• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Viral Video: ಬಂಗಾರದಂತ ವಧುವಿಗೆ ಬಂಗಾರದಲ್ಲೇ ತುಲಾಭಾರ! 'ಚಿನ್ನ'ದಂತಾ ವಿಡಿಯೋ ನೋಡಿ ನೀವೂ ಖುಷಿಪಡಿ

Viral Video: ಬಂಗಾರದಂತ ವಧುವಿಗೆ ಬಂಗಾರದಲ್ಲೇ ತುಲಾಭಾರ! 'ಚಿನ್ನ'ದಂತಾ ವಿಡಿಯೋ ನೋಡಿ ನೀವೂ ಖುಷಿಪಡಿ

ದುಬೈನಲ್ಲಿ ಪಾಕಿಸ್ತಾನಿ ವಧುವನ್ನು ಚಿನ್ನದಲ್ಲಿ ತೂಗಿದ ಕುಟುಂಬಸ್ಥರು

ದುಬೈನಲ್ಲಿ ಪಾಕಿಸ್ತಾನಿ ವಧುವನ್ನು ಚಿನ್ನದಲ್ಲಿ ತೂಗಿದ ಕುಟುಂಬಸ್ಥರು

ಕೆಲವರು ಮದುವೆಯನ್ನೂ ಸಹ ತಮ್ಮ ಸಂಪತ್ತಿನಿಂದ ಅಳೆಯುತ್ತಾರೆ ಎಂಬುದಕ್ಕೆ ಈ ಮದುವೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ದುಬೈನಲ್ಲಿ ನಡೆದಿದೆ ಎನ್ನಲಾದ ಈ ಮದುವೆಯ ವಿಡಿಯೋ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿ ಪಾಕಿಸ್ತಾನಿ ವಧುವನ್ನು ಚಿನ್ನದ ಗಟ್ಟಿಗಳಿಂದ ತೂಕ ಮಾಡಲಾಗಿದೆ.

  • Share this:

    ದುಬೈ: ಮದುವೆ (Marriage) ಅಂದ್ರೇನೇ ಸಂಭ್ರಮ, ಸಡಗರ ಮನೆ ಮಾಡುತ್ತದೆ. ಅದರಲ್ಲೂ ಮದುವೆಗಳಿಗೆ ಖರ್ಚು ಮಾಡೋದು ಅಂದ್ರೆ ಇತ್ತೀಚಿನ ದಿನಗಳಲ್ಲಿ ಟ್ರೆಂಡ್  (Trend )ಆಗಿದೆ. ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎಂಬ ಮಾತಿದೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು ಎಂಬ ಗಾದೆಯಿದೆ. ಹಾಗೆನೇ ಮದುವೆಗೆ ಹುಡುಗನಿಗೆ ವರದಕ್ಷಿಣೆ, ಬಂಗಾರ (Gold), ಆಸ್ತಿ-ಪಾಸ್ತಿ ನೀಡುವುದು ಇಂದಿಗೂ ಚಾಲ್ತಿಯಲ್ಲಿದೆ. ವಧುವು (Bride) ವಜ್ರಾಭರಣಗಳನ್ನು ಹಾಕಿಕೊಂಡು ಗ್ರ್ಯಾಂಡ್ ಆಗಿ ನುತನ ಜೀವನಕ್ಕೆ  (New Life) ಕಾಲಿಟ್ಟಿದ್ದನ್ನು ನೀವೆಲ್ಲರೂ ನೋಡಿರಬಹುದು. ಆದರೆ ಇಲ್ಲೊಬ್ಬ ವಧುವನ್ನು ಚಿನ್ನದಲ್ಲೇ ತೂಕ (Weigh) ಮಾಡಿದ್ದಾನೆ.


    ಸಾಂಪ್ರದಾಯಿಕವಾಗಿ ಮದುವೆಗೆ ಶ್ರೀಮಂತರು ಮತ್ತು ಉಳ್ಳವರು ಹೆಚ್ಚು ಖರ್ಚು ಮಾಡುತ್ತಾರೆ. ಊಟ, ತಿಂಡಿ, ಮದುವೆಗೆ ಆಗಮಿಸುವ ಅತಿಥಿಗಳಿಗೆ ಬಟ್ಟೆ, ಕಲ್ಯಾಣ ಮಂಟಪದ ಡೆಕೊರೇಷನ್, ವಧು ಮತ್ತು ವರರಿಗೆ ಬಟ್ಟೆ, ಅಲಂಕಾರ, ಒಡವೆ ಹೀಗೆ ಸಾಕಷ್ಟು ಖರ್ಚು ಮಾಡಲಾಗುತ್ತದೆ.


    ಮದುವೆಯಲ್ಲಿ ವಧುವಿನ ಅಲಂಕಾರ, ವಸ್ತ್ರ ಮತ್ತು ಹೆರ್ ಸ್ಟೈಲ್, ಮೇಕಪ್, ವಜ್ರಾಭರಣ ಸಾಕಷ್ಟು ಹೈಲೆಟ್ ಆಗಿರುತ್ತದೆ. ಮದುವೆಯು ಉಡುಗೆ ತೊಡುಗೆಯ ಸಂಭ್ರಮ. ಕೆಲವರು ವರನಿಗೆ ಸಾಕಷ್ಟು ವರದಕ್ಷಿಣೆ ನೀಡುತ್ತಾರೆ. ಇನ್ನು ಕೆಲವರು ವಧುವಿಗೆ ವಜ್ರಾಭರಣ ನೀಡಿ ಸ್ವಾಗತಿಸುತ್ತಾರೆ.


    ಮದುವೆಯಲ್ಲಿ ವಧುವನ್ನೇ ಚಿನ್ನದಲ್ಲಿ ತೂಕ ಮಾಡಲಾಗಿದೆ


    ಈ ಮಧ್ಯೆ ಇಲ್ಲೊಂದು ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ ಈ ಮದುವೆ ವಿಭಿನ್ನವಾಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಸಂತರು, ಶರಣರನ್ನು ತಕ್ಕಡಿಯಲ್ಲಿ ತೂಗಿ ಅವರಿಗೆ ದವಸ, ಧಾನ್ಯ, ದುಡ್ಡು ನೀಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲಿ ಮದುವೆಯಲ್ಲಿ ವಧುವನ್ನೇ ಚಿನ್ನದಲ್ಲಿ ತೂಕ ಮಾಡಲಾಗಿದೆ.




    ದುಬೈನಲ್ಲಿ ಪಾಕಿಸ್ತಾನಿ ವಧುವನ್ನು ಚಿನ್ನದಲ್ಲಿ ತೂಗಿದ ವಿಡಿಯೋ ವೈರಲ್


    ಕೆಲವರು ಮದುವೆಯನ್ನೂ ಸಹ ತಮ್ಮ ಸಂಪತ್ತಿನಿಂದ ಅಳೆಯುತ್ತಾರೆ ಎಂಬುದಕ್ಕೆ ಈ ಮದುವೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ದುಬೈನಲ್ಲಿ ನಡೆದಿದೆ ಎನ್ನಲಾದ ಈ ಮದುವೆಯ ವಿಡಿಯೋ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿ ಪಾಕಿಸ್ತಾನಿ ವಧುವನ್ನು ಚಿನ್ನದ ಗಟ್ಟಿಗಳಿಂದ ತೂಕ ಮಾಡಲಾಗಿದೆ.


    ದುಬೈನಲ್ಲಿ ಪಾಕಿಸ್ತಾನಿ ವಧುವನ್ನು ಚಿನ್ನದಲ್ಲಿ ತೂಗಿದ ಕುಟುಂಬಸ್ಥರು


    ವಿಡಿಯೋದಲ್ಲಿ ವಧು ಮತ್ತು ವರರು ಮಂಟಪದತ್ತ ಹೆಜ್ಜೆ ಹಾಕುತ್ತಾ ಬರುತ್ತಾರೆ. ಅವರನ್ನು ಮಂಟಪದ ಮೇಲೆ ನೆರೆದಿದ್ದ ಸಂಬಂಧಿಗಳು ಸ್ವಾಗತಿಸುತ್ತಾರೆ. ನಂತರ ವಧುವು ಅಲಂಕಾರ ಮಾಡಿದ ಬೃಹತ್ ತಕ್ಕಡಿಯಲ್ಲಿ ಬಂದು ಒಂದು ಬದಿ ಕೂರುತ್ತಾಳೆ. ತಕ್ಕಡಿಯ ಇನ್ನೊಂದು ಬದಿಯಲ್ಲಿ ಚಿನ್ನದ ದೊಡ್ಡ ದೊಡ್ಡ ಗಟ್ಟಿಗಳಿಂದ ಆಕೆಯನ್ನು ತೂಕ ಮಾಡಲಾಗುತ್ತದೆ.


    ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಖತ್ ವೈರಲ್


    ದುಬೈನಲ್ಲಿ ಪಾಕಿಸ್ತಾನಿ ವಧುವನ್ನು ಚಿನ್ನದಿಂದ ತೂಗುತ್ತಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನಿ ವಧುವನ್ನು ಆಕೆಯ ದೇಹದ ತೂಕಕ್ಕೆ ಸಮನಾಗಿ ಚಿನ್ನದಿಂದಲೇ ತೂಕ ಮಾಡಲಾಗಿದೆ. ಈ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿದೆ ಎಂದು ತಿಳಿದುಬಂದಿದೆ.



    ವಧುವಿನ ತೂಕ ಸುಮಾರು 70 ಕೆ.ಜಿ ಇತ್ತು. ವಧುವಿನ ಕುಟುಂಬಸ್ಥರು, ಆಕೆಯ ತೂಕಕ್ಕೆ ಸಮನಾಗಿ ಚಿನ್ನದ ಗಟ್ಟಿಗಳನ್ನು ಇಟ್ಟು ಅಳತೆ ಮಾಡಿದ್ದಾರೆ. ಚಿನ್ನದಲ್ಲೆ ವಧುವನ್ನು ತೂಕ ಮಾಡಲಾಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವರು ಕಟುವಾಗಿ ಟೀಕಿಸಿದ್ದಾರೆ.


    ಇದನ್ನೂ ಓದಿ: ಮಗಳಿಗೆ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಟ್ಟ ತಂದೆ! ಸಖತ್ ಆಗಿದೆ ನೋಡಿ ಅಪ್ಪ-ಮಗಳ ಕ್ಯೂಟ್ ವಿಡಿಯೋ


    ಪಾಕಿಸ್ತಾನದಲ್ಲಿ ಜನರು ಹಸಿವಿನಿಂದ ಒದ್ದಾಡುತ್ತಿದ್ದಾರೆ. ಹೀಗಿದ್ದಾಗ ಅಲ್ಲಿಯವರು ಹಸಿದವರಿಗೆ ಉಣಬಡಿಸುವ ಕೆಲಸ ಮಾಡದೇ, ಚಿನ್ನದಲ್ಲಿ ವಧುವನ್ನು ತೂಕ ಮಾಡಿದ್ದಾರೆ ಎಂದು ಒಬ್ಬ ಬಳಕೆದಾರರು ಟ್ವೀಟ್ ಮಾಡಿ ಟೀಕಿಸಿದ್ದಾರೆ.  ವಧುವಿನ ತಂದೆ ಯುಎಇ ಮೂಲದ ಪಾಕಿಸ್ತಾನಿ ಉದ್ಯಮಿ ಎಂಬುದು ತಿಳಿದು ಬಂದಿದೆ. ವಿಡಿಯೊ ಈಗ ಸಾಕಷ್ಟು ವೈರಲ್ ಆಗಿದೆ.

    Published by:renukadariyannavar
    First published: