ಮೂರನೇ ಬಾರಿ ಹಸೆಮಣೆ ಏರಿದ ವರ; ಮದುವೆ ಮಂಟಪದಲ್ಲೇ ಮೊದಲ ಹೆಂಡತಿಯಿಂದ ಬಿತ್ತು ಗೂಸಾ

ರಫೀಕ್​ ಎಂಬಾತ ಮೂರನೇ ಮದುವೆಗೆ ಮುಂದಾಗಿದ್ದ. ಇದನ್ನು ತಿಳಿದ ಆತನ ಮೊದಲ ಹೆಂಡತಿ ಮದಿಹಾ ಹಾಗೂ ಆಕೆಯ ಕುಟುಂಬದವರು ಮದುವೆ ಮಂಟಪಕ್ಕೆ ನುಗ್ಗಿ ರಫೀಕ್​ಗೆ ಥಳಿಸಿದ್ದಾರೆ.

news18-kannada
Updated:February 13, 2020, 8:44 AM IST
ಮೂರನೇ ಬಾರಿ ಹಸೆಮಣೆ ಏರಿದ ವರ; ಮದುವೆ ಮಂಟಪದಲ್ಲೇ ಮೊದಲ ಹೆಂಡತಿಯಿಂದ ಬಿತ್ತು ಗೂಸಾ
ಪ್ರಾತಿನಿಧಿಕ ಚಿತ್ರ
  • Share this:
ಕರಾಚಿ (ಫೆ.13): ಮದುವೆಯಾಗಿದ್ದರೂ ಬೇರೆಯವಳೊಂದಿಗೆ ಸಂಬಂಧ ಇಟ್ಟುಕೊಂಡಿರುವ ಎಷ್ಟೋ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಈ ಅಕ್ರಮ ಸಂಬಂಧದ ವಿಷಯ ತಿಳಿದು ಹೆಂಡತಿಯೇ ಗಂಡನಿಗೆ ಧರ್ಮದೇಟು ನೀಡಿದ ಉದಾಹರಣೆಗಳೂ ಇವೆ. ಅದೇರೀತಿ, ಹೆಂಡತಿಯರ ಕಣ್ತಪ್ಪಿಸಿ, 3ನೇ ಮದುವೆಯಾಗಲು ಹೊರಟಿದ್ದ ಭೂಪನ ಮದುವೆ ಮಂಟಪಕ್ಕೆ ಬಂದ ಮೊದಲ ಹೆಂಡತಿ ಮುಖ-ಮೂತಿ ನೋಡದೆ ಥಳಿಸಿದ್ದಾಳೆ. 

ಕರಾಚಿಯ ನಜಿಮಾಬಾದ್​ ಭಾಗದಲ್ಲಿ ಈ ಘಟನೆ ನಡೆದಿದೆ. ರಫೀಕ್​ ಎಂಬಾತ ಮೂರನೇ ಮದುವೆಗೆ ಮುಂದಾಗಿದ್ದ. ಇದನ್ನು ತಿಳಿದ ಆತನ ಮೊದಲ ಹೆಂಡತಿ ಮದಿಹಾ ಹಾಗೂ ಆಕೆಯ ಕುಟುಂಬದವರು ಮದುವೆ ಮಂಟಪಕ್ಕೆ ನುಗ್ಗಿ ರಫೀಕ್​ಗೆ ಥಳಿಸಿದ್ದಾರೆ. ಗಲಾಟೆಯ ನಂತರ ರಫೀಕ್​ನ ಮೂರನೇ ಮದುವೆ ಮುರಿದು ಬಿದ್ದಿದೆ.

“ರಫೀಕ್​ ಕದ್ದು-ಮುಚ್ಚಿ ಎರಡನೇ ಮದುವೆ ಆಗಿದ್ದ. ಈ ಬಗ್ಗೆ ಧ್ವನಿ ಎತ್ತಿದಾಗ ಆತ ಕ್ಷಮೆ ಕೇಳಿ ನನ್ನ ಜೊತೆಯೇ ಇರುವ ಭರವಸೆ ನೀಡಿದ್ದ. ಆದರೆ, ಈಗ ಆತ ಮೂರನೇ ಮದುವೆ ಆಗುತ್ತಿದ್ದಾನೆ,” ಎಂದು ಮದಿಹಾ ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ವೈರಸ್: ಚಿಂತೆಗೊಂಡ ಭಾರತದ ಸ್ಮಾರ್ಟ್​ಫೋನ್ ಉದ್ಯಮ; ಅತಂತ್ರಗೊಂಡ ಹಡಗುಗಳು

ಆದರೆ, ಈ ಬಗ್ಗೆ ಕೇಳಿದರೆ ರಫೀಕ್​ ಹೇಳುವ ರೀತಿಯೇ ಬೇರೆ. “ನಾನು ಮದಿಹಾಗೆ ವಿಚ್ಛೇದನ ನೀಡಿದ್ದೇನೆ. ಇಬ್ಬರೂ ಸಮ್ಮತಿ ಮೇರೆಗೆ ಬೇರೆ ಆಗಿದ್ದೇವೆ. ನಾನು ಮತ್ತೊಂದು ಮದುವೆ ಆಗಲು ಅವಳ ಅಪ್ಪಣೆ ಕೇಳಬೇಕಿಲ್ಲ. ವಿಚ್ಛೇದನ ನೀಡಿದ ನಂತರ ಬೇರೆ ಮದುವೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ನನಗಿದೆ,” ಎನ್ನುತ್ತಾನೆ ರಫೀಕ್​.

ಸದ್ಯ, ಮದುವೆ ಪ್ರಹಸನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ನಂತರ ಎಚ್ಚೆತ್ತಿರುವ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಕೋರ್ಟ್​ ಮೆಟ್ಟಿಲೇರುವಂತೆ ಪೊಲೀಸರು ರಫೀಕ್​ ಹಾಗೂ ಮದಿಯಾಗೆ ಸೂಚನೆ ನೀಡಿದ್ದಾರೆ.
First published: February 13, 2020, 8:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading