೇಕಾದ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಸರಬರಾಜಿಗಾಗಿ ಇಟಲಿ ಹಾಗೂ ಕತಾರ್ ಮೂಲದ ಸರಬರಾಜುಗಾರರಿಗಾಗಿ ಎದುರು ನೋಡಿದರು.


ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಸೌಲಭ್ಯಕ್ಕಾಗಿ ಹೂಡಿಕೆ ಮಾಡಿದ ಪಾಕಿಸ್ತಾನ
ಇನ್ನೊಂದೆಡೆ, ಪಾಕಿಸ್ತಾನ ದೇಶವು ದಶಕಗಳ ಹಿಂದೆಯೇ ಭವಿಷ್ಯದಲ್ಲಿ ಉದ್ಭವವಾಗಬಹುದಾದ ಬೆಲೆ ಹೆಚ್ಚಳವನ್ನು ಸಮರ್ಥವಾಗಿ ಎದುರಿಸಬೇಕೆಂಬ ದೃಷ್ಟಿಯಿಂದ ಅದು ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಸೌಲಭ್ಯಕ್ಕಾಗಿ ಅಪಾರ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿತ್ತು. ಅದಕ್ಕಾಗಿ ಇಟಲಿ ಮತ್ತು ಕತಾರ್ ಸರಬರಾಜುದಾರರೊಂದಿಗೆ ದೀರ್ಘಕಾಲಿನ ಒಪ್ಪಂದ ಮಾಡಿಕೊಂಡಿದೆ. ಆದರೆ, ಸದ್ಯ ಈಗ ಉಂಟಾಗಿರುವ ಪರಿಸ್ಥಿತಿ ಏನೆಂದರೆ ಅಂತಹ ಕೆಲವು ಸರಬರಾಜುದಾರರು ಯುರೋಪ್ ಮಾರುಕಟ್ಟೆಯಲ್ಲಿರುವ ಹಣಕ್ಕೆ ಆಕರ್ಷಿತರಾಗಿದ್ದು ಪಾಕಿಸ್ತಾನಕ್ಕೆ ಇಂಧನ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ಪಾಕಿಸ್ತಾನ ತಾನು ಯಾವ ಪರಿಸ್ಥಿತಿ ಅನುಭವಿಸಬಾರದು ಎಂದು ಕೊಂಡಿತ್ತೋ ಈಗ ಆ ಪರಿಸ್ಥಿತಿಯನ್ನೇ ಎದುರು ನೋಡುವಂತಾಗಿದೆ.


ಹಣದ ತೀವ್ರ ಕೊರತೆ ಅನುಭವಿಸುತ್ತಿರುವ ಪಾಕ್
ಕಳೆದ ಈದ್ ರಜೆಯ ದಿನಗಳಲ್ಲಿ ರಾಷ್ಟ್ರವು ಬ್ಲ್ಯಾಕೌಟ್ ಆಗದಂತೆ ಅಲ್ಲಿನ ಸರ್ಕಾರವು ನೂರು ಮಿಲಿಯನ್ ಡಾಲರ್ ತೆತ್ತು ಅನಿಲ ಇಂಧನದ ಒಂದು ಶಿಪ್ಮೆಂಟ್ ಅನ್ನು ಮಾರುಕಟ್ಟೆಯಿಂದ ಪಡೆದುಕೊಂಡಿತ್ತು. ಅದರಿಂದಾಗಿ ಹಾಗೂ ಹೀಗೂ ಮಾಡಿ ಸರ್ಕಾರ ಜನರ ನಡುವೆ ತನ್ನ ಮುಖವನ್ನು ಉಳಿಸಿಕೊಂಡಿತಾದರೂ ಮುಂದಿನ ದಿನಗಳು ಸುಗಮವಾಗಿಲ್ಲ. ಸದ್ಯ ಪಾಕಿಸ್ತಾನವು ಹಣದ ತೀವ್ರ ಕೊರತೆ ಅನುಭವಿಸುತ್ತಿದ್ದು ಅದರ ದೇಶೀಯ ಇಂಧನ ಬೇಡಿಕೆಯ ಮೊತ್ತ ಐದು ಬಿಲಿಯನ್ ಯುಎಸ್ ಡಾಲರ್ ಮೊತ್ತಕ್ಕೆ ಬಂದು ತಲುಪಿದೆ.


ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಮಾಣ ಏನಿಲ್ಲವೆಂದರೂ ಎರಡು ಪಟ್ಟು ಹೆಚ್ಚಾಗಿದೆ. ಇನ್ನು ಪಾಕಿಸ್ತಾನವು ತನ್ನನ್ನು ಬೇಲ್ ಔಟ್ ಮಾಡುವಂತೆ ಐಎಂಎಫ್ ಮುಂದೆ ಹೋಗಿದ್ದರೂ ಐಎಂಎಫ್ ಹಾಕಿರುವ ಷರತ್ತುಗಳು ಪಾಕಿಸ್ತಾನಕ್ಕೆ ನುಂಗಲಾರದ ತುತ್ತುಗಳಾಗಿ ಪರಿಣಮಿಸುತ್ತಿವೆ. ಐಎಂಎಫ್ ಪಾಕಿಸ್ತಾನಕ್ಕೆ ತಾನು ತನ್ನ ಜನರಿಗೆ ಇಂಧನದ ಮೇಲೆ ನೀಡುತ್ತಿರುವ ಸಬ್ಸಿಡಿಗಳನ್ನು ತೆರವುಗೊಳಿಸುವ ಷರತ್ತು ವಿಧಿಸಿದೆ ಎನ್ನಲಾಗಿದೆ.


ನಿತ್ಯ ಹನ್ನೆರಡು ಗಂಟೆಗಳ ಕಾಲ ವಿದ್ಯುತ್ ಸ್ಥಗಿತ
ಈ ಎಲ್ಲ ವಿದ್ಯಮಾನಗಳಿಂದಾಗಿ ದೇಶದ ಕೆಲವು ಭಾಗಗಳು ಸದ್ಯ ನಿತ್ಯ ಹನ್ನೆರಡು ಗಂಟೆಗಳಷ್ಟು ಯೋಜಿತ ವಿದ್ಯುತ್ ಸ್ಥಗಿತವನ್ನು ಅನುಭವಿಸುತ್ತಿದ್ದು ಈಗಾಗಲೇ ದೇಶದಲ್ಲಿ ಆವರಿಸಿರುವ ಬಿಸಿಗಾಳಿಯ ಪರಿಸ್ಥಿತಿಯಿಂದಾಗಿ ಫ್ಯಾನ್, ಎಸಿಗಳ ಕಾರ್ಯನಿರ್ವಹಣೆ ಇಲ್ಲದೆ ಜನರು ಇನ್ನಷ್ಟು ತೀವ್ರ ಪರಿಣಾಮ ಅನುಭವಿಸುವಂತಾಗಿದೆ.


ಇದನ್ನೂ ಓದಿ: Baby Tortured: 2 ವರ್ಷದ ಮಗುವಿಗೆ ಚಿತ್ರ ಹಿಂಸೆ! ಬೆಚ್ಚಿಬೀಳಿಸೋ ಘಟನೆ ವಿಡಿಯೋದಲ್ಲಿ ಸೆರೆ


ಈ ಮಧ್ಯೆ ದೇಶದ ಮಾಜಿ ಪ್ರಧಾನಿ ಆಗಾಗ ದೇಶದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ರ್‍ಯಾಲಿಗಳನ್ನು ಆಯೋಜಿಸುತ್ತಿರುವುದು, ಪ್ರತಿಭಟನೆಗಳನ್ನು ನಡೆಸುತ್ತಿರುವುದು ಹಾಗೂ ಅದಕ್ಕಾಗಿ ಜನರನ್ನು ಒಗ್ಗೂಡಿಸುತ್ತಿರುವುದು ಪ್ರಸ್ತುತ ಸರ್ಕಾರಕ್ಕೆ ಹೆಚ್ಚಿನ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ. ದೇಶದ ಟಿವಿ ಚಾನೆಲ್ಲುಗಳಲ್ಲಿ ನಿತ್ಯ ದೇಶದ ಪರಿಸ್ಥಿತಿ ಬಗ್ಗೆ ಚರ್ಚೆಯಾಗುತ್ತಲೇ ಇದೆ.


ಈ ಬಗ್ಗೆ ಪಾಕ್ ಪ್ರಧಾನಿಯವರ ಟ್ವೀಟ್
ಅಲ್ಲಿನ ಸರ್ಕಾರ ಈಗ ವಿದ್ಯುತ್ ಶಕ್ತಿ ಉಳಿಸಲೆಂದು ಹಲವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ವಾರದಂದು ಸರ್ಕಾರವು ಪಬ್ಲಿಕ್ ಸರ್ವಂಟ್ ಗಳನ್ನು ಶನಿವಾರ ಡ್ಯೂಟಿ ಮಾಡದಂತೆ ಅವರಿಗೆ ರಜೆ ನೀಡಿತು ಹಾಗೂ ಸುರಕ್ಷತಾ ಸಿಬ್ಬಂದಿಗಳ ಬಜೆಟ್ ಅನ್ನು 50% ಕ್ಕೆ ಇಳಿಸಲಾಯಿತು. ಏಪ್ರಿಲ್ ತಿಂಗಳಿನಲ್ಲಿ ಈದ್ ಹಬ್ಬಕ್ಕೂ ಮುಂಚೆ ಅಲ್ಲಿನ ಪ್ರಧಾನಿ ಶೆಹ್ಬಾಜ್ ಷರೀಫ್ "ಜನರು ಅನುಭವಿಸುತ್ತಿರುವ ಕಷ್ಟದ ಬಗ್ಗೆ ನನಗೆ ಅರಿವಿದೆ" ಎಂದು ಟ್ವಿಟ್ ಮಾಡಿ ಅವರು ತಮ್ಮ ಸರ್ಕಾರದ ಅಧಿಕಾರಿಗಳಿಗೆ ವಿದೇಶಗಳಿಂದ ಅನಿಲ ಇಂಧನ ಖರೀದಿಸಲು ಆದೇಶ ನೀಡಿರುವುದಾಗಿ ಹೇಳಿದ್ದೇನೆ ಎಂದಿದ್ದರು. ಇದಕ್ಕೂ ಮುಂಚೆ ಅವರು ಪಾಕಿಸ್ತಾನದ ಬಳಿ ವಿದೇಶ ಅನಿಲವನ್ನು ಖರೀದಿ ಮಾಡಲು ಹಣವಿರುವುದರ ಬಗ್ಗೆ ಅನುಮಾನವನ್ನೂ ಸಹ ವ್ಯಕ್ತಪಡಿಸಿದ್ದರು.


ಅನಿಲದ ತೀವ್ರ ಕೊರತೆ ಅನುಭವಿಸುತ್ತಿರುವ ದೇಶಗಳು
ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಷ್ಯಾದ ನಡೆಯನ್ನು ವಿರೋಧಿಸಿ ಅದರ ಮೇಲೆ ಜಾಗತಿಕವಾಗಿ ಅನೇಕ ಪ್ರತಿಬಂಧಗಳನ್ನು ಹೇರಲಾಗಿದೆ. ಯುರೋಪ್ ತನಗೆ ಅವಶ್ಯಕವಾಗಿರುವ ನ್ಯಾಚುರಲ್ ಗ್ಯಾಸ್ ಅನ್ನು ಹೆಚ್ಚಾಗಿ ರಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ರಷ್ಯಾದ ಅನಿಲವನ್ನು ತಿರಸ್ಕರಿಸಿದ ನಂತರ ಯುರೋಪ್ ದೇಶಗಳಿಗೆ ಬೇರೆಡೆಯಿಂದ ಅನಿಲದ ಅವಶ್ಯಕತೆ ಉದ್ಭವವಾಗಿದ್ದು ಜಾಗತಿಕವಾಗಿ ಇತರೆ ಸರಬರಾಜುದಾರರು ಹೆಚ್ಚಿನ ಬೆಲೆಗಳಿಗೆ ಆ ದೇಶಗಳಿಗೆ ಈಗ ಅನಿಲ ಸರಬರಾಜು ಮಾಡುತ್ತಿದ್ದಾರೆ. ಇದರಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ಪಾಕಿಸ್ತಾನಗಳಂತಹ ದೇಶಗಳು ಅನಿಲದ ತೀವ್ರ ಕೊರತೆ ಅನುಭವಿಸುತ್ತಿವೆ.


ಇದನ್ನೂ ಓದಿ: Aadhar: ಸರ್ಕಾರದ ವೆಬ್‌ಸೈಟ್‌ನಿಂದ ಕೋಟಿಗಟ್ಟಲೆ ರೈತರ ಆಧಾರ್ ಮಾಹಿತಿ ಸೋರಿಕೆ


ಅಷ್ಟಕ್ಕೂ ಪಾಕಿಸ್ತಾನವು ಹಿಂದೆ 2017 ರಲ್ಲಿ ಇಟಲಿ ಮೂಲದ ಗನ್ವರ್ ಗ್ರೂಪ್ ಎಂಬ ಸಂಸ್ಥೆಯೊಂದಿಗೆ ನ್ಯಾಚುರಲ್ ಗ್ಯಾಸ್ ಅನ್ನು ತನ್ನ ದೇಶಕ್ಕೆ ಸರಬರಾಜು ಮಾಡುವಂತೆ ದೀರ್ಘ ಕಾಲಿನ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈಗ ಆ ಸಂಸ್ಥೆಯು ಪಾಕಿಸ್ತಾನದೊಂದಿಗೆ ಮಾಡಲಾದ ಒಪ್ಪಂದದಡಿಯಲ್ಲಿ ಕಳುಹಿಸಬೇಕಾಗಿದ್ದ ಹನ್ನೆರಡು ಶಿಪ್ಮೆಂಟ್ ಗಳನ್ನು ರದ್ದುಗೊಳಿಸಿದೆ, ಕಾರಣ ಯುರೋಪ್ ನಲ್ಲಿ ಏರಿಕೆಯಾಗುತ್ತಿರುವ ಅನಿಲದ ಬೇಡಿಕೆಯೇ ಇದರ ಪ್ರಮುಖ ಹಿನ್ನೆಲೆಯಾಗಿದೆ. ಇದೆಲ್ಲ ವಿದ್ಯಮಾನಗಳಿಂದಾಗಿ ಪಾಕಿಸ್ತಾನ ಸದ್ಯ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದು ಮುಂದಿನ ದಾರಿಗಾಗಿ ಚಡಪಡಿಸುತ್ತಿರುವುದು ಕಂಡುಬರುತ್ತಿದೆ.

Published by:Ashwini Prabhu
First published: