• Home
  • »
  • News
  • »
  • national-international
  • »
  • Pakistani Journalist: ಬಾಲಕನ ಕಪಾಳಕ್ಕೆ ಹೊಡೆದ ಪಾಕಿಸ್ತಾನದ ಪತ್ರಕರ್ತೆ!

Pakistani Journalist: ಬಾಲಕನ ಕಪಾಳಕ್ಕೆ ಹೊಡೆದ ಪಾಕಿಸ್ತಾನದ ಪತ್ರಕರ್ತೆ!

ಪಾಕಿಸ್ತಾನಿ ಪತ್ರಕರ್ತೆ

ಪಾಕಿಸ್ತಾನಿ ಪತ್ರಕರ್ತೆ

ಪಾಕಿಸ್ತಾನದಲ್ಲಿ ಪತ್ರಕರ್ತೆಯೊಬ್ಬರು ಸುದ್ದಿ ಮಾಡುತ್ತಿದ್ದಾಗ ಬಾಲಕನೊಬ್ಬ ಅಡ್ಡಿ ಮಾಡಿದ್ದಾನೆ. ಅದಕ್ಕೆ ಕೋಪಗೊಂಡು ಪತ್ರಕರ್ತೆ ಬಾಲಕನ ಕಪಾಳಕ್ಕೆ ಬಾರಿಸಿದ್ದಾಳೆ

  • Share this:

ಎಷ್ಟೋ ಪತ್ರಕರ್ತರು (Journalist) ಸಾವಿರಾರು ಕನಸುಗಳನ್ನಿಟ್ಟುಕೊಂಡು ಪತ್ರಿಕೋದ್ಯಮವನ್ನು (Journalism) ಆಯ್ಕೆ ಮಾಡಿಕೊಂಡಿರುತ್ತಾರೆ. ಕೆಲವರು ವರದಿಗಾರ (Reporters) ಆಗಲೇಬೇಕೆಂದು ಗುರಿ ಇಟ್ಟುಕೊಂಡಿರುತ್ತಾರೆ. ವರದಿಗಾರಿಕೆ ಮಾಡೋದು ಬಾಯಲ್ಲಿ ಹೇಳಿದಷ್ಟು ಸುಲಭದ ಮಾತಲ್ಲ ಅದಕ್ಕೆ ಅದರದ್ದೇ ಆದ ಸಾಮರ್ಥ್ಯವನ್ನು ಹೊಂದಿರಬೇಕು. ಕ್ಯಾಮರಾ (Camera) ಎದುರಿಸುವ ಶಕ್ತಿ, ಸುದ್ದಿ ಮಾಡಲು ಹೋದಾಗ ಧೈರ್ಯದಿಂದ ಇರಬೇಕು. ಕ್ಯಾಮರಾ ಮುಂದೆ ಲೀಲಾ ಜಾಲವಾಗಿ ತಪ್ಪಿಲ್ಲದಂತೆ ಮಾತನಾಡಬೇಕು. ಹೀಗೆ ಸುದ್ದಿ ಮಾಡುತ್ತಿರುವಾಗ ಎಷ್ಟೋ ವರದಿಗಾರರಿಗೆ ಅಲ್ಲಿನ ಜನರು ತೊಂದರೆ ಉಂಟು ಮಾಡುತ್ತಾರೆ. ಅಡ್ಡ ಬರುವುದು, ತಳ್ಳಿಕೊಂಡು ಹೋಗುವುದನ್ನು ನೋಡಿದ್ದೇವೆ. ಇದು ಸಾಮಾನ್ಯವಾಗಿ ಎಲ್ಲಾ ವರದಿಗಾರರು ಎದುರಿಸುವ ಸಮಸ್ಯೆಗಳು. ಅದೇ ರೀತಿ ಪಾಕಿಸ್ತಾನದಲ್ಲಿ ಪತ್ರಕರ್ತೆಯೊಬ್ಬರು ಸುದ್ದಿ ಮಾಡುತ್ತಿದ್ದಾಗ ಬಾಲಕನೊಬ್ಬ ಅಡ್ಡಿ ಮಾಡಿದ್ದಾನೆ. ಅದಕ್ಕೆ ಕೋಪಗೊಂಡು ಪತ್ರಕರ್ತೆ ಬಾಲಕನ ಕಪಾಳಕ್ಕೆ (Slaps)  ಬಾರಿಸಿದ್ದಾಳೆ


ಪತ್ರಕರ್ತೆ ಅಷ್ಟೊಂದು ಕೋಪಗೊಳ್ಳಲು ಕಾರಣವೇನು?
ಭಾನುವಾರ ಅಂದ್ರೆ ರಂಜಾನ್ ಹಬ್ಬದ ದಿನ. ರಂಜಾನ್ ಹಬ್ಬ ಕುರಿತು ಪತ್ರಕರ್ತೆ ವರದಿ ಮಾಡಲು ತೆರಳಿರುತ್ತಾಳೆ. ಆಕೆ ಅಂದುಕೊಂಡಂತೆ ವರದಿ ಮಾಡುತ್ತಾ ಇರುತ್ತಾಳೆ. ಪವಿತ್ರ ರಂಜಾನ್ ಹಬ್ಬದ ದಿನ ಜನಜಂಗುಳಿ ಕೇಳಬೇಕೇ? ಮೊದಲೇ ರಶ್ ಬೇರೆ ಇರುತ್ತೆ ಸಾವಿರಾರು ಜನ ಹಬ್ಬ ಆಚರಣೆ ಮಾಡುತ್ತಾ ಇರುತ್ತಾರೆ. ಆ ಜನರ ಮಧ್ಯೆಯ ವರದಿಗಾರ್ತಿ ವರದಿ ಮಾಡುತ್ತಾ ಇರುತ್ತಾಳೆ. ಜನ ಇದ್ದ ಕಾರಣ ದೊಡ್ಡ ಧ್ವನಿಯಲ್ಲಿ ಲೈವ್ ನೀಡುತ್ತಾ ಇರುತ್ತಾಳೆ. ಆಗ ಅಲ್ಲೇ ಇದ್ದ ಬಾಲಕ ವರದಿಗೆ ಅಡ್ಡಿ ಮಾಡಿದ್ದಾನೆ. ಆಗ ಕೋಪಗೊಂಡ ಪತ್ರಕರ್ತೆ ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ನೆರೆದಿದ್ದ ಜನರ ಮುಂದೆಯೇ ಬಾಲಕನ ಕೆನ್ನೆಗೆ ಬಾರಿಸಿದ್ದಾಳೆ. ಇದು ಕ್ಯಾಮರಾದಲ್ಲಿ ಸೆರೆಯಾಗಿದೆ.



 ಕಪಾಳಕ್ಕೆ ಹೊಡೆಸಿಕೊಂಡ ಬಾಲಕ ಮಾಡಿದ್ದೇನು..?
ಪತ್ರಕರ್ತೆ ರಂಜಾನ್ ಹಬ್ಬ ಕುರಿತು ಗಂಭೀರವಾಗಿ ವರದಿ ಮಾಡುತ್ತಿರುವಾಗ, ಅಲ್ಲೇ ನಿಂತಿದ್ದ ಬಾಲಕನೊಬ್ಬ ಅಡ್ಡಿಮಾಡಿದ್ದಾನೆ. ಪತ್ರಕರ್ತೆ ಲೈವ್ ಕೊಡುತ್ತಿದ್ದ ಕ್ಯಾಮರಾಗೆ ಯಾವುದು ವಸ್ತುವನ್ನು ಅಡ್ಡ ಹಿಡಿದಿದ್ದಾನೆ. ವರದಿಗೆ ಅಡ್ಡಿ ಮಾಡಿದ್ದಾನೆ. ಅಲ್ಲದೇ ಸುಮ್ಮನೆ ಏನೇನು ಹೇಳಿಕೆಗಳನ್ನು ನೀಡ್ತಾ ಇದ್ನಂತೆ. ಅದಕ್ಕೆ ತಾಳ್ಮೆ ಕಳೆದುಕೊಂಡ ವರದಿಗಾರ್ತಿ, ತನ್ನ ವರದಿ ಮುಗಿಯುತ್ತಿದ್ದಂತೆ ಆ ಬಾಲಕನ ಕೆನ್ನೆಗೆ ಬಾರಿಸಿದ್ದಾಳೆ.


ಇದನ್ನೂ ಓದಿ: Price Hike Protest: ಬೆಲೆ ಏರಿಕೆ ಕುರಿತು ಬೀದಿ ನಾಟಕ ಮಾಡಿದ್ದೆ ತಪ್ಪಾಯ್ತಾ? ಖಡಕ್ ಪ್ರಶ್ನೆ ಕೇಳಿದ ಅಸ್ಸಾಂ ಸಿಎಂ


ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್!
ಬಾಲಕನೊಬ್ಬನಿಗೆ ಪಾಕಿಸ್ತಾನ ವರದಿಗಾರ್ತಿ ಕಪಾಳಕ್ಕೆ ಹೊಡೆದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋವನ್ನು 3 ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಆ ವಿಡಿಯೋಗೆ ಕೆಲವೊಬ್ಬರು ಒಳ್ಳೆಯದಾಯ್ತು ಎಂದು ಕಾಮೆಂಟ್‍ಗಳನ್ನು ಮಾಡಿದ್ದಾರೆ. ಇನ್ನೂ ಕೆಲವರು ಆ ರೀತಿ ಹೊಡೆಯಬಾರದಿತ್ತು ಎಂದು ಕಾಮೆಂಟ್ ಹಾಕಿದ್ದಾರೆ.


ಇದನ್ನೂ ಓದಿ: Akshata Murthy: ಪತ್ರಕರ್ತರಿಗೆ ಸುಧಾ ಮೂರ್ತಿ ಮಗಳು ಅಕ್ಷತಾ ಮೂರ್ತಿ ಸ್ವತಃ ನೀಡಿದ್ದೇಕೆ?


ಗಂಭೀರವಾಗಿ ವರದಿ ಮಾಡುತ್ತಿರುವಾಗ ಬಾಲಕ ಆ ರೀತಿ ಮಾಡಿದ್ದರಿಂದ ವರದಿಗಾರ್ತಿ ತಾಳ್ಮೆ ಕಳೆದುಕೊಂಡು, ಕೋಪಗೊಂಡು ಕಪಾಳಕ್ಕೆ ಬಾರಿಸಿದ್ದಾರೆ. ನೆರೆದಿದ್ದ ಜನರ ಮುಂದೆಯೇ ಬಾಲಕನ ಕೆನ್ನೆಗೆ ಬಾರಿಸಿದ್ದಾಳೆ. ಆಗ ಸುತ್ತಲು ನೆರೆದಿದ್ದ ಜನ ಶಾಕ್ ಆಗಿ ವರದಿಗಾರ್ತಿಯನ್ನೇ ನೋಡಿದ್ದಾರೆ.


ತಾಳ್ಮೆ ಕಳೆದುಕೊಳ್ಳಬಾರದು
ವರದಿ ಮಾಡುವಾಗ ವರದಿಗಾರರು ಇಂತಹ ಎಷ್ಟೋ ಕಷ್ಟಗಳನ್ನು ಎದುರಿಸುತ್ತಾರೆ. ಆದ್ರೂ ಜನರ ಮುಂದೆ ತಾಳ್ಮೆ ಕಳೆದುಕೊಳ್ಳಬಾರದು. ನೆರೆದಿರುವ ಜನರಾದ್ರೂ ಏನೋ ಸುದ್ದಿ ಮಾಡುತ್ತಿದ್ದಾರೆ ಎಂದು ಸುಮ್ಮನೆ ಇರಬೇಕು. ಅದು ಬಿಟ್ಟು ವರದಿ ಅಡ್ಡಿ ಮಾಡಿದ್ರೆ ಹೇಗೆ. ಅವರು ಆ ಸುದ್ದಿಯನ್ನು ಕೊಡುವುದಾದರೂ ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಇಲ್ಲವಾದ್ರೆ ಈ ರೀತಿಯ ಅವಾಂತರಗಳು ನಡೆದು ಬಿಡುತ್ತವೆ. ಅದೇ ಈ ರೀತಿ ಇಲ್ಲೂ ಸಹ ಆಗಿದೆ.

Published by:Savitha Savitha
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು