Hira Mani: ಪಾಕ್​ನ ಖ್ಯಾತ​ ನಟಿಗೆ ವೇದಿಕೆಯಲ್ಲೇ ಅವಮಾನ, ಅಭಿಮಾನಿಗಳಿಂದ ಇದೆಂತಹಾ ವರ್ತನೆ!

ಪಾಕಿಸ್ತಾನಿ ನಟಿ ಹೀರಾ ಮಣಿ ಅನೇಕ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಹಾಡುಗಳನ್ನೂ ಹಾಡುತ್ತಾರೆ. ಇತ್ತೀಚೆಗಷ್ಟೇ ಸಂಗೀತ ಕಾರ್ಯಕ್ರಮವೊಂದರ ವೇಳೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಘಟನೆಯಿಂದ ಅವರು ಟ್ರೋಲ್ ಆಗಿದ್ದಾರೆ. ಸದ್ಯ ಇದರ ವಿಡಿಯೋ ವೈರಲ್ ಆಗಿದ್ದು, ಭಾರೀ ಪರ ವಿರೋಧಗಳು ವ್ಯಕ್ತವಾಗಿವೆ.

ಪಾಕಿಸ್ತಾನಿ ನಟಿ ಹೀರಾ ಮಣಿ

ಪಾಕಿಸ್ತಾನಿ ನಟಿ ಹೀರಾ ಮಣಿ

  • Share this:
ಲಂಡನ್(ಆ.20): ಪಾಕಿಸ್ತಾನಿ (Pakistan) ಟಿವಿ ನಟಿ ಹೀರಾ ಮಣಿ (Hira Mani) 'ಪ್ರೀತ್ ನಾ ಕರಿಯೋ ಕೋಯಿ', 'ದೋ ಬೋಲ್' ಮತ್ತು 'ಕಾಶ್ಫ್' ನಂತಹ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದಾರೆ. ಅನೇಕ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುವುದರ ಜೊತೆಗೆ, ಹೀರಾ ಓರ್ವ ಗಾಯಕಿ (Singer) ಕೂಡಾ. ಆದರೆ ಇತ್ತೀಚೆಗೆ ಅವರ ಸಂಗೀತ ಕಛೇರಿಹಿಯೊಂದರಲ್ಲಿ ಸಂಭವಿಸಿದ ಘಟನೆಯಿಂದ ಅವರು ಅವರು ಭಾರೀ ಮುಜುಗರಕ್ಕೊಳಗಾಗಿದ್ದಾರೆ. ಹೀರಾಗೆ ತಾನೊಬ್ಬ ನಟಿ (Actress) ಹಾಗೂ ಗಾಯಕಿ ಎಂದು ಬಹಳಷ್ಟು ಹೆಮ್ಮೆ ಇದೆ. ಆದರೆ ಈ ಗೋಷ್ಠಿಯಲ್ಲಿ ಅವರ ಹಾಡಿಗೆ ಸಾರ್ವಜನಿಕರು ಪ್ರತಿಕ್ರಿಯಿಸಿದ ರೀತಿ ತುಂಬಾ ಆಘಾತಕಾರಿಯಾಗಿದೆ. ಸಂಗೀತ ಕಚೇರಿಯ ವಿಡಿಯೋ ವೈರಲ್ ಆಗಿದ್ದು, ಹಾಡುವುದನ್ನು ನಿಲ್ಲಿಸಿ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುವ ಹಂತಕ್ಕೆ ತಲುಪಿದ್ದಾರೆ.

ಸಾರ್ವಜನಿಕರು ಗೋಷ್ಠಿಗೆ ಅವಮಾನ ಮಾಡಿದ್ದಾರೆ

ಹೀರಾ ಅವರ 'ಸವಾರಿ' ಹಾಡು ಕೆಲವು ದಿನಗಳ ಹಿಂದೆ ಸಾಕಷ್ಟು ವೈರಲ್ ಆಗಿತ್ತು. ಈ ವೈರಲ್ ಹಿಟ್ ನಂತರ, ಅವರು ತಮ್ಮ ನಟನಾ ವೃತ್ತಿಜೀವನಕ್ಕಿಂತ ಗಾಯನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆಗಸ್ಟ್ 14 ರಂದು ಲಂಡನ್‌ನಲ್ಲಿ ನಡೆದ 'ಜಶ್ನ್-ಎ-ಆಜಾದಿ' ಸಂದರ್ಭದಲ್ಲಿ ಹೀರಾ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ವೇದಿಕೆಯಿಂದ ಸಾಕಷ್ಟು ಎನರ್ಜಿಯಿಂದ ಪ್ರದರ್ಶನ ನೀಡುತ್ತಿದ್ದರು, ಆದರೆ ಪ್ರೇಕ್ಷಕರು ಕೂಡಾ ಅದೇ ಎನರ್ಜಿ ಜೊತೆ ಆಕೆಯ ಹಾಡು ಕೇಳುತ್ತಿದ್ದರೋ ಎಂದು ಹೇಳುವುದು ಕಷ್ಟ.

ಇದನ್ನೂ ಓದಿ: Bengaluru to Pakistan: ಜೈಲಿನಲ್ಲಿದ್ದ ಮಹಿಳೆಗೆ ಪಾಕ್ ಪೌರತ್ವ! ಆಕೆ ಬೆಂಗಳೂರಿಗೆ ಬಂದಿದ್ದೇ ರೋಚಕ

ಪ್ರೇಕ್ಷಕರ ಈ ಕೂಲ್ ರೆಸ್ಪಾನ್ಸ್ ನೋಡಿದ ಹೀರಾ ಅವರನ್ನು ರಂಜಿಸಲು ಮತ್ತಷ್ಟು ಪ್ರಯತ್ನ ಮಾಡಿದ್ದಾರೆ. ಅವರ 'ಜಾ ತುಜೆ ಮಾಫ್ ಕಿಯಾ' ಹಾಡಿನ ಮೂಲಕ ಸಾರ್ವಜನಿಕರನ್ನು ತೊಡಗಿಸಿಕೊಳ್ಳಲು ಬಯಸಿದ್ದರು. ಹೀರಾ ವೇದಿಕೆಯಿಂದ ಹಾಡಿನ ಸಾಲನ್ನು ಹಾಡಿದ ನಂತರ, 'ನೀವೂ ನನ್ನೊಂದಿಗೆ ಹಾಡಿ' ಎಂದು ಹೇಳಿದಾಗ ಸಾರ್ವಜನಿಕರು ಮೌನವಾಗಿದ್ದಾರೆ.

ಹಲವು ಪ್ರಯತ್ನಗಳ ನಂತರವೂ ಸಾರ್ವಜನಿಕರ ಮೌನ ಮುರಿಯಲಾಗಲಿಲ್ಲ

ಅವರು ಇದನ್ನು ವೇದಿಕೆಯಿಂದ ಸತತ ಎರಡು-ಮೂರು ಬಾರಿ ಮಾಡಲು ಪ್ರಯತ್ನಿಸಿದರು, ಆದರೆ ಸಾರ್ವಜನಿಕರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. . ಹೀಗಿರುವಾಗಲೇ ಹೀರಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನೊಂದಿಗೆ ನೀವೂ ಹಾಡದಿದ್ದರೆ ನಾನು ಹಾಡುವುದಿಲ್ಲ ಎಂದಿದ್ದಾರೆ. ಹೀಗಿದ್ದರೂ ಪ್ರೇಕ್ಷಕರು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಮಧ ಇಲ್ಲ ಎನ್ನುವಂತೆ ಸುಮ್ಮನೆ ಕುಳಿತದ್ದರು.


ಗೋಷ್ಠಿಯ ನಂತರದ ಸಂಪೂರ್ಣ ಘಟನೆಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ಅವರನ್ನು ಎಚ್ಚರಿಸುತ್ತಿದ್ದಾರೆ. ದೈನಂದಿನ ಸೋಪ್‌ನಲ್ಲಿ ಹೀರಾ ಅವರ ಅಭಿನಯವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು. ಇನ್ನು ಪಾಕಿಸ್ತಾನದಲ್ಲಿ ಮದುವೆಯಾದ ನಂತರ, ಸಾರ್ವಜನಿಕರು ಕೆಲವು ಆಯ್ದ ನಟಿಯರನ್ನು ಮಾತ್ರ ಬೆಂಬಲಿಸಿದ್ದಾರೆ ಎಂಬುವುದು ಉಲ್ಲೇಖನೀಯ.

ಇದನ್ನೂ ಓದಿ: Pakistan: ಪಾಕಿಸ್ತಾನ ಕ್ರಿಕೆಟ್​ ಮಂಡಲಿ ಅಧ್ಯಕ್ಷರಾಗಿ ರಮೀಜ್​ ರಾಜಾ ಸೋಮವಾರ ಅಧಿಕಾರ ಸ್ವೀಕಾರ

ಆ ಕೆಲವೇ ಕೆಲವು ಮಹಿಳಾ ಕಲಾವಿದರಲ್ಲಿ ಹೀರಾ ಮಣಿ ಒಬ್ಬರು. ಪಾಕಿಸ್ತಾನಿ ಚಲನಚಿತ್ರೋದ್ಯಮದ ಅತ್ಯಂತ ಪ್ರಸಿದ್ಧ ಮುಖಗಳಲ್ಲಿ ಒಬ್ಬರಾದ ಹೀರಾಗೆ ಏನಾಯಿತು? ಬಹುಶಃ ಸಾರ್ವಜನಿಕರ ಮನಸ್ಸು ಅವಳ ಬಗ್ಗೆ ಬದಲಾಗಲು ಪ್ರಾರಂಭಿಸಿದೆ ಎಂಬುದರ ಸೂಚನೆಯೇ? ಎಂಬಿತ್ಯಾದಿ ಸವಾಲುಗಳನ್ನು ಕಾಮೆಂಟ್​ ಮಾಡಲಾಗುತ್ತಿದೆ.
Published by:Precilla Olivia Dias
First published: