ಕಾರಿನಲ್ಲಿ ಮುದ್ದಾಡಿದ್ದಕ್ಕೆ ಜೈಲು ಸೇರಿದ ಪ್ರೇಮಿಗಳು

news18
Updated:August 13, 2018, 3:40 PM IST
ಕಾರಿನಲ್ಲಿ ಮುದ್ದಾಡಿದ್ದಕ್ಕೆ ಜೈಲು ಸೇರಿದ ಪ್ರೇಮಿಗಳು
news18
Updated: August 13, 2018, 3:40 PM IST
ನ್ಯೂಸ್​18 ಕನ್ನಡ

ಇಸ್ಲಮಾಬಾದ್​ (ಆ.13): ಅದೃಷ್ಟ ಚೆನ್ನಾಗಿಲ್ಲದಿದ್ದರೆ ಸಣ್ಣ ಸಣ್ಣ ಸಂಗತಿಗಳೇ ದೊಡ್ಡದಾಗಿಬಿಡುತ್ತದೆ. ಕೆಲವರು ಎಷ್ಟೇ ದೊಡ್ಡ ತಪ್ಪು ಮಾಡಿದರೂ ರಾಜಾರೋಷವಾಗಿ ಓಡಾಡುತ್ತಾರೆ, ಇನ್ನು ಕೆಲವರು ಮೆಚ್ಚಿದ ಹುಡುಗಿಗೆ ಮುತ್ತು ಕೊಟ್ಟ ಕಾರಣಕ್ಕೂ ಜೈಲಿನ ಕಂಬಿ ಎಣಿಸಬೇಕಾಗುತ್ತದೆ!

ಮುತ್ತು ಕೊಟ್ಟರೂ ಕಂಬಿ ಎಣಿಸಬೇಕಾ? ಅಂತ ಆಶ್ಚರ್ಯಪಡಬೇಡಿ. ಪಾಕಿಸ್ತಾನದ ಇಸ್ಲಮಾಬಾದ್​ನಲ್ಲಿ ಜನದಟ್ಟಣೆ ಇರುವ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಕಾರಿನೊಳಗೇ ಮುದ್ದಾಡುತ್ತಿದ್ದ ಪ್ರೇಮಿಗಳನ್ನು ಪೊಲೀಸರು ವಶಕ್ಕೆ ಪಡೆದು ಜೈಲಿಗೆ ತಳ್ಳಿದ್ದಾರೆ.

18ರಿಂದ 19 ವರ್ಷದೊಳಗಿನ ಯುವಕ-ಯುವತಿ ಕಾರಿನೊಳಗೆ ಕುಳಿತುಕೊಂಡು ಪರಸ್ಪರ ಮುದ್ದಿಸುತ್ತಿದ್ದರು. ವಾಹನಗಳು ಹೆಚ್ಚು ಓಡಾಡುವ ನಗರದ ಮಧ್ಯಭಾಗದಲ್ಲೇ ಕಾರು ನಿಲ್ಲಿಸಿದ್ದ ಕಾರಣದಿಂದ ಹತ್ತಿರ ಹೋದ ಪೊಲೀಸ್​ ಕಾರಿನ ಗಾಜು ತಟ್ಟಿದರೂ ತಮ್ಮದೇ ಪ್ರೇಮಲೋಕದಲ್ಲಿ ತೇಲುತ್ತಿದ್ದ ಪ್ರೇಮಿಗಳಿಗೆ ಅದು ಕೇಳಿಸಲೇ ಇಲ್ಲ.

ಅವರಿಬ್ಬರೂ ತಮ್ಮ ಪ್ರಪಂಚದಿಂದ ಹೊರಬಂದ ನಂತರ ಕಾರಿನಿಂದ ಕೆಳಗಿಳಿಸಿರುವ ಪೊಲೀಸ್​ ಸಿಬ್ಬಂದಿ ಇಸ್ಲಮಾಬಾದ್​ನ ಕರಾಚಿ ಕಂಪನಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ, ಜಾಮೀನಿನ ಮೇಲೆ ಅವರಿಬ್ಬರನ್ನೂ ಮನೆಗೆ ಕಳುಹಿಸಲಾಗಿದೆ. ಪಾಕಿಸ್ತಾನದಲ್ಲಿ ಈ ರೀತಿಯ ಅನುಚಿತ ವರ್ತನೆಗೆ 3 ತಿಂಗಳವರೆಗೆ ಸೆರೆವಾಸ, ದಂಡ ಅಥವಾ ಎರಡೂ ಶಿಕ್ಷೆಯನ್ನು ವಿಧಿಸಬಹುದಾಗಿದೆ.

ಮುಸ್ಲಿಂ ಜನಾಂಗದವರೇ ಹೆಚ್ಚಾಗಿರುವ ಪಾಕಿಸ್ತಾನದಲ್ಲಿ ಸಾರ್ವಜನಿಕವಾಗಿ ಮಹಿಳೆ ಮತ್ತು ಪುರುಷರು ಕೈಕೈ ಹಿಡಿದು ನಡೆಯುವುದು ಕೂಡ ತಪ್ಪು ಎನ್ನಲಾಗುತ್ತದೆ. ಹೀಗಾಗಿ, ಪಾರ್ಕ್​ಗೆ ಬರುವ, ಶಾಪಿಂಗ್​ ಸೆಂಟರ್​ನಲ್ಲಿರುವ ಯುವಕ-ಯುವತಿಯರ ಮೇಲೆ ಪೊಲೀಸರು ಬ್ಲಾಕ್​ಮೇಲ್​ ಮಾಡುತ್ತಾರೆ, ದೌರ್ಜನ್ಯ ಮಾಡುತ್ತಾರೆ ಎಂಬ ಆರೋಪಗಳೂ ಇವೆ.

 
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ