10ದಿನದ ಉರಿ ಕಾರ್ಯಾಚರಣೆ ಅಂತ್ಯ; ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಎಲ್​ಇಟಿ ಉಗ್ರನ ವಶಕ್ಕೆ ಪಡೆದ ಭಾರತೀಯ ಸೇನೆ

ಕಳೆದ ವಾರ ಕೂಡ ಬಾರಾಮುಲ್ಲ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಸೆ. 28): ಭಾರತದೊಳಗೆ ಅಕ್ರಮವಾಗಿ ನುಸುಳನ್ನು ಪ್ರಯತ್ನಿಸುತ್ತಿದ್ದ ಪಾಕಿಸ್ತಾನದ ಭಯೋತ್ಪಾದಕನನ್ನು (Pakistani infiltrator )  ಭಾರತೀಯ ಸೇನೆ (Indian Army) ಜೀವಂತವಾಗಿ ಸೆಳೆ ಹಿಡಿದಿದ್ದು, ಈ ವೇಳೆ ಮತ್ತೊಬ್ಬ ಹತ್ಯೆಯಾಗಿದ್ದಾನೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ (Jammu and Kashmir uri) ಕಳೆದ 10 ದಿನಗಳಿಂದ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆ ಅಂತ್ಯವಾಗಿದೆ. ಸೇನೆ ವಶಕ್ಕೆ ಪಡೆದಿರುವ ಭಯೋತ್ಪಾದಕ ಸುಮಾರು 18 ವರ್ಷದ ಯುವಕ ಎಂಬುದು ತಿಳಿದು ಬಂದಿದೆ. ಸೆ. 18-19ರಿಂದ ಉರಿ ಮತ್ತು ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ (LOC) ಅಕ್ರಮ ನಸುಳುವಿಕೆ ಚಟುವಟಿಕೆ ನಡೆಯುತ್ತಿದ್ದವು. ಉರಿ ಸೆಕ್ಟರ್​ನಲ್ಲಿ (Uri sector) ಅನುಮಾನಾಸ್ಪದ ಚಟುವಟಿಕೆ ಕಂಡು ಬಂದ ಹಿನ್ನಲೆ ಭಾರತೀಯ ಸೇನೆ ಕಾರ್ಯಾಚಾರಣೆ ಆರಂಭ ಮಾಡಿತ್ತು.

  ಸೇನಾ ಕಾರ್ಯಚಾರಣೆ ಆರಂಭವಾಗುತ್ತಿದ್ದಂತೆ ಮೊಬೈಲ್​, ಇಂಟರ್​ನೆಟ್​ ಹಾಗೂ ದೂರವಾಣಿ ಸಂಪರ್ಕ ಕಡಿತಗೊಳಿಸಲಾಗಿತ್ತು. ಭಾನುವಾರ ಸೇನಾ ಕಾರ್ಯಚಾರಣೆ ವೇಳೆ ಇಬ್ಬರು ಅಕ್ರಮ ನುಸುಳುಕೋರನ್ನು ಹತ್ಯೆ ಮಾಡಲಾಗಿತ್ತು. ಆದರೆ ಅವರ ಶವ ಇನ್ನೂ ಪತ್ತೆಯಾಗಿಲ್ಲ. ಈ ಘಟನೆಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದರು ಎಂದು ಸೇನಾ ಮೂಲಗಳು ಸಿಎನ್​​ಎನ್​ ನ್ಯೂಸ್​18ಗೆ ತಿಳಿಸಿತ್ತು.

  ಆಂತರಿಕ ಮಾಹಿತಿ ಪ್ರಕಾರ ಸೇನಾ ವಶಕ್ಕೆ ಸಿಕ್ಕಿರುವ 18 ವರ್ಷದ ಯುವಕ ಪಾಕಿಸ್ತಾನದ ಓಕರ ನಿವಾಸಿ ಎಂಬುದು ತಿಳಿದು ಬಂದಿದೆ. ಎಲ್​ಇಟಿಗೆ ಸೇರಿದ್ದು, ಮುಜಾಫರ್​ನಲ್ಲಿ ಈತ ತರಬೇತಿ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ.  2018ರಲ್ಲಿ ಉರಿ ದಾಳಿಯಲ್ಲಿ ಕೂಡ ನುಸುಳುಕೋರರು ಇದೇ ಮಾರ್ಗ ಬಳಸಲು ಮುಂದಾಗಿದ್ದರು ಎಂದು ಆತ ಹೇಳಿದ್ದಾನೆ.

  ಕಳೆದ ಏಳು ದಿನಗಳಲ್ಲಿ ಏಳು ಭಯೋತ್ಪಾದಕರನ್ನು ಹತ್ತಿಕ್ಕಲಾಗಿದೆ. ಎನ್​ ಕೌಂಟರ್​ ವೇಳೆ ಇಬ್ಬರು ಒಳ ನುಸುಳುಕೋರರು ಗಡಿ ಪ್ರದೇಶದ ಬಳಿ ಬಂದರು. ಇನ್ನ ನಾಲ್ವರು ಇನ್ನೊಂದು ಬದಿಯಲ್ಲಿದ್ದರು. ಈ ವೇಳೆ ಎರಡು ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಉಳಿದ ಉಗ್ರರು ಪಾಕಿಸ್ತಾನದ ಕಡೆಗೆ ಹೋದರು. ಇಬ್ಬರು ಭಯೋತ್ಪಾದಕರು ಭಾರತದ ಕಡೆಗೆ ನುಸುಳಿದರು. ಭಾರತದೊಳಗೆ ನುಸುಳಿದ ಇಬ್ಬರು ಭಯೋತ್ಪಾದಕರನ್ನು ಸುತ್ತುವರಿಯಲು ಸಜ್ಜುಗೊಂಡಿದ್ದ ಸೇನೆ ಅವರನ್ನು ವಶಕ್ಕೆ ಪಡೆಯಿತು. ಈ ವೇಳೆ ಒಬ್ಬ ಹತ್ಯೆಯಾದ ಎಂದು ಸೇನೆ ಮಾಹಿತಿ ನೀಡಿದೆ.

  ಇದನ್ನು ಓದಿ: ಪಾಕಿಸ್ತಾನದಲ್ಲಿ ಮೊಹಮ್ಮದ್​ ಅಲಿ ಜಿನ್ನಾ ಪ್ರತಿಮೆ ಧ್ವಂಸಗೊಳಿಸಿದ ಉಗ್ರರು

  ಕಾಶ್ಮೀರದಲ್ಲಿ ಅಕ್ರಮ ಒಳನುಸುಳುವಿಕೆ ಕಾರ್ಯ ನಡೆಯುತ್ತಿದೆ. ಕಳೆದ ವಾರ ಕೂಡ ಬಾರಾಮುಲ್ಲ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು.

  ಇದನ್ನು ಓದಿ: ವಿಶ್ವಸಂಸ್ಥೆಯ ಸಭೆಯಲ್ಲಿ ಪಾಕ್​ ಬೆವರಿಳಿಸಿದ ಸ್ನೇಹಾ ದುಬೆ: ಯುವ ಐಎಫ್​ಎಸ್​ ಅಧಿಕಾರಿ ಮಾತಿಗೆ ಮೆಚ್ಚುಗೆ ಮಹಾಪೂರ

  ಈ ಕುರಿತು ಮಾತನಾಡಿರುವ 15 ಕಾರ್ಪ್​ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ, ಈ ವರ್ಷ ಯಾವುದೇ ಕದನ ವಿರಾಮ ಉಲ್ಲಂಘನೆ ಆಗಿಲ್ಲ. ಆದರೂ ಕೂಡ ಕೆಲವು ಅಕ್ರಮ ಒಳ ನುಸುಳುವಿಕೆ ಪ್ರಯತ್ನಗಳನ್ನು ನೆರೆಯ ರಾಷ್ಟ್ರ ಮಾಡುತ್ತಿದೆ. ಅಂತಹವರನ್ನು ಸೇನೆ ಹುಡುಕಿ ಯಶಸ್ವಿ ಕಾರ್ಯಚಾರಣೆ ನಡೆಸುತ್ತಿದೆ. ಅವರು ಅನೇಕ ಪ್ರಯತ್ನ ಮಾಡುತ್ತಿದ್ದು, ನಾವು ಸಾಕಷ್ಟು ಎಚ್ಚರಿಕೆಯಿಂದ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದು, ಅದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.

  ಇನ್ನು ಈ ಅಕ್ರಮ ಒಳ ನುಸುಳುವಿಕೆಗಾರರ ಈ ಪ್ರಯತ್ನ ಅಫ್ಘಾನಿಸ್ಥಾನದೊಂದಿಗೆ ಏನಾದರೂ ಸಂಬಂಧ ಹೊಂದಿದೆಯಾ ಎಂಬ ಕುರಿತು ಮಾತನಾಡಿದ ಅವರು, ಈ ಬಗ್ಗೆ ಸೇನೆ ಸಾಕಷ್ಟು ಎಚ್ಚರಿಕೆ ವಹಿಸಿದೆ. ಪಾಕಿಸ್ತಾನದ ವರ್ತನೆಯ ಬದಲಾವಣೆಯನ್ನು ನಾವು ನಿರೀಕ್ಷಿಸಿದ್ದೆವು. ಚಳಿಗಾಲದಲ್ಲಿ ಈ ಅಕ್ರಮ ಒಳ ನುಸುಳುವಿಕೆಯ ಪ್ರಯತ್ನವನ್ನು ಅಲ್ಲಗಳೆಯುವಂತಿಲ್ಲ. ಇದನ್ನು ನಾವು ಭೌಗೋಳಿಕ ರಾಜಕೀಯದೊಂದಿಗೆ ಸಂಪರ್ಕಿಸಲು ಸಾಧ್ಯವಿಲ್ಲ ಎಂದಿದ್ದಾರೆ.
  Published by:Seema R
  First published: