ಪ್ರೇಮಿಯ ಭೇಟಿಯಾಗಲು ಭಾರತಕ್ಕೆ ಬಂದ Pakistan ಯುವತಿ ಜೈಲಿಗೆ!

ಪಾಕಿಸ್ತಾನದ ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಭೇಟಿಯಾಗಲು ತನ್ನ ಮನೆಯಿಂದ ಭಾರತಕ್ಕೆ ಹೊರಟಿದ್ದಳು. ಈ ನಿಟ್ಟಿನಲ್ಲಿ ಆಕೆ ಮೊದಲು ದುಬೈಗೆ ಹೋಗಿದ್ದಳು. ಅಲ್ಲಿಂದ ನೇಪಾಳದ ಕಠ್ಮಂಡುವಿನ ಹೋಟೆಲ್‌ನಲ್ಲಿ ಮೂರು ದಿನ ತಂಗಿದ್ದಳು. ಇದಾದ ನಂತರ ಆಕೆ ನೇಪಾಳಿ ಯುವಕ ಮತ್ತು ತನ್ನ ಪ್ರಿಯಕರನ ಸಹೋದರನೊಂದಿಗೆ ಭಾರತವನ್ನು ಪ್ರವೇಶಿಸುತ್ತಿದ್ದಳು. ಹೀಗಿರುವಾಗ ಆಕೆ SSBಯ ಬ;ರಗೆ ಬಿದ್ದಿದ್ದಾಳೆ.

ಪಾಕಿಸ್ತಾನಿ ಯುವತಿ ಖದೀಜಾ ನೂರ್

ಪಾಕಿಸ್ತಾನಿ ಯುವತಿ ಖದೀಜಾ ನೂರ್

 • Share this:
  ನವದೆಹಲಿ(ಆ.10):  ಇಂಡೋ-ನೇಪಾಳದ ಸೀತಾಮರ್ಹಿಯ ಗಡಿಯಲ್ಲಿ ಬಂಧನಕ್ಕೊಳಗಾದ ಪಾಕಿಸ್ತಾನಿ ಯುವತಿ (Pakistani Woman) ಖದೀಜಾ ನೂರ್ ಅವರನ್ನು ವಿಚಾರಣೆಯ ನಂತರ ಎಸ್‌ಎಸ್‌ಬಿ ಅಂತಿಮವಾಗಿ ಜೈಲಿಗೆ ಕಳುಹಿಸಿದೆ. ಅನುಮತಿಯಿಲ್ಲದೆ ಭಾರತದ (India) ಗಡಿ ಪ್ರವೇಶಿಸಿದ್ದಕ್ಕಾಗಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಖಲೀದಾ ನೂರ್ ಪಾಸ್‌ಪೋರ್ಟ್ (Padssport) ಹೊಂದಿದ್ದರು, ಆದರೆ ವೀಸಾ ಹೊಂದಿಲ್ಲ ಎಂಬುವುದು ಗಮನಿಸಬೇಕಾದ ವಿಚಾರ. ಈ ಸಂಬಂಧ ಪಾಕಿಸ್ತಾನಿ ಮಹಿಳೆ ವಿರುದ್ಧ ಸೀತಾಮರ್ಹಿಯ ಸುರ್ಸಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಈಕೆ ತನ್ನ ಪ್ರಿಯಕರನನ್ನು ಭೇಟಿಯಾಗಲು ಮನೆಯಿಂದ ಭಾರತಕ್ಕೆ ಬಂದಿದ್ದಳು ಎನ್ನಲಾಗಿದೆ. ಇದಕ್ಕಾಗಿ ಮೊದಲು ದುಬೈಗೆ ಹೋಗಿದ್ದಳು. ಅಲ್ಲಿಂದ ನೇಪಾಳದ ಕಠ್ಮಂಡುವಿನ ಹೋಟೆಲ್‌ನಲ್ಲಿ ಮೂರು ದಿನ ತಂಗಿದ್ದಳು. ಇದಾದ ನಂತರ ಆಕೆ ನೇಪಾಳಿ ಯುವಕ ಮತ್ತು ತನ್ನ ಪ್ರಿಯಕರನ ಸಹೋದರನೊಂದಿಗೆ ಭಾರತವನ್ನು ಪ್ರವೇಶಿಸುತ್ತಿದ್ದಳು. ಹೀಗಿರುವಾಗ ಆಕೆ SSB ಬಲೆಗೆ ಬಿದ್ದಿದ್ದಾಳೆ. ಪಾಕಿಸ್ತಾನಿ ಯುವತಿಯೊಬ್ಬಳನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ಆ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಸದ್ಯ ಈ ಪಾಕಿಸ್ತಾನಿ ಯುವತಿಯ ಒ್ರೇಮಕತೆ ಪ್ರತಿಯೊಬ್ಬರೂ ಚರ್ಚಿಸಲಾರಂಭಿಸಿದ್ದಾರೆ.

  ಇದನ್ನೂ ಓದಿ:  Elon Musk: ಪಾಕಿಸ್ತಾನವನ್ನೂ ಖರೀದಿಸಿ! ಎಲಾನ್ ಮಸ್ಕ್​ಗೆ ಆಫರ್

  ಆಗಸ್ಟ್ 8 ರಂದು ಪಾಕಿಸ್ತಾನಿ ಯುವತಿ ಖಲೀದಾ ನೂರ್ ಅವರನ್ನು ನೇಪಾಳದ ಸೀತಾಮರ್ಹಿಯ ಭಿಟ್ಟಾ ಮೋರ್‌ನಿಂದ ಎಸ್‌ಎಸ್‌ಬಿ ಬಂಧಿಸಿತ್ತು ಎಂಬುದು ಗಮನಾರ್ಹ. ಇದಕ್ಕೂ ಮುನ್ನ ನೇಪಾಳ ಗಡಿಯಲ್ಲಿ ಚೀನಾದ ಪ್ರಜೆಯೊಬ್ಬನನ್ನು ಬಂಧಿಸಿರುವ ಬಗ್ಗೆ ಆ ಪ್ರದೇಶದಲ್ಲಿ ಕೋಲಾಹಲ ಉಂಟಾಗಿತ್ತು. ಇಂತಹ ಹೊತ್ತಿನಲ್ಲಿ ಪಾಕಿಸ್ತಾನಿ ಯುವತಿಯೊಬ್ಬಳ ಬಂಧನದಿಂದ ಭಾರತ ಮತ್ತು ನೇಪಾಳದ ಭದ್ರತೆಯ ಬಗ್ಗೆ ಮತ್ತೊಮ್ಮೆ ದೊಡ್ಡ ಪ್ರಶ್ನೆ ಉದ್ಭವಿಸಿದೆ.

  ಎಸ್‌ಎಸ್‌ಬಿಯ ವಿಚಾರಣೆಯಲ್ಲಿ ಪಾಕಿಸ್ತಾನಿ ಮಹಿಳೆಯನ್ನು ಫೈಸಲಾಬಾದ್‌ನ ನಿವಾಸಿ ಖದೀಜಾ ನೂರ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನಿ ಯುವತಿಯಿಂದ ಎಟಿಎಂ ಕಾರ್ಡ್, ನೇಪಾಳಿ ಮತ್ತು ಪಾಕಿಸ್ತಾನಿ ಮೊಬೈಲ್ ಸಿಮ್ ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನಿ ಯುವತಿಯೊಂದಿಗೆ ಇಬ್ಬರು ಯುವಕರನ್ನು ಸಹ ಎಸ್‌ಎಸ್‌ಬಿ ವಶಕ್ಕೆ ತೆಗೆದುಕೊಂಡಿದೆ. ಒಬ್ಬ ಯುವಕ ಹೈದರಾಬಾದ್ ಮೂಲದವನಾಗಿದ್ದು, ಮತ್ತೊಬ್ಬ ಯುವಕ ನೇಪಾಳ ಮೂಲದವನು ಎನ್ನಲಾಗಿದೆ. SSB ಎಲ್ಲರನ್ನೂ ವಿಚಾರಣೆಗೊಳಪಡಿಸಿ ತನಿಖೆ ನಡೆಸುತ್ತಿದೆ.

  ಇದನ್ನೂ ಓದಿ:  Pakistan: ಹಿಂದೂ ದೇವಾಲಯ ಪುನರ್​ ಸ್ಥಾಪಿಸಲು ಮುಂದಾದ ನೆರೆಯ ಪಾಕಿಸ್ತಾನ!

  ಸಾಮಾಜಿಕ ಮಾಧ್ಯಮದ ಮೂಲಕ ಸ್ನೇಹ

  ಸಿಕ್ಕಿರುವ ಮಾಹಿತಿ ಪ್ರಕಾರ ಪಾಕಿಸ್ತಾನಿ ಮಹಿಳೆ ಖದೀಜಾ ನೂರ್ ಮತ್ತು ಹೈದರಾಬಾದ್ ನಿವಾಸಿ ಅಹ್ಮದ್ ಸಾಮಾಜಿಕ ಜಾಲತಾಣಗಳ ಮೂಲಕ ಭೇಟಿಯಾಗಿದ್ದಾರೆ. ನೇಪಾಳದಿಂದ ಹೈದರಾಬಾದ್‌ಗೆ ಮರಳಬೇಕಿತ್ತು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ನೂರ್ ಬಳಿ ಆಧಾರ್ ಕಾರ್ಡ್ ಸೇರಿದಂತೆ ನಕಲಿ ದಾಖಲೆಗಳು ಪತ್ತೆಯಾಗಿವೆ. ಇದಾದ ಬಳಿಕ ಗಡಿ ಭದ್ರತಾ ಏಜೆನ್ಸಿಯವರು ಮೂವರನ್ನೂ ವಶಕ್ಕೆ ಪಡೆದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಮೂವರನ್ನೂ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

  ಮದುವೆ ನಿರ್ಧಾರಕ್ಕೆ ತಂದೆ-ತಾಯಿ ಇಬ್ಬರೂ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ, ನೂರ್ ಪಾಕಿಸ್ತಾನದಿಂದ ಭಾರತಕ್ಕೆ ಬರಲು ನಿರ್ಧರಿಸಿದಾಗ. ಪೊಲೀಸರ ಪ್ರಕಾರ, ಆರಂಭದಲ್ಲಿ ಇದು ಬೇಹುಗಾರಿಕೆಯ ಪ್ರಕರಣ ಎಂದು ಗಡಿ ಪೊಲೀಸರು ಶಂಕಿಸಿದ್ದಾರೆ, ನಂತರ ಇಬ್ಬರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
  Published by:Precilla Olivia Dias
  First published: