ಮನೆಯವರ ಜೊತೆ ಜಗಳ ಆಗಿದ್ದಕ್ಕೆ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದ ಬಾಲಕ, ದೇಶ ಬಿಡುವಂಥಾ ಜಗಳ ಏನಪ್ಪಾ?

ಮನೆಯವರ ಜೊತೆ ಸಣ್ಣ ಜಗಳವನ್ನೇ ದೊಡ್ಡದೆಂದು ಪರಿಗಣಿಸಿದ ಪಾಕಿಸ್ತಾನದ 15 ವರ್ಷದ ಬಾಲಕ ಮನೆ ಬಿಟ್ಟು  ಬಂದು ಭಾರತದ ಗಡಿ ದಾಟಿದ್ದಾನೆ. ಈ ಹುಡುಗನನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿಗಳು ಗುಜರಾತ್ನ ಕಚ್ ಜಿಲ್ಲೆಯ ಖಾವ್ದಾದ ಅಂತಾರಾಷ್ಟ್ರೀಯ ಗಡಿಯಲ್ಲಿ ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮನೆಯವರೊಂದಿಗಿನ ಮುನಿಸಿಗೆ ಮನೆ ಬಿಟ್ಟು ಭಾರತದ ಗಡಿ ದಾಟಿದ ಪಾಕ್ ಬಾಲಕ ಮನೆಯವರೊಂದಿಗಿನ ಮುನಿಸಿಗೆ ಮನೆ ಬಿಟ್ಟು ಭಾರತದ ಗಡಿ ದಾಟಿದ ಪಾಕ್ ಬಾಲಕ ನಾವು ಚಿಕ್ಕವರಿದ್ದಾಗ ಮನೆಯವರೊಂದಿಗೆ ಜಗಳ ಮಾಡಿ ಮನೆ ಬಿಟ್ಟು ಹೋಗುತ್ತೇವೆ ಎಂದು ಹೆದರಿಸುತ್ತಿದ್ದ ನೆನಪು. ಒಂದು ಕುಟುಂಬ ಅಂದ ಮೇಲೆ ಅವೆಲ್ಲ ಸಾಮಾನ್ಯ. ಆದರೆ ಸಣ್ಣ ಪುಟ್ಟ ವಿಚಾರಗಳಿಗೆ ಮಕ್ಕಳು ಮನೆ ಬಿಟ್ಟು ಬರುವುದಿಲ್ಲ. ಆದರೆ ಈ ಪಾಕಿಸ್ತಾನದ ಈ ಬಾಲಕ ಮಾತ್ರ ಉಲ್ಟಾ ಮಾಡಿದ್ದಾನೆ. ಹೌದು, ಮನೆಯವರ ಜೊತೆ ಸಣ್ಣ ಜಗಳವನ್ನೇ ದೊಡ್ಡದೆಂದು ಪರಿಗಣಿಸಿದ ಪಾಕಿಸ್ತಾನದ 15 ವರ್ಷದ ಬಾಲಕ ಮನೆ ಬಿಟ್ಟು  ಬಂದು ಭಾರತದ ಗಡಿ ದಾಟಿದ್ದಾನೆ. ಈ ಹುಡುಗನನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿಗಳು ಗುಜರಾತ್ನ ಕಚ್ ಜಿಲ್ಲೆಯ ಖಾವ್ದಾದ ಅಂತಾರಾಷ್ಟ್ರೀಯ ಗಡಿಯಲ್ಲಿ ಬಂಧಿಸಿದ್ದಾರೆ. ಗಡಿ ಕಂಬ ಸಂಖ್ಯೆ 1099 ರ  ಫೆನ್ಸಿಂಗ್ ದಾಟಿದ  ಈ ಬಾಲಕನನ್ನು ನೋಡಿದ ಅಧಿಕಾರಿಗಳು ಆಗಸ್ಟ್ ಒಂದರ ಬೆಳಗ್ಗೆ 11 ಗಂಟೆ ಸುಮಾರಿಗೆ ವಶಕ್ಕೆ ಪಡೆದಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
  ಹುಡುಗ ಪಾಕಿಸ್ತಾನದ ಥಾರ್ಪರ್ಕರ್ ಜಿಲ್ಲೆಯ ಸಿಂಧ್   ಪ್ರಾಂತ್ಯದ ಸಾಹಿಚೋಕ್ ಪ್ರದೇಶದವನಾಗಿದ್ದು ಪ್ರಾಥಮಿಕ ವಿಚಾರಣೆಯಲ್ಲಿ ಹುಡುಗ ಮನೆ ಬಿಟ್ಟು ಬಂದಿರುವುದು ಬೆಳಕಿಗೆ ಬಂದಿದೆ.

  ಬಾಲಕನಿಗೆ ಖಾವ್ದಾ ಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಮಾಡಿದ ನಂತರ, ಬಿಎಸ್ಎಫ್ ಸಿಬ್ಬಂದಿ ಹುಡುಗನನ್ನು ಖಾವ್ದಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಹುಡುಗ ತನ್ನ ಕುಟುಂಬ ಸದಸ್ಯರೊಂದಿಗೆ ಜಗಳವಾಡಿ  ನಾನು ಬಿಟ್ಟು ಬಂದಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ. ಹೀಗೆ ಗಡಿ ಭಾಗದಲ್ಲಿ ಮಕ್ಕಳು ಸಿಗುವುದು ಅಪರೂಪವೇನಲ್ಲ. ಜುಲೈ ತಿಂಗಳಲ್ಲಿ ಸಹ 12 ವರ್ಷದ ಬಾಲಕನನ್ನ  ದಕ್ಷಿಣ ಬಾಂಗ್ಲ ಗಡಿಯ ಬಳಿ ಬಿಎಸ್ಎಫ್ ಯೋಧರು ಬಂಧಿಸಿದ್ದರು.

  ಇದನ್ನೂ ಓದಿ: ಈ ಊರಿಗೆ ನೆಂಟರು ಬಂದ್ರೆ ಮಧ್ಯರಾತ್ರಿಗೇ ಜಾಗ ಖಾಲಿ ಮಾಡ್ತಾರೆ, ದನಗಳಿಗೂ ಇಲ್ಲಿ ಫ್ಯಾನ್ ಬೇಕೇ ಬೇಕು...ಏನಿದು ವಿಚಿತ್ರ?

  ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ವಾಸಿಸುತ್ತಿದ್ದ ತನ್ನ ಅಜ್ಜನನ್ನ ಭೇಟಿ ಮಾಡಿ ವಾಪಸ್ ತೆರಳುತ್ತಿದ್ದ ಸಂಧರ್ಭದಲ್ಲಿ ಜುಲೈ 22 ರಂದು ಬಾಲಕನನ್ನ ಬಂಧಿಸಲಾಗಿತ್ತು. ನಂತರ ವಿಚಾರಣೆ ನಡೆಸಿದ ಬಿಎಸ್ಎಫ್ ಅಧಿಕಾರಿಗಳು ಬಾಲಕನನ್ನ ಬಾಂಗ್ಲಾ ಸೈನಿಕರಿಗೆ ಹಸ್ತಾಂತರಿಸಿದ್ದಾರೆ. ಜುಲೈ 22 ರಂದು  ಪಿರೋಜ್ ಪುರ್ ಬಳಿ ಬಾಂಗ್ಲಾದೇಶದ ಅಪ್ರಾಪ್ತ ಬಾಲಕನೊಬ್ಬ ಅಂತರಾಷ್ಟ್ರೀಯ ಗಡಿ ದಾಟಲು ಪ್ರಯತ್ನಿಸುತ್ತಿರುವ ಬಗ್ಗೆ ಬಿಎಸ್ಎಫ್ ಗುಪ್ತಚರ ಶಾಖೆಯ ಮಾಹಿತಿಯ ಆಧಾರದ ಮೇಲೆ ವಶಕ್ಕೆ ಪಡೆದಿದ್ದರು.

  ನಂತರ ಬಾಲಕನನ್ನ  ವಿಚಾರಣೆ  ನಡೆಸಿದ ಸಮಯದಲ್ಲಿ ಆತ ತನ್ನ ತಾತನನ್ನು ಭೇಟಿ ಮಾಡಲು ಬಾಜಿತ್ಪುಟ್ಗೆ ಬಂದಿದ್ದು,  ಈಗ ಮರಳಿ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಬಾಲಕನ ಅಜ್ಜ ಇರಾಮುಲ್ ಶೇಖ್,  ಪಶ್ಚಿಮ ಬಂಗಾಳದ ಮುರ್ಷಿದಾಬಾದ್  ಜಿಲ್ಲೆಯ ಬಾಜಿತ್ಪುರ್ ರಯರಾಮಪುರದಲ್ಲಿ ವಾಸವಾಗಿದ್ದಾರೆ ಎಂದು ಬಾಲಕ ತಿಳಿಸಿದ್ದಾನೆ. ಅಂತರಾಷ್ಟ್ರೀಯ ಗಡಿಯಲ್ಲಿ ಅಪ್ರಾಪ್ತನ ಕಂಡ ಸಿಬ್ಬಂದಿಗಳು ಕೇವಲ ಎಚ್ಚರಿಕೆಯ ದೃಷ್ಟಿಯಿಂದ ಬಾಲಕನನ್ನ ಬಂಧಿಸಿದ್ದು, ವಿಚಾರಣೆ ನಂತರ ಕ್ಷೇಮವಾಗಿ ಹಸ್ತಾಂತರಿಸಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

  ಇನ್ನು ಈ ಕುರಿತು ಹೇಳಿಕೆ ನೀಡಿರುವ 78 ಬೆಟಾಲಿಯನ್ ಗಳ  ಅಧಿಕೃತ ಕಮಾಂಡಿಂಗ್ ಆಫೀಸರ್ ವಿಶ್ವಬಂಧು, ಈ ಅಪ್ರಾಪ್ತ ಹುಡುಗ ಯಾವುದೇ ತಪ್ಪು ಉದ್ದೇಶದಿಂದ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿಲ್ಲ ಎಂದು ವಿಚಾರಣೆಯ ಸಮಯದಲ್ಲಿ ತಿಳಿದುಬಂದಿದೆ. ಹುಡುಗ ತನ್ನ ಅಜ್ಜನನ್ನು ಭೇಟಿಯಾಗಲು ಅಂತರಾಷ್ಟ್ರೀಯ ಗಡಿಯನ್ನು ದಾಟಿದ್ದಾನೆ. ಅಂತರಾಷ್ಟ್ರೀಯ ಗಡಿಯನ್ನು ದಾಟುವುದು ಅಪರಾಧ ಎಂದು ಪರಿಗಣಿಸಿದ್ದರೂ ಸಹ , ಹುಡುಗನ ಭವಿಷ್ಯದ ದೃಷ್ಟಿಯಿಂದ  ಮತ್ತು ಗಡಿ ಜನರ ಭಾವನೆಗಳ  ಮೇಲಿನ ಗೌರವದ ಪ್ರತೀಕವಾಗಿ ಹುಡುಗನನ್ನು ಬಾಂಗ್ಲಾ ಗಡಿ ಭದ್ರತಾ ಪಡೆಗೆ ಸದ್ಭಾವನೆಯ ಸಂಕೇತವಾಗಿ  ಒಪ್ಪಿಸಲಾಗಿದೆ ಎಂದಿದ್ದಾರೆ.

  (ಸಂಧ್ಯಾ ಎಂ)
  Published by:Soumya KN
  First published: